Venus Rise 2024: 60 ದಿನಗಳ ನಂತರ ಉದಯಿಸಿದ ಶುಕ್ರ: ಈ 3 ರಾಶಿಯವರಿಗೆ ಅದೃಷ್ಟದ ಓಕುಳಿ

ಕಾಲ ಕಾಲಕ್ಕೆ ಗ್ರಹಗಳು ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ಚಲನೆಯಲ್ಲಿನ ಇಂತಹ ಬದಲಾವಣೆಗಳನ್ನು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಕಾಣಬಹುದು.

ವೈದಿಕ ಜ್ಯೋತಿಷ್ಯದ ಪ್ರಕಾರ, ಆ ಮೂಲಕ ಅಸುರರ ಅಧಿಪತಿ ಎಂದೇ ಪರಿಗಣಿತವಾಗಿರುವ ಶುಕ್ರನು ಸದ್ಯ ಅಸ್ತಮಾನ ಸ್ಥಿತಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಜೂನ್ 30ರಂದು ಶುಕ್ರನು ಮಿಥುನ ರಾಶಿಯಲ್ಲಿ ಉದಯಿಸುತ್ತಾನೆ. ಶುಕ್ರನು ಈ ರೀತಿ ಉದಯಿಸುವುದರಿಂದ ಅದರ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಯಶಸ್ಸಿನ ರಾಶಿಯಾಗುತ್ತದೆ.

ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಈಗ ಮಿಥುನ ರಾಶಿಯಲ್ಲಿ ಶುಕ್ರನು ಉದಯಿಸುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ ಎಂದು ನೋಡೋಣ.

Venus Rise In Gemini On 30 June 2024 effect on 12 Zodiac Signs

ವೃಷಭ ರಾಶಿ

ಶುಕ್ರನು ವೃಷಭ ರಾಶಿಯ 2ನೇ ಮನೆಯಲ್ಲಿ ಉದಯಿಸುತ್ತಾನೆ. ಹೀಗಾಗಿ ಈ ಸ್ಥಳೀಯರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ನೀವು ಸರ್ಕಾರಿ ಕೆಲಸವನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ.

ಪಿತ್ರಾರ್ಜಿತ ಆಸ್ತಿಯ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರಿಗಳು ಪ್ರಗತಿಯನ್ನು ಕಾಣುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ನಿಮ್ಮ ಮಧುರ ಮಾತು ಅನೇಕ ಕೆಲಸಗಳನ್ನು ಮಾಡಲಿದೆ. ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

Venus Rise In Gemini On 30 June 2024 effect on 12 Zodiac Signs

ಕನ್ಯಾ ರಾಶಿ

ಕನ್ಯಾ ರಾಶಿಯ 10 ನೇ ಮನೆಯಲ್ಲಿ ಶುಕ್ರನು ಉದಯಿಸುತ್ತಾನೆ. ಹೀಗಾಗಿ ಈ ರಾಶಿಯವರು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ನಿಮ್ಮ ಆಲೋಚನಾ ಸಾಮರ್ಥ್ಯ ಸುಧಾರಿಸುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ಅವುಗಳಿಂದ ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ. ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ವ್ಯಾಪಾರವನ್ನು ವಿಸ್ತರಿಸುವ ಅವಕಾಶವೂ ದೊರೆಯಲಿದೆ.

Venus Rise In Gemini On 30 June 2024 effect on 12 Zodiac Signs

ತುಲಾ ರಾಶಿ

ಶುಕ್ರನು ತುಲಾ ರಾಶಿಯ 9ನೇ ಮನೆಯಲ್ಲಿ ಉದಯಿಸುತ್ತಾನೆ. ಆದ್ದರಿಂದ ಈ ತುಲಾ ರಾಶಿಯವರಿಗೆ ಅದೃಷ್ಟ ಒಲವು ತೋರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವಿದೇಶಕ್ಕೆ ಹೋಗುವ ಆಸೆ ಇದ್ದರೆ ಅದು ಈಡೇರುತ್ತದೆ.

ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಯಶಸ್ವಿಯಾಗುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆಯೂ ಇದೆ.

ಜಾತಕದಲ್ಲಿ ಶುಕ್ರನ ಬಲ
60 ದಿನಗಳ ನಂತರ ಶುಕ್ರ ಗ್ರಹ ಉದಯಿಸುವುದರಿಂದ ಈ ಎಲ್ಲಾ ರಾಶಿಗಳಿಗೆ ಸಮಯ ಉತ್ತಮವಾಗಿದೆ. ವ್ಯಾಪಾರ, ವ್ಯವಹಾರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರಲಿವೆ. ಅಂದುಕೊಂಡ ಕೆಲಸ ಕೈಹಿಡಿದು ಹಣ ಉಳಿತಾಯಕ್ಕೆ ಅವಕಾಶ ಸಿಗಲಿದೆ. ಅಲ್ಲದೆ ಆಸ್ತಿ ಖರೀದಿ, ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಸಿಗಲಿದೆ.

ಜಾತಕದಲ್ಲಿ ಶುಕ್ರನ ಸ್ಥಾನ ಉತ್ತಮವಾಗಿದ್ದರೆ ಅಂಥರ ರಾಶಿಯವರ ಜೀವನ ಸಂತೋಷದಿಂದ ಕೂಡಿರಲಿದೆ. ಹಣ ಸಂಪಾದಿಸಲು ಹೊಸ ಮಾರ್ಗಗಳ ಪರಿಚಯ ಆಗಲಿದೆ. ಜಾತಕದಲ್ಲಿ ಶುಕ್ರನ ಬಲ ಇಲ್ಲದೇ ಇದ್ದಲ್ಲಿ ಶುಕ್ರ ಗ್ರಹವನ್ನು ಪೂಜಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+