Budhaditya Rajyoga 2024: ಮಕರದಲ್ಲಿ ಬುಧಾದಿತ್ಯ ರಾಜಯೋಗ: ಫೆಬ್ರವರಿಯಲ್ಲಿ ಈ 3 ರಾಶಿಯವರಿಗೆ ಏನ್ ಲಕ್ಕು ಗೊತ್ತಾ?

ಸೌರವ್ಯೂಹದಲ್ಲಿ ಗ್ರಹಗಳು ಸಂಚಾರದ ವೇಳೆ ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ. ಹೀಗೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸಂಚಾರ ಮಾಡಿದಾಗ ಶುಭ ಅಥವಾ ಅಶುಭ ಯೋಗಗಳು ಹುಟ್ಟಿಕೊಳ್ಳುತ್ತವೆ.

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಗಳು ನಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಗ್ರಹಗಳು ಇತರ ಗ್ರಹಗಳ ಜೊತೆಯಲ್ಲಿ ಪ್ರಯಾಣಿಸುತ್ತವೆ. ಅಂತಹ ಸಂಯೋಜನೆಯು ಶುಭ ಅಥವಾ ಅಶುಭ ಯೋಗಗಳನ್ನು ರೂಪಿಸಿದಾಗ, ಆ ಯೋಗಗಳು ಮಾನವ ಜೀವನದ ಮೇಲೂ ಪ್ರಭಾವ ಬೀರುತ್ತವೆ.

ನವಗ್ರಹಗಳ ನಾಯಕನೆಂದು ಪರಿಗಣಿಸಲ್ಪಟ್ಟ ಸೂರ್ಯ ಮತ್ತು ಗ್ರಹಗಳ ರಾಜಕುಮಾರನೆಂದು ಪರಿಗಣಿಸಲ್ಪಟ್ಟ ಬುಧ ಇಬ್ಬರು ಒಟ್ಟಾಗಿ ಸಂಚರಿಸಿದಾಗ ಬುಧಾದಿತ್ಯ ರಾಜಯೋಗ ಹುಟ್ಟಿಕೊಳ್ಳುತ್ತದೆ. ಮಕರ ರಾಶಿಯಲ್ಲಿ ಸುಮಾರು 1 ವರ್ಷದ ನಂತರ ಈ ರಾಜಯೋಗವು ರೂಪುಗೊಳ್ಳುತ್ತದೆ.

ಈಗಾಗಲೇ ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸಂದರ್ಭದಲ್ಲಿ ಬುಧ ಕೂಡ ಫೆಬ್ರವರಿ 1 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧದ ಈ ಪ್ರವೇಶದಿಂದಾಗಿ ಫೆಬ್ರವರಿ 1ರಂದು ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ.

ವಿಶೇಷವಾಗಿ 3 ರಾಶಿಯ ಜನರು ಈ ರಾಜಯೋಗದಿಂದ ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಬುಧಾದಿತ್ಯ ರಾಜಯೋಗದಿಂದ ಅದೃಷ್ಟವನ್ನು ಪಡೆಯುವ ಆ ರಾಶಿಚಕ್ರದ ಚಿಹ್ನೆಗಳು ಯಾರೆಂದು ಈಗ ನೋಡೋಣ.

sun mercury conjunction make budhaditya rajyoga in capricorn 2024 lucky zodiac signs in kannada

ಮೇಷ ರಾಶಿ

ಮೇಷ ರಾಶಿಯವರಿಗೆ ಬುಧಾದಿತ್ಯ ರಾಜಯೋಗ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ಮೇಷ ರಾಶಿಯ 10ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಹೀಗಾಗಿ ಮೇಷ ರಾಶಿಯವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.

ನೀವು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಅದೃಷ್ಟದ ಬೆಂಬಲದಿಂದ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಈ ಸಮಯದಲ್ಲಿ ನೀವು ಅದನ್ನು ಮಾಡಿದರೆ ನೀವು ಅದರಲ್ಲಿ ಪ್ರಗತಿಯನ್ನು ಕಾಣುತ್ತೀರಿ.

sun mercury conjunction make budhaditya rajyoga in capricorn 2024 lucky zodiac signs in kannada

ಧನು ರಾಶಿ

ಧನು ರಾಶಿಯವರಿಗೆ ಬುಧಾದಿತ್ಯ ರಾಜಯೋಗ ಶುಭ ಫಲಿತಾಂಶಗಳನ್ನು ನೀಡಲಿದೆ. ಧನು ರಾಶಿಯ 2ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರಚನೆಯಾಗಲಿದೆ. ಈ ಕಾರಣದಿಂದಾಗಿ ಧನು ರಾಶಿಯವರು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ನೀವು ಬಹಳ ದಿನಗಳಿಂದ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಅವಧಿಯಲ್ಲಿ ಹೊಸ ಉದ್ಯೋಗವು ಲಭ್ಯವಾಗುತ್ತದೆ.

ಈ ಸಮಯದಲ್ಲಿ ಧನು ರಾಶಿಯವರು ಕೆಲಸ ಮತ್ತು ವ್ಯವಹಾರದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ನೀವು ಯೋಜಿಸಿದ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಮಾತು ಮದುರವಾಗಿರುತ್ತದೆ. ಇದು ಅನೇಕ ಕಾರ್ಯಗಳನ್ನು ಸಾಧಿಸುತ್ತದೆ. ನಿಮ್ಮ ಮಾತು ಇತರರನ್ನು ಮೆಚ್ಚಿಸುತ್ತದೆ.

sun mercury conjunction make budhaditya rajyoga in capricorn 2024 lucky zodiac signs in kannada

ಮಕರ ರಾಶಿ

ಮಕರ ರಾಶಿಯವರಿಗೆ ಬುಧಾದಿತ್ಯ ರಾಜಯೋಗ ಮಂಗಳಕರವಾಗಿದೆ. ಈ ರಾಜಯೋಗದಿಂದ ಮಕರ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮಕರ ರಾಶಿಯ ಮೊದಲ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಇದು ಮಕರ ರಾಶಿಯವರ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ.

ಉದ್ಯೋಗಿಗಳು ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಕೆಲವರು ಒಳ್ಳೆಯ ಸುದ್ದಿ ಪಡೆಯಬಹುದು. ವಿವಾಹಿತರು ತಮ್ಮ ಜೀವನ ಸಂಗಾತಿಯೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುತ್ತಾರೆ. ನಿಮ್ಮ ಪಾಲುದಾರ ಕೂಡ ಈ ಸಮಯದಲ್ಲಿ ಪ್ರಗತಿ ಹೊಂದಬಹುದು. ಅವಿವಾಹಿತರಿಗೆ ಅಂದುಕೊಂಡ ಬಾಳ ಸಂಗಾತಿಯೊಂದಿಗೆ ಕಂಕಣಬಾಗ್ಯವೂ ಕೂಡು ಬರುವ ಸಾಧ್ಯತೆ ಇದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+