ಇಂದಿನಿಂದ ಮೂರು ರಾಶಿಯವರ ಒಳ್ಳೆಯ ದಿನಗಳು ಆರಂಭ : ವೃತ್ತಿ ವ್ಯವಹಾರದಲ್ಲಿ ಲಾಭ

ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆ ಬಹಳ ಮುಖ್ತವಾಗಿರುತ್ತದೆ. ಈ ಗ್ರಹಗಳ ಚಲನೆಯ ಆಧಾರದ ಮೇಲೆಯೇ ನಮ್ಮ ಜಾತಕ ಫಲ ನಿರ್ಧಾರವಾಗುತ್ತದೆ. ಗ್ರಹಗಳು ರಾಶಿ, ನಕ್ಷತ್ರವನ್ನು ನಿರ್ದಿಷ್ಟ ಕಾಲಕ್ಕೆ ತಕ್ಕಂತೆ ಬದಲಿಸುತ್ತಾ ಇರುತ್ತದೆ. ಹಾಗೆಯೇ ತನ್ನ ನಡೆಯನ್ನು ಅಂದರೆ ನೇರ ನಡೆ, ವಕ್ರ ನಡೆ ಹೀಗೆ ಬದಲಾಯಿಸುತ್ತಿರುತ್ತದೆ. ಇನ್ನು ಗ್ರಹಗಳ ಅಸ್ತ ಮತ್ತು ಉದಯ ಕೂಡಾ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಪ್ರತಿಯೊಂದು ಗ್ರಹವೂ ಒಂದೊಂದು ಅಂಶವನ್ನು ನಿರ್ಧರಿಸುತ್ತದೆ. ಇದೀಗ ಬುಧ ಗ್ರಹ ತನ್ನ ನಡೆಯನ್ನು ಬದಲಾಯಿಸಿದೆ.

ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧನನ್ನು ಬುದ್ದಿವಂತಿಕೆ, ಮಾತು, ತರ್ಕ, ಕೌಶಲ್ಯವನ್ನು ಸಂಕೇತಿಸುವ ಗ್ರಹ ಎನ್ನಲಾಗುತ್ತದೆ. ಬುಧ ಗ್ರಹದ ಸಂಚಾರದಲ್ಲಿನ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಬುಧನು ಜುಲೈ ೨೪, ಅಂದರೆ ಇಂದಿನಿಂದ ತನ್ನ ನೇರ ಚಲನೆಯನ್ನು ಪ್ರಾರಂಭಿಸುತ್ತಾನೆ. ಬೆಳಗಿನ ಜಾವ ೩:೫೪ ಕ್ಕೆ ಮಿಥುನ ರಾಶಿಯಲ್ಲಿ ಬುಧ ನೇರ ಚಲನೆಯನ್ನು ಆರಂಭಿಸುತ್ತಾನೆ. ಮಿಥುನ ರಾಶಿಯ ಅಧಿಪತಿ ಗ್ರಹವೇ ಬುಧ. ಆದ್ದರಿಂದ, ಇದೇ ರಾಶಿಯಲ್ಲಿ ಅವನ ನೇರ ಚಲನೆಯನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.

Zodiac

ಜ್ಯೋತಿಷ್ಯದ ಪ್ರಕಾರ, ಈ ಗ್ರಹಗಳ ಸಂಚಾರವು ಅನೇಕ ಜನರಿಗೆ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ. ಈ ಅವಧಿಯು ವಿಶೇಷವಾಗಿ ವೃತ್ತಿ, ವ್ಯವಹಾರ, ಅದೃಷ್ಟ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಬುಧನ ನಡೆ ಬದಲಾಗುತ್ತಿದ್ದ ಹಾಗೆಯೇ ಯಾವ ರಾಶಿಗಳು ಪ್ರಯೋಜನ ಪಡೆಯುತ್ತವೆ ಎಂಬುದನ್ನು ನೋಡೋಣ.

ಮಿಥುನ ರಾಶಿ (Gemini) : ಮಿಥುನ ರಾಶಿಯವರ ಮೊದಲ ಮತ್ತು ನಾಲ್ಕನೇ ಮನೆಯ ಅಧಿಪತಿ ಬುಧ ಗ್ರಹ. ಪ್ರಸ್ತುತ, ಬುಧ ಗ್ರಹ ನಿಮ್ಮ ಮೊದಲ ಮನೆಯಲ್ಲಿ ನೇರ ಚಲನೆಯನ್ನು ಆರಂಭಿಸುತ್ತದೆ. ಇದು ನಿಮಗೆ ಗಮನಾರ್ಹ ಪ್ರಯೋಜನಗಳನ್ನು ತರುತ್ತದೆ. ನಿಮ್ಮ ವ್ಯಕ್ತಿತ್ವವು ಹೆಚ್ಚು ಆಕರ್ಷಕವಾಗುತ್ತದೆ. ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬಹಳ ದಿನಗಳಿಂದ ಖರೀದಿಸಬೇಕು ಅಂದುಕೊಂಡಿರುವ ಐಶಾರಾಮಿ ವಸ್ತುಗಳನ್ನು ಖರೀದಿಸುವುದು ಸಾಧ್ಯವಾಗುತ್ತದೆ. ನಾನಾ ರೀತಿಯ ಸೌಕರ್ಯಗಳು ಒಲಿದು ಬರುವುದು. ಇದಲ್ಲದೆ, ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.

ಕನ್ಯಾ ರಾಶಿ (Virgo): ವೃತ್ತಿಪರ ಪ್ರಗತಿ ಸಾಧಿಸುವಿರಿ. ನಿಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ನೀವು ಹಿಂದೆ ಮಾಡಿದ ಹೂಡಿಕೆಗಳಿಂದ ಈಗ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ವ್ಯಾಪಾರ ಯೋಜನೆಗಳು ಗಮನಾರ್ಹ ಹೂಡಿಕೆಗೆ ಅವಕಾಶಗಳನ್ನು ಒದಗಿಸಬಹುದು. ಹಿಂದಿನದಕ್ಕೆ ಹೋಲಿಸಿದರೆ ಈಗ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗುವುದು. ಕಚೇರಿಯಲ್ಲಿ ನಿಮ್ಮ ಕೆಲಸ ಮಾಡುವ ರೀತಿ ನೀತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮ್ಮ ಸಂವಹನ ಕೌಶಲ್ಯಕ್ಕೂ ಪ್ರಶಂಸೆ ಸಿಗುವುದು.

ವೃಶ್ಚಿಕ ರಾಶಿ (Scorpio) : ಈ ಬದಲಾವಣೆಯು ಸ್ಥಗಿತಗೊಂಡ ವ್ಯಾಪಾರ ಚಟುವಟಿಕೆಗಳನ್ನು ಚುರುಕುಗೊಳಿಸಬಹುದು. ನಿಮ್ಮ ಬಾಕಿ ಹಣವನ್ನು ಮರುಪಡೆಯಲು ನಿಮಗೆ ಅವಕಾಶವಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗಬಹುದು. ಹೊಸ ಆದಾಯದ ಮೂಲಗಳು ಹೊರಹೊಮ್ಮಬಹುದು. ಹಿಂದಿನ ಆರ್ಥಿಕ ವ್ಯವಹಾರಗಳಲ್ಲಿ ಸುಧಾರಣೆಗಳು ಕಂಡುಬರಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಹೊಸ ಜನರನ್ನು ಭೇಟಿಯಾಗುವ ಅವಕಾಶ ಸಿಗುವುದು. ವ್ಯಾಪಾರ ಯೋಜನೆಗಳನ್ನು ರೂಪಿಸುವಿರಿ. ನಿಮ್ಮ ಮಾತುಗಳು ಇತರರ ಮೇಲೆ ವಿಶೇಷ ಪರಿಣಾಮ ಬೀರುತ್ತವೆ.

ಯಾವಾಗಲೂ ನಿಮ್ಮ ಜಾತಕದಲ್ಲಿನ ಗ್ರಹ ನಕ್ಷತ್ರಗಳ ಪಾದ, ಮನೆಗೆ ಅನುಗುಣವಾಗಿ ಜ್ಯೋತಿಷ್ಯ ಫಲಗಳು ಬದಲಾಗಬಹುದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+