Weekly Horoscope: ಜೂನ್‌ ಮೊದಲ ವಾರ ಈ ರಾಶಿಗಳಿಗೆ ಅದೃಷ್ಟದ ಹೊಳೆ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ವೈಶಾಖ ಬಹುಳ ಏಕಾದಶಿಯಿಂದ ಜ್ಯೇಷ್ಠ ಶುದ್ಧ ತದಿಗೆಯವರೆಗೆ.

ಈ ವಾರದ ಚಂದ್ರನ ಸಂಚಾರ ರೇವತಿ ನಕ್ಷತ್ರದಿಂದ ಪುನರ್ವಸು ವರೆಗೆ

02/06/2024- 08/06/2024 ವಾರ ಭವಿಷ್ಯ

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೂನ್‌ 02 ರಿಂದ ಜೂನ್‌ 08ರವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

Weekly Horoscope In Kannada From June 02 To June 08 2024

ಮೇಷ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಅದರ ಅಧಿಪತಿ ಮಂಗಳ ಹಾಗೂ ಎರಡನೇ ಮನೆ ಕುಟುಂಬ ಸ್ಥಾನದಲ್ಲಿ ಶುಕ್ರ, ಸೂರ್ಯ, ಬುಧ, ಚಂದ್ರ, ಗುರು ಇದ್ದಾರೆ. ಇದೊಂದು ರಾಜಯೋಗ.‌ ಹಣದ ಹರಿವು ಬಹಳ ಉತ್ತಮವಾಗಿರುತ್ತದೆ. ಹಾಗೂ ಕುಟುಂಬದಲ್ಲಿ ಶಾಂತಿ ಸೌಖ್ಯ ಸಂತೋಷ ನೆಲೆಸಿರುತ್ತದೆ. ನಿಮ್ಮ ಮಾತಿಗೆ ಮಹತ್ವ ಇರುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಅರ್ಹರಿಗೆ ವಿವಾಹ ಭಾಗ್ಯ ಇದೆ. ನಿಮ್ಮ ಮೇಲಿರುವ ಯಾವುದೇ ಕಳಂಕ ಅಪವಾದ ತೊಡೆದುಹೋಗುತ್ತದೆ. ನೀವು ನಿಷ್ಕಳಂಕವಾಗುತ್ತೀರಿ.

Weekly Horoscope In Kannada From June 02 To June 08 2024

ವೃಷಭ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಐದು ಗ್ರಹಗಳು ಸೇರಿ‌ ಒಂದು ರಾಜಯೋಗ ಆಗಿದೆ. ರಾಶಿಯ ಅಧಿಪತಿ ಶುಕ್ರ ರಾಶಿಯಲ್ಲೇ ಇದ್ದು ನಿಮಗೆ ರಕ್ಷೆ ಕೊಡುತ್ತಾನೆ. ಯಾವುದೇ ತೊಂದರೆ ಅಪಾಯ ಬರದಂತೆ ಕಾಪಾಡುತ್ತಾನೆ. ಹಣದ ಹರಿವು ಉತ್ತಮವಾಗಿದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಂದರ್ಭ ಇದೆ. ಬೆಳ್ಳಿ ಬಂಗಾರ ಖರೀದಿ ಮಾಡುತ್ತೀರಿ. ವೃತ್ತಿಯಲ್ಲಿ ಭದ್ರತೆ, ಉತ್ತಮ ಆರೋಗ್ಯ ಎಲ್ಲವೂ ಇದೆ. ಧೈರ್ಯ ಸಾಹಸದಿಂದ ಯಶಸ್ಸು ಗಳನ್ನು ಪಡೆಯುತ್ತೀರಿ.

Weekly Horoscope In Kannada From June 02 To June 08 2024

ಮಿಥುನ ರಾಶಿಯ ವಾರ ಭವಿಷ್ಯ

ಈಗ 12 ನೇ ಮನೆಯಲ್ಲಿ ಐದು ಗ್ರಹಗಳು ಸೇರಿವೆ. ಖರ್ಚು ಹೆಚ್ಚು. ಆದರೂ ಕೆಲವು ಲಾಭಗಳೂ ಇವೆ. ಪಿತ್ರಾರ್ಜಿತ ಆಸ್ತಿ ದೊರೆಯುತ್ತದೆ. ದೂರ ಪ್ರಯಾಣ ಯೋಗ ಇದೆ. ಜಾಗ ಬದಲಾವಣೆ ಇದೆ. ಜೀವನದಲ್ಲಿ ಒಂದು‌ಮಹತ್ತರ ತಿರುವು ಇದೆ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ. ತಾಯಿಗೆ ಒತ್ತಡ ಇರುತ್ತದೆ. 11ನೇ ಮನೆಯಲ್ಲಿ ಕುಜ ಇರುವುದು ಭೂಮಿಯಿಂದ ಲಾಭ ಇದೆ.

Weekly Horoscope In Kannada From June 02 To June 08 2024

ಕಟಕ ರಾಶಿಯ ವಾರ ಭವಿಷ್ಯ

ಲಾಭಸ್ಥಾನದಲ್ಲಿ ಐದು ಗ್ರಹಗಳು ಸೇರಿ ಒಂದು ರಾಜಯೋಗ ಆಗಿದೆ. ಲಾಭದಲ್ಲಿ ಯಾವುದೇ ಗ್ರಹವಿರಲಿ ಅವರು ಹಣ ಕೊಡಿಸುತ್ತಾರೆ. ಗುರು ಒಬ್ಬನಿದ್ದರೂ ಎಷ್ಟೋ ಅದೃಷ್ಟ ಅದರ ಜೊತೆ ಇನ್ನೂ ನಾಲ್ಕು ಗ್ರಹಗಳು ಇದ್ದು ನೀವು ಲಾಭದ ಉತ್ತುಂಗ ಮುಟ್ಟುತ್ತೀರಿ. ಕೆಲ ಕಾರ್ಯಗಳಲ್ಲಿ ಸಫಲತೆ, ಅಡೆತಡೆ ನಿವಾರಣೆ, ಶತ್ರುಗಳು ದೂರವಾಗುವುದು, ಮನಸ್ಸಿಗೆ ಸಂತೋಷ, ಮನೆಯಲ್ಲಿ ಸಂಭ್ರಮ ಎಲ್ಲವೂ ಇದೆ. ವೃತ್ತಿಯಲ್ಲಿ ಭದ್ರತೆ ಇದೆ. ಯಶಸ್ಸು ಇದೆ. ಈಗ ನಿಮ್ಮ ದಾರಿ ನಿರ್ವಿಘ್ನವಾಗಿದೆ.

Weekly Horoscope In Kannada From June 02 To June 08 2024

ಸಿಂಹ ರಾಶಿಯ ವಾರ ಭವಿಷ್ಯ

ಗುರು ಹತ್ತನೇ ಮನೆಯಲ್ಲಿ ಇದ್ದರೂ ಗುರುವಿನ‌ ಜೊತೆ ಇನ್ನೂ ನಾಲ್ಕು ಗ್ರಹಗಳು ಸೇರಿ ಒಂದು ರಾಜಯೋಗವಾಗಿದೆ. ವೃತ್ತಿಯಲ್ಲಿ ಟೆನ್ಷನ್ ಗಳಿದ್ದರೆ ಈಗ ತಾತ್ಕಾಲಿಕವಾಗಿ ಕೊಂಚ ಉಪಶಮನ ಸಿಗುತ್ತದೆ. ಒಂಬತ್ತನೇ ಮನೆಯಲ್ಲಿ ಕುಜ ಭೂಮಿಯಿಂದ ಲಾಭ ಕೊಡುತ್ತಾನೆ. ಎರಡನೇ ಮನೆಯಲ್ಲಿ ಕೇತು ನಿಮಗೆ ಮನೆಯಲ್ಲಿ ನಿಲ್ಲಲು ಸಮಯ ಕೊಡದಂತೆ ಅಲೆದಾಡಿಸುತ್ತಾನೆ.‌ ಎಂಟರಲ್ಲಿ ರಾಹು ಆರೋಗ್ಯಕ್ಕೆ ತೊಂದರೆ ನೀಡುತ್ತಾನೆ. ‌ಬುಧ ಶುಕ್ರ ಸೂರ್ಯರು ಮಿಥುನರಾಶಿ ಗೆ ಬಂದಾಗ ಸ್ವಲ್ಪಮಟ್ಟಿಗೆ ಪರಿಹಾರ ದೊರೆಯುತ್ತದೆ.

Weekly Horoscope In Kannada From June 02 To June 08 2024

ಕನ್ಯಾ ರಾಶಿಯ ವಾರ ಭವಿಷ್ಯ

ಒಂಬತ್ತನೇ ಮನೆಯಲ್ಲಿ ಐದು ಗ್ರಹಗಳು ಸೇರಿ ನಿಮ್ಮ ಮೂಲಕ ಧರ್ಮ ಕಾರ್ಯಗಳನ್ನು ದಾನ ದೇವತಾಕಾರ್ಯಗಳನ್ನು ಮಾಡಿಸುತ್ತಾರೆ.‌ ಎಂಟರಲ್ಲಿ ಕುಜ ಇದ್ದಾನೆ ವಿದ್ಯುತ್‌ಗೆ ಸಂಬಂಧ ಪಟ್ಟ ಸಂಗತಿಗಳಿಂದ ದೂರವಿರಿ. ಬೆಂಕಿಯಿಂದ ದೂರವಿರಿ. ಶನಿ ಆರನೇ ಮನೆಯಲ್ಲಿ ಇದ್ದು ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಗುರು ಒಂಬತ್ತನೇ ಮನೆಯಲ್ಲಿ ಇದ್ದು ಕುಟುಂಬದಲ್ಲಿ ಸುಖಶಾಂತಿಯನ್ನು ಕೊಡುತ್ತಾನೆ. ಮನೆಯಲ್ಲಿ ಶುಭಕಾರ್ಯ ನಡೆಯುವಂತೆ ಮಾಡುತ್ತಾನೆ. ನಿಮ್ಮ ಕೆಲಸಗಳಲ್ಲಿ ಜಯ ಸಿಗುವಂತೆ ಮಾಡುತ್ತಾನೆ.

Weekly Horoscope In Kannada From June 02 To June 08 2024

ತುಲಾ ರಾಶಿಯ ವಾರ ಭವಿಷ್ಯ

ಎಂಟನೇ ಮನೆಯಲ್ಲಿ ಐದು ಗ್ರಹಗಳು ಸೇರಿ ಒಂದು ರಾಜಯೋಗ ಆಗಿದೆ. ಇದು ನಿಮಗೆ ಯಾವುದೋ ಒಂದು ಆಪತ್ತಿನಿಂದ ಕಾಪಾಡುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಏಳನೇ ಮನೆಯಲ್ಲಿ ಕುಜ ಸ್ವಂತ ಮನೆಯಲ್ಲಿ ಇದ್ದಾನೆ ಇದರಿಂದ ನಿಮ್ಮ ಸಂಗಾತಿಗೆ ಶುಭವನ್ನು ತರುತ್ತದೆ. ಆರರ ರಾಹು ಧೃಡತೆ ಯನ್ನೂ ಧೈರ್ಯವನ್ನು ಕೊಡುತ್ತಾನೆ.‌ ಶತ್ರುಗಳು ದೂರವಾಗುತ್ತಾರೆ. ಸಣ್ಣ ಕೂದಲೆಳೆ ಅಂಚಿನಲ್ಲಿ ಒಂದು ವಿಪತ್ತಿನಿಂದ ಪಾರಾಗುತ್ತೀರಿ.

Weekly Horoscope In Kannada From June 02 To June 08 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಏಳನೇ ಮನೆಯಲ್ಲಿ ಐದು ಗ್ರಹಗಳ ಸಂಯೋಗ ನಿಮಗೆ ವಹುದೊಡ್ಡ ಲಾಭ- ಅದೃಷ್ಟ ಕೊಡಲಿದೆ.‌ ಅವಿವಾಹಿತರಿಗೆ ವಿವಾಹ ಪ್ರಾಪ್ತಿ. ಐದೂ ಗ್ರಹಗಳೂ ನಿಮ್ಮ ರಾಶಿಯನ್ನು ನೇರವಾಗಿ ವೀಕ್ಷಿಸುವುದರಿಂದ ನಿಮ್ಮ ವೈಯುಕ್ತಿಕ ಬೆಳವಣಿಗೆ ಗೆ ಬಹಳ ಉಪಕಾರಿ. ಮನಸ್ಸಿಗೆ ಹಿತವಾಗುಂತ ಸಂತೋಷ ವಾಗುವಂತ ಘಟನೆಗಳಿಗೆ ಸಾಕ್ಷಿಯಾಗುತ್ತೀರಿ. ಬಹುದೊಡ್ಡ ಲಾಭ ನಿಮ್ಮನ್ನು ಅರಸಿ ಬರುತ್ತದೆ.‌ ಬಿಕ್ಕಟ್ಟುಗಳು ತಿಳಿಯಾಗುತ್ತದೆ. ಹಣದ ಹರಿವು ಉತ್ತಮವಾಗಿದೆ. ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ.

Weekly Horoscope In Kannada From June 02 To June 08 2024

ಧನಸ್ಸು ರಾಶಿಯ ವಾರ ಭವಿಷ್ಯ

ಆರನೇ ಮನೆಯಲ್ಲಿ ಐದು ಗ್ರಹಗಳು ಸೇರಿ ನಿಮಗೆ ಬಹುದೊಡ್ಡ ಲಾಭ ತರಲಿದೆ. ಯಾವುದೋ ನೆನೆಗುದಿಗೆ ಬಿದ್ದಿದ್ದ ಕೆಲಸ ಈಗ ಹಠಾತ್ ಮುನ್ನೆಲೆಗೆ ಬಂದು ಸುಲಭವಾಗಿ ನೆರವೇರುತ್ತದೆ. ಹಣದ ಹರಿವು ಉತ್ತಮವಾಗಿದೆ. ಯಾವುದಾದರೂ ಹಳೆಯ ಬಾಕಿ ಬರಬೇಕಿದ್ದರೆ ಈಗ ವಸೂಲಾಗುತ್ತದೆ. ಐದನೇ ಮನೆಯಲ್ಲಿ‌ ಕುಜ ಸ್ವಂತ ಮನೆಯಲ್ಲಿ‌ಇದ್ದಾನೆ. ಗಂಡುಮಕ್ಕಳಿಗೆ ಒಳ್ಳೆಯದಾಗುತ್ತದೆ. ನಾಲ್ಕನೇ ಮನೆ ರಾಹು ಕೊಂಚ ದೈಹಿಕ ಸಂಕಟಗಳನ್ನು ಕೊಡುತ್ತಾನೆ. ರಾಹು ಸ್ತೋತ್ರ ಹೇಳಿಕೊಳ್ಳಿ

Weekly Horoscope In Kannada From June 02 To June 08 2024

ಮಕರ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗುರು ಐದನೇ ಮನೆಯಲ್ಲಿ ಇರುವುದೇ ಮಹತ್ತರವಾದ ಶಕ್ತಿ. ಅದರ ಜೊತೆಗೆ ಇನ್ನೂ ಮೂರು ಗ್ರಹಗಳು ಗುರುವಿನ ಜೊತೆ ಇದ್ದು ನಿಮಗೆ ಮತ್ತಷ್ಡು ಶಕ್ತಿಯನ್ನು ಕೊಟ್ಡಿದೆ. ಯಾವುದೇ ಕೆಲಸ ಅತಿ ಸುಲಭವಾಗಿ ನೆರವೇರುತ್ತದೆ. ಬಹಳ ದಿನದಿಂದ ನೀವು ಪ್ರಯತ್ನ ಪಡುತ್ತಿದ್ದರೂ ಆಗದ ಕೆಲಸ ಈಗ ಶೀಘ್ರ ನೆರವೇರುತ್ತದೆ. ಅರ್ಹರಿಗೆ ವಿವಾಹ ಯೋಗ ಇದೆ. ಹೊಸ ನೌಕರಿ ಸಿಗುತ್ತದೆ ಬಡ್ತಿ ಸಿಗುತ್ತದೆ. ಮನೆಯಲ್ಲಿ ಮಂಗಳಮಯ ವಾತಾವರಣ ಸಮೃದ್ಧಿ ನೆಲೆಸುತ್ತದೆ. ಗೌರವಾನ್ವಿತ ಸ್ಥಾನಮಾನ ದೊರೆಯುತ್ತದೆ.

Weekly Horoscope In Kannada From June 02 To June 08 2024

ಕುಂಭ ರಾಶಿಯ ವಾರ ಭವಿಷ್ಯ

ಗುರು ನಾಲ್ಕನೇ ಮನೆಯಲ್ಲಿ ಕೊಂಚ ಬಲಹೀನನಾದರೂ ಗುರುವಿನ ಜೊತೆ ಇರುವ ಶುಕ್ರ, ಬುಧ, ಸೂರ್ಯ, ಇರುವುದರಿಂದ ನಿಮಗೆ ಯಶಸ್ಸು ಶ್ರೇಯಸ್ಸು ಎರಡೂ ಇದೆ. ಮೂರನೇ ಮನೆಯಲ್ಲಿ ಕುಜ ಧೈರ್ಯ ಪರಾಕ್ರಮ ವನ್ನು ಕೊಡುತ್ತಾನೆ. ಹಣದ ಹರಿವು‌ ಉತ್ತಮವಾಗಿದೆ. ವಿದ್ಯುತ್ ಹಾಗೂ ಬೆಂಕಿ/ ಪವರ್ ಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಎರಡನೇ ಮನೆಯಲ್ಲಿ ರಾಹು ಒರುವುದು ಮನೆಯಲ್ಲಿ ಕೊಂಚ ಒತ್ತಡದ ವಾತಾವರಣ ಇರುತ್ತದೆ. ಗುರುಗಳ ಧ್ಯಾನ ಮಾಡಿ.

Weekly Horoscope In Kannada From June 02 To June 08 2024

ಮೀನ ರಾಶಿಯ ವಾರ ಭವಿಷ್ಯ

ಮೂರನೇ ಮನೆಯಲ್ಲಿ ಗುರುವಿನ ಜೊತೆ ಮೂರು ಗ್ರಹಗಳು ಸೇರಿ ನಿಮ್ಮ ಶಕ್ತಿ ಸಾಮರ್ಥ್ಯ ವನ್ನು ಹೆಚ್ಚಿಸುತ್ತದೆ. ಎರಡನೇ ಮನೆಯಲ್ಲಿ ಕುಜ ಸ್ವಂತ ಮನೆಯಲ್ಲಿ ಇರುವುದರಿಂದ ಸ್ವಲ್ಪಮಟ್ಟಿಗೆ ಧನಲಾಭವೂ ಇದೆ. ಆದರೂ ಸಾಡೆಸಾತಿ ಶನಿಯ ಪ್ರಭಾವ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು.‌ ಯಾರಲ್ಲೂ ಭಿನ್ನಾಭಿಪ್ರಾಯ ಬೇಡ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೆಯಲ್ಲಿ ನೆಮ್ಮದಿ ಭಂಗ ಆಗದಂತೆ ನೋಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+