ಮಲಗುವ ಕೋಣೆಯಲ್ಲಿ ಪ್ರಣಯಕ್ಕೂ ಮುನ್ನ 'ವಾಸ್ತು' ಟಿಪ್ಸ್!

Posted By: ಮನಸ್ವಿನಿ, ನಾರಾವಿ
Subscribe to Oneindia Kannada
   ವಾಸ್ತು ಶಾಸ್ತ್ರದ ಪ್ರಕಾರ ಈ 5 ವಸ್ತುಗಳನ್ನ ನೆಲದ ಮೇಲೆ ಇಡಬಾರದು | Oneindia kannada

   ಮಲಗುವ ಕೋಣೆಯನ್ನು ಸದಾ ಸ್ವಚ್ಛವಾಗಿರಿಸಿಕೊಳ್ಳಿ. ಇದು ಪ್ರಣಯಕ್ಕೂ, ಆರೋಗ್ಯಕ್ಕೂ ಒಳ್ಳೆಯದು. ಸಂಗಾತಿಗಳ ಪ್ರಣಯೋತ್ಸಾಹಕ್ಕೆ ಭಂಗ ಬಾರದಂತೆ ಕೋಣೆಯನ್ನು ಸಜ್ಜುಗೊಳಿಸಲು ವಾಸ್ತು ಸಹಕಾರಿಯಾಗಲಿದೆ.

   ಪ್ರಣಯೋತ್ಸಾಹ ಭಂಗವಾಗಲು ಕೀರಲು ಸ್ವರ ಬೀರುವ ಮಂಚವಾಗಲಿ, ಸ್ವಚ್ಛವಿರುವ ರೂಮು, ಸಿಗರೇಟ್ ಸ್ಮೆಲ್ಲೂ, ಎಲೆಕ್ಟ್ರಿಸಿಟಿ ಬಲ್ಬೂ, ಕ್ಲೀನ್ ಇರದ ಮಿರರ್ ಎಲ್ಲವೂ ಕಾರಣವಾಗಬಹುದು.

   ಬೆಡ್ ರೂಮಿಗೂ ಸ್ಟೋರ್ ರೂಮಿಗೂ ವ್ಯತ್ಯಾಸ ಗೊತ್ತಿದ್ದರೆ ವಾಸ್ತು ಸಲಹೆಯ ಅಗತ್ಯವಿರುವುದಿಲ್ಲ. ಎಲ್ಲಾ ಇದ್ದೂ ಇಬ್ಬರಿಗೂ ಉತ್ಸಾಹ ಕುಂದುವಂಥ ವಾತಾವರಣ ಉಂಟಾದರೆ ಏನು ಮಾಡಬೇಕು?

   ಪ್ರಣಯೋತ್ಸಹ ಉಕ್ಕಿದಾಗ ಅದುಮಿಡುವುದು ಕಷ್ಟ ಹಾಗೂ ಅಪಾಯ ಕೂಡಾ. ಆದರೆ, ಕಾಮಕೇಳಿಗೆ ಪೂರಕವಾದ ವಾತಾವರಣ ಅಗತ್ಯ. ಇರುವ ನೆಲೆಯನ್ನೇ ಸುಂದರವಾಗಿರಿಸಿಕೊಂಡರೆ ಕಾಮೋನ್ಮಾದಕ್ಕೆ ಯಾರ ತಡೆಯೂ ಇರುವುದಿಲ್ಲ.

   ಯಾವುದು ಎಲ್ಲಿರಬೇಕು ಅಲ್ಲಿರಬೇಕು

   ಯಾವುದು ಎಲ್ಲಿರಬೇಕು ಅಲ್ಲಿರಬೇಕು

   * ಮೊದಲೇ ಹೇಳಿದಂತೆ ಸ್ಟೋರ್ ರೂಮಿಗೂ ಬೆಡ್ ರೂಮಿಗೂ ವ್ಯತ್ಯಾಸ ಗೊತ್ತಿರಲಿ
   * ಹಾಸಿಗೆ ಯಾವಾಗಲೂ ಗೋಡೆ ಬದಿಗಿರಲಿ, ರೂಮಿನ ಮಧ್ಯದಲ್ಲಿ ಯಾವತ್ತಿಗೂ ಇರುವುದು ಬೇಡ. ಗೋಡೆ ಬದಿಗೆ ಇರುವ ಭಾಗದಲ್ಲಿ ತಲೆ ಇರಿಸುವಂತಿರಲಿ.
   * ಮರದಿಂದ ಮಾಡಿದ ಮಂಚ ಇರಲಿ, ಲೋಹದ ಮಂಚ ಬೇಡ. ಕಬ್ಬಿಣ, ಅಲ್ಯೂಮಿನಿಯಂ ಮುಂತಾದ ಲೋಹ ಹೆಚ್ಚು ಬಳಕೆಯ ಹಾಸಿಗೆ, ಮಂಚ ಇದ್ದರೆ ಮೈಮನಸ್ಯ ಹೆಚ್ಚಾಗುತ್ತದೆ.
   * ನೀವು ಮಲಗುವ ದಿಕ್ಕಿಗೆ ಎದುರಾಗಿ ಎಂದಿಗೂ ಕನ್ನಡಿ ಇರಬಾರದು.

   ಕನ್ನಡಿ ಇಲ್ಲದಿದ್ದರೆ ಒಳ್ಳೆಯದು

   ಕನ್ನಡಿ ಇಲ್ಲದಿದ್ದರೆ ಒಳ್ಳೆಯದು

   * ಕೋಣೆಯಲ್ಲಿ ಕನ್ನಡಿ ಇದ್ದರೆ, ಕನ್ನಡಿಯ ಮೇಲೆ ಹೆಚ್ಚಿನ ಆಕರ್ಷಣೆ ಇರುತ್ತದೆ. ಬೆಡ್ ರೂಮಿನಲ್ಲಿ ಕನ್ನಡಿ ಇರಲೇಬೇಕು ಎಂದಾದರೆ, ಹಾಸಿಗೆಯ ಪ್ರತಿಬಿಂಬ ಅದರಲ್ಲಿ ಕಾಣದಂತೆ ನೋಡಿಕೊಳ್ಳಿ.
   * ಡ್ರೆಸಿಂಗ್ ಟೇಬಲ್, ಮೇಕಪ್ ಎಲ್ಲವನ್ನು ಬೆಡ್ ರೂಮಿನಿಂದ ದೂರವಿರಿಸಿ.
   * ದೇವರು, ದೇವತೆ, ನಿಮ್ಮ ಪೂರ್ವಜರು, ಮೃತ ವ್ಯಕ್ತಿಗಳ ಫೋಟೊ, ಗ್ರೂಪ್ ಫೋಟೋಗಳು ಇರುವುದು ಬೇಡ.
   * ಈ ರೀತಿ ಫೋಟೋಗಳು ನಿಮ್ಮ ಭಾವನೆಗಳನ್ನು ಬದಲಾಯಿಸುತ್ತವೆ ಹಾಗೂ ಪ್ರಣಯದ ಉತ್ಸಾಹವನ್ನು ತಗ್ಗಿಸುತ್ತದೆ.

   ಯಾವ ರೀತಿ ಚಿತ್ರಗಳು ಬೆಡ್ ರೂಮಿನಲ್ಲಿರಬೇಕು

   ಯಾವ ರೀತಿ ಚಿತ್ರಗಳು ಬೆಡ್ ರೂಮಿನಲ್ಲಿರಬೇಕು

   * ನೈಸರ್ಗಿಕ ಹಸಿರು ವಾತಾವರಣ, ಜಲಪಾತ ಇತ್ಯಾದಿ ವಾಲ್ ಪೇಪರ್ ಹಾಕಿಕೊಳ್ಳಬಹುದು.
   * ಬೇಡದ ಅಲ್ಮೇರಾ, ವಸ್ತುಗಳಿದ್ದರೆ ಹಾಸಿಗೆಯಿಂದ ದೂರವಿರುವಂತೆ ನೋಡಿಕೊಳ್ಳಿ, ಅಥವಾ ಆ ಭಾಗವನ್ನು ಪ್ರತ್ಯೇಕಿಸಿ
   * ಬೆಡ್ ರೂಮಿನಲ್ಲಿ ಕೆಂಪು, ಕಿತ್ತಲೆ, ಗುಲಾಬಿ ಮುಂತಾದ ಬಣ್ಣಗಳು ಗೋಡೆಯ ಮೇಲೆ ಗಾಢವಾಗಿರಲಿ.
   * ಯಾವುದೇ ಕಾರಣಕ್ಕೂ ಪ್ರಖರವಾದ ಬೆಳಕು ಕೋಣೆಯಲ್ಲಿ ಕಾಣಿಸಿಕೊಳ್ಳದಿರಲಿ, ಮಂದ ಬೆಳಕು ಎಲ್ಲೆಡೆ ಆವರಿಸಿರಲಿ, ಇದರಿಂದ ಉತ್ಸಾಹ ಹೆಚ್ಚುತ್ತದೆ.

   ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು

   ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು

   * ದಕ್ಷಿಣಕ್ಕೆ ತಲೆ ಹಾಕಿ ಮಲಗಿದರೆ ಪ್ರಣಯ ಸುಖದ ತುತ್ತತುದಿ ಮುಟ್ಟಬಹುದು. ಒಳ್ಳೆ ನಿದ್ದೆಯೂ ಬರುತ್ತದೆ.
   * ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೂ ಕೂಡಾ ಸಂಗಾತಿಯ ಕೂಡುವಿಕೆಗೆ ಒಳ್ಳೆಯದು. ಸಂಬಂಧ, ಸಾಮರಸ್ಯ ಉಳಿಯಲಿದೆ.
   * ಪೂರ್ವಕ್ಕೆ ತಲೆ ಹಾಕಿ ಮಲಗಿದರೆ ಬೇಡದ ಕಿರಿಕಿರಿ, ಇಬ್ಬರ ನಡುವೆ ಜಗಳ ತಪ್ಪಿದ್ದಲ್ಲ.
   * ಉತ್ತರಕ್ಕೆ ತಲೆ ಹಾಕಿ ಎಂದಿಗೂ ಮಲಗುವ ಸಾಹಸಕ್ಕೆ ಕೈ ಹಾಕಬೇಡಿ, ಕಾಮದ ಉತ್ಸಾಹ, ನಿದ್ದೆ ಎಲ್ಲವೂ ಹಾಳಾಗುವುದಲ್ಲದೆ, ಇಬ್ಬರ ನಡುವೆ ಸಂಬಂಧವೂ ಹಳಸುತ್ತದೆ.

   ಯಾವ ರೀತಿ ದಿರಿಸು ಧರಿಸಬೇಕು

   ಯಾವ ರೀತಿ ದಿರಿಸು ಧರಿಸಬೇಕು

   ಬೆಡ್ ರೂಮಿನಲ್ಲಿ ಬಟ್ಟೆ ಯಾತಕ್ಕೆ ಎಂದು ರಾಗ ಎಳೆಯಬೇಡಿ, ಕಳಚುವ ಮುನ್ನ ತೊಡಬೇಕಾದ ಬಟ್ಟೆಗಳ ಬಗ್ಗೆ ಕೂಡಾ ಸಲಹೆ ಇಲ್ಲಿದೆ.
   ಗಾಢವಾದ ಬಣ್ಣದ ಬಟ್ಟೆ ತೊಟ್ಟುಕೊಂಡು ಬೆಡ್ ರೂಮಿಗೆ ಎಂಟ್ರಿಕೊಡಬೇಡಿ. ಕಪ್ಪು, ಕಡು ನೀಲಿಬಣ್ಣ ಬಟ್ಟೆ ಎಂದಿಗೂ ಬೇಡ.
   ಕಿಟಕಿಯ ಕರ್ಟನ್ ಗಳು ಕೂಡಾ ಕಪ್ಪು, ನೀಲಿ ಅಥವಾ ಗಾಢಬಣ್ಣದ್ದು ಬೇಡ.
   ಗುಲಾಬಿ, ತಿಳಿ ನೇರಳೆ ಬಣ್ಣದ ಕರ್ಟನ್ ಗಳನ್ನು ಬಳಸಿ
   ಮೈಗೆ ಧರಿಸುವ ಬಟ್ಟೆ, ಬೆಡ್ ಶೀಟ್, ಕಿಟಕಿ ಪರದೆ, ಗೋಡೆ ಬಣ್ಣ ಎಲ್ಲವೂ ತಿಳಿಯಾದ ಮನಸ್ಸಿಗೆ ಹಿತ ನೀಡುವ ಬಣ್ಣದ್ದಾಗಿರಲಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Here are a few Vaastu Tips to help you keep your bedroom romantic. Bedroom furniture, room fresheners and a accessories are good choices. A good environment will boost for sexual relationship

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ