ಮೊದಲ ನವರಾತ್ರಿಯಿಂದ ಶನಿ ಸಂಚಾರ: ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!
ಜ್ಯೋತಿಷ್ಯದಲ್ಲಿ ಪ್ರತಿ ಗ್ರಹಗಳ ಚಲನೆಯು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳು ಒಂದು ರಾಶಿ ಪುಂಜದಿಂದ ಮತ್ತೊಂದು ರಾಶಿ ಪುಂಜಕ್ಕೆ ತೆರಳಿದಾಗ ಬದಲಾವಣೆ ಸಹಜವಾಗಿದೆ. ಗ್ರಹಗಳ ಚಲನೆಯು ಒಂದು ಗುಂಪಿನ ರಾಶಿಗೆ ಸುಖ ಶಾಂತಿ ನೆಮ್ಮದಿಯನ್ನು ತಂದರೆ ಇನ್ನೊಂದು ಗುಂಪಿನ ರಾಶಿಗಳಿಗೆ, ನೋವು, ಸಂಕಷ್ಟ, ಒತ್ತಡ ಹಾಗೂ ಸವಾಲುಗಳನ್ನು ತರುತ್ತದೆ.
ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುವ ಶನಿಯ ಚಲನೆಯು ಕೆಲವು ರಾಶಿ ನಕ್ಷತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಶನಿದೇವನು ಅಕ್ಟೋಬರ್ 15ರಂದು ನಕ್ಷತ್ರಪುಂಜವನ್ನು ಬದಲಾಯಿಸುತ್ತಿದ್ದಾನೆ. ಶನಿಯು ಧನಿಷ್ಠಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ.
ಅಕ್ಟೋಬರ್ 15ರಿಂದ ನವೆಂಬರ್ 24ರವರೆಗೆ ಶನಿಯು ಈ ನಕ್ಷತ್ರದಲ್ಲಿ ಇರುತ್ತಾನೆ. ಮಂಗಳವನ್ನು ಧನಿಷ್ಠಾ ನಕ್ಷತ್ರದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನವರಾತ್ರಿಯ ಸಮಯದಲ್ಲಿ ಧನಿಷ್ಠಾ ನಕ್ಷತ್ರದಲ್ಲಿ ಶನಿಯ ಪ್ರಭಾವವು ಅನೇಕ ರಾಶಿಗಳಿಗೆ ಸುಖ ಶಾಂತಿ ನೆಮ್ಮದಿ ಜೊತೆಗೆ ಶುಭ ಫಲಗಳನ್ನು ನೀಡುತ್ತದೆ.
ಶನಿಯು ಧನಿಷ್ಠಾ ನಕ್ಷತ್ರವನ್ನು ಪ್ರವೇಶಿಸುವುದರಿಂದ ಈ ಕೆಳಗಿನ ನಾಲ್ಕು ರಾಶಿಯವರ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ. ಕೌಟುಂಬಿಕ, ಶಿಕ್ಷಣ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಈ ರಾಶಿಯವರು ಶನಿಯ ಅನುಗ್ರಹದಿಂದ ಉತ್ತಮ ಫಲಿತಾಂಶಗಳನ್ನೇ ನಿರೀಕ್ಷಿಸಬಹುದು.

ಮೇಷ ರಾಶಿ
ಶನಿಯ ನಕ್ಷತ್ರ ಬದಲಾವಣೆಯಿಂದ ಮೇಷ ರಾಶಿಯ ಜನರಿಗೆ ಉತ್ತಮ ಸಮಯ ಬರುತ್ತದೆ. ಹಣಕಾಸಿ ವಿಚಾರದಲ್ಲಿ ಇದು ಲಾಭದ ಸಮಯ. ನೀವ ಬಯಸದಿದ್ದರೂ ಹಣವು ನಿಮ್ಮನ್ನು ಅರಸಿ ಬರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಇದರಿಂದ ಹಣದ ಗಳಿಕೆ ಹೆಚ್ಚಾಗುತ್ತದೆ. ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳುತ್ತದೆ. ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ. ಜೀವನದಲ್ಲಿದ್ದ ಒತ್ತಡಗಳು ಕಡಿಮೆಯಾಗಿ ಜೀವನದಲ್ಲಿ ನೀವು ಖುಷಿಯಾಗಿರಬಹುದು. ಸ್ನೇಹ ಹಾಗೂ ಕುಟುಂಬಸ್ಥರಲ್ಲಿ ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮವಾಗಿರುತ್ತದೆ.

ಮಿಥುನ ರಾಶಿ
ಶನಿಯ ನಕ್ಷತ್ರ ಬದಲಾವಣೆಯಿಂದ ಮಿಥುನ ರಾಶಿಯವರ ಜೀವನ ಬದಲಾಗಲಿದೆ. ಈ ರಾಶಿಯ ಜನರು ವಿಶೇಷವಾಗಿ ಶನಿಯ ಕೃಪಾಕಟಾಕ್ಷಕ್ಕೆ ಪಾತ್ರರಾದವರು. ಹೀಗಾಗಿ ಶನಿಯ ಪ್ರತಿ ಚಲನೆಯಿಂದ ಮಿಥುನ ರಾಶಿಯವರು ಶುಭ ಫಲಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಆದಾಯಕ್ಕೆ ಹೊಸ ಮಾರ್ಗ ಸಿಕ್ಕಿ ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. ಹೊಸ ಉದ್ಯೋಗ ಸಿಗುವ ಸಾಧ್ಯತೆ ಕೂಡ ಇದ್ದು, ಸಂಪತ್ತು ಹೆಚ್ಚಾಗಬಹುದು. ನಿಮ್ಮ ಅದೃಷ್ಟದ ಹೆಚ್ಚುವ ಸಮಯವಿದೆ.

ವೃಷಭ ರಾಶಿ
ಶನಿಯ ನಕ್ಷತ್ರ ಬದಲಾವಣೆಯಿಂದ ವೃಷಭ ರಾಶಿಯವರು ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಬಡ್ತಿ, ಸಂಬಳ ಏರಿಕೆ ಹೀಗೆ ವೃತ್ತಿ ಜೀವನದಲ್ಲಿ ಹೊಸ ಅವಕಾಶದ ಜೊತೆಗೆ ಹಣಗಳಿಸುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಈ ಅವಧಿಯು ವಿದೇಶ ಪ್ರವಾಸಕ್ಕೆ ಪ್ರಯತ್ನಿಸುವವರಿಗೆ ಹೊಸ ಮಾರ್ಗ ತೆರೆಯಲಿದೆ. ಇದರಿಂದ ನೀವು ಉದ್ಯೋಗದ ನಿಮಿತ್ತ ವಿದೇಶಕ್ಕೆ ಹಾರಬಹುದು. ಉದ್ಯೋಗದ ಜೊತೆಗೆ ವೈಯಕ್ತಿಕ ಜೀವನ ಕೂಡ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮ ಬಯಕೆಗಳಿಗೆ ಜೊತೆಯಾಗಿ ನಿಲ್ಲುತ್ತಾರೆ. ನಿಮ್ಮ ಪ್ರಯತ್ನಗಳನ್ನು ಗೌರವಿಸಿ ನಿಮ್ಮ ನಿರ್ಧಾರಗಳನ್ನು ಬೆಂಬಲಿಸುತ್ತಾರೆ.

ಮಕರ ರಾಶಿ
ಶನಿಯ ನಕ್ಷತ್ರ ಬದಲಾವಣೆಯಿಂದ ಮಕರ ರಾಶಿಯವರ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ವ್ಯವಹಾರದ ಆರಂಭಕ್ಕೆ ಇದು ಸೂಕ್ತ ಕಾಲ. ಜೊತೆಗೆ ಅವಕಾಶಗಳು ಕೂಡ ಹುಡುಕಿ ಬರುತ್ತದೆ. ಮಕರ ರಾಶಿ ಶನಿದೇವನ ಸ್ವಂತ ರಾಶಿಯಾದ ಕಾರಣ ಹೆಚ್ಚಿನ ಶುಭ ಫಲಗಳು ಈ ರಾಶಿಯವರಿಗಿದೆ. ವಿದೇಶಿ ಪ್ರವಾಸ ಸಹ ನಿಮ್ಮನರಸಿ ಬರಬಹುದು. ಜೊತೆಗೆ ಕೌಟುಂಬಿಕ ಜೀವನ ಕೂಡ ಉತ್ತಮವಾಗಿರುತ್ತದೆ. ನವರಾತ್ರಿಯ ಜೊತೆಗೆ ಈ ಉತ್ತಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.
(ಸೂಚನೆ-ಈ ಮೇಲಿನ ವಿಷಯಗಳನ್ನು ಅಂತರ್ಜಾಲದ ಮಾಹಿತಿ ಆಧಾರಿಸಿದೆ.ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜ್ಯೋತಿಷ್ಯ ಕ್ಷೇತ್ರದ ಪರಿಣಿತರಾದವರನ್ನು ಸಂಪರ್ಕಿಸುವುದು ಉತ್ತಮ)












Click it and Unblock the Notifications