Shani Margi 2024: ಶನಿ ಮಾರ್ಗಿಯಿಂದಾಗಿ ಮುಂದಿನ ತಿಂಗಳಿನಿಂದ ಈ ರಾಶಿಯವರಿಗೆ ರಾಜಯೋಗ
ನವಗ್ರಹಗಳಲ್ಲಿ ಶನಿಯನ್ನು ಅತ್ಯಂತ ಕೆಟ್ಟ ಗ್ರಹವೆಂದು ನಂಬಲಾಗುತ್ತದೆ. ಶನಿ ದೇವ ಮುನಿಸಿಕೊಂಡರೆ ಅತ್ಯಂತ ಕೆಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕೆಲಸದಲ್ಲೇ ಆಗಲಿ ಶನಿ ಗ್ರಹದ ಆಶೀರ್ವಾದ ಪಡೆಯಲು ಜನ ಮುಂದಾಗುತ್ತಾರೆ. ಯಾವುದೇ ಕೆಟ್ಟ ಕೆಲಸವನ್ನು ಮಾಡಲು ಭಯ ಪಡುತ್ತಾರೆ. ಅಂದಹಾಗೆ ಇದೇ ನವೆಂಬರ್ ತಿಂಗಳಿನಲ್ಲಿ ಶನಿ ವಕ್ರ ಸಂಚಾರದಿಂದ ನೇರ ಸಂಚಾರ ಮಾಡಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರಲಿದೆ.
ಒಳ್ಳೆಯ ಕೆಲಸ ಮಾಡುವವರಿಗೆ ಮತ್ತು ಒಳ್ಳೆಯ ಮನಸ್ಸು ಇರುವವರಿಗೆ ಶನಿದೇವನು ಏನನ್ನೂ ಮಾಡುವುದಿಲ್ಲ. ಕಾಗೆಗಳಿಗೆ ಅನ್ನ ಕೊಡುವವರಿಗೆ, ಪೂರ್ವಜರಿಗೆ ದರ್ಪಣ ಮಾಡುವವರಿಗೆ, ಪಿತೃ ಋಣಗಳನ್ನು ಮಾಡುವವರಿಗೆ ಶನಿ ದೋಷ ಇರುವುದಿಲ್ಲ. ಹಾಗೆಯೇ ಶಿವ, ಹನುಮಂತ ಮತ್ತು ಭೈರವನನ್ನು ಪೂಜಿಸುವವರಿಗೆ ಶನಿದೇವನ ಬಾಧೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಪ್ರಸ್ತುತ ಶನಿ ಕುಂಭ ರಾಶಿಯಲ್ಲಿ ವಕ್ರ ಸ್ಥಾನದಲ್ಲಿ ಸಂಚರಿಸುತ್ತಿದೆ. ಶನಿ ಇದೇ ನವೆಂಬರ್ ತಿಂಗಳಲ್ಲಿ ವಕ್ರ ಸಂಚಾರದಿಂದ ನಿವರ್ತಿ ಪಡೆದು ನೇರ ಸಂಚಾರ ಮಾಡಲಿದೆ. ಹಾಗಾದರೆ ಶನಿ ವಕ್ರ ಸಂಚಾರದಿಂದ ನೇರ ಸಂಚಾರಕ್ಕೆ ತಿರುಗುವ ಈ ಸಮಯದಲ್ಲಿ ಯಾವ ರಾಶಿಯವರು ಅದೃಷ್ಟವಂತರಾಗಲಿದ್ದಾರೆ ಎಂದು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಶನಿ ವಕ್ರ ಸ್ಥಾನದಿಂದ ನೇರವಾಗಿ ಸಂಚಾರ ಮಾಡುವುದು ಶುಭ ಫಲವನ್ನು ನೀಡಲಿದೆ. ಮೇಷ ರಾಶಿಯವರಿಗೆ ಈ ಹಿಂದೆ ಇದ್ದ ಸಮಸ್ಯೆಗಳು ದೂರವಾಗಲಿವೆ. ಶನಿ ದೇವನ ಆಶೀರ್ವಾದಿಂದ ಅಂದುಕೊಂಡ ಕಾರ್ಯಗಳು ಸುಲಭವಾಗಿ ಸಾಗಲಿವೆ. ಸಂಪತ್ತು ವೃದ್ಧಿ, ಆರ್ಥಿಕ ಬೆಳವಣಿಗೆ ಕಂಡು ಬರಲಿದೆ. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಿಂದ ಲಾಭ ಪಡೆಯುವಿರಿ. ಅಲ್ಲದೆ ವ್ಯಾಪಾರದಲ್ಲಿ ಹೆಚ್ಚಿನ ಜನರ ಸಂಪರ್ಕ ಸಾಧಿಸುವಿರಿ.

ಕನ್ಯಾ ರಾಶಿ
ಶನಿ ವಕ್ರ ಸ್ಥಾನದಿಂದ ನೇರವಾಗಿ ಸಂಚಾರ ಮಾಡುವುದು ಕನ್ಯಾ ರಾಶಿಯವರಿಗೆ ಅನೇಕ ಲಾಭ ತಂದುಕೊಡಲಿದೆ. ಸರ್ಕಾರಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಸಿಗಲಿದೆ. ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಅಸೆ ಈಡೇರಲಿದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯುವಿರಿ. ಶನಿ ದೇವನ ಆಶೀರ್ವಾದಿಂದ ಆರ್ಥಿಕ ಬೆಳವಣಿಗೆಗೆ ಇದ್ದ ಅಡೆತಡೆಗಳು ದೂರವಾಗುತ್ತವೆ. ಈ ಸಮಯದಲ್ಲಿ ನೀವು ಮನೆ ಖರೀದಿ ಮಾಡಬಹುದು. ಹೊಸ ವಾಹನ ಅಥವಾ ಚಿನ್ನಾಭರಣ ಖರೀದಿಗೆ ಇದು ಅತ್ಯುತ್ತಮ ಸಮಯವಾಗಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಶನಿ ವಕ್ರ ಸ್ಥಾನದಿಂದ ನೇರವಾಗಿ ಸಂಚಾರ ಮಾಡುವುದು ಅದ್ಭುತ ಫಲ ನೀಡಲಿದೆ. ಮಕರ ರಾಶಿಯವರು ರಾಜನಂತೆ ಜೀವಿಸುತ್ತಾರೆ. ವ್ಯಾಪಾರ ವ್ಯವಹಾರದಲ್ಲಿನ ಅಡೆತಡೆಗಳು ದೂರವಾಗುತ್ತದೆ. ಶತ್ರುಗಳನ್ನು ನೀವು ಜಯಿಸುವಿರಿ. ಶನಿ ದೇವನ ಆಶೀರ್ವಾದದಿಂದ ಹೊಸ ಕೆಲಸಗಳು ಕೈ ಹಿಡಿಯುತ್ತವೆ. ಆರ್ಥಿಕ ಸ್ಥಿತಿ ಸುಧಾರಣೆ ಹೊಂದುವುದರ ಜೊತೆಗೆ ಆದಾಯ ಹೆಚ್ಚಾಗಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications