ಧನಸ್ಸು ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ

ಧನಸ್ಸು ರಾಶಿಯವರು ಸಾಡೇಸಾತಿಯ ಮೊದಲನೇ ಹಂತವನ್ನು ಪ್ರವೇಶಿಸಿ ಅದರನುಭವ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮೂರು ವರ್ಷಗಳವರೆಗೆ ಯಥೇಚ್ಛವಾಗಿ ಶನಿದೇವನು ನಿಮಗೆ ದಯಪಾಲಿಸಿದ್ದಾನೆ ಹಲವಾರು ವಿಷಯಗಳಲ್ಲಿ. ಈಗ ಕೊಟ್ಟಿದ್ದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೀರಿ ಎಂದು ಮಹಾತ್ಮನು ನೋಡುವ ಸಮಯ.

ಏಕೆಂದರೆ ಧನಸ್ಸು ರಾಶಿಯವರಿಗೆ ಈ ವರ್ಷ ಬರೀ ಖರ್ಚು ಮಾಡುವ ಸಮಯ. ಇದ್ದಬದ್ದದ್ದನ್ನೆಲ್ಲಾ ಕೂಡಿಸಿಕೊಂಡರೂ ತೀರದ ಖರ್ಚುಗಳು. ಆ ತರಹ ಪರಿಸ್ಥಿತಿ ಈಗ. ಆದ್ದರಿಂದ ಹಿಡಿತದಲ್ಲಿ ಖರ್ಚು ಮಾಡಬೇಕು. ಮನೆಯವರಿಗೂ ಹೇಳಬೇಕು. ನನ್ನ ಇದ್ದ ಸ್ಥಿತಿ ಹಿಂಗಿದೆ ಎಂದು.

ಇನ್ನು ಈ ರಾಶಿಯ ಮೂಲಾ ನಕ್ಷತ್ರದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಎಷ್ಟೋ ಪಾಲು ಮೇಲು ಎನ್ನುವಂತಿರುತ್ತದೆ. ಆದರೆ, ನಂತರದ ದಿನಗಳಲ್ಲಿ ಕ್ರಮೇಣ ಇಳಿಕೆಯಾಗುತ್ತ ಬಂದು ಕೊನೆಯ ನಾಲ್ಕು ತಿಂಗಳು ಕೈ ಖಾಲಿಯಾಗಿಯೇ ಇರುತ್ತದೆ. ಪೂರ್ವಾಷಾಢಾ ನಕ್ಷತ್ರದವರಿಗೆ ಬೇಸರದಿಂದಲೇ ಯುಗಾದಿ ಆರಂಭವಾಗಿದೆ ಎನ್ನಬಹುದು. ವರ್ಷದ ಕೊನೆಯ ನಾಲ್ಕು ತಿಂಗಳು ಮಾತ್ರ ಸ್ವಲ್ಪ ಸಮಾಧಾನಕರವಾಗಿದೆ. ಅಲ್ಲಿಯವರೆಗೂ ಹಂಗೂ ಹಿಂಗೂ ಜೀವನ ಮಾಡಿಕೊಂಡು ಹೋಗಬೇಕು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೇ. [ಮಕರ ರಾಶಿಗೆ ತಿರುಗಿ ಬಿದ್ದ ಗುರು! ಧನಸ್ಸಿಗೆ ಹೆಂಗೆ ಗುರೂ?]

Ugadi predictions for Sagittarius : Rashi Bhavishya

ಉತ್ತರಾಷಾಢಾ ನಕ್ಷತ್ರದವರು ಮಾತ್ರ ಆರಕ್ಕೇರಲ್ಲ ಮೂರಕ್ಕಿಳೀಯಂಗಿಲ್ಲ ಎಂಬಂತಾಗಿದ್ದಾರೆ. ಇದೇ ರೀತಿ ಈ ವರ್ಷವೂ ಮುಂದುವರೆದುಕೊಂಡು ಹೋಗಬೇಕು ಅನಿವಾರ್ಯವಾಗಿ. ವರ್ಷದ ಹನ್ನೆರಡೂ ತಿಂಗಳೂ ಕೂಡ ಈಗಿರುವ ಸಮಯದಂತೆಯೇ ಇರುತ್ತದೆ. ಹಣದ ವಿಷಯದಲ್ಲಿ ತೊಂದರೆಗಳು ಉಲ್ಬಣಿಸಿದರೆ ವಸ್ತ್ರ, ವಸ್ತು ವಗೈರೆಗಳನ್ನು ತೆಗೆದುಕೊಳ್ಳಲು ಏನೂ ತೊಂದರೆ ಇರಲ್ಲ. ಹೊಟ್ಟೆ ಬಟ್ಟೆಗೆ ಸಾಕಾಗುವಷ್ಟಿರತ್ತೆ. ಸಾಕಲ್ವೇ ಇನ್ನೇನು ಬೇಕು ಜೀವನಕ್ಕೆ?

ಗುರುವು ಅಪಾರವಾಗಿ ಸಹಾಯಹಸ್ತ ನೀಡುತ್ತಿದ್ದಾರೆ. ಮುಂದೆಯೂ ನೀಡುತ್ತಾನೆ. ಕೌಟುಂಬಿಕ ಆನಂದ ತುತ್ತತುದಿಗೆ ಮುಟ್ಟುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದರೆ ಬಾಳಿಗೆ ಬಂಗಾರ ಸಿಕ್ಕಂತೆಯೇ. ಜನವರಿಯ ನಂತರ ಶನಿ ನಿಮ್ಮ ರಾಶಿಗೆ ಬರುವುದರಿಂದ ಶನಿಯು ಆಟ ಶುರು ಮಾಡುತ್ತಾನೆ. ಈಗಲೇ ಅದನ್ನು ತಡೆದುಕೊಳ್ಳಲು ಮಾನಸಿಕವಾಗಿ ಸಿದ್ಧವಾಗಿರಬೇಕು. ಒಟ್ಟಿನಲ್ಲಿ ಈ ವರ್ಷ ಶೇ.50ರಷ್ಟು ಶುಭಫಲಗಳಿವೆ. [ಹೆಂಡತಿ ಮಾತು ಕೇಳೋದು ತಪ್ಪಲ್ಲ ಕಣ್ರೀ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+