Shadashtaka Yoga 2023: ಸೂರ್ಯ ಮತ್ತು ಮಂಗಳದಿಂದ ರೂಪುಗೊಂಡ ಷಡಾಷ್ಟಕ ಯೋಗ: ಸೆ.17 ರಿಂದ ಈ 3 ರಾಶಿಯವರು ಮೈಯಲ್ಲಾ ಕಣ್ಣಾಗಿರಿ
ಗ್ರಹಗಳು ಕೆಲವೊಮ್ಮೆ ಸಂಚಾರದ ಸಮಯದಲ್ಲಿ ಮಂಗಳಕರ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಹಾಗೆ ರೂಪುಗೊಂಡ ಯೋಗಗಳು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ.
ಅದರಂತೆ ಪ್ರಸ್ತುತ ಮಂಗಳ ಕನ್ಯಾರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ನವಗ್ರಹಗಳ ಅಧಿಪತಿಯಾದ ಸೂರ್ಯನು ಸೆಪ್ಟೆಂಬರ್ 17 ರಂದು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಹೀಗೆ ಕನ್ಯಾರಾಶಿಯಲ್ಲಿ ಮಂಗಳ ಮತ್ತು ಸೂರ್ಯನು ಷಡಾಷ್ಟಕ ಯೋಗವನ್ನು ರೂಪಿಸುತ್ತಾರೆ.
ಈ ಷಡಾಷ್ಟಕ ಯೋಗವು ಅಶುಭ ಯೋಗವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳು 6 ಮತ್ತು 8 ನೇ ಮನೆಯಲ್ಲಿದ್ದಾಗ ಷಡಾಷ್ಟಕ ಯೋಗವು ರೂಪುಗೊಳ್ಳುತ್ತದೆ. ಈ ಬಾರಿ ಷಡಾಷ್ಟಕ ಯೋಗವು ಮಂಗಳ ಮತ್ತು ಸೂರ್ಯನ ಸ್ಥಾನದಿಂದ ರೂಪುಗೊಂಡಿದೆ. 3 ರಾಶಿಯ ಜನರು ಈ ಅಶುಭ ಯೋಗದಿಂದ ಜಾಗರೂಕರಾಗಿರಬೇಕು. ಈಗ ಆ ರಾಶಿಯವರು ಯಾರೆಂದು ನೋಡೋಣ.

ಮೇಷ ರಾಶಿ
ಷಡಾಷ್ಟಕ ಯೋಗವು ಮೇಷ ರಾಶಿಯವರಿಗೆ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಏಕೆಂದರೆ ಸೂರ್ಯ ಮತ್ತು ಮಂಗಳ 6ನೇ ಮನೆಯಲ್ಲಿ ಸೇರುತ್ತಾರೆ. ಇದರಿಂದ ಈ ರಾಶಿಯವರಿಗೆ ಈ ಅವಧಿಯಲ್ಲಿ ಅಪಘಾತವಾಗುವ ಸಂಭವವಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ಈ ಅವಧಿಯಲ್ಲಿ ನ್ಯಾಯಾಲಯದ ಪ್ರಕರಣಗಳು ತೊಂದರೆಗೊಳಗಾಗಬಹುದು. ವ್ಯಾಪಾರಿಗಳು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ಈ ಅವಧಿಯಲ್ಲಿ ಯಾರಿಗೂ ಸಾಲ ಕೊಡಬೇಡಿ.

ವೃಷಭ ರಾಶಿ
ಷಡಾಷ್ಟಕ ಯೋಗವು ವೃಷಭ ರಾಶಿಯವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರಾಶಿಯವರು ಗರ್ಭಿಣಿಯಾಗಿದ್ದರೆ ಹೆಚ್ಚಿನ ಎಚ್ಚರಿಕೆಯನ್ನು ಸೂಚಿಸಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಈಗಾಗಲೇ ಸಮಸ್ಯೆಗಳನ್ನು ಹೊಂದಿರುವವರು ಸಣ್ಣ ಸಮಸ್ಯೆಗಳನ್ನು ಎದುರಿಸಿದರೂ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ. ಮಕ್ಕಳು ಕೆಲವು ಕೆಟ್ಟ ಸುದ್ದಿಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ. ಪ್ರೇಮ ಜೀವನ ಸ್ವಲ್ಪ ಒರಟಾಗಿರುತ್ತದೆ. ಷಡಾಷ್ಟಕ ಯೋಗದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಸೂರ್ಯ ಮತ್ತು ಮಂಗಳನ ಆರಾಧನೆ ಮಾಡಿ. ಜೊತೆಗೆ ಭಾನುವಾರ ಮತ್ತು ಮಂಗಳವಾರದಂದು ಉಪವಾಸ ಮಾಡಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಷಡಾಷ್ಟಕ ಯೋಗ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಲ್ಲೂ ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಕಾಳಜಿ ವಹಿಸಬೇಕು. ಈ ಅವಧಿಯಲ್ಲಿ ನಗದು ವಹಿವಾಟುಗಳನ್ನು ತಪ್ಪಿಸಿ. ಸಂಗಾತಿಯ ಆರೋಗ್ಯವೂ ಹದಗೆಡುವ ಸಾಧ್ಯತೆ ಇದೆ. ಈ ಬಗ್ಗೆ ಕಾಲಜಿವಹಿಸಿ. ಮುಖ್ಯವಾಗಿ ಅವರು ಗಾಯಕ್ಕೆ ಒಳಗಾಗುವುದರಿಂದ ಅವರ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications