Venus Rise 2025: ಶುಕ್ರ ಉದಯ- ಈ ರಾಶಿಯವರ ಮನೆಯಲ್ಲಿ ಸಂತೋಷ, ಸಂಪತ್ತು

ಜ್ಯೋತಿಷ್ಯದಲ್ಲಿ ಶುಕ್ರನನ್ನು ರಾಕ್ಷಸರ ಗುರು ಎಂದು ಕರೆಯಲಾಗುತ್ತದೆ. ಇದು ಒಂದು ನಿರ್ದಿಷ್ಟ ಅವಧಿಯ ನಂತರ ರಾಶಿಯನ್ನು ಬದಲಾಯಿಸುತ್ತದೆ. ಶುಕ್ರನು ಇದೇ ತಿಂಗಳು ಮೀನ ರಾಶಿಯಲ್ಲಿ ಉದಯಿಸುತ್ತಾನೆ. ಇದು ಎಲ್ಲಾ ರಾಶಿಗಳ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಲಿದೆ. ಸಂಪತ್ತು, ಕೀರ್ತಿ ಮತ್ತು ಗೌರವವನ್ನು ನೀಡುವ ಶುಕ್ರನು ಒಬ್ಬರ ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿದ್ದರೆ ಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಬಹುದು.

ಮಾರ್ಚ್ 19ರಂದು ಶುಕ್ರನು ಮೀನ ರಾಶಿಯಲ್ಲಿ ಸಾಗುತ್ತಾನೆ. 6 ದಿನಗಳ ನಂತರ ಉದಯಿಸುತ್ತಾನೆ. ಅಂದರೆ ಶುಕ್ರನು ಮೀನ ರಾಶಿಯಲ್ಲಿ ಸಂಚಾರ ಮಾಡಿ ಮಾರ್ಚ್ 23ರಂದು ಉದಯಿಸುತ್ತಾನೆ. ಇದರಿಂದಾಗಿ ಕೆಲವು ರಾಶಿಯವರು ವೃತ್ತಿಯಲ್ಲಿ ಹೊಸ ಎತ್ತರಕ್ಕೆ ಹೋಗಲಿದ್ದಾರೆ. ಹಾಗಾದರೆ ಈಗ ಶುಕ್ರ ಮೀನ ರಾಶಿಯಲ್ಲಿ ಉದಯಿಸುವುದರಿಂದ ಯಾವ ರಾಶಿಯವರು ಅದೃಷ್ಟವಂತರಾಗುತ್ತಾರೆ ಎಂಬುದನ್ನು ತಿಳಿಯೋಣ.

Venus Rise 2025 Happiness and wealth will reside in the homes of these zodiac signs

ವೃಷಭ ರಾಶಿ

ಶುಕ್ರನ ಉದಯ ವೃಷಭ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರಲಿದೆ. ಈ ರಾಶಿಯ ಮೊದಲ ಮತ್ತು ಆರನೇ ಮನೆಯ ಅಧಿಪತಿಯಾಗಿರುವ ಶುಕ್ರನು ಹನ್ನೊಂದನೇ ಮನೆಯಲ್ಲಿ ಉತ್ತುಂಗದಲ್ಲಿದ್ದಾನೆ. ಇದರಿಂದಾಗಿ ವೃಷಭ ರಾಶಿಯವರು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲಿದ್ದಾರೆ. ವೃತ್ತಿಜೀವನದ ವಿಷಯದಲ್ಲಿ ಅನೇಕ ಹೊಸ ಅವಕಾಶಗಳನ್ನು ಪಡೆಯಬಹುದು.

ಉದ್ಯಮಿಗಳು ವಿವಿಧ ಒಪ್ಪಂದಗಳಿಂದ ಭಾರಿ ಆದಾಯವನ್ನು ಗಳಿಸುವರು. ಇದಲ್ಲದೆ ನೀವು ನಿಮ್ಮ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೀರಿ. ದೀರ್ಘಾವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಆದಾಯದಲ್ಲಿ ಭಾರಿ ಸುಧಾರಣೆಯನ್ನು ಕಾಣುವಿರಿ. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ.

Venus Rise 2025 Happiness and wealth will reside in the homes of these zodiac signs

ಮಕರ ರಾಶಿ

ಮಕರ ರಾಶಿಯವರಿಗೆ ಶುಕ್ರನಿಂದ ಹೆಚ್ಚಿನ ಅನುಕೂಲಕರ ಲಾಭಗಳು ಸಿಗಲಿವೆ. ಈ ರಾಶಿಯ ಮೂರನೇ ಮನೆಯಲ್ಲಿ ಶುಕ್ರ ಸಂಚಾರ ಆಗುವುದರಿಂದ ಇವರಿಗೆ ವಿಶೇಷ ಲಾಭಗಳು ದೊರೆಯುವ ಸಾಧ್ಯತೆಯಿದೆ. ನಿಮ್ಮ ಬುದ್ಧಿವಂತಿಕೆ ಹಲವು ಪಟ್ಟು ಹೆಚ್ಚಾಗುತ್ತದೆ. ಇದರಿಂದಾಗಿ ನೀವು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗುವಿರಿ.

ವೃತ್ತಿಜೀವನದ ವಿಷಯದಲ್ಲಿ ನೀವು ಕೆಲಸದ ನಿಮಿತ್ತ ದೂರದ ಪ್ರಯಾಣ ಮಾಡುವಿರಿ. ಇದು ನಿಮಗೆ ಅನೇಕ ಪ್ರಯೋಜನಗಳನ್ನು ತರಲಿದೆ. ನೀವು ವಿವಿಧ ಒಪ್ಪಂದಗಳ ಮೂಲಕ ಲಾಭ ಗಳಿಸುವ ಸಾಧ್ಯೆತದೆ ಇದೆ. ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳಿವೆ. ನಿಮ್ಮ ಸಂಗಾತಿಯೊಂದಿಗಿನ ದೀರ್ಘಕಾಲದ ವಾದಗಳು ಈಗ ಕೊನೆಗೊಳ್ಳುತ್ತವೆ ಮತ್ತು ಕುಟುಂಬ ಜೀವನದಲ್ಲಿ ಶಾಂತಿ ನೆಲೆಗೊಳ್ಳಲಿದೆ.

Venus Rise 2025 Happiness and wealth will reside in the homes of these zodiac signs

ಕುಂಭ ರಾಶಿ

ಕುಂಭ ರಾಶಿಯವರಿಗೆ ಶುಕ್ರನ ಉದಯ ಅಪಾರ ಪ್ರಯೋಜನಗಳನ್ನು ತರಲಿದೆ. ಕುಂಭ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಪ್ರಯತ್ನಗಳು ನಿಮ್ಮ ವೃತ್ತಿಪರ ಜೀವನದಲ್ಲಿ ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತವೆ.

ಈ ಅವಧಿಯಲ್ಲಿ ನಾಯಕತ್ವದ ಗುಣಗಳು ಗಮನಾರ್ಹವಾಗಿ ಸುಧಾರಿಸುತ್ತವೆ. ಕೆಲಸದಲ್ಲಿ ಬಡ್ತಿಯನ್ನು ನಿರೀಕ್ಷಿಸಬಹುದು. ನಿಮ್ಮ ವ್ಯವಹಾರ ಯೋಜನೆಗಳು ನೀವು ನಿರೀಕ್ಷಿಸಿದ ಫಲಿತಾಂಶಗಳನ್ನು ನೀಡುತ್ತವೆ. ನೀವು ಬಹಳಷ್ಟು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಶುಕ್ರನ ಕೃಪೆಯಿಂದ ನಿಮ್ಮ ಪ್ರೀತಿ ಮತ್ತು ವೈವಾಹಿಕ ಜೀವನ ತುಂಬಾ ಸಂತೋಷಕರವಾಗಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+