ಮನೆಯಲ್ಲಿ ಕ್ಯಾಲೆಂಡರ್ ಎಲ್ಲಿ ನೇತು ಹಾಕಬೇಕು? ಇಲ್ಲಿದೆ ವಾಸ್ತು ನಿಯಮ

ಮನೆಯಲ್ಲಿ ಕ್ಯಾಲೆಂಡರ್‌ ಅನ್ನು ಕೇವಲ ದಿನಾಂಕಗಳನ್ನು ನೋಡಲು ಬಳಸುವ ವಸ್ತು ಮಾತ್ರವಲ್ಲ, ಇದರಿಂದ ನಾವು ಸಮಯ, ಮುಂದಿನ ದಿನಗಳ ಯೋಜನೆ, ಮತ್ತು ನಮ್ಮ ಜೀವನದ ಪ್ರಗತಿಯ ಸಂಕೇತವಾಗಿ ಬಳುಸುತ್ತೇವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರನ್ನು ಸರಿಯಾದ ದಿಕ್ಕಿನಲ್ಲಿ ನೇತು ಹಾಕಬೇಕು. ಒಂದು ವೇಳೆ ಸರಿಯಾದ ದಿಕ್ಕಿನಲ್ಲಿ ನೇತು ಹಾಕದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ಅನೇಕರು ಮನೆಯ ದ್ವಾರಗಳ ಹಿಂದೆ, ಬಾಗಿಲಿನ ಪಕ್ಕದಲ್ಲಿ, ಮಲಗುವ ಕೋಣೆಗಳಲ್ಲಿ ಅಥವಾ ಖಾಲಿ ಗೋಡೆಗಳಲ್ಲಿ ಕ್ಯಾಲೆಂಡರ್ ನೇತು ಹಾಕುವುದು ಸಾಮಾನ್ಯ. ಆದರೆ ಇದು ವಾಸ್ತು ಪ್ರಕಾರ ತಪ್ಪು ಎಂದು ಹೇಳಲಾಗುತ್ತದೆ. ಮುಖ್ಯ ದ್ವಾರದ ಬಳಿ ಕ್ಯಾಲೆಂಡರ್ ನೇತು ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಿಂತ ನಕಾರಾತ್ಮಕ ಶಕ್ತಿಯೇ ಹೆಚ್ಚುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಕುಟುಂಬದ ಆರ್ಥಿಕ ಪ್ರಗತಿಗೆ, ಮನಸ್ಸಿನ ನೆಮ್ಮದಿ ಮತ್ತು ಮನೆಯ ಸದಸ್ಯರ ಬೆಳವಣಿಗೆಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ.

Vastu Tips

ಮನೆಯ ಬಾಗಿಲಿನ ಹಿಂದೆ ಅಥವಾ ಕಿಟಕಿಯಲ್ಲಿ ನೇತು ಹಾಕುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಗಾಳಿ ಬೀಸುವಾಗ ಕ್ಯಾಲೆಂಡರ್ ಅಲುಗಾಡಿದರೆ ಮನೆಯಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹಳೆಯ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರನ್ನು ಹಾಕುವುದು ತಪ್ಪು ಎಂದು ವಾಸ್ತು ಸಲಹೆಯನ್ನು ನೀಡುತ್ತದೆ.

Money Vastu Tips: ಮನೆಯ ಈ ದಿಕ್ಕಿನಲ್ಲಿ ತಿಜೋರಿ ಇಟ್ಟರೆ ಆರ್ಥಿಕ ಸಮೃದ್ಧಿ! ಇಲ್ಲವಾದರೆ ತೊಂದರೆ ಸಾಧ್ಯತೆ
Money Vastu Tips: ಮನೆಯ ಈ ದಿಕ್ಕಿನಲ್ಲಿ ತಿಜೋರಿ ಇಟ್ಟರೆ ಆರ್ಥಿಕ ಸಮೃದ್ಧಿ! ಇಲ್ಲವಾದರೆ ತೊಂದರೆ ಸಾಧ್ಯತೆ

ವಾಸ್ತು ಪ್ರಕಾರ ಪೂರ್ವ ದಿಕ್ಕು ಕ್ಯಾಲೆಂಡರ್‌ ಅನ್ನು ನೇತು ಹಾಕಲು ಅತ್ಯಂತ ಮಂಗಳಕರವಾದ ಜಾಗ ಎಂದು ಹೇಳುತ್ತಾರೆ. ಯಾಕೆಂದರೆ ಇದು ಸೂರ್ಯೋದಯ ದಿಕ್ಕು ಆಗಿರುವುದರಿಂದ ಮನೆಯ ಸದಸ್ಯರ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ತರ ದಿಕ್ಕಿನಲ್ಲಿ ಗೋಡೆಗಳಿಗೆ ನೇತು ಹಾಕುವುದರಿಂದ ಆರ್ಥಿಕ ಸ್ಥಿರತೆ ಮತ್ತು ಸಮೃದ್ದಿ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.

ಆದರೆ ದಕ್ಷಿಣ ದಿಕ್ಕಿನಲ್ಲಿ ಕ್ಯಾಲೆಂಡರನ್ನು ನೇತುಹಾಕುವುದು ಅತ್ಯಂತ ಅಶುಭ ಎಂದು ತಜ್ಞರ ಸೂಚನೆಯನ್ನು ನೀಡುತ್ತಾರೆ. ಈ ದಿಕ್ಕಿನಲ್ಲಿ ಕ್ಯಾಲೆಂಡರನ್ನು ಹಾಕುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ಮತ್ತು ಅವರ ಪ್ರಗತಿಗೆ ತೊಂದರೆ ಆಗುತ್ತದೆ ಆಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ.

ವಾಸ್ತು: ನಂಬಿಕೆನಾ? ಅಥವಾ ವೈಜ್ಞಾನಿಕ ಸತ್ಯನಾ? ತಿಳಿದುಕೊಳ್ಳಿ ನಿಜಾಂಶ
ವಾಸ್ತು: ನಂಬಿಕೆನಾ? ಅಥವಾ ವೈಜ್ಞಾನಿಕ ಸತ್ಯನಾ? ತಿಳಿದುಕೊಳ್ಳಿ ನಿಜಾಂಶ

ಇದಲ್ಲದೆ ಕ್ಯಾಲೆಂಡರ್ ನಲ್ಲಿ ದುಃಖ, ನಕಾರಾತ್ಮಕ ಅಥವಾ ಅಶಾಂತಿಯಿಂದ ಕೂಡಿದ ಚಿತ್ರಗಳು ಇರಬಾರದು. ಹಸಿರು ಪ್ರಕೃತಿ, ದೇವರ ಚಿತ್ರಗಳು ಅಥವಾ ಸುಂದರವಾದ ಪರ್ವತಗಳ ಚಿತ್ರಗಳಿರುವ ಕ್ಯಾಲೆಂಡರನ್ನು ಆಯ್ಕೆ ಮಾಡಿ ಹಾಕಬೇಕು, ಇದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಹೆಚ್ಚುತ್ತದೆ ಮತ್ತು ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ ಎಂದು ವಾಸ್ತು ತಜ್ಞರ ಸಲಹೆಯನ್ನು ನೀಡುತ್ತಾರೆ.

ಮನೆಯಲ್ಲಿ ಕ್ಯಾಲೆಂಡರ್ ನೇತುಹಾಕುವುದು ಕೇವಲ ದಿಕ್ಕು ಮಾತ್ರವಲ್ಲ ಅದರ ಸ್ವಚ್ಚತೆಯನ್ನು ಕಾಪಾಡಬೇಕು ಹರಿದುಹೋಗಿರುವ, ಹಳೆಯದಾದ ಅಥವಾ ಧೂಳಿನಿಂದ ತುಂಬಿದ ಕ್ಯಾಲೆಂಡರನ್ನು ಬಳಸುವುದನ್ನು ನಿಲ್ಲಿಸಬೇಕು. ಸಮಯ ಮತ್ತು ಶಕ್ತಿಯ ಪ್ರತೀಕವಾಗಿರುವ ಕ್ಯಾಲೆಂಡರನ್ನು ಸದಾ ಸ್ವಚ್ಚಂದವಾಗಿರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಮನೆಯ ಸದಸ್ಯರ ದಿನನಿತ್ಯದ ಕೆಲಸಗಳು ಸರಳವಾಗಿ ಸಾಗುತ್ತವೆ ಎಂಬ ನಂಬಿಕೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+