Venus Transit 2024: ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ- ದೀಪಾವಳಿಯ ನಂತರವೂ ಹೊಳೆಯಲಿದೆ ಈ ರಾಶಿಯವರ ಅದೃಷ್ಟ

ದೀಪಾವಳಿಯ ನಂತರ ನವೆಂಬರ್ 7ರಂದು ಶುಕ್ರನು ಧನು ರಾಶಿಯಲ್ಲಿ ಸಂಕ್ರಮಣ ಮಾಡಲಿದ್ದಾನೆ. ಇದು ಕೆಲವು ರಾಶಿಗಳಿಗೆ ದೀಪಾವಳಿಯ ನಂತರವೂ ಅದೃಷ್ಟ ತರಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ದೀಪಾವಳಿಯನ್ನು ಈ ವರ್ಷ ನವೆಂಬರ್ 1ರಂದು ಆಚರಿಸಲಾಗುತ್ತದೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಶುಕ್ರ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಿದ್ದರೆ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ. ದುರ್ಬಲವಾಗಿದ್ದರೆ ಸಾಕಷ್ಟು ತೊಂದರೆಗಳು ಎದುರಾಗಲಿವೆ. ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ ಕೆಲ ರಾಶಿಯವರ ಸ್ಥಾನ ಮತ್ತು ಐಶ್ವರ್ಯವನ್ನು ಹೆಚ್ಚಿಸಬಹುದು. ಹಾಗಾದರೆ ಆ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಈಗ ತಿಳಿಯೋಣ.

Venus Transit in Sagittarius On 7th November These sign will shine even after Diwali

ಮೇಷ ರಾಶಿ

ಮೇಷ ರಾಶಿಯವರಿಗೆ ಶುಕ್ರ ಸಂಕ್ರಮ ಮಂಗಳಕರವಾಗಿರುತ್ತದೆ. ಈ ಸಂಚಾರ ಮೇಷ ರಾಶಿಯ ಒಂಬತ್ತನೇ ಮನೆಯಲ್ಲಿ ನಡೆಯುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಅನಿರೀಕ್ಷಿತ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ ಮತ್ತು ಎಲ್ಲರೂ ನಿಮ್ಮ ಆಲೋಚನೆಗಳನ್ನು ಸ್ವಾಗತಿಸುತ್ತಾರೆ.

ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳೂ ಈಡೇರುತ್ತವೆ. ಈ ಕಾರಣದಿಂದಾಗಿ ನಿಮ್ಮ ಅದೃಷ್ಟ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಧಾರ್ಮಿಕ ಮತ್ತು ಮಂಗಳಕರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ವ್ಯಾಪಾರಿಗಳು ಲಾಭ ಪಡೆಯಲು ಮತ್ತು ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಬೆಂಬಲವನ್ನು ಸಹ ಪಡೆಯುವಿರಿ. ಆಸ್ತಿ ಮತ್ತು ವಾಹನಗಳನ್ನು ಖರೀದಿಸಲು ಅವಕಾಶಗಳು ಸಿಗಲಿದೆ.

Venus Transit in Sagittarius On 7th November These sign will shine even after Diwali

ಮಿಥುನ ರಾಶಿ

ಶುಕ್ರನ ಸಂಕ್ರಮಣ ಮಿಥುನ ರಾಶಿಯವರಿಗೂ ಸಹ ಲಾಭದಾಯಕವಾಗಿದೆ. ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಈ ಸಂಚಾರ ನಡೆಯುತ್ತದೆ. ಈ ಸಮಯದಲ್ಲಿ ವಿವಾಹಿತರು ಸಂತೋಷದ ವೈವಾಹಿಕ ಜೀವನವನ್ನು ನಡೆಸುತ್ತಾರೆ. ಮಿಥುನ ರಾಶಿಯವರ ಸಂಸಾರಿಕ ಜೀವನ ಉತ್ತಮವಾಗಿರುತ್ತದೆ.

ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ವ್ಯವಹಾರದಲ್ಲಿ ಹೊಸ ಜವಬ್ದಾರಿಗಳನ್ನು ಸಲೀಸಾಗಿ ನಿಭಾಯಿಸುವಿರಿ. ಕುಟುಂಬದಲ್ಲಿ ಬೆಂಬಲ ಸಿಗಲಿದೆ. ನಿಮ್ಮ ಆಸೆಗಳು ಸಹ ಈಡೇರುತ್ತವೆ ಮತ್ತು ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಹೀಗಾಗಿ ಶುಕ್ರನ ಸಂಕ್ರಮಣ ಅನೇಕ ರಾಶಿಗಳಿಗೆ ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿದೆ.

Venus Transit in Sagittarius On 7th November These sign will shine even after Diwali

ಕುಂಭ ರಾಶಿ

ಶುಕ್ರನ ಸಂಕ್ರಮಣ ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ರಾಶಿಯಿಂದ ಆದಾಯ ಮತ್ತು ಲಾಭದ ಸ್ಥಳದಲ್ಲಿ ಈ ಸಂಚಾರ ನಡೆಯುತ್ತದೆ. ಈ ಅವಧಿಯಲ್ಲಿ ನೀವು ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ನಿಮ್ಮ ಆದಾಯ ಹೆಚ್ಚಾಗಬಹುದು ಮತ್ತು ಹೊಸ ಆದಾಯದ ಮೂಲಗಳು ಸಹ ತೆರೆಯಬಹುದು. ಉದ್ಯೋಗವನ್ನು ಹುಡುಕುತ್ತಿರುವ ಜನರು ಹೊಸ ಮತ್ತು ಉತ್ತಮ ಅವಕಾಶಗಳನ್ನು ಪಡೆಯಬಹುದು. ಇದಲ್ಲದೆ ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ.

ನೀವು ಹೂಡಿಕೆ ಮಾಡಿದ್ದರೆ, ನೀವು ಅದರಿಂದ ಉತ್ತಮ ಲಾಭವನ್ನು ಪಡೆಯಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಉದ್ಯೋಗ ದೊರೆಯಲಿದೆ. ಉದ್ಯೋಗಿಗಳು ತಮ್ಮ ಕಚೇರಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಮೆಚ್ಚುಗೆಯನ್ನು ಪಡೆಯುತ್ತಾರೆ. ಕೆಲವರಿಗೆ ಬಡ್ತಿ ಸಿಗಬಹುದು. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಿಂದ ದುಪ್ಪಟ್ಟು ಲಾಭ ಸಿಗಲಿದೆ.

(ಗಮನಿಸಿ: ಯಾವುದೇ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಆಧರಿಸಿರುತ್ತದೆ. ಮಾಹಿತಿಯನ್ನು ನೀಡುವುನ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+