ಮಕರ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ
ಶನಿಬಲದಿಂದ ಸಿಕ್ಕಾಪಟ್ಟೆ ಲಾಭ ಪಡೆಯುತ್ತಿರುವ ಮಕರ ರಾಶಿಯವರಿಗೆ ಒಂದು ಎಚ್ಚರಿಕೆಯ ಗಂಟೆ ಏನೆಂದರೆ ಜನವರಿಯಿಂದ ಶನಿದೇವನು ಸಾಡೇಸಾತಿಯಾಗಿ ಬರಲಿದ್ದಾರೆ. ಅದಕ್ಕಾಗಿ ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳುವುದು ಸೂಕ್ತ.
ಈ ಯುಗಾದಿಯಿಂದ ಮುಂದಿನ ಯುಗಾದಿಯವರೆಗೂ ಮಕರ ರಾಶಿಯವರು ಒಂದೇ ಸಮದಲ್ಲಿ ಜೀವನದನುಭವ ಪಡೆಯುತ್ತಾರೆ. ಹೆಚ್ಚು ಗಳಿಸಂಗಿಲ್ಲ, ಹೆಚ್ಚು ಉಳಿಸಂಗಿಲ್ಲ, ಹೆಚ್ಚು ಖರ್ಚು ಮಾಡಂಗಿಲ್ಲ ಇಂಥಾ ಪರಿಸ್ಥಿತಿಯವರದು.
ಈ ರಾಶಿಯ ಉತ್ತರಾಷಾಢ ನಕ್ಷತ್ರದ ಕೊನೆಯ ಮೂರು ಚರಣದವರಿಗೆ ವರ್ಷದ ಆರಂಭ ನೀರಸವಾಗಿಯೇ ಆಗುತ್ತದೆ. ನಂತರ ನಿಂತ ನೀರಾಗುತ್ತದೆ. ಕೊನೆಯ ನಾಲ್ಕು ತಿಂಗಳು ಕೂಡ ಹೀಂಗೇನೇ ಇರುತ್ತದೆ. ಯಾವುದನ್ನೂ ಹೆಚ್ಚು ನಿರೀಕ್ಷಿಸುವಂತಿಲ್ಲ. ಆದರೆ ಕೊರತೆಯೇನೂ ಇರುವುದಿಲ್ಲ. ಇದ್ದುದ್ದನ್ನು ಉಳಿಸಿಕೊಂಡು ಹೋಗುವುದೇ ಮುಖ್ಯ ಕೆಲಸವಾಗುತ್ತದೆ. [ಇಷ್ಟದಂತೆ ಇದ್ರೆ ಶಾಂತಸಾಗರ, ಇಲ್ಲ ಕುರುಕ್ಷೇತ್ರ]

ಇನ್ನು ಶ್ರವಣಾ ನಕ್ಷತ್ರದವರು ವರ್ಷದ ಮೊದಲ ನಾಲ್ಕು ತಿಂಗಳು ಭಾರೀ ಲಾಭವನ್ನು ಕಾಣುತ್ತಾರೆ. ನಂತರ ಒಮ್ಮೇಲೆ ಇಳಿಮುಖವೆನಿಸಿದರೆ ಕಡೆಯ ನಾಲ್ಕು ತಿಂಗಳು ಮತ್ತೆ ಉತ್ತಮ ಸಮಯ ಬರುತ್ತದೆ. ಹೀಗಾಗಿ ಬಂದಾಗ ಹಿಗ್ಗದೇ ಕಳೆದುಕೊಂಡಾಗ ಕುಗ್ಗದೇ ಸಮಸ್ಥಿತಿಯಲ್ಲಿಟ್ಟುಕೊಳ್ಳಬೇಕು ಮನಸ್ಸನ್ನು.
ಇನ್ನು ಧನಿಷ್ಠಾ ನಕ್ಷತ್ರದವರು ಲಾಭದ ಮುಖವನ್ನೇ ನೋಡದೇ ನೂತನ ವರ್ಷಾರಂಭ ಮಾಡಿದ್ದಾರೆ. ಇದೇ ರೀತಿ ಇನ್ನೆಂಟು ತಿಂಗಳು ಕಳೆಯಬೇಕು ಅಷ್ಟೇ. ಕೊನೆಯ ನಾಲ್ಕು ತಿಂಗಳು ಸ್ವಲ್ಪ ಸಮಾಧಾನಕರವೆನಿಸುವಂತಿರುತ್ತದೆ. ಒಟ್ಟಿನಲ್ಲಿ ನಿಂತ ನೀರಂತಿರುತ್ತದೆ ಜೀವನ.
ಗುರುಬಲದಿಂದ ಕಂಗೊಳಿಸುತ್ತಿರುವ ಈ ರಾಶಿಯವರು ಹೆಚ್ಚಿನ ಶುಭಫಲಗಳನ್ನು ಕಾಣುತ್ತಿರುತ್ತಾರೆ. ಜನವರಿ ನಂತರ ಸಾಡೇಸಾತಿ ಆರಂಭವಾಗುವುದರಿಂದ ಶನಿಕಾಟ ಆರಂಭವಾಗಿ ದೇಹಾರೋಗ್ಯದಲ್ಲಿ ತೊಂದರೆಗಳು ಉಲ್ಬಣಿಸಲಾರಂಭಿಸುತ್ತವೆ. ಇದರ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು.
ಒಟ್ಟಿನಲ್ಲಿ ಹೆಚ್ಚಿನ ಲಾಭವೇ ಈ ವರ್ಷ ಪೂರ್ತಿ ಬರುವುದರಿಂದ ಈ ರಾಶಿಯವರು ನ್ಯಾಯದಿಂದ ದುಡಿಮೆ ಆಸ್ತಿಪಾಸ್ತಿ ಮಾಡಿಕೊಂಡು, ಬಡಬಗ್ಗರಿಗೆ ಸಹಾಯ ಮಾಡುವ ದೊಡ್ಡವರಾಗಿ ಮಾನವೀಯತೆ ರೂಢಿಸಿಕೊಳ್ಳಬೇಕು. ಒಟ್ಟಿನಲ್ಲಿ ಶೇ.80ರಷ್ಟು ಶುಭಫಲವಿದೆ. [ಐ ಲವ್ ಯೂ ಹೇಳೋಕೆ ಬಿಂಕವೇಕೆ?]











Click it and Unblock the Notifications