Weekly Horoscope 2025: ವಾರ ಭವಿಷ್ಯ: ಈ ರಾಶಿಯವರು ಕಂಡ ಕನಸು ನನಸು ಶೀಘ್ರದಲ್ಲೇ ಧನಲಾಭ
ಏಪ್ರಿಲ್ ನಾಲ್ಕನೇ ವಾರ 12 ರಾಶಿಗಳ ಭವಿಷ್ಯ ತುಂಬಾ ಉತ್ತಮವಾಗಿದೆ. ಈ ವಾರದ ಚಂದ್ರನ ಸಂಚಾರ ಪೂರ್ವಾಷಾಢ ನಕ್ಷತ್ರದಿಂದ ಅಶ್ವಿನಿವರೆಗೆ ಇರುತ್ತದೆ. ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸದ ಬಹುಳ ಸಪ್ತಮಿಯಿಂದ ಅಮಾವಾಸ್ಯೆಯವರೆಗೆ ಅಂದರೆ 20.04.25 ರಿಂದ 27.04.25ರವರೆಗೆ ದ್ವಾದಶಿ ರಾಶಿಗಳ ಜಾತಕ ಹೀಗಿದೆ...

ಮೇಷ ರಾಶಿ:
ಈ ವಾರದಲ್ಲಿ ಚಂದ್ರ ಗ್ರಹ ಮೇಷ ರಾಶಿಯ ಒಂಬತ್ತು ಹತ್ತು ಹನ್ನೊಂದನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ಶುಭಫಲವನ್ನು ತಂದುಕೊಡಲಿದೆ. ಈ ಸಮಯದಲ್ಲಿ ಹಣದ ಖರ್ಚು ಹೆಚ್ಚಾದರೂ ಆರ್ಥಿಕ ಲಾಭದಿಂದ ತೊಂದರೆಯಾಗುವುದಿಲ್ಲ. ವೃತ್ತಿಯಲ್ಲಿ ಏರಿಳಿತಗಳು ಕಂಡುಬರಲಿವೆ. ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಿ. ಒತ್ತಡಗಳು ನಿಮ್ಮನ್ನು ಸಾಕಷ್ಡು ಬಾಧಿಸಲಿವೆ. ನಿಮಗೆ ತುಂಬಾ ಬೇಕಾದವರಿಂದಲೇ ಅವಮಾನಕ್ಕೆ ಒಳಗಾಗುವಿರಿ. ಆದರೆ ಇವೆಲ್ಲವನ್ನು ಜಯಿಸುವ ಶಕ್ತಿ ನಿಮಗೆ ಸಿಗಲಿದೆ. ಶತ್ರುಗಳನ್ನು ಹಿಂದಿಕ್ಕಿ ಮುಂದೆ ನೀವು ಸಾಗುತ್ತೀರಿ.

ವೃಷಭ ರಾಶಿ:
ಈ ವಾರದಲ್ಲಿ ಚಂದ್ರನು ವೃಷಭ ರಾಶಿಯ ಒಂಬತ್ತು ಹತ್ತು ಹನ್ನೊಂದನೇ ಮನೆಗೆ ಸಂಚಾರ ಮಾಡುವುದರಿಂದ ಮನಸ್ಸಿನಲ್ಲಿ ಉಲ್ಲಾಸ ಇರುತ್ತದೆ. ಮೂರನೇ ಮನೆಯ ಕುಜ, ಹನ್ನೊಂದನೇ ಮನೆಯ ರಾಹು ನಿಮ್ಮಲ್ಲಿ ಸಾಧನೆಯ ಕಿಚ್ಚನ್ನು ಹೆಚ್ಚಿಸುತ್ತಾರೆ. ಹಣದ ಹರಿವು ಉತ್ತಮವಾಗಿರಲಿದೆ. ಲಾಭಸ್ಥಾನದಲ್ಲಿ ಶುಕ್ರ ಶನಿ ಇಬ್ಬರೂ ನಿಮ್ಮ ಭಾಗ್ಯಗಳನ್ನು ಹೆಚ್ವಿಸುತ್ತಾರೆ.

ಮಿಥುನ ರಾಶಿ:
ಈ ವಾರ ಮಿಥುನ ರಾಶಿಯವರಿಗೆ ಒಳ್ಳೆಯದರ ಜೊತೆಗೆ ಕೆಟ್ಟದ್ದೂ ಸಮಸಮವಾಗಿರುತ್ತದೆ. ಯಾವುದೂ ಹೆಚ್ಚಿಲ್ಲ ಯಾವುದೂ ಕಡಿಮೆ ಇಲ್ಲ. ಗ್ರಹಗಳು ಮಿಥುನ ರಾಶಿಗೆ ಒಳಿತಾಗುವ ಸ್ಥಾನದಲ್ಲಿ ಇಲ್ಲ ಹಾಗೆಯೇ ಕೆಡುಕಾಗುವ ಸ್ಥಾನದಲ್ಲೂ ಇಲ್ಲ. ಹೀಗಾಗಿ ನೀವು ಆರ್ಥಿಕ ಅಭಿವೃದ್ಧಿಗೆ ಕೊಂಚ ಕಾಯಬೇಕು. ಈಗ ಸ್ವಲ್ಪ ಒತ್ತಡಗಳು ಇರುತ್ತದೆ. ಸೂರ್ಯ ಲಾಭಸ್ಥಾನದಲ್ಲಿ ಇರುವುದೊಂದೇ ನಿಮಗೆ ಈಗ ಲಾಭ ತರುವ ಸಂಗತಿ.

ಕರ್ಕಾಟಕ ರಾಶಿ:
ಕಟಕ ರಾಶಿಯ ಒಂಬತ್ತನೇ ಮನೆಯಲ್ಲಿ ಶುಕ್ರ ಶನಿ ಬುಧ ಇದ್ದರೆ, ಹನ್ನೊಂದನೇ ಮನೆಯಲ್ಲಿ ಗುರು, ಹತ್ತರಲ್ಲಿ ಉಚ್ಚ ಸ್ಥಾನದಲ್ಲಿ ಸೂರ್ಯ ಇದ್ದಾನೆ. ಕರ್ಕಾಟಕ ರಾಶಿಯವರಿಗೆ ಗುರುಬಲ ಇರುವುದರಿಂದ ಸಮಯ ಚೆನ್ನಾಗಿದೆ. ಅಂದುಕೊಂಡ ಕೆಲಸಗಳನ್ನು ಕಾಲಮಿತಿಯಲ್ಲಿ ಮುಗಿಸುತ್ತೀರಿ. ವಿಹಾರ ಯಾತ್ರೆಯ ಭಾಗ್ಯ ಇದೆ. ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಹೊಸ ಯೋಜನೆಗಳು ನಿಮ್ಮನ್ನು ಅರಸಿ ಬರುತ್ತವೆ. ವೃತ್ತಿಯಲ್ಲಿ ಆರಾಮದಾಯಕವಾಗಿ ನೀವು ಕೆಲಸ ಮಾಡುವಿರಿ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಈಗ ಅಷ್ಟಮ ಶನಿ ಪ್ರಾರಂಭವಾಗಿದೆ. ಇಕ್ಕಟ್ಟುಗಳು ಎದುರಾಗುತ್ತದೆ. ಅಡೆತಡೆ, ಬಂಧುಗಳಿಂದ ನಿಷ್ಠುರ, ಹಣಕಾಸಿನ ಏರಿಳಿತ, ಅನಾರೋಗ್ಯ, ವೃತ್ತಿಯಲ್ಲಿ ಒತ್ತಡಗಳು ಎಲ್ಲವೂ ಇವೆ. ಎಲ್ಲವನ್ನೂ ನಿಭಾಯಿಸಲಾಗದೆ ಸಹನೆ ಕಳೆದುಕೊಳ್ಳುವ ಪ್ರಸಂಗ ಬರುತ್ತದೆ. ಆದರೆ ಗಾಬರಿ ಬೇಡ. ಮೇ 15 ರನಂತರ ಪರಿಸ್ಥಿತಿ ತಿಳಿಯಾಗುತ್ತದೆ.

ಕನ್ಯಾ ರಾಶಿ:
ಶನಿ ಕನ್ಯಾ ರಾಶಿಯವರ ಆರನೇ ಮನೆಯಿಂದ ಏಳನೇ ಮನೆಗೆ ಬಂದಿದ್ದಾನೆ. ಏಳನೇ ಮನೆಯಲ್ಲಿ ಶನಿ ಇರುವುದರಿಂದ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ಆರೋಗ್ಯ ಕೈಕೊಡುವ ಸಾಧ್ಯತೆ ಇದೆ. ತುಂಬಾ ಸೀರಿಯಸ್ ಆಗಬಹುದು. ಹೀಗಾಗಿ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಕೆಲವು ದಿನಗಳ ನಂತರ ರಾಹುಕೇತುಗಳು ಕ್ರಮವಾಗಿ ಕುಂಭ ಮತ್ತು ಸಿಂಹರಾಶಿಗೆ ಬಂದಾಗ ನಿಮಗೆ ಶುಭಫಲಗಳು ದೊರೆಯುತ್ತದೆ. ಪ್ರಸ್ತುತ ಆರೋಗ್ಯದ ಬಗ್ಗೆ ನಿಗಾ ವಹಿಸಿ.

ತುಲಾ ರಾಶಿ:
ತುಲಾ ರಾಶಿಯವರಿಗೆ ಈಗ ಪಂಚಮಶನಿಯ ಕಾಟ ಮುಗಿದಿದೆ. ಇನ್ನೇನು ಗುರುಬಲವೂ ಬರಲಿದೆ. ನಿಮ್ಮ ಕಷ್ಟಗಳೂ ಸಂಕಟಗಳೂ ಪರಿಹಾರವಾಗುವ ಸಮಯ. ಈ ವಾರದ ಚಂದ್ರನ ಸಂಚಾರ ಸಹ ನಿಮಗೆ ಶುಭಫಲಗಳನ್ನು ನೀಡುತ್ತದೆ. ಕೇತು ಸಹ ಲಾಭಸ್ಥಾನಕ್ಕೆ ಬಂದಾಗ ನಿಮಗೆ ಇನ್ನೂ ಹೆಚ್ಚಿನ ಲಾಭ ಸಿಗಲಿದೆ. ಈಗ ಒಳ್ಳೆಯಕಾಲ. ನಿಮಗೆ ಬಹಳ ವಿಷಯಗಳಲ್ಲಿ ಶುಭಫಲಗಳು ಸಿಗುತ್ತದೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಐದನೇ ಮನೆಯಲ್ಲಿ ನಾಲ್ಕು ಗ್ರಹಗಳಿದ್ದು ರಾಜಯೋಗ ಇದೆ. ಆರನೇ ಮನೆಯ ಸೂರ್ಯ ಸಹ ಪರಾಕ್ರಮವನ್ನು ಹೆಚ್ವು ಮಾಡುತ್ತಾನೆ. ಏಳರ ಗುರು ಸತ್ಫಲಗಳನ್ನು ಕೊಡುತ್ತಾನೆ. ಆದಾಯ ಹೆಚ್ವಿಸುತ್ತಾನೆ. ವೃತ್ತಿಯಲ್ಲಿ ಏಳಿಗೆ ಇದೆ. ಹನ್ನೊಂದರ ಕೇತು ಸಹ ಈಗ ನಿಮಗೆ ಶುಭಕಾರಕನೇ ಆಗಿದ್ದಾನೆ.

ಧನಸ್ಸು ರಾಶಿ:
ನಾಲ್ಕನೇ ಮನೆಯಲ್ಲಿ ನಾಲ್ಕು ಗ್ರಹಗಳಿದ್ದು ಒಳ್ಳೆಯದೂ ಕೆಟ್ಟದ್ದೂ ಎರಡೂ ಇದೆ. ಆರನೇ ಮನೆಯ ಗುರು ಮಾನಸಿಕ ಒತ್ತಡವನ್ನು ಕೊಡುತ್ತಾನೆ. ಆರೋಗ್ಯದಲ್ಲಿ ಏರುಪೇರು ಇದೆ. ಕೊಂಚ ಸಮಯದ ನಂತರ ಗುರು ಏಳನೇ ಮನೆಗೆ ಬಂದಾಗ ನಿಮಗೆ ಶುಭಫಲಗಳು ಇವೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ವಿದೇಶ ಪ್ರಯಾಣ ಯೋಗ ಇದೆ.

ಮಕರ ರಾಶಿ:
ಗುರು ಐದನೇ ಮನೆಯಲ್ಲಿ ಶುಭಫಲಗಳನ್ನು ಕೊಡುತ್ತಾನೆ. ಸಾಡೆಸಾತಿ ಮುಗಿದಿದೆ. ಶನಿಯ ಮೂರನೇ ಮನೆಯ ಪ್ರವೇಶ ನಿಮಗೆ ಲಾಭದಾಯಕವಾಗಲಿದೆ. ವೃತ್ತಿಯಲ್ಲಿ ಯಶಸ್ಸು ಇದೆ. ಬಡ್ತಿ ಸಿಗುತ್ತದೆ. ಹೊಸ ಉದ್ಯೋಗ ಅರಸುತ್ತಿರುವವರಿಗೆ ಶುಭಸುದ್ದಿ ಇದೆ. ವಿದೇಶ ಪ್ರಯಾಣ ಇದೆ. ಎಲ್ಲ ವಿಧದಲ್ಲೂ ನಿಮಗೆ ಅನುಕೂಲಗಳಿವೆ.

ಕುಂಭ ರಾಶಿ:
ಎರಡನೇ ಮನೆಯಲ್ಲಿ ನಾಲ್ಕು ಗ್ರಹಗಳಿದ್ದು ನಿಮಗೆ ಕೌಟುಂಬಿಕ ಸೌಖ್ಯ, ಧನಾಗಮನ, ಉತ್ತಮವಾಗಿದೆ. ವಿಹಾರ ಪ್ರವಾಸದ ಅವಕಾಶಗಳಿವೆ. ಒತ್ತಡಗಳು ಕಡಿಮೆಯಾಗುತ್ತದೆ. ಕಗ್ಗಂಟಾಗಿರುವ ಸಮಸ್ಯೆಗಳಿಗೆ ಈಗ ಪರಿಹಾರ ಮಾರ್ಗ ಗೋಚರಿಸುತ್ತದೆ. ವೃತ್ತಿಯಲ್ಲಿ ಬಡ್ತಿ ಇದೆ. ಅದರೆ ಸಾಡೆಸಾತಿ ಶನಿಯ ಪ್ರಭಾವ ಇನ್ನೂ ಎರಡೂವರೆ ವರ್ಷಗಳು ಇರುವುದರಿಂದ ತೊಂದರೆ ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಮುನ್ನೆಚ್ಚರಿಕೆ ಅಗತ್ಯ.

ಮೀನ ರಾಶಿ:
ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ. ಸಾಡೆಸಾತಿಯ ಮಧ್ಯಭಾಗದಲ್ಲಿ ಇದ್ದೀರಿ. ಇನ್ನೂ ಕೆಲವು ಕಾಲ ಒತ್ತಡಗಳನ್ನು ಅನುಭವಿಸ ಬೇಕಾಗಬಹುದು. ಆದರೆ ರಾಹು ನಿಮ್ಮ ರಾಶಿ ಬಿಟ್ಟು ಕುಂಭಕ್ಕೆ ಪ್ರವೇಶವಾದಾಗ ಆರೋಗ್ಯ ಸುಧಾರಿಸುತ್ತದೆ. ಹಣಕಾಸಿನ ಖರ್ಚು ಇದೆ. ನೀವೇ ವಿವೇಚನೆಯಿಂದ ನಿಭಾಯಿಸಬೇಕು. ಆರನೇ ಮನೆಗೆ ಕೇತು ಬಂದಾಗ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.
ಶುಭಮಸ್ತು












Click it and Unblock the Notifications