ಗುರುವಿನ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣ: ಪ್ರೇಮ ಜೀವನದಲ್ಲಿ ಸಿಗುವುದು ಯಶಸ್ಸು, ವೃದ್ಧಿಯಾಗುವುದು ಸಂಪತ್ತು

ಗುರುವಿನ ಅಧಿಪತ್ಯದ ಪುನರ್ವಸು ನಕ್ಷತ್ರಕ್ಕೆ ಶುಕ್ರನ ಪ್ರವೇಶವು ಅತ್ಯಂತ ಶುಭವಾಗಿರುತ್ತದೆ. ಭೌತಿಕ ಸಂತೋಷ, ಸಮೃದ್ಧಿ, ಪ್ರೀತಿ ಮತ್ತು ಸಂಪತ್ತಿಗೆ ಕಾರಣವಾದ ಗ್ರಹ ಶುಕ್ರ. ಶುಕ್ರನು ಮೇ 31, 2026 ರ ಭಾನುವಾರ ಬೆಳಿಗ್ಗೆ 5:52 ಕ್ಕೆ ಪುನರ್ವಸು ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ ಜೂನ್ 11 ರವರೆಗೆ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ. ಪುನರ್ವಸು ನಕ್ಷತ್ರಕ್ಕೆ ಶುಕ್ರನ ಸಂಕ್ರಮಣ ನಾಲ್ಕು ರಾಶಿಯಲ್ಲಿ ಜನಿಸಿದವರಿಗೆ ಅಪಾರ ಸಂಪತ್ತು ಒಲಿದು ಬರುವಂತೆ ಮಾಡುವುದು. ಈ ರಾಶಿಯವರಿಗೆ ಪ್ರೀತಿಯ ವಿಷಯಗಳಲ್ಲಿಯೂ ಯಶಸ್ಸು ಸಿಗುವುದು.

ಶುಕ್ರ ಸಂಕ್ರಮಣದಿಂದ ಈ ರಾಶಿಯವರಿಗೆ ಲಾಭ:

ಮಿಥುನ ರಾಶಿ:

ಪುನರ್ವಸು ನಕ್ಷತ್ರಕ್ಕೆ ಶುಕ್ರನ ಪ್ರವೇಶವು ಮಿಥುನ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುವುದು. ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ವೃತ್ತಿಜೀವನದಲ್ಲಿಯೂ ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಈ ಸಂದರ್ಭದಲ್ಲಿ ತೆಗೆದುಕೊಳ್ಳುವಿರಿ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಮನಸ್ಸಿನ ಶಾಂತಿ ಹೆಚ್ಚಾಗುವುದು.

Venus Transit

ಕರ್ಕಾಟಕ ರಾಶಿ:

ಶುಕ್ರ ಸಂಕ್ರಮಣ ಕರ್ಕಾಟಕ ರಾಶಿಯವರಿಗೆ ಉತ್ತಮ ಸಮಯವನ್ನು ಹೊತ್ತು ತರುವುದು.ಇವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ವೃತ್ತಿಜೀವನದಲ್ಲಿ ಅನಿರೀಕ್ಷಿತ ಯಶಸ್ಸು ಸಿಗುವುದು. ಹಣ ಗಳಿಸುವ ಹೊಸ ಹೊಸ ಅವಕಾಶಗಳು ಹುಟ್ಟಿಕೊಳ್ಳುವುದು. ಇಲ್ಲಿವರೆಗೆ ಕಾಡುತ್ತಿದ್ದ ಸಮಸ್ಯೆಗಳು ಒಂದೊಂದಾಗಿಯೇ ಕರಗುವುದು. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಪ್ರೀತಿಯ ವಿಚಾರದಲ್ಲಿ ಎದುರಾಗಿದ್ದ ಮನಸ್ತಾಪಗಳು ಬಗೆಹರಿಯುವುದು.

ಬುಧ ಸಂಕ್ರಮಣದಿಂದ ಐದು ರಾಶಿಯವರ ಸುವರ್ಣ ಯುಗ ಆರಂಭ: ಹೆಚ್ಚಾಗುವುದು ಧನ ಸಂಪತ್ತು
ಬುಧ ಸಂಕ್ರಮಣದಿಂದ ಐದು ರಾಶಿಯವರ ಸುವರ್ಣ ಯುಗ ಆರಂಭ: ಹೆಚ್ಚಾಗುವುದು ಧನ ಸಂಪತ್ತು

ತುಲಾ ರಾಶಿ:

ಈ ಶುಕ್ರ ಸಂಚಾರ ತುಲಾ ರಾಶಿಯವರ ಜೀವನದಲ್ಲಿ ಅದ್ಭುತ ಯಶಸ್ಸು ತರುವುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೊಸ ವೃತ್ತಿ ಅವಕಾಶಗಳು ಸಿಗುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು.ಗೌರವ ಹೆಚ್ಚಾಗುತ್ತದೆ. ಪ್ರೇಮ ಸಂಬಂಧಗಳು ಗಾಢವಾಗುತ್ತವೆ. ಸಮಾಜದಲ್ಲಿ

ಗುರು ಸಂಕ್ರಮಣದಿಂದ ಹಂಸ ಮಹಾಪುರಷ ರಾಜಯೋಗ : ನಾಲ್ಕು ರಾಶಿಯವರಿಗೆ ಒಲಿಯುವುದು ಅದೃಷ್ಟ
ಗುರು ಸಂಕ್ರಮಣದಿಂದ ಹಂಸ ಮಹಾಪುರಷ ರಾಜಯೋಗ : ನಾಲ್ಕು ರಾಶಿಯವರಿಗೆ ಒಲಿಯುವುದು ಅದೃಷ್ಟ

ಧನು ರಾಶಿ:

ಈ ಶುಕ್ರ ಸಂಚಾರವು ಧನು ರಾಶಿಯವರಿಗೂ ಅತ್ಯಂತ ಶುಭವಾಗಿರುವುದು. ವ್ಯವಹಾರ ಮತ್ತು ವೃತ್ತಿಯಲ್ಲಿ ಪ್ರಗತಿಯಾಗುವುದು. ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ಪ್ರತಿ ಹಂತದಲ್ಲಿಯೂ ಅದೃಷ್ಟ ನಿಮ್ಮ ಜೊತೆಗಿರುವುದು. ಗೌರವ ಹೆಚ್ಚಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+