Ketu Sanchara: ಕೇತು ಸಂಚಾರದಿಂದ ಅದೃಷ್ಟ ಕೈಕೊಡುತ್ತಾ?, 4 ರಾಶಿಗಳಿಗೆ ಆರ್ಥಿಕ ಸಂಕಷ್ಟ ಹೆಚ್ಚಳ ಸಾಧ್ಯತೆ!
Ketu Sanchara: ಜ್ಯೋತಿಷ್ಯದಲ್ಲಿ ಕೇತುವನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ. ಕೇತು ಈಗಾಗಲೇ ಮಘಾ ನಕ್ಷತ್ರ ಪ್ರವೇಶಿಸಿದ್ದಾಗಿದೆ. ಮಘಾ ನಕ್ಷತ್ರದ ಮೊದಲ ಪಾದದಲ್ಲಿ ಕೇತುವಿನ ಸಂಚಾರ ಆಗುತ್ತಿದೆ. ಕೇತುವಿನ ಈ ನಕ್ಷತ್ರ ಸಂಚಾರ ಕೆಲವು ರಾಶಿಯವರ ಜೀವನದಲ್ಲಿ ಸಮಸ್ಯೆಯ ಸರಮಾಲೆ ತರುತ್ತದೆ. ಒಂದರ ಹಿಂದೆ ಒಂದರಂತೆ ಕಷ್ಟಗಳು ಎದುರಾಗುವುದು. ಕುಟುಂಬದಲ್ಲಿ ಒತ್ತಡ, ಹಣದ ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.
ಕೇತು ಸಂಚಾರದ ಪ್ರಭಾವ (Ketu Sanchara)
ಕೇತುವಿನ ರಾಶಿ ಮತ್ತು ನಕ್ಷತ್ರದಲ್ಲಿನ ಸಂಚಾರದ ಬದಲಾವಣೆ ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುವುದು. ಕೇತು ಮಘಾ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಂತೆ, 4 ರಾಶಿಯವರ ಜೀವನದಲ್ಲಿ ಸವಾಲು ಹೆಚ್ಚಾಗುವುದು. ಮಾನಸಿಕ ಒತ್ತಡ ಹೆಚ್ಚಾಗುವುದು. ಕೈ ಹಾಕಿದ ಕೆಲಸದಲ್ಲಿ ಸೋಲು ಕಾಣುವರು. ಈ ಅವಧಿಯಲ್ಲಿ ಹೊಸ ಕೆಲಸಕ್ಕೆ ಕೈ ಹಾಕಲೇಬಾರದು.

ಈ ರಾಶಿಯವರು ಗಮನಿಸಿ, ಎಚ್ಚರ ವಹಿಸಿ
ವೃಷಭ ರಾಶಿ (Taurus)
ವೃಷಭ ರಾಶಿಯವರು ಈ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸುತ್ತಮುತ್ತ ಎಷ್ಟೇ ಜನರಿದ್ದರೂ ಒಂಟಿತನದ ಭಾವ ಕಾಡುವುದು. ಹಣದ ವಿಷಯದಲ್ಲೂ ಕೆಲವು ಸಮಸ್ಯೆಗಳು ಇರುವುದು. ಖರ್ಚು ನಿಯಂತ್ರಿಸಬೇಕಾಗುವುದು. ಅವಸರದಲ್ಲಿ ಯಾರಿಗೂ ಹಣ ನೀಡಬೇಡಿ. ಮನಸ್ಸನ್ನು ಏಕಾಗ್ರಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಾಧ್ಯವಾದಷ್ಟು ಏಕಾಂಗಿಯಾಗಿರುವುದನ್ನು ತಪ್ಪಿಸಿ. ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಯಾವ ಹೊಸ ಕೆಲಸಕ್ಕೂ ಕೈ ಹಾಕಬೇಡಿ.
ಕರ್ಕಾಟಕ ರಾಶಿ (cancer)
ಕರ್ಕಾಟಕ ರಾಶಿಯವರಿಗೆ ಈ ಅವಧಿ ಸ್ವಲ್ಪ ಸವಾಲಿನಿಂದ ಕೂಡಿರಬಹುದು. ಮಾತಿನಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಒಂದು ಸಣ್ಣ ಪದವೂ ಕುಟುಂಬದಲ್ಲಿ ಅನಗತ್ಯ ಭಿನ್ನಾಭಿಪ್ರಾಯ ಉಂಟುಮಾಡಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇತರರ ಮೇಲೆ ಅವಲಂಬಿತರಾಗದಿರುವುದು ಒಳ್ಳೆಯದು. ಯಾರಿಗೂ ಸಾಲ ಕೊಡಬೇಡಿ, ಸಾಲ ತೆಗೆದುಕೊಳ್ಳಲೂ ಹೋಗಬೇಡಿ.ಬಾಯಿ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಸಣ್ಣ ಸಮಸ್ಯೆ ಕಾಡಬಹುದು. ಸಮಸ್ಯೆ ಮುಂದುವರಿದರೆ ವೈದ್ಯಕೀಯ ಸಲಹೆ ಪಡೆಯುವುದು ಒಳ್ಳೆಯದು.
ಸಿಂಹ ರಾಶಿ (Leo)
ಕೇತು ಸಿಂಹ ರಾಶಿಯಲ್ಲಿಯೇ ಸಂಚರಿಸುತ್ತಿರುವುದರಿಂದ ಅದು ಸಿಂಹ ರಾಶಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಆತ್ಮವಿಶ್ವಾಸ ಕಡಿಮೆಯಾಗುವುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಮಸ್ಯೆ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ನೋಡಿಕೊಳ್ಳಿ. ತಾಳ್ಮೆ ಮತ್ತು ಶಾಂತಿಯಿಂದ ಇರುವುದು ಒಳ್ಳೆಯದು. ಈ ಅವಧಿಯಲ್ಲಿ ಯಾರ ಜೊತೆಗೂ ವಾದ, ಜಗಳಕ್ಕೆ ನಿಲ್ಲಬೇಡಿ. ತಲೆನೋವಿನ ಸಮಸ್ಯೆ ಕಾಡುವುದು. ನಿದ್ರಾಹೀನತೆಯು ತೊಂದರೆಗಳಿಂದ ಸಮಸ್ಯೆ ಹೆಚ್ಚಾಗುವುದು. ಒತ್ತಡವನ್ನು ಕಡಿಮೆ ಮಾಡಲು ಧ್ಯಾನ ಮಾಡುವುದು ಒಳ್ಳೆಯದು.
ಮೀನ ರಾಶಿ (Pisces)
ಈ ನಕ್ಷತ್ರ ಸಂಚಾರ ಹಣದ ವಿಷಯದಲ್ಲಿ ಸಮಸ್ಯೆ ಉಂಟಾಗುವುದು. ಈ ಹೊತ್ತಿನಲ್ಲಿ ಎಷ್ಟು ಹುಷಾರಾಗಿದ್ದರೂ ಸಾಕಾಗುವುದಿಲ್ಲ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಬಹುದು. ಹಣ ಖರ್ಚು ಮಾಡುವಾಗ ಬುದ್ಧಿವಂತಿಕೆ ಇರಲಿ. ಪ್ರಯಾಣ ಮಾಡುವಾಗ, ಅವಸರ ಮಾಡಬೇಡಿ. ವಾಹನ ಚಲಿಸುವಾಗ ಎಚ್ಚರದಿಂದ ಇರಿ. ಕುಟುಂಬದ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಸಮಸ್ಯೆ ಹೆಚ್ಚಾಗುವುದು. ಆರೋಗ್ಯ ಮತ್ತು ಹಣದ ಬಗ್ಗೆ ನಿರ್ಲಕ್ಷ್ಯ ಬೇಡಿ. ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಕೇತುವಿನ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ಸರಳ ಮಾರ್ಗಗಳು (Ketu Sanchara) :
ಶಿವನನ್ನು ನಿಯಮಿತವಾಗಿ ಪೂಜಿಸಿ. ಶಿವಲಿಂಗಕ್ಕೆ ನೀರು ಅರ್ಪಿಸಿ. ಶನಿವಾರದಂದು ಕಪ್ಪು ಎಳ್ಳು, ಉದ್ದಿನ ಬೇಳೆ ಅಥವಾ ಛತ್ರಿಯನ್ನು ದಾನ ಮಾಡುವುದರಿಂದ ಕೇತುವಿನ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ. ನಾಯಿಗಳಿಗೆ ಪಕ್ಷಿಗಳಿಗೆ ಆಹಾರ ನೀಡಿ.


Click it and Unblock the Notifications
