Shani vakra nivarthi: 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿ ವಕ್ರ ನಿವೃತ್ತಿ: ಈ 3 ರಾಶಿಯವರಿಗೆ ಆರ್ಥಿಕ ನಷ್ಟ

ನವಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಕರ್ಮಕ್ಕನುಗುಣವಾಗಿ ಲಾಭವನ್ನು ಕೊಡುವವನು ಶನಿ ದೇವನಾಗಿದ್ದಾನೆ. ಹೀಗಾಗಿ ಶನಿ ದೇವನನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಶನಿಯು ಸುಮಾರು ಎರಡುವರೆ ವರ್ಷಗಳ ಕಾಲ ರಾಶಿಯಲ್ಲಿ ಸಂಚರಿಸುತ್ತಾನೆ. ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿಯಾಗಿದೆ.

ಶನಿದೇವನ ಚಲನೆಯಲ್ಲಿ ಸಣ್ಣ ಬದಲಾವಣೆಯಾದರೂ ಅದು ವ್ಯಕ್ತಿಯ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗೆ ಸುಮಾರು 30 ವರ್ಷಗಳ ನಂತರ 2023ರ ಆರಂಭದಲ್ಲಿ ಶನಿದೇವನು ತನ್ನ ಮೂಲ ತ್ರಿಕೋನ ಚಿಹ್ನೆಯಾದ ಕುಂಭ ರಾಶಿಯನ್ನು ಪ್ರವೇಶಿಸಿದನು.

ಜೂನ್ ನಲ್ಲಿ ಶನಿಯು ಕುಂಭ ರಾಶಿಯಲ್ಲಿ ವಕ್ರ ಸ್ಥಾನದಲ್ಲಿ ಪ್ರಯಾಣಿಸಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ದೀಪಾವಳಿಯ ಮೊದಲು ಅಂದರೆ ನವೆಂಬರ್ 04 ರಂದು ಶನಿಯು ಕುಂಭ ರಾಶಿಯಲ್ಲಿ ವಕ್ರ ನಿವಾರ್ತಿಯನ್ನು ಪಡೆಯುತ್ತಾನೆ. ಶನಿ ವಕ್ರ ನಿವೃತಿ ಬರುತ್ತಿದ್ದಂತೆ ಎಲ್ಲಾ ರಾಶಿಯವರಲ್ಲೂ ಅದರ ಪ್ರಭಾವ ಕಾಣಿಸುತ್ತದೆ.

ಅಂದರೆ 2025ರವರೆಗೆ ಶನಿ ಗ್ರಹ ಕುಂಭ ರಾಶಿಯಲ್ಲಿ ಸಂಚರಿಸಲಿದೆ. ಇದರಿಂದ ಕೆಲವರಿಗೆ ಒಳ್ಳೆಯದಾಗಿದ್ದರೂ ಇನ್ನು ಕೆಲವರಿಗೆ ನಾನಾ ರೀತಿಯ ತೊಂದರೆಗಳು ಎದುರಾಗಬಹುದು. ಹಾಗಾದರೆ ಶನಿ ವಕ್ರ ನವೃತ್ತಿಯಿಂದ ಯಾವ ರಾಶಿಯವರಿಗೆ ಕಷ್ಟಗಳು ಎದುರಾಗಲಿವೆ ಎಂದು ನೋಡೋಣ.

shani-vakra-nivarthi-2023

ವೃಶ್ಚಿಕ ರಾಶಿ

ಶನಿಯು ವೃಶ್ಚಿಕ ರಾಶಿಯ 4 ನೇ ಮನೆಯಲ್ಲಿ ವಕ್ರ ನಿವೃತ್ತಿ ಹೊಂದಲಿದ್ದಾನೆ. ಇದರಿಂದ ಈ ರಾಶಿಯವರಿಗೆ ಚಿಂತೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಇದರಿಂದ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಕೆಲಸದ ಸ್ಥಳದಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ. ಕೆಲವರು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು.

ವ್ಯಾಪಾರಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಇಲ್ಲದಿದ್ದರೆ, ನೀವು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗಬಹುದು.

shani-vakra-nivarthi-2023

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯ 8ನೇ ಮನೆಯಲ್ಲಿ ಶನಿಯು ವಕ್ರ ನಿವಾರ್ತಿ ಹೊಂದುತ್ತಾನೆ. ಆದ್ದರಿಂದ ಈ ರಾಶಿಚಕ್ರ ಚಿಹ್ನೆಗಳು ನವೆಂಬರ್‌ನಿಂದ ಯಾವುದೇ ಯಶಸ್ಸು ಮತ್ತು ಲಾಭವನ್ನು ಪಡೆಯಲು ತುಂಬಾ ಶ್ರಮಿಸಬೇಕಾಗುತ್ತದೆ. ಉದ್ಯೋಗಿಗಳು ಸ್ವಲ್ಪ ಒತ್ತಡವನ್ನು ಅನುಭವಿಸಬಹುದು. ಕೆಲವರು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು.

ವ್ಯಾಪಾರಸ್ಥರು ಎಚ್ಚರಿಕೆ ವಹಿಸಬೇಕು. ಈ ಅವಧಿಯಲ್ಲಿ ಶತ್ರುಗಳು ಸ್ವಲ್ಪ ಬಲಶಾಲಿಯಾಗಿರುತ್ತಾರೆ. ಇದು ಕೆಲವು ನಷ್ಟಗಳಿಗೆ ಕಾರಣವಾಗಬಹುದು. ಹಣಕಾಸಿನ ಸ್ಥಿತಿಯು ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಅನಗತ್ಯ ಖರ್ಚುಗಳು ಬರಬಹುದು. ನೀವು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

shani-vakra-nivarthi-2023

ಸಿಂಹ ರಾಶಿ

ಸಿಂಹ ರಾಶಿಯ 7ನೇ ಮನೆಯಲ್ಲಿ ಶನಿಯು ವಕ್ರ ನಿವೃತ್ತಿಯನ್ನು ಪಡೆಯುತ್ತಾನೆ. ಈ ಕಾರಣದಿಂದಾಗಿ ಈ ರಾಶಿಯವರು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಕೈಗಾರಿಕೆ ಮತ್ತು ವ್ಯಾಪಾರದಲ್ಲಿ ನಷ್ಟವಾಗುವ ಸಂಭವವಿದೆ. ಪ್ರತಿ ಕೆಲಸದಲ್ಲೂ ತಡವಾಗುವುದು ಒತ್ತಡಕ್ಕೆ ಕಾರಣವಾಗಬಹುದು. ಉದ್ಯೋಗ ಬದಲಾಯಿಸಲು ಬಯಸುವವರು ತಾಳ್ಮೆಯಿಂದ ವರ್ತಿಸಬೇಕು.

ವ್ಯಾಪಾರಿಗಳಿಗೆ ವ್ಯಾಪಾರ ಸ್ವಲ್ಪ ಮಂದಗತಿ ಇರುತ್ತದೆ. ಜಂಟಿ ಉದ್ಯಮಿಗಳು ತಮ್ಮ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ಆರ್ಥಿಕವಾಗಿ ನೀವು ಹಣಕಾಸಿನ ನಷ್ಟವನ್ನು ಎದುರಿಸಬೇಕಾಗಬಹುದು. ಅನಾವಶ್ಯಕ ಖರ್ಚುಗಳು ನಿಮಗೆ ತೊಂದರೆ ಕೊಡುತ್ತವೆ. ಕೆಲವರು ಸಾಲ ಮಾಡಬೇಕಾಗಬಹುದು. ಇದರೊಂದಿಗೆ ನೀವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+