2025 Vrishabha Rashi Bhavishya: ವೃಷಭ ರಾಶಿ 2025 ವರ್ಷ ಭವಿಷ್ಯ: ಹಿಂದೆಂದು ನೋಡಿರದ ಆದಾಯ, ಕೈತುಂಬ ಹಣ, ಕೀರ್ತಿ

2025 ಆಗಮಿಸಲಿದೆ. ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರೂ ಕಾತುರರಾಗಿದ್ದಾರೆ. ಜೊತೆಗೆ ಮುಂಬರುವ ವರ್ಷ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ 2025ನೇ ವರ್ಷದಲ್ಲಿ ನಿಮ್ಮ ಆರ್ಥಿಕ, ಹಣಕಾಸು, ಉದ್ಯೋಗ, ಆರೋಗ್ಯ, ವೈವಾಹಿಕ ಜೀವನ ಹೇಗಿದೆ ಎನ್ನುವುದನ್ನು ತಿಳಿಯೋಣ. ವೃಷಭ ರಾಶಿಯವರಿಗೆ 2025 ಹೇಗಿದೆ ನೋಡೋಣ.

ವೃಷಭ ರಾಶಿಯವರಿಗೆ ಶನಿ ಮತ್ತು ಗುರು ಬಲವಿದೆ. ಶನಿ ಕರ್ಮಕಾರಕ ಗುರು ಧರ್ಮಕಾರ. ಇವೆರೆಡೂ ಗ್ರಹಗಳು ಚೆನ್ನಾಗಿದ್ದರೆ ವೃಷಭ ರಾಶಿಯವರಿಗೆ ಆತಂಕವೇ ಇಲ್ಲ. ವೃಷಭ ರಾಶಿಯವರ ಮನೆಯಲ್ಲಿ ಗುರು ಗ್ರಹವಿದೆ. ಕರ್ಮ ಸ್ಥಾನದಲ್ಲಿ ಶನಿ ಇದ್ದಾನೆ. ಲಾಭ ಸ್ಥಾನದಲ್ಲಿ ರಾಹು ಇದ್ದಾನೆ. ಹೀಗಾಗಿ 2025ರಲ್ಲಿ ವೃಷಭ ರಾಶಿಯವರಿಗೆ ತುಂಬಾ ಶುಭ ಫಲಗಳು ಸಿಗಲಿದೆ. ವೃತ್ತಿಯಲ್ಲಿ ಬೆಳವಣಿಗೆ, ಆರ್ಥಿಕ ಸ್ಥಿತಿಯಲ್ಲಿ ರಾಜಯೋಗವಿದೆ. ಆದಾಯ, ಬಡ್ತಿ ಎಲ್ಲವೂ ಉತ್ತಮವಾಗಿದೆ. ಹಾಗಾದರೆ 2025ನೇ ವರ್ಷ ವೃಷಭ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ.

taurus horoscope 2025 in kannada vrishabha rashi varshika bhavishya 2025 taurus yearly predictions

ಗ್ರಹಗತಿಗಳು ಹೇಗಿವೆ?

2025 ಮಾರ್ಚ್ 28ಕ್ಕೆ ಶನಿ ಬದಲಾವಣೆಯಾಗುತ್ತದೆ. ಶನಿ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಶನಿ ನಿಮ್ಮ ಲಾಭ ಸ್ಥಾನವಾಗಿದೆ. ಅಂದರೆ 2025 ಸಂಪೂರ್ಣ ವರ್ಷ ಮಾರ್ಚ್‌ ನಿಂದ ಡಿಸೆಂಬರ್‌ವರೆಗೂ ಶನಿ ಶುಭ ಫಲವನ್ನು ವೃಷಭ ರಾಶಿಯವರಿಗೆ ನೀಡುತ್ತದೆ.

ಹಾಗೆ ಮೇ 18ಕ್ಕೆ ರಾಹು ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತದೆ. ಈ ವರ್ಷ ಪೂರ್ಣ ರಾಹು ಕುಂಭ ರಾಶಿಯಲ್ಲಿ ಇರುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಶುಭ ಹಾಗೂ ಅಶುಭ ಫಲಗಳನ್ನು ರಾಹು ಕೊಡ್ತಾನೆ. ವೃಷಭ ರಾಶಿಯವರ ಚತುರ್ಥ ಭಾವಕ್ಕೆ ಕೇತು ಗ್ರಹ ಮೇ 18ನೇ ತಾರೀಖು ಪ್ರವೇಶ ಮಾಡುತ್ತಾನೆ. ಕೇತು ಗ್ರಹ ಸ್ವಲ್ಪ ಅಶುಭ ಫಲಗಳನ್ನು ನೀಡುತ್ತಾನೆ. ಆದರೆ ಹೆಚ್ಚು ಕಷ್ಟವನ್ನು ನೀಡುವುದಿಲ್ಲ.

ಇನ್ನೂ ಗುರು ವೃಷಭ ರಾಶಿಯಲ್ಲಿ ಇದಾನೆ. ಮೇ15ನೇ ತಾರೀಖು ವೃಷಭ ರಾಶಿಯವರ ಎರಡನೇ ಮನೆಗೆ ಸಾಗುತ್ತಾನೆ ಗುರು. ಗುರು ದೇವ ಈ ವರ್ಷ ಪೂರ್ತಿ ಸಂಪೂರ್ಣವಾಗಿ ಶುಭ ಫಲವನ್ನು ನೀಡುತ್ತಿದ್ದಾನೆ. ಹೀಗಾಗಿ ಈ ವರ್ಷ ವೃಷಭ ರಾಶಿಯವರಿಗೆ ತುಂಬಾ ಉತ್ತಮ ವರ್ಷ ಅಂತನೇ ಹೇಳಬಹುದು. ಯಾಕೆಂದರೆ ಎಲ್ಲಾ ಗ್ರಹಗಳು ಶುಭಫಲವನ್ನೇ ಕೊಡುತ್ತಿವೆ.

taurus horoscope 2025 in kannada vrishabha rashi varshika bhavishya 2025 taurus yearly predictions

2025ರಲ್ಲಿ ವೃಷಭ ರಾಶಿಯವರ ವೃತ್ತಿ ಜೀವನ

ಮುಂದಿನ ವರ್ಷ ಶನಿ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ವೃಷಭ ರಾಶಿಯವರ ಲಾಭ ಸ್ಥಾನ ಇದಾಗಿದೆ. ಶನಿ ವೃಷಭ ರಾಶಿಯವರಿಗೆ ರಾಜಯೋಗ ಕಾರಕನಾಗಿದ್ದಾನೆ. ಧರ್ಮ ಮತ್ತು ಕರ್ಮ ಸಾಧಕ ಶನಿ. ಈ ಶನಿ ಗ್ರಹದ ಆಶೀರ್ವಾದ ನಿಮ್ಮ ಮೇಲೆ ವರ್ಷಪೂರ್ತಿ ಇರಲಿದೆ. ಉದ್ಯೋಗದಲ್ಲಿ ಶನಿ ಅಭಿವೃದ್ಧಿಯನ್ನು ಕೊಡುತ್ತಾನೆ.

ಯಾರಿಗೆ ಪ್ರೋಮೋಷನ್‌ ಸಿಗ್ತಿಲ್ಲ, ಸಂಬಳ ಹೆಚ್ಚಾಗಿಲ್ಲ, ಕೆಲಸದಲ್ಲಿ ಸಮಸ್ಯೆ ಇದೆಯೋ ಅವರಿಗೆಲ್ಲಾ ಮಾರ್ಚ್‌ ಕಳೆದ ನಂತರ ಉದ್ಯೋಗದಲ್ಲಿ ಸಾಕಷ್ಟು ಏಳಿಗೆ ಕಂಡು ಬರಲಿದೆ. ಉದ್ಯೋಗದಲ್ಲಿ ಪ್ರಮೋಷನ್, ಸಂಬಳ ಹೆಚ್ಚಳವಾಗುವ ಸಾಧ್ಯತೆ ಇದೆ. ಕೆಲಸ ಇಲ್ಲ ಅನ್ನೋರಿಗೆ ಕೆಲಸ ಕೂಡ ಸಿಗಲಿದೆ. ಉದ್ಯೋಗದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತವೆ.

taurus horoscope 2025 in kannada vrishabha rashi varshika bhavishya 2025 taurus yearly predictions

ಇನ್ನೂ ಕರ್ಮ ಸ್ಥಾನಕ್ಕೆ ರಾಹು ಆಗಮಿಸುವುದರಿಂದ ಕೆಲವೊಂದು ತಪ್ಪುಗಳು ನಿಮ್ಮಿಂದ ಆಗುತ್ತವೆ. ಹೀಗಾಗಿ ಯಾವುದೇ ಒಂದು ಕೆಲಸಕ್ಕೆ ಕೈ ಹಾಕಬೇಕು ಅಂದರೆ ಸ್ವಲ್ಪ ಎಚ್ಚರಿಕೆಯಿಂದ ಇರಿ. ರಾಹು ಕರ್ಮ ಸ್ಥಾನದಲ್ಲಿ ಇದ್ದಾಗ ಕಾನೂನು ಬಾಹೀರವಾಗಿ ನಾವು ಏನಾದ್ರೂ ಕೆಲಸ ಮಾಡಿದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ. ಇದರ ಪರಿಣಾಮ ಈಗ ಇರುವುದಿಲ್ಲ ಎರಡುವರೆ ವರ್ಷ ಆದ ಬಳಿಕ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳ ಬಗ್ಗೆ ಯೋಚನೆ ಮಾಡಿ.

2025ರಲ್ಲಿ ವೃಷಭ ರಾಶಿಯವರ ಹಣಕಾಸಿನ ಜೀವನ

2025ರಲ್ಲಿ ವೃಷಭ ರಾಶಿಯವರ ಹಣಕಾಸಿನ ಜೀವನ ಹೇಗಿದೆ ಅಂದರೆ ಧನ ಸ್ಥಾನಕ್ಕೆ ಗುರು ಬಲ ಬರುವುದರಿಂದ ಹಣಕಾಸಿನ ವಿಚಾರದಲ್ಲಿ ತುಂಬಾ ತುಂಬಾ ಚೆನ್ನಾಗಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಆದಾಯ ಹೆಚ್ಚಾಗುತ್ತದೆ. ಈ ವರ್ಷ ನಷ್ಟ ಇಲ್ಲ. ಸ್ವಂತ ಉದ್ಯೋಗ ಮಾಡುವವರಿಗೆ ತುಂಬಾ ಅನುಕೂಲವಾಗಿದೆ. ಮಾರ್ಚ್‌ ಕಳೆದ ಮೇಲೆ ಸಾಕಷ್ಟು ಆದಾಯ ಸಿಗಲಿದೆ. ಶನಿ ಗ್ರಹ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯನ್ನು ಉಂಟು ಮಾಡುತ್ತಾನೆ. ಹಣಕಾಸಿನ ಲಾಭವನ್ನು ನೀಡುತ್ತಾನೆ. ಸಾಲದ ಭೀತಿ ಇರುವುದಿಲ್ಲ.

ಎರಡನೇ ಮನೆಗೆ ಗುರು ಗ್ರಹ ಆಗಮನವಾಗುತ್ತದೆ. ಅಲ್ಲಿಂದ ಐದನೇ ಮನೆಯನ್ನು ನೋಡುತ್ತಾನೆ. ಇದು ವೃತ್ತಿ ಕ್ಷೇತ್ರವಾಗಿದೆ. ಒಂಬತ್ತನೆ ಮನೆ ಕರ್ಮಸ್ಥಾನ ನೋಡುವುದರಿಂದ ವೃತ್ತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ. ಅಧಿಕಾರ ಪಡೆಯುವುದು, ಹಣಕಾಸಿನ ಲಾಭ, ಬಡ್ತಿ ಹೊಂದುವ ಸಾಧ್ಯತೆ ಇದೆ.

taurus horoscope 2025 in kannada vrishabha rashi varshika bhavishya 2025 taurus yearly predictions

2025ರಲ್ಲಿ ವೃಷಭ ರಾಶಿಯವರ ಕುಟುಂಬ ಜೀವನ

ವೃಷಭ ರಾಶಿಯವರ ಎರಡನೇ ಮನೆಯಲ್ಲಿ ಗುರು ಗ್ರಹ ಇರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ಆಗುತ್ತವೆ. ಕುಟುಂಬದಲ್ಲಿ ಇದ್ದ ದಾರಿದ್ರ್ಯ ನಿವಾರಣೆಯಾಗುತ್ತದೆ. ಅಲ್ಲದೆ ವಾಕ್ಸ್ತಾನದಲ್ಲಿ ಗುರು ಇರುವುದರಿಂದ ಈ ವರ್ಷದಲ್ಲಿ ನಿಮ್ಮ ಮಾತಿನಿಂದ ತುಂಬಾ ಪ್ರಭಾವವನ್ನು ಉಂಟು ಮಾಡುವಿರಿ. ತುಂಬಾ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಎಷ್ಟೋ ಸಮಸ್ಯೆಗಳು ಅಂದರೆ ಸಂಬಂಧಗಳಲ್ಲಿ ತೊಡಕುಗಳು, ಭಿನ್ನಾಭಿಪ್ರಾಯಗಳು ಅದೆಲ್ಲವೂ ನಿಮ್ಮ ಮಾತಿನಿಂದಲೇ ಬಗೆಹರಿಸುವಂತಹ ಸಾಧ್ಯತೆ ಇದೆ.

2025ರಲ್ಲಿ ವೃಷಭ ರಾಶಿಯವರ ವಿದ್ಯಾರ್ಥಿಗಳ ಜೀವನ

ವಿದ್ಯಾರ್ಥಿಗಳಿಗೂ 2025 ವರ್ಷ ತುಂಬಾ ಅನುಕೂಲವಾಗಿದೆ. ಯಾಕೆಂದರೆ ವೃಷಭ ರಾಶಿಯವರ ಎರಡನೇ ಮನೆಯಲ್ಲಿ ಗುರು ಇದ್ದರೆ ಗುರು ಬಲ ಇದೆ ಅಂತ ಅರ್ಥ. ಇದರಿಂದ ವಿದ್ಯಾಲಾಭ ಸಿಗುತ್ತದೆ. ಒಳ್ಳೆ ಕಾಲೇಜಿನಲ್ಲಿ ಸೀಟ್ ಸಿಗಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ, ಓದುವ ಶಕ್ತಿ ಹೆಚ್ಚಾಗಲಿದೆ.

taurus horoscope 2025 in kannada vrishabha rashi varshika bhavishya 2025 taurus yearly predictions

ಆಸ್ತಿ, ಮನೆ, ಭೂಮಿ ಖರೀದಿ

2025ಮೇ ನಂತರ ವೃಷಭ ರಾಶಿಯವರು ಒಡವೆ ಖರೀದಿ ಮಾಡ್ತಾರೆ. ವಸ್ತುಗಳನ್ನು ಖರೀದಿ ಮಾಡ್ತಾರೆ. ಗುರು ಗ್ರಹ ಇದೆಲ್ಲಾ ನೀಡುತ್ತಾನೆ. ಮನೆ ಭೂಮಿ ವಾಹನ ಖರೀದಿ ಕೂಡ ಮಾಡಬಹುದು. ಮೇ ಒಳಗಡೆ ಆಸ್ತಿ, ಮನೆ, ಭೂಮಿ ತೆಗೆದುಕೊಂಡರೆ ಒಳ್ಳೆಯದು. ಕೇತು ಗ್ರಹ ಸ್ವಲ್ಪ ಕೆಟ್ಟದಾಗಿದೆ. ಹೀಗಾಗಿ ಸ್ವಲ್ಪ ಎಚ್ಚರಿಕೆ ವಹಿಸಿ ತೆಗೆದುಕೊಳ್ಳಿ.

2025ರಲ್ಲಿ ವೃಷಭ ರಾಶಿಯವರಿಗೆ ಸರ್ಕಾರಿ ಉದ್ಯೋಗ

ಸರ್ಕಾರಿ ಉದ್ಯೋಗಿಗಳಿಗೆ ಮುಂದಿನ ವರ್ಷ ಅದ್ಭುತವಾಗಿದೆ. ಗುರು ಉತ್ತಮ ಫಲವನ್ನು ನೀಡಲಿದ್ದಾನೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಉತ್ತಮ ಉದ್ಯೋಗ ಪಡೆಯುವ ಯೋಗವಿದೆ. ಕರ್ಮಸ್ಥಾನಕ್ಕೆ ರಾಹು ಬರುವುದರಿಂದ ಮೇ ತಿಂಗಳ ನಂತರ ನಿಮಗೆ ವರ್ಗಾವಣೆಯಾಗಲಿದೆ. ವರ್ಗಾವಣೆಯನ್ನು ಬಯಸುತ್ತಿರುವವರಿಗೆ ತುಂಬಾ ಖುಷಿ ವಿಚಾರ. ಉದ್ಯೋಗದಲ್ಲಿ ಉತ್ತಮವಾದ ಬದಲಾವಣೆಗಳಾಗಲಿದೆ.

ವೃಷಭ ರಾಶಿಯ ಕೃಷಿಕರಿಗೆ 2025 ಹೇಗಿದೆ?

2025ರಲ್ಲಿ ಕೃಷಿವಿಚಾರದಲ್ಲೂ ತುಂಬಾ ಒಳ್ಳೆಯ ಫಲ ಸಿಗಲಿದೆ. ವೃಷಭ ರಾಶಿಯ ರೈತರಿಗೆ ಸಂತೋಷ ಪಡುವ ವರ್ಷವಾಗಿದೆ. ಇದೊಂದೇ ಅಲ್ಲ 2026ರಲ್ಲೂ ರೈತರಿಗೆ ಶುಭವಾಗಲಿದೆ. ಯಾಕೆಂದರೆ ಲಾಭದಲ್ಲಿ ಶನಿ ಇರುತ್ತದೆ. ಶನಿ ಕೃಷಿಕಾರಕನಾಗಿದ್ದಾನೆ. ಹೀಗಾಗಿ ಲಾಭ ಸ್ಥಾನದಲ್ಲಿ ಶನಿ ಇರುವುದರಿಂದ ವರ್ಷ ಪೂರ್ತಿ ಕೃಷಿಕರು ತುಂಬಾ ಆದಾಯ ಪಡೆಯುತ್ತಾರೆ. ಈ ವರ್ಷದಲ್ಲಿ ನಿಮ್ಮ ಸಾಲ ತೀರುತ್ತದೆ. ಸಾಲಬಾಧೆಯಿಂದ ಮುಕ್ತರಾಗುವಿರಿ.

2025ರಲ್ಲಿ ವೃಷಭ ರಾಶಿಯವರ ಆರೋಗ್ಯ

ಮುಂದಿನ ವರ್ಷ ಶನಿ ವೃಷಭ ರಾಶಿಯವರ ಹನ್ನೊಂದನೆ ಮನೆಯಲ್ಲಿ ಕುಳಿತು ಐದನೇ ಮನೆ ನೋಡುವುದರಿಂದ ಸ್ವಲ್ಪ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ. ಚತುರ್ಥಭಾವದಲ್ಲಿ ಕೇತು ಇರುವುದರಿಂದ ಕೆಲವೊಮ್ಮೆ ಮನಸ್ಸಿಗೆ ಆತಂಕ, ಆಲೋಚನೆ, ಭಯ ಕಾಡುತ್ತದೆ. ಕುಟುಂಬಸ್ಥರ ಆರೋಗ್ಯದಲ್ಲಿ ಬದಲಾವಣೆಗಳಾಗಲಿದೆ. ಈ ಬಗ್ಗೆ ಗಮನಹರಿಸಬೇಕು.

ಕುಟುಂಬಸ್ಥರಲ್ಲಿ ಈ ಆರೋಗ್ಯ ಸಮಸ್ಯೆ ಬರದೇ ಇರಲು ಪ್ರತೀ ಶನಿವಾರ ಒಂದು ತಾಮ್ರದ ತಂಬಿಗೆಯಲ್ಲಿ ನೀರು ಹಾಕಿಕೊಂಡು, ಇದಕ್ಕೆ ಚೂರು ಅರಿಶಿಣ, ಕುಂಕುಂಮ, ಗರಿಕೆ ಮತ್ತು ದರ್ಬೆ ಹಾಕಿ. ಕೈಯಲ್ಲಿ ಹಿಡಿದುಕೊಂಡು ಒಂಬತ್ತು ಪ್ರದಕ್ಷಣೆ ಮಾಡಿ ಪೂರ್ವಕ್ಕೆ ಮುಖ ಮಾಡಿ ನಿಂತು ವೃಕ್ಷಕ್ಕೆ ಹಾಕಿ. ಹಾಗೆ ಎಳ್ಳೆಯಿಂದ ಎರಡು ದೀಪ ಹಚ್ಚಿ, ದೇವಸ್ಥಾನ ಹುರುಳಿಕಾಳು ಹಾಗೂ ಉದ್ದಿನ ಬೇಳೆಯನ್ನು ಕೊಟ್ಟು ಬನ್ನಿ. ಹೀಗೆ ಮಾಡುವಾಗ ಸಂಕಲ್ಪ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ. ಇದರಿಂದಾಗಿ ಕುಟುಂಬಸ್ಥರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಮುಂಚಿತವಾಗಿ ಈ ಪರಿಹಾರ ಮಾಡಿಕೊಂಡರೆ ಉತ್ತಮ.

2025ರಲ್ಲಿ ವೃಷಭ ರಾಶಿಯವರ ಮನೆಯಲ್ಲಿ ಶುಭ ಕಾರ್ಯ

2025 ಮೇ ನಂತರ ದೈವ ಕಾರ್ಯಗಳು, ಶುಭ ಕಾರ್ಯಗಳು ವೃಷಭ ರಾಶಿಯವರ ಮನೆಯಲ್ಲಿ ನಡೆಯುತ್ತವೆ. ಮುಖ್ಯವಾಗಿ ವಿದೇಶದಲ್ಲಿ ಉದ್ಯೋಗ ಮಾಡಬೇಕು ಅಂದುಕೊಂಡಿದ್ದರೆ, ವಿದೇಶಕ್ಕೆ ಹೋಗಬೇಕು ಅಂದುಕೊಂಡಿದ್ದರೆ ರಾಹು ಗ್ರಹ ಕುಂಭ ರಾಶಿಗೆ ಬಂದ ಬಳಿಕೆ ಅಂದರೆ ಮೇ 18ರ ನಂತರ ವಿದೇಶಕ್ಕೆ ಹೋಗುವ ಅವಕಾಶಗಳು ಇವೆ. ಇನ್ನೂ ತೀರ್ಥಯಾತ್ರೆ ವಿಚಾರ ಬಂದಾಗಲೂ ಕೂಡ ಮೇ ನಂತರ ಕುಟುಂಬದವರ ಜೊತೆ ಸೇರಿ ದೇವಾಲಯಗಳಿಗೆ ಹೋಗಬಹುದು.

ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಳ

ಇನ್ನೂ ಗುರು ಗ್ರಹ ಮೇ 15ರ ನಂತರ ಎರಡನೇ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಕರ್ಮ ಸ್ಥಾನವನ್ನು ದೃಷ್ಟಿಸುವುದರಿಂದ ಬೇರೆಯವರ ಕೈ ಕೆಳಗೆ ಕೆಲಸ ಮಾಡುವವರ ಗೌರವ ವೃದ್ಧಿಯಾಗುತ್ತದೆ. ಹೆಸರು ಖ್ಯಾತಿ ಎಲ್ಲವೂ ಹೆಚ್ಚಾಗುತ್ತದೆ. ಹಣಕಾಸಿನ ವಿಚಾರ ಅಷ್ಟೇ ಅಲ್ಲದೆ ನಿಮಗೆ ಗೌರವ ಮರ್ಯಾದೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಗುರು ಹಾಗೂ ಶನಿ ಇರುವ ಸ್ಥಾನ ತುಂಬಾ ಶುಭಫಲ ನೀಡುತ್ತವೆ.

ಶನಿ ಕರ್ಮಕಾರಕ ಗುರು ಧರ್ಮಕಾರ ಇವೆರೆಡೂ ಗ್ರಹಗಳು ಚೆನ್ನಾಗಿದ್ದರೆ ನಮಗೆ ಆತಂಕವಿಲ್ಲ. ಬೇರೆ ಗ್ರಹಗಳ ಸಮಸ್ಯೆಗಳನ್ನೂ ಈ ಎರಡೂ ಗ್ರಹಗಳಿಂದ ಸರಿಯಾಗುತ್ತವೆ. ಹೀಗಾಗಿ ಈ ವರ್ಷ ಪೂರ್ತಿ ಶನಿ ಹಾಗೂ ಗುರು ಇಬ್ಬರೂ ಶುಭಫಲವನ್ನು ವೃಷಭ ರಾಶಿಯವರಿಗೆ ನೀಡುತ್ತಾರೆ. ಶತ್ರುಬಾದೆ ಇರುವುದಿಲ್ಲ. ಕುಟುಂಬದಲ್ಲಿ ವಿವಾಹ ಹಾಗೂ ದೈವಿಕ ಶುಭ ಕಾರ್ಯಗಳು ನಡೆಯುತ್ತವೆ. ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಎಲ್ಲಾ ಕೆಲಸಗಳು ಮಾರ್ಚ ಕಳೆದ ನಂತರ ವಿಘ್ನಗಳಿಲ್ಲದೆ ನಡೆಯುತ್ತವೆ. ಹೀಗಾಗಿ ವರ್ಷ ಪೂರ್ತಿ ವೃಷಭ ರಾಶಿಯವರಿಗೆ ಶುಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+