Dhana Rajayoga: ಸೂರ್ಯನಿಂದ ರೂಪುಗೊಂಡ ಧನ ರಾಜಯೋಗ: ಈ 3 ರಾಶಿಯವರಿಗೆ ಹೆಚ್ಚಾಗಲಿದೆ ಸಂಪತ್ತು ಮತ್ತು ಪ್ರತಿಷ್ಠೆ

ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ, ಇತರ ಗ್ರಹಗಳನ್ನು ಸೇರಿದಾಗ ಅಥವಾ ನಿರ್ದಿಷ್ಟ ಮನೆಗಳನ್ನು ಆಕ್ರಮಿಸಿಕೊಂಡಾಗ ಶುಭ ಅಥವಾ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳಿಂದ ಮಾನವನ ಜೀವನದಲ್ಲಿ ವಿವಿಧ ಬದಲಾವಣೆಗಳು ಸಂಭವಿಸುತ್ತವೆ.

ಅಂದಹಾಗೆ ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟ ಸೂರ್ಯನು 12 ತಿಂಗಳ ನಂತರ ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದನು. ಸೂರ್ಯನು ಸಿಂಹರಾಶಿಗೆ ಪ್ರವೇಶಿಸಿದಾಗ, ಅತ್ಯಂತ ಮಂಗಳಕರವಾದ ಧನ ರಾಜಯೋಗವು ರೂಪುಗೊಳ್ಳುತ್ತದೆ.

ಈ ಯೋಗವು ಉತ್ತಮ ಸಂಪತ್ತು, ಕೀರ್ತಿ ಮತ್ತು ಗೌರವವನ್ನು ನೀಡುತ್ತದೆ. ಈ ಯೋಗದ ಪ್ರಭಾವವು ಎಲ್ಲಾ 12 ರಾಶಿಗಳಲ್ಲಿ ಕಂಡುಬಂದರೂ, 3 ರಾಶಿಯವರಿಗೆ ಈ ಧನರಾಜಯೋಗದಿಂದ ಹೆಚ್ಚಿನ ಲಾಭಗಳು ದೊರೆಯುತ್ತವೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

sun-make-dhan-rajyoga-2023

ವೃಷಭ ರಾಶಿ

ಧನ ರಾಜಯೋಗವು ವೃಷಭ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿಯನ್ನು ತರಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು. ಹಣದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಜೀವನದ ಆರ್ಥಿಕ ಗುಣಮಟ್ಟ ಸುಧಾರಿಸುತ್ತದೆ.

ಆಸ್ತಿಯಿಂದ ಉತ್ತಮ ಲಾಭ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಇಲ್ಲಿಯವರೆಗೆ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಉತ್ತಮ ಪರಿಹಾರ ಸಿಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ.

sun-make-dhan-rajyoga-2023

ಮೇಷ ರಾಶಿ

ಧನ ರಾಜಯೋಗವು ಮೇಷ ರಾಶಿಯವರಿಗೆ ಅಪಾರ ಲಾಭವನ್ನು ನೀಡುತ್ತದೆ. ಮೇಷ ರಾಶಿಯವರಿಗೆ ಧೈರ್ಯ ಹೇರಳವಾಗಿರುತ್ತದೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಿಗಳು ಯಶಸ್ಸನ್ನು ಕಾಣುವರು. ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಮತ್ತು ವಿಸ್ತರಣೆಗೆ ಅವಕಾಶಗಳಿವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಪ್ರಯಾಣದ ಸಾಧ್ಯತೆ ಇರುತ್ತದೆ. ಪ್ರೇಮ ಜೀವನ ಮಧುರವಾಗಿರುತ್ತದೆ. ಆರ್ಥಿಕವಾಗಿ ಉತ್ತಮವಾಗಿರುತ್ತೀರಿ.

sun-make-dhan-rajyoga-2023

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಧನ ರಾಜಯೋಗವು ಎಲ್ಲಾ ವಿಷಯಗಳಲ್ಲಿಯೂ ಉತ್ತಮವಾಗಿರುತ್ತದೆ. ಸೂರ್ಯನ ಅನುಗ್ರಹದಿಂದಾಗಿ ಈ ಅವಧಿಯಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ಹೆಚ್ಚಿನ ಶಕ್ತಿ ಇರುತ್ತದೆ. ರಾಜಕೀಯದಲ್ಲಿರುವವರಿಗೆ ಉತ್ತಮ ಸ್ಥಾನಮಾನಗಳು ದೊರೆಯುವ ಸಾಧ್ಯತೆ ಇದೆ. ಹೊಸ ಸಂಪರ್ಕದಿಂದಾಗಿ ಅವರು ವೃತ್ತಿಜೀವನದಲ್ಲಿ ಗಮನಾರ್ಹ ಸುಧಾರಣೆಯನ್ನು ಕಾಣುತ್ತಾರೆ. ಹಣಕಾಸಿನ ವಿಚಾರದಲ್ಲಿ ಕೈ ತುಂಬಾ ಹಣವಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+