ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರ ವೃತ್ತಿ ಜೀವನದಲ್ಲಿ ಬದಲಾವಣೆ

ಸೂರ್ಯನನ್ನು ನವಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಸೂರ್ಯ ಗ್ರಹ ಪ್ರತಿ ತಿಂಗಳು ರಾಶಿಯಿಂದ ರಾಶಿಗೆ ಸಂಚಾರ ಮಾಡುತ್ತದೆ. ಸೂರ್ಯನು ರಾಶಿಯನ್ನು ಸಂಕ್ರಮಿಸಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಮೇ 15 ರಂದು ಮೇಷ ರಾಶಿಯಿಂದ ವೃಷಭ ರಾಶಿಗೆ ಸೂರ್ಯ ಗ್ರಹ ಪ್ರಯಾಣಿಸಿದೆ. ಈಗಾಗಲೇ ಮೇ 25ರಂದು ಸೂರ್ಯ ಗ್ರಹ ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದೆ.

ಜೂನ್ 08 ರವರೆಗೆ ಸೂರ್ಯನು ಈ ರೋಹಿಣಿ ನಕ್ಷತ್ರದಲ್ಲಿ ಇರುತ್ತಾನೆ. ರೋಹಿಣಿ ನಕ್ಷತ್ರದ ಅಧಿಪತಿ ಚಂದ್ರನಾಗಿದ್ದಾನೆ. ಬಿಸಿಯಾದ ಸೂರ್ಯ ತಂಪಾದ ಚಂದ್ರ ಇಬ್ಬರೂ ರೋಹಿಣಿ ನಕ್ಷತ್ರಕ್ಕೆ ತೆರಳಿರುವುದರಿಂದ, ಅದು ಭೂಮಿಯ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಸೂರ್ಯನ ಈ ರೋಹಿಣಿ ನಕ್ಷತ್ರ ಸಂಕ್ರಮಣದಿಂದಾಗಿ 5 ರಾಶಿಯವರಿಗೆ ಅದೃಷ್ಟ ಸಿಗಲಿದೆ. ಈ ಐದು ರಾಶಿಯವರು ವಿಶೇಷವಾಗಿ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಹಾಗಾದರೆ ಆ ರಾಶಿಗಳು ಯಾವವು? ನೋಡೋಣ.

Sun Transit

ಮೇಷ ರಾಶಿ

ಮೇಷ ರಾಶಿಯ 2ನೇ ಮನೆಯಲ್ಲಿ ಸೂರ್ಯನಿದ್ದಾನೆ. ಈ ಕಾರಣದಿಂದಾಗಿ ಮೇಷ ರಾಶಿಯ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಜೊತೆಗೆ ದಾಂಪತ್ಯ ಜೀವನವೂ ಮಧುರವಾಗಿರುತ್ತದೆ. ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಸಂಬಂಧವು ಸಂತೋಷದಿಂದ ಕೂಡಿರುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಪ್ರೇರಣೆ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತೀರಿ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಶತ್ರುಗಳ ವಿರುದ್ಧ ಜಯ ಸಾಧಿಸುತ್ತೀರಿ.

Sun Transit

ವೃಷಭ ರಾಶಿ

ವೃಷಭ ರಾಶಿಯ ಮೊದಲ ಮನೆಯಲ್ಲಿ ಸೂರ್ಯನಿದ್ದಾನೆ. ಇದು ವೃಷಭ ರಾಶಿಯವರಿಗೆ ಒಳ್ಳೆಯ ಸಮಯವಾಗಿದೆ. ಈ ಅವಧಿಯಲ್ಲಿ ನಾಯಕತ್ವ ಕೌಶಲ್ಯಗಳು ಉತ್ತಮವಾಗಿರುತ್ತವೆ. ಆಕರ್ಷಕ ನಿಮ್ಮಮಾತು ಎಲ್ಲರ ಗಮನವನ್ನು ಸೆಳೆಯುತ್ತದೆ. ಈ ಅವಧಿಯಲ್ಲಿ ನೀವು ಇತರರಿಗಿಂತ ಆಕರ್ಷಕವಾಗಿರುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಖ್ಯಾತಿಯ ಜೊತೆಗೆ, ನೀವು ಉತ್ತಮ ಸಂಬಳವನ್ನು ಸಹ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

Sun Transit

ಕರ್ಕಾಟಕ ರಾಶಿ

ಕರ್ಕಾಟಕದ 11ನೇ ಮನೆಯಲ್ಲಿ ಸೂರ್ಯನಿದ್ದಾನೆ. ಈ ಕಾರಣದಿಂದಾಗಿ ಕರ್ಕಾಟಕ ರಾಶಿಯವರಿಗೆ ಹಣದ ಹರಿವು ಹೆಚ್ಚಾಗುತ್ತದೆ. ವೃತ್ತಿ ಜೀವನ ಉತ್ತಮವಾಗಿರುತ್ತದೆ. ಆದಾಯದ ಹೊಸ ಮೂಲಗಳು ಹೊರಹೊಮ್ಮುತ್ತವೆ. ಯಾವುದೇ ವ್ಯಾಪಾರ ಮಾಡಿದರೆ ಅದರಲ್ಲಿ ಲಾಭ ಮತ್ತು ಪ್ರಗತಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವ ಅತ್ಯುತ್ತಮವಾಗಿರುತ್ತದೆ. ಇತರರು ನಿಮ್ಮ ಮಾತನ್ನು ಕೇಳಲು ಬಯಸುತ್ತಾರೆ.

Sun Transit

ಸಿಂಹ ರಾಶಿ

ಸಿಂಹ ರಾಶಿಯ 10ನೇ ಮನೆಯಲ್ಲಿ ಸೂರ್ಯನಿದ್ದಾನೆ. ಈ ದಿನಗಳಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಸುದ್ದಿ ನೀಡುತ್ತದೆ. ವ್ಯಾಪಾರಸ್ಥರು ಅಭಿವೃದ್ಧಿ ಕಾಣಲಿದ್ದಾರೆ. ವೃತ್ತಿ ಜೀವನ ಅನುಕೂಲಕ್ಕೆ ತಕ್ಕಂತೆ ಇರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಈ ಅವಧಿಯಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದಲ್ಲಿ ತುಂಬಾ ನಿರತರಾಗಿರುತ್ತಾರೆ. ಒಟ್ಟಿನಲ್ಲಿ ಈ ಸೀಸನ್ ತುಂಬಾ ರೋಚಕವಾಗಿರುತ್ತದೆ.

Sun Transit

ಧನು ರಾಶಿ

ಧನು ರಾಶಿಯ 6ನೇ ಮನೆಯಲ್ಲಿ ಸೂರ್ಯನಿದ್ದಾನೆ. ಹೀಗಾಗಿ ಈ ರಾಶಿಚಕ್ರದವರು ಈ ಅವಧಿಯಲ್ಲಿ ತಮ್ಮ ಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತಾರೆ. ನಿಮ್ಮ ಪ್ರಯತ್ನಗಳಲ್ಲಿ ಅದೃಷ್ಟವಿದೆ. ಈ ಅವಧಿಯಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ. ಅದೃಷ್ಟದ ಬೆಂಬಲ ಪಡೆಯುತ್ತೀರಿ. ಸೈನ್ಯದಲ್ಲಿರುವವರು ಈ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ಈ ಅವಧಿಯಲ್ಲಿ ಪುಣ್ಯ ಲಭಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+