3 Rajyoga: 30 ವರ್ಷಗಳ ನಂತರ ರೂಪುಗೊಂಡ 3 ರಾಜಯೋಗಗಳು: 2024ರಲ್ಲಿ ಈ 3 ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿ
ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ. ಈ ಸಂಚಾರದ ವೇಳೆ ಯೋಗಗಳು ರೂಪಗೊಳ್ಳುತ್ತವೆ. ಕೆಲವು ಯೋಗಗಳು ಹಲವು ವರ್ಷಗಳ ನಂತರ ಅಭಿವೃದ್ಧಿ ಹೊಂದುತ್ತವೆ. ಆ ಮೂಲಕ ಡಿಸೆಂಬರ್ ತಿಂಗಳಲ್ಲಿ 3 ರಾಜಯೋಗಗಳು ರೂಪುಗೊಂಡಿವೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಈ 3 ರಾಜಯೋಗಗಳು ಶನಿ, ಶುಕ್ರ ಮತ್ತು ಮಂಗಳದಿಂದ ರೂಪುಗೊಂಡಿವೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿ ಶಸರಾಜಯೋಗ, ಮಂಗಳ ರುಚಕ ರಾಜಯೋಗ ಮತ್ತು ಶುಕ್ರ ಮಾಳವ್ಯ ರಾಜಯೋಗವನ್ನು ಸೃಷ್ಟಿಸುವರು. ಈ ಎಲ್ಲಾ ಯೋಗಗಳು ಮಂಗಳಕರವಾಗಿದ್ದು ಆರ್ಥಿಕ ಪ್ರಗತಿಗೆ ಸಹಾಯಕವಾಗಿವೆ.
ಈ ಯೋಗಗಳು 2024ರಲ್ಲಿಯೂ ಸಹ ಮುಂದುವರಿಯುವುದರಿಂದ ಕೆಲವು ರಾಶಿಗಳು ಅದೃಷ್ಟಶಾಲಿಯಾಗಲಿವೆ ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಶಸ, ಮಾಳವ್ಯ ಮತ್ತು ರುಚಕ ರಾಜಯೋಗಗಳು ಅದೃಷ್ಟವನ್ನು ತರುತ್ತವೆ. ಕೆಲವರಿಗೆ ಅನಿರೀಕ್ಷಿತ ಹಣ ಸಿಗಲಿದೆ. ಬಾಕಿ ಮೊತ್ತ ಕೈಗೆ ಬರಲಿದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ. ಉದ್ಯೋಗಿಗಳು ಕಚೇರಿಯಲ್ಲಿ ಉತ್ತಮ ಪ್ರಗತಿಯನ್ನು ಕಾಣುವರು. ಕೆಲವರಿಗೆ ಬಡ್ತಿ ಸಿಗಬಹುದು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ.

ವೃಶ್ಚಿಕ ರಾಶಿ
2024ರಲ್ಲಿ ವೃಶ್ಚಿಕ ರಾಶಿಯವರಿಗೆ ಶಸ, ಮಾಳವ್ಯ ಮತ್ತು ರುಚಕ ರಾಜಯೋಗಗಳು ಉತ್ತಮ ಆರ್ಥಿಕ ಲಾಭವನ್ನು ನೀಡಲಿವೆ. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಹೋಟೆಲ್, ತೈಲ, ರಾಸಾಯನಿಕಗಳಿಗೆ ಸಂಬಂಧಿಸಿದ ಉದ್ಯೋಗಗಳನ್ನು ಮಾಡುವ ಜನರು ಈ ಯೋಗಗಳಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ದುಡಿಯುವ ಜನರ ಆದಾಯದಲ್ಲಿ ಹೆಚ್ಚಳವಾಗಬಹುದು. ಆದರೆ ಗರ್ಭಿಣಿಯರು ಸ್ವಲ್ಪ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ 2024ರಲ್ಲಿ ಶಸ, ರುಚಕ ಮತ್ತು ಮಾಳವ್ಯ ರಾಜಯೋಗಗಳು ಉತ್ತಮ ಫಲಿತಾಂಶಗಳನ್ನು ನೀಡಲಿವೆ. ಮುಖ್ಯವಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಅನುಕೂಲಕರ ಫಲಿತಾಂಶಗಳು ಕಂಡುಬರುತ್ತವೆ. ಈ ಯೋಗಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ವ್ಯಾಪಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರಲಿದೆ. ಸಂಪತ್ತು ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ. ಬಹುಕಾಲದ ಆಸೆಗಳು ಈಡೇರುತ್ತವೆ. ನೀವು ಕೆಲಸ ಮತ್ತು ವ್ಯವಹಾರಕ್ಕಾಗಿ ಪ್ರಯಾಣಿಸಬೇಕಾಗಬಹುದು. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications