ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 5 ರಾಶಿಯವರು ಸತ್ಯ ಮಾತನಾಡಲು ಎಂದಿಗೂ ಹಿಂಜರಿಯುವುದಿಲ್ಲ..

|
Google Oneindia Kannada News

ಸುಳ್ಳುಗಳಿಂದ ಸುತ್ತುವರಿದ ಈ ಜಗತ್ತಿನಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಕಾಣುವುದು ಬಹಳ ಅಪರೂಪ. ಹೀಗಾಗಿ ಯಾರಾದರೂ ಸಂಪೂರ್ಣವಾಗಿ ಪ್ರಾಮಾಣಿಕರಾಗಿರುವುದು ಬಹಳ ಕಡಿಮೆ. ಆದರೂ ಕೆಲವರು ಯಾವಾಗಲೂ ಪ್ರಾಮಾಣಿಕವಾಗಿರುತ್ತಾರೆ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ರಾಶಿಯವರು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದಾರೆ. ಆದರೆ ಕೆಲವು ರಾಶಿಯ ಜನರು ತುಂಬಾ ಪ್ರಾಮಾಣಿಕರಾಗಿದ್ದಾರೆ. ಇವರು ಸತ್ಯವನ್ನು ಮಾತನಾಡಲು ಎಂದಿಗೂ ಹಿಂಜರಿಯುವುದಿಲ್ಲ. ಹಾಗಾದರೆ ಈ ರಾಶಿಯವರು ಯಾರು ಎಂದು ನೋಡೋಣ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು ಮುಖಕ್ಕೆ ಹೊಡೆದಂತೆ ನೇರವಾಗಿ ಸತ್ಯವನ್ನು ಮಾತನಾಡುತ್ತಾರೆ. ಅವರಿಗೆ ಸುಳ್ಳು ಹೇಳುವ ಸಾಮರ್ಥ್ಯ ಬಹಳ ಕಡಿಮೆ. ಆದ್ದರಿಂದ ಅವರು ಸುಳ್ಳು ಹೇಳಲು ಪ್ರಯತ್ನಿಸುವ ಬದಲು ಸತ್ಯವನ್ನು ಹೇಳಲು ಬಯಸುತ್ತಾರೆ. ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಗಾಸಿಪ್ ಮಾಡುವ ಬದಲು, ಅವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ನಿಮ್ಮ ಮುಂದೆ ನೇರವಾಗಿ ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಜೀವನದಲ್ಲಿ ಅತ್ಯುತ್ತಮ ಮಾರ್ಗದರ್ಶಕರಾಗಿರುತ್ತಾರೆ.

ಧನು ರಾಶಿ

ಧನು ರಾಶಿ

ಧನು ರಾಶಿಯವರು ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವುದಾದರೆ ಬಂದೂಕು ಹಿಡಿದರೂ ಸುಳ್ಳು ಹೇಳುವುದಿಲ್ಲ. ಅವರು ತಮ್ಮ ಸುತ್ತಲಿರುವ ಪ್ರತಿಯೊಬ್ಬರ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ ಮತ್ತು ಅವರನ್ನು ರಕ್ಷಿಸಲು ಏನು ಬೇಕಾದರೂ ಮಾಡುತ್ತಾರೆ. ಧನು ರಾಶಿ ಅವರು ತುಂಬಾ ನಿಷ್ಠಾವಂತರು ಮತ್ತು ಪ್ರಾಮಾಣಿಕರು. ಅದಕ್ಕಾಗಿಯೇ ಧನು ರಾಶಿಯವರು ಉತ್ತಮ ಸ್ನೇಹಿತರನ್ನು ಹೊಂದಿರುತ್ತಾರೆ ಮತ್ತು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಸತ್ಯ ಎಷ್ಟೇ ಕಠೋರವಾಗಿದ್ದರೂ ಅವರು ಯಾವಾಗಲೂ ಸತ್ಯವನ್ನೇ ನುಡಿಯುತ್ತಾರೆ. ಹೀಗಾಗಿ ಇವರ ಮಾತುಗಳು ಸಿಹಿಯಾಗಿರುವ ಬದಲಿಗೆ ಕಹಿಯಾಗಿರುವುದೇ ಹೆಚ್ಚು.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಸುಳ್ಳು ಹೇಳಬೇಕು ಗೊತ್ತಾದರೆ ಕ್ಷಮಿಸುವಂತಿರಬೇಕು ಎನ್ನುವ ಮಾತು ಕರ್ಕಾಟಕ ರಾಶಿಯವರಿಗೆ ಸೂಕ್ತವಾಗಿದೆ. ಕರ್ಕಾಟಕ ರಾಶಿಯವರು ಸ್ವಲ್ಪ ಹೆಚ್ಚು ಪ್ರಾಮಾಣಿಕವಾಗಿರುತ್ತಾರೆ. ಅವರು ಸಾಮಾನ್ಯವಾಗಿ ಪ್ರಾಮಾಣಿಕವಾಗಿರಲು ಪ್ರಯತ್ನಿಸುತ್ತಾರೆ. ಹೆಚ್ಚು ಮನವರಿಕೆಯಾಗುವ ಸುಳ್ಳನ್ನು ಹೇಳಲು ಅವರಿಗೆ ಒಂದು ನಿಮಿಷವೂ ಬೇಕಾಗುವುದಿಲ್ಲ. ಹೀಗಿದ್ದರೂ ಅವರು ಸುಳ್ಳು ಹೇಳಲು ಹಿಜರಿಯುತ್ತಾರೆ. ಈ ರಾಶಿಯವರು ಜನರನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿದ್ದಾರೆ ಮತ್ತು ಮನವೊಲಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಸಣ್ಣ ಪುಟ್ಟ ಸುಳ್ಳುಗಳು ಬಿಟ್ಟರೆ ಇವರು ಹೆಚ್ಚು ಸತ್ಯವನ್ನೇ ನುಡಿಯುತ್ತಾರೆ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಸತ್ಯವನ್ನು ಹೇಳಲು ಹಿಂಜರಿಯುವುದಿಲ್ಲ. ಆದರೆ ಕೆಲವೊಮ್ಮೆ ಅವರು ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಮೇಷ ರಾಶಿಯವರು ಎದುರಿರುವವರ ದೌರ್ಬಲ್ಯವನ್ನು ಸ್ಪಷ್ಟವಾಗಿ ತೋರಿಸಬಹುದು. ಹೀಗಾಗಿ ತುಂಬಾ ಪ್ರಾಮಾಣಿಕ ಮತ್ತು ನ್ಯಾಯೋಚಿತರಾಗಿರುತ್ತಾರೆ. ಬೇರೆಯವರು ಮೇಷ ರಾಶಿಯವರಿಗೆ ಸಮಸ್ಯೆಗಳನ್ನು ಮಾಡದ ಹೊರತು ಅವರು ಯಾರನ್ನೂ ಅಸಮಾಧಾನಗೊಳಿಸಲು ಬಯಸುವುದಿಲ್ಲ. ಹೀಗಾಗಿ ಮೇಷ ರಾಶಿಯೊಂದಿಗೆ ಯಾವಾಗಲೂ ಪ್ರಾಮಾಣಿಕವಾಗಿರಬೇಕು. ಜೊತೆಗೆ ಜಾಗರೂಕರಾಗಿರಬೇಕು.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ತುಂಬಾ ಸಂವೇದನಾಶೀಲರು, ಆದರೆ ಪ್ರಾಮಾಣಿಕರು. ಇವರು ಬಹಳ ಸುಲಭವಾಗಿ ಬೇರೆಯವರ ಮೇಲೆ ಪ್ರಭಾವ ಬೀರುತ್ತಾರೆ. ಜೊತೆಗೆ ಇತರು ಚಿಹ್ನೆಗಳಿಗಿಂತ ಭಿನ್ನವಾಗಿರುತ್ತಾರೆ. ಸತ್ಯವನ್ನು ಹೇಳುವಾಗ ಅವರು ಬಹಳ ಜಾಗರೂಕರಾಗಿರುತ್ತಾರೆ. ಆ ಸತ್ಯವು ನಿಮ್ಮನ್ನು ನೋಯಿಸದಂತೆ ನೋಡಿಕೊಳ್ಳುತ್ತಾರೆ. ಕನ್ಯಾ ರಾಶಿ ಅವರು ತುಂಬಾ ಕರುಣಾಮಯಿ ಮತ್ತು ಸಂಪೂರ್ಣವಾಗಿ ಸಂಬಂಧವಿಲ್ಲದ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಜೊತೆಗೆ ಯಾವಾಗಲೂ ಇತರರಿಗೆ ಒಳ್ಳೆಯದನ್ನು ಬಯಸುತ್ತಾರೆ.

English summary
These 5 signs never hesitate to speak the truth. Know who belongs to this zodiac sign in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X