Trigraha Yoga 2024: 100 ವರ್ಷಗಳ ನಂತರ ತ್ರಿಗ್ರಹ ಯೋಗ: ಈ 4 ರಾಶಿಯವರ ಜೀವನ ಜೂನ್ 15ರಿಂದ ಹೊಳೆಯುತ್ತೆ
ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಈ ಯೋಗಗಳ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರಲಿದೆ.
ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಕೆಲವು ಯೋಗಗಳು ಹಲವು ವರ್ಷಗಳ ನಂತರ ಸಂಭವಿಸುತ್ತವೆ. ಆ ರೀತಿಯಲ್ಲಿ ಜೂನ್ 15 ರಂದು ಮಿಥುನ ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ತ್ರಿಗ್ರಹ ಯೋಗವು ಹಲವು ವರ್ಷಗಳ ನಂತರ ರೂಪುಗೊಳ್ಳುತ್ತಿದೆ.
ಈ ಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಈ ಯೋಗ ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊಳೆಯುವಂತೆ ಮಾಡಲಿದೆ. ಇದರಿಂದ ವ್ಯಾಪಾರ, ವ್ಯವಹಾರ ಇತ್ಯಾದಿಗಳಲ್ಲಿ ಉತ್ತಮ ಪ್ರಗತಿ ಮತ್ತು ಲಾಭ ಸಿಗಲಿದೆ. ಹಾಗಾದರೆ ಈಗ ಮಿಥುನ ರಾಶಿಯಲ್ಲಿ ರೂಪುಗೊಂಡ ತ್ರಿಗ್ರಹ ಯೋಗದಿಂದ ಅದೃಷ್ಟಶಾಲಿಯಾಗಲಿರುವ ರಾಶಿಯವರು ಯಾರೆಂದು ತಿಳಿಯೋಣ.

ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಹೀಗಾಗಿ ಈ ರಾಶಿಯ ಎಲ್ಲಾ ಯೋಜಿತ ಕೆಲಸಗಳು ಯಶಸ್ವಿಯಾಗುತ್ತವೆ. ಹೆಚ್ಚಿನ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ.
ವೃತ್ತಿಪರ ಪ್ರಗತಿಗೆ ಅವಕಾಶಗಳಿವೆ. ವ್ಯಾಪಾರಸ್ಥರ ಜೀವನವು ಸಮೃದ್ಧವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯೂ ಉತ್ತಮ ಪ್ರಗತಿಯನ್ನು ಕಾಣುತ್ತಾರೆ.

ಮೇಷ ರಾಶಿ
ಮೇಷ ರಾಶಿಯವರಿಗೆ ದೃಢಸಂಕಲ್ಪದಿಂದ ಸ್ಥಾನ ಲಭ್ಯವಾಗಲಿದೆ. ಈ ಸಮಯದಲ್ಲಿ ಅಧಿಕ ಸಂಚಾರ ಮಾಡಲಿದ್ದಾರೆ. ಹೊಸ ಕಾರ್ಯಕ್ಷೇತ್ರದಲ್ಲಿ ತೆಡಗಿಕೊಳ್ಳಲಿದ್ದಾರೆ. ಭೂಮಿ, ಮನೆ, ವಾಹನ ಇತ್ಯಾದಿಗಳನ್ನು ಪಡೆದುಕೊಳ್ಳುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪ್ರಶಂಸೆ ಕೀರ್ತಿ ಲಭಿಸಲಿದೆ. ಇನ್ನೂ ವ್ಯಾಪಾರಸ್ಥರಿಗೆ ಲಾಭದಾಯಕ ಸಮಯವಾಗಿದೆ.
ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ಲಭಿಸುವಂತಹ ಅವಕಾಶವಿದೆ. ವಿದ್ಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರಮೋಷನ್ ಆಗುವಂತಹದ್ದು, ಕಾರ್ಯವೈಖರಿ ಮೇಲೆ ಪ್ರಶಂಸೆ ಕೇಳಿ ಬರುವ ಯೋಗಗಳು ಇವೆ. ಹಾಗೆಯೇ ಸ್ವಯಂಕೃತ ವ್ಯಾಪಾರ ನಡೆಸುವವರಿಗೆ ಈ ಸಮಯದಲ್ಲಿ ಒಳ್ಳೆಯ ವ್ಯಕ್ತಿಗಳ ಪರಿಚಯದಿಂದ ಅಭಿವೃದ್ಧಿ ಪಡೆದುಕೊಳ್ಳುವ ಯೋಗಗಳು ಉಂಟಾಗುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ತ್ರಿಗ್ರಹ ಯೋಗದಿಂದ ಆರ್ಥಿಕ ಬೆಳವಣಿಗೆ ಆಗಲಿದೆ. ಕನ್ಯಾ ರಾಶಿಯ 10ನೇ ಮನೆಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಹೀಗಾಗಿ ಈ ರಾಶಿಯವರಿಗೆ ವೃತ್ತಿ ಮತ್ತು ವ್ಯಾಪಾರ ಅದ್ಭುತವಾಗಿರುತ್ತದೆ. ಈ ರಾಶಿಯವರಿಗೆ ದೀರ್ಘಕಾಲದಿಂದ ಕೆಲಸ ಸಿಗದಿದ್ದರೆ, ಈ ಯೋಗದ ಅವಧಿಯಲ್ಲಿ ಒಳ್ಳೆಯ ಕೆಲಸ ಸಿಗುತ್ತದೆ.
ಉದ್ಯೋಗಿಗಳು ಬಡ್ತಿ ಮತ್ತು ವೇತನ ಹೆಚ್ಚಳ ಇತ್ಯಾದಿಗಳನ್ನು ಪಡೆಯುತ್ತಾರೆ. ಕೆಲವರು ಬಯಸಿದ ವರ್ಗಾವಣೆಯನ್ನೂ ಪಡೆಯಬಹುದು. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಾಣುವ ಸಾಧ್ಯತೆ ಇದೆ. ಉದ್ಯಮಿಗಳು ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ಕುಂಭ ರಾಶಿ
ಕುಂಭ ರಾಶಿಯ 5ನೇ ಮನೆಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಹೀಗಾಗಿ ಹೊಸದಾಗಿ ಮದುವೆಯಾದ ಈ ರಾಶಿಯವರು ಮಗುವಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆಧ್ಯಾತ್ಮಿಕತೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಅದೃಷ್ಟದ ಬೆಂಬಲದೊಂದಿಗೆ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಕಾಣುವಿರಿ. ಕೆಲಸದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯ ಮೂಲಕ ನೀವು ಉತ್ತಮ ಪ್ರಗತಿಯನ್ನು ಕಾಣುತ್ತೀರಿ. ಪ್ರೀತಿಯಲ್ಲಿ ಬಿದ್ದರೆ ಮನೆಯ ಹಿರಿಯರು ಆ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications