Love-Breakup: ಬ್ರೇಕಪ್ ಬಳಿಕವೂ ಹಳೆ ಲವರ್ ಗುಂಗಲ್ಲೇ ಇರುವ ರಾಶಿಗಳಿವು

ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ ಪ್ರೀತಿಯಾಗಿರುತ್ತದೆ. ಆ ಪ್ರೀತಿ ಬಹಳ ಮುಖ್ಯವಾಗಿರುತ್ತದೆ. ಕೆಲವರು ಪ್ರೀತಿಯನ್ನು ಉಳಿಸಿಕೊಂಡರೆ, ಇನ್ನೂ ಕೆಲವರು ಕಾರಣಾಂತರಗಳಿಂದ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಪ್ರೀತಿಸಿದವರು ಜೊತೆಗಿದ್ದ ಕ್ಷಣ ಸವಿ ಅನುಭವ ನೀಡಿದರೆ, ಪ್ರೀತಿ ಕಳೆದುಕೊಂಡ ಮೇಲೆ ಕಾಡುವ ನೋವು ಕೂಡ ಭಯಂಕರವಾಗಿರುತ್ತದೆ.

ಬ್ರೇಕಪ್‌ ಆದ ಬಳಿಕ ಕಾಡುವ ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು ಎಂದು ಹಲವು ಹೇಳುತ್ತಾರೆ. ಕೆಲವರು ಜೀವ-ಜೀವನ ಎರಡನ್ನೂ ಹಾಳು ಮಾಡಿಕೊಳ್ಳುತ್ತಾರೆ. ಆದರೆ ಇದು ತಪ್ಪು. ಬ್ರೇಕಪ್‌ ಆದರೆ ಜೀವನ ಮುಗಿದಂತಲ್ಲ. ಮುಂದಿನ ಬದುಕನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡಲು ಹೋಗಲು ಹೆಜ್ಜೆಯಷ್ಟೇ.

ಬ್ರೇಕಪ್‌ ಆದ ಬಳಿಕ ಮನಸ್ಸನ್ನು ಹತೋಟಿಗೆ ತರುವುದು ಅಷ್ಟು ಸುಲಭವಲ್ಲ. ಹಳೆ ನೆನಪುಗಳು ಪದೇ ಪದೇ ಕಾಡುತ್ತಿರುತ್ತದೆ. ಜೀವನ ಎಷ್ಟೇ ಮುಂದೇ ಸಾಗಿದರು ಈ ಕೆಳಗಿನ ರಾಶಿಯವರು ತಮ್ಮ ಹಳೆ ಪ್ರೀತಿಯನ್ನು ಮರೆಯದೇ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ.

These Zodiac Signs Are Never Forget Their Ex Love

ಮೇಷ ರಾಶಿ

ಮೇಷ ರಾಶಿಯವರು ಯಾವದನ್ನೂ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ತಮಗೆ ಸಹಾಯವಾದವರು, ನೋವು ಕೊಟ್ಟವರು, ಪ್ರೀತಿ ಕೊಟ್ಟವರು, ಸಂತೋಷ ಕೊಟ್ಟವರು, ಹೀಗೆ ಜೀವನದಲ್ಲಿ ತಮ್ಮ ಜೊತೆಗಿದ್ದ ಯಾರನ್ನೂ ಮೇಷ ರಾಶಿಯವರು ಮರೆಯುವುದಿಲ್ಲ. ಅದರಲ್ಲೂ ತಮಗೆ ಪ್ರೀತಿ ಹಾಗೂ ಖುಷಿ ಕೊಟ್ಟವರನ್ನು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಅವರು ತಮ್ಮ ಹಳೆಯ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ಅವರ ನೆನಪು ಸದಾ ಕಾಡದಿದ್ದರು, ಸಮಯಕ್ಕೆ ತಕ್ಕಂತೆ ನೆನಪಿಸಿಕೊಳ್ಳುತ್ತಾರೆ.

These Zodiac Signs Are Never Forget Their Ex Love

ವೃಷಭ ರಾಶಿ

ವೃಷಭ ರಾಶಿಯವರು ಒಂದು ಪ್ರೀತಿಗೆ ಬಿದ್ದರೆ, ಅದರಿಂದ ಹೊರಬರುವುದು ಅಸಾಧ್ಯ ಎನ್ನುವಂತೆ ಬದುಕುತ್ತಿರುತ್ತಾರೆ. ಬ್ರೇಕಪ್‌ ಆದ ಬಳಿಕವೂ ಇವರು ತಮ್ಮ ಮಾಜಿ ಪ್ರೀತಿಯ ಬಗ್ಗೆ ಅತೀಯಾಗಿ ಯೋಚಿಸುತ್ತಾರೆ. ತಮ್ಮ ಪ್ರೀತಿ ಜೊತೆಗಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಇವರಿಗೆ ತುಂಬಾ ಕಷ್ಟ. ಹೀಗಾಗಿ ಅವರು ಹಳೆ ನೆನಪನ್ನು ಮರೆತು ಮುಂದಿನ ಜೀವನ ಮುಂದುವರಿಕೊಂಡು ಹೋಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.

These Zodiac Signs Are Never Forget Their Ex Love

ಮಿಥುನ ರಾಶಿ

ಮಿಥುನ ರಾಶಿಯವರು ತಮ್ಮ ಹಳೆ ಪ್ರೀತಿಯನ್ನು ಮರೆಯಲು ಶತ ಪ್ರಯತ್ನ ಮಾಡುತ್ತಾರೆ. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಪ್ರೀತಿಯ ನೆನಪು ಕಾಡುತ್ತಿರುತ್ತದೆ. ಮಿಥುನ ರಾಶಿಯವರಿಗೆ ತಮ್ಮ ಹಿಂದಿನದನ್ನು ಮರೆತು ಮುಂದುವರಿಯುವುದು ತುಂಬಾ ಕಷ್ಟ. ತುಂಬಾ ಸಂಕಟ ಪಡುತ್ತಾರೆ. ಜೀವನ ಶೈಲಿ ಎಷ್ಟೇ ಬದಲಿಸಲು ಯತ್ನಿಸಿದರೂ ಬದಲಾದ ಜೀವನದಲ್ಲೂ ಹಳೆ ಪ್ರೀತಿಯ ಗುರುತನ್ನು ಅವರು ಹುಡುಕುತ್ತಿರುತ್ತಾರೆ.

These Zodiac Signs Are Never Forget Their Ex Love

ಸಿಂಹ ರಾಶಿ

ಸಿಂಹ ರಾಶಿಯವರು ತುಂಬಾ ಭಾವನಾತ್ಮಕ ಜೀವಿಗಳು. ಹೀಗಾಗಿ ಇವರು ತಮ್ಮ ಜೀವದಲ್ಲಿ ಬಂದಂತಹ ಯಾರನ್ನೂ ಮರೆಯುವುದಿಲ್ಲ. ಅದರಲ್ಲೂ ಪ್ರೀತಿ ಸಂತೋಷವನ್ನು ಕೊಟ್ಟವರನ್ನಂತೂ ಪ್ರತಿ ಕ್ಷಣವೂ ನೆನಪಿಸಿಕೊಳ್ಳುತ್ತಾರೆ. ಆಗಾಗ ತಮ್ಮ ಹಳೆಯ ಪ್ರೀತಿಯನ್ನು ಮೆಲುಕು ಹಾಕುತ್ತಿರುತ್ತಾರೆ. ಮತ್ತೆ ಅದೇ ಪ್ರೀತಿ ಸಿಗುವ ನಿರೀಕ್ಷೆಯಲ್ಲಿರುತ್ತಾರೆ. ಒಂದು ವೇಳೆ ಹೊಸ ಜೀವನ ಕಟ್ಟಿಕೊಂಡರೂ ಅದರಲ್ಲೂ ಹಳೆ ಪ್ರೀತಿಯ ಗುಣಗಳನ್ನು ಕಂಡು ಮೆಚ್ಚುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ದುರ್ಬಲವೇ ಸಂಬಂಧಗಳು. ಈ ರಾಶಿಯವರು ಎಲ್ಲಾ ಸಂಬಂಧಗಳನ್ನು ಅತೀಯಾಗಿ ಪ್ರೀತಿಸುತ್ತಾರೆ. ಹೀಗಾಗಿ ಜೀವನದಲ್ಲಿ ಪ್ರೀತಿ ಕೊಟ್ಟವರನ್ನು ಈ ರಾಶಿಯವರು ಮರೆಯುವುದಿಲ್ಲ. ಆ ಪ್ರೀತಿಯನ್ನು ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಿರುತ್ತಾರೆ. ಅದು ಮತ್ತೆ ಸಿಗಲಿ ಎಂದು ಕಾಯುತ್ತಿರುತ್ತಾರೆ. ಆದರೆ ಆ ಪ್ರೀತಿ ತನ್ನಿಂದ ದೂರವಾಗಿದೆ ಎಂದು ನೆನಪಿಸಿಕೊಂಡಾಗಲೆಲ್ಲ ದುಃಖ ಪಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+