South Facing House: ದಕ್ಷಿಣ ಮುಖವಾಗಿರುವ ಮನೆ ಖರೀದಿಸುವ ಮೊದಲು ಈ ವಿಷಯ ತಿಳಿದಿರಲಿ

ಮನೆಯ ದಿಕ್ಕು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗುತ್ತದೆ. ಮನೆ ಯಾವ ದಿಕ್ಕಿಗೆ ಮುಖ ಮಾಡಿದೆ ಎಂಬುದರ ಆಧಾರದ ಮೇಲೆ ಮನೆಯಲ್ಲಿನ ಶಕ್ತಿ, ನೆಮ್ಮದಿ ಮತ್ತು ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ವಾಸ್ತು ಶಾಸ್ತ್ರದಲ್ಲಿ ಬಲವಾಗಿ ನಂಬಲಾಗುತ್ತದೆ. ದಕ್ಷಿಣಕ್ಕೆ ಮುಖ ಮಾಡಿದ ಮನೆಗಳು ಕೆಲವು ಲಾಭಗಳನ್ನು ಹೊಂದಿದ್ದರೂ, ಕೆಲವು ಅನಾನುಕೂಲತೆಗಳನ್ನೂ ಹೊಂದಿರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಹೆಚ್ಚು ಬಿಸಿಲು ಮತ್ತು ಉಷ್ಣತೆಯ ಸಮಸ್ಯೆ

ದಕ್ಷಿಣಾಭಿಮುಖ ಮನೆಗಳಲ್ಲಿ ಎದುರಾಗುವ ಪ್ರಮುಖ ಸಮಸ್ಯೆಯೆಂದರೆ ಹೆಚ್ಚು ಬಿಸಿಲು ಮತ್ತು ತಾಪಮಾನ. ಬೇಸಿಗೆ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಮನೆಯೊಳಗೆ ಪ್ರವೇಶಿಸುವುದರಿಂದ ಮನೆಯ ಒಳಗಿನ ತಾಪಮಾನ ಹೆಚ್ಚಾಗುತ್ತದೆ. ಇದರಿಂದ ಮನೆಯೊಳಗೆ ಹೆಚ್ಚು ಬಿಸಿಯಾಗುವ ಜೊತೆಗೆ ಏರ್‌ ಕಂಡೀಷನರ್‌ ಅಥವಾ ಫ್ಯಾನ್‌ ಬಳಕೆ ಹೆಚ್ಚಾಗಿ ವಿದ್ಯುತ್‌ ವೆಚ್ಚವೂ ಹೆಚ್ಚಾಗಬಹುದು.

South Facing House Vastu

ದಕ್ಷಿಣಾಭಿಮುಖವಾಗಿ ಮನೆ ಇರುವುದರಿಂದ ಮನೆಯಲ್ಲಿನ ಪೀಠೋಪಕರಣಗಳು, ಪರದೆಗಳು ಮತ್ತು ಒಳಾಂಗಣ ಅಲಂಕಾರ ವಸ್ತುಗಳು ಬೇಗ ಬಣ್ಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

Modern Vastu: 2026ರಲ್ಲಿ ಟ್ರೆಂಡ್ ಆಗುತ್ತಿರುವ ಹೊಸ ವಾಸ್ತು ನಿಯಮಗಳು ಇವು!
Modern Vastu: 2026ರಲ್ಲಿ ಟ್ರೆಂಡ್ ಆಗುತ್ತಿರುವ ಹೊಸ ವಾಸ್ತು ನಿಯಮಗಳು ಇವು!

ವಾಸ್ತು ಪ್ರಕಾರ ಏನು ಮಾಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ಮುಖ ಮನೆಗಳಲ್ಲಿ ಸೂರ್ಯನ ಬಿಸಿಯನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿರುತ್ತದೆ. ಇದಕ್ಕಾಗಿ ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದು.

ಹೀಟ್‌ ಕಂಟ್ರೋಲ್‌ ಗ್ಲಾಸ್‌ ಅಥವಾ ಎನರ್ಜಿ ಎಫಿಶಿಯಂಟ್‌ ಕಿಟಕಿಗಳನ್ನು ಬಳಸಬಹುದು
ಕಿಟಕಿಗಳಿಗೆ ಪರದೆ ಅಥವಾ ಬ್ಲೈಂಡ್ಸ್‌ ಅಳವಡಿಸಬಹುದು

ಮನೆಯ ಮುಂದೆ ನೆರಳು ನೀಡುವ ಗಿಡಗಳು ಅಥವಾ ಪರ್ಗೋಲಾ ನಿರ್ಮಿಸಬಹುದು
ಗ್ಲೇರ್‌ ಸಮಸ್ಯೆ ಮತ್ತು ಕಣ್ಣಿನ ಒತ್ತಡ

ಮನೆಯ ಉಷ್ಣಾಂಶವನ್ನು ಕಡಿಮೆ ಮಾಡಲು ಹೀಟ್ ಕಂಟ್ರೋಲ್ ಗ್ಲಾಸ್ ಅಥವಾ ಎನರ್ಜಿ ಎಫಿಶಿಯೆಂಟ್ ಕಿಟಕಿಗಳನ್ನು ಬಳಸಬಹುದು. ಸೂರ್ಯನ ಬೆಳಕನ್ನು ತಡೆಯಲು ಕಿಟಕಿಗಳಿಗೆ ಪರದೆ ಅಥವಾ ಬ್ಲೈಂಡ್ಸ್‌ಗಳನ್ನು ಅಳವಡಿಸುವುದು ಸೂಕ್ತ. ಇದರೊಂದಿಗೆ, ಮನೆಯ ಮುಂದೆ ನೆರಳು ನೀಡುವ ಗಿಡಗಳನ್ನು ಬೆಳೆಸುವುದರಿಂದ ನೈಸರ್ಗಿಕವಾಗಿ ತಂಪು ಪಡೆಯಬಹುದು. ಈ ಎಲ್ಲಾ ಕ್ರಮಗಳು ಅತಿಯಾದ ಬೆಳಕಿನಿಂದ ಉಂಟಾಗುವ ಗ್ಲೇರ್ ಸಮಸ್ಯೆ ಮತ್ತು ಕಣ್ಣಿನ ಒತ್ತಡವನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತವೆ.

 Soft Jowar Roti Tips: ಮೃದುವಾದ ಜೋಳದ ರೊಟ್ಟಿ ಮಾಡಬೇಕಾ, ಈ ಟಿಪ್ಸ್‌ ಫಾಲೋ ಮಾಡಿ
Soft Jowar Roti Tips: ಮೃದುವಾದ ಜೋಳದ ರೊಟ್ಟಿ ಮಾಡಬೇಕಾ, ಈ ಟಿಪ್ಸ್‌ ಫಾಲೋ ಮಾಡಿ

ಈ ಸಮಸ್ಯೆಗೆ ಪರಿಹಾರವೇನು?

ವಾಸ್ತು ತಜ್ಞರ ಪ್ರಕಾರ ಕೆಲವು ಬದಲಾವಣೆಗಳ ಮೂಲಕ ಈ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಕಿಟಕಿಗಳಿಗೆ ಯು.ವಿ. ಪ್ರೊಟೆಕ್ಷನ್‌ ಫಿಲ್ಮ್‌ ಅಳವಡಿಸುವುದು

ಬೇಗ ಬಣ್ಣ ಮಾಸದ ಫರ್ನಿಚರ್‌ ಮತ್ತು ಅಲಂಕಾರ ವಸ್ತುಗಳನ್ನು ಆಯ್ಕೆ ಮಾಡುವುದು

ದಕ್ಷಿಣಮುಖ ಮನೆ ಖರೀದಿಸುವ ಮೊದಲು ಗಮನಿಸಬೇಕಾದದ್ದು

ದಕ್ಷಿಣಮುಖವಾಗಿ ಇರುವ ಮನೆ ಎಂದರೆ ಅದು ಸಂಪೂರ್ಣ ಕೆಟ್ಟದ್ದು ಎಂದು ಹೇಳಲಾಗುವುದಿಲ್ಲಾ. ಸರಿಯಾದ ವಿನ್ಯಾಸ, ಗಾಳಿ ಮತ್ತು ಬೆಳಕಿನ ಸಮತೋಲನ, ವಾಸ್ತು ನಿಯಮಗಳ ಅನುಸರಣೆ ಇದ್ದರೆ ಇಂತಹ ಮನೆಗಳಲ್ಲೂ ಸುಖವಾಗಿ ಬದುಕಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಹೀಗಾಗಿ ಮನೆ ಖರೀದಿಸುವಾಗ ಅಥವಾ ನಿರ್ಮಿಸುವಾಗ ವಾಸ್ತು ನಿಯಮಗಳ ಜೊತೆಗೆ ಪ್ರಾಯೋಗಿಕ ಅಂಶಗಳನ್ನೂ ಗಮನಿಸುವುದು ಮುಖ್ಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+