Shani Gochar 2025: ಮೀನ ರಾಶಿಗೆ ಶನಿ ಸಂಚಾರ ಪ್ರಾರಂಭ: ಈ ರಾಶಿಗಳ ಮೇಲೆ ಪರಿಣಾಮವೇನು?
ನವಗ್ರಹಗಳಲ್ಲಿ ಕರ್ಮಗಳಿಗನುಸಾರ ಅತ್ಯಂತ ಕೆಟ್ಟ ಫಲ ನೀಡುವ ದೇವರು ಶನಿ. ಶನಿ ಎರಡುವರೆ ವರ್ಷಗಳ ಕಾಲ ಒಂದು ರಾಶಿಯಲ್ಲಿ ಸಂಚಾರ ಮಾಡಲಿದ್ದು, ಜಾತಕದಲ್ಲಿ ಶನಿ ಸ್ಥಾನ ಉತ್ತಮವಾಗಿಲ್ಲ ಅಂತಾದರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ. ಅಲ್ಲದೆ ಶನಿಯ ಸಾಡೇಸಾತ್ ಪರಿಣಾಮ ಒಟ್ಟು ಏಳೂವರೆ ವರ್ಷಗಳ ಕಾಲ ಇರುತ್ತದೆ. ಇದೀಗ ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚಾರ ಮಾಡಲಿದೆ.
ಮಾರ್ಚ್ 29ರಂದು ಶನಿ ಮೀನ ರಾಶಿಗೆ ಪ್ರವೇಶಿಸಿದಾಗ, ಮಕರ ರಾಶಿಯವರ ಸಾಡೇಸಾತಿ ಕೊನೆಗೊಳ್ಳುತ್ತದೆ. ಮೇಷ ರಾಶಿಯವರಿಗೆ ಸಾಡೇಸಾತ್‌ನ ಮೊದಲ ಹಂತ ಪ್ರಾರಂಭವಾಗುತ್ತದೆ. ಹಾಗಾದರೆ ಇದು ಯಾವ ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆ ಎಂದು ಈಗ ತಿಳಿಯೋಣ.

ಶನಿ ಸಂಚಾರ ಪ್ರಾರಂಭ
ಜ್ಯೋತಿಷ್ಯದ ಪ್ರಕಾರ ಮಾರ್ಚ್ 29 ಒಂದು ಮಹತ್ವದ ದಿನ. ಏಕೆಂದರೆ ಈ ದಿನದಂದು ವರ್ಷದ ಅತಿದೊಡ್ಡ ರಾಶಿಯ ಬದಲಾವಣೆ ಸಂಭವಿಸುತ್ತದೆ. ಶನಿಯು ಕುಂಭ ರಾಶಿಯಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಿ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಅಲ್ಲಿ ಅದು ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತದೆ.
ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ಕಟ್ಟುನಿಟ್ಟಾದ ಮತ್ತು ನ್ಯಾಯಯುತ ಗ್ರಹವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿಯು ಅನುಕೂಲಕರವಾಗಿಲ್ಲದಿದ್ದರೆ ಅಥವ ಪ್ರಬಲವಾಗಿಲ್ಲದೇ ಇದ್ದರೆ, ಅವನು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗಬಹುದು. ಹಾಗೆಯೇ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಸಾಡೇಸಾತ್ ಮತ್ತು ಧೈಯ ನೀಡುವ ಏಕೈಕ ಗ್ರಹವಾಗಿದೆ.
ಆದಾಗ್ಯೂ ಶನಿಯು ಯಾವಾಗಲೂ ಕೆಟ್ಟ ಫಲಿತಾಂಶಗಳನ್ನು ನೀಡುವುದಿಲ್ಲ. ಶನಿಯು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ, ಅದು ವ್ಯಕ್ತಿಯನ್ನು ಬಡತನದಿಂದ ಮೇಲೆತ್ತಿ ರಾಜನನ್ನಾಗಿ ಮಾಡುತ್ತದೆ. ಶನಿಯು ಒಬ್ಬರ ಕರ್ಮಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುವ ಗ್ರಹವಾಗಿದೆ. ಹೀಗಾಗಿ ಇದನ್ನು ನ್ಯಾಯಾಧೀಶ ಎಂದು ಕೂಡ ಕರೆಯಲಾಗುತ್ತದೆ. ಮಕರ ಮತ್ತು ಕುಂಭ ರಾಶಿಯವರಿಗೆ ಶನಿ ಅಧಿಪತಿಯಾಗಿದೆ. ಶನಿಯನ್ನು ತುಲಾ ರಾಶಿಯಲ್ಲಿ ಶ್ರೇಷ್ಠ ಮತ್ತು ಮೇಷ ರಾಶಿಯಲ್ಲಿ ದುರ್ಬಲ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಗಳ ಬಗ್ಗೆ ಈಗ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಶನಿಯು ಹತ್ತನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು, ಈಗ ಮೇಷ ರಾಶಿಯ ಹನ್ನೆರಡನೇ ಮನೆಯಲ್ಲಿ ಶನಿಯ ಸಂಚಾರ ಸಂಭವಿಸಲಿದೆ. ಈ ಶನಿಯ ಸಂಚಾರ ಮೇಷ ರಾಶಿಯವರಿಗೆ ಕೆಲವು ಸಮಸ್ಯೆಗಳನ್ನು ತರಬಹುದು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗಬಹುದು. ಇದು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಶಾಂತವಾಗಿ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿ.

ಮಕರ ರಾಶಿ
ಮಕರ ರಾಶಿಯವರಿಗೆ ಶನಿಯು ಮೊದಲ ಮತ್ತು ಎರಡನೇ ಮನೆಯ ಅಧಿಪತಿಯಾಗಿದ್ದು, ಶನಿಯ ಸಂಚಾರ ನಿಮ್ಮ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯಲ್ಲಿ ನೆಲೆಸಿರುವ ಶನಿಯ ದೃಷ್ಟಿ ನಿಮ್ಮ ಐದನೇ, ಒಂಬತ್ತನೇ ಮತ್ತು ಹನ್ನೆರಡನೇ ಮನೆಗಳ ಮೇಲೆ ಇರುತ್ತದೆ. ಮಕರ ರಾಶಿಯವರಿಗೆ ಈ ಶನಿಯ ಸಂಚಾರ ತುಂಬಾ ಶುಭವಾಗಿರುತ್ತದೆ. ನೀವು ಸಾಡೇ ಸಾತಿಯಿಂದ ಮುಕ್ತರಾಗಲಿದ್ದೀರಿ, ಇದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ.

ಮೀನ ರಾಶಿ
ಮೀನ ರಾಶಿಯವರಿಗೆ ಶನಿಯು 11 ಮತ್ತು 12 ನೇ ಮನೆಯ ಅಧಿಪತಿ. ಈಗ ಶನಿಯು ಮೀನ ರಾಶಿಯ ಮೂಲಕ ನೇರವಾಗಿ ಸಾಗಲಿದ್ದಾನೆ. ಶನಿಯು ನಿಮ್ಮ ಲಗ್ನರಾಶಿಗೆ ಪ್ರವೇಶಿಸಿದಾಗ, ನಿಮ್ಮ ಸಾಡೇಸಾತಿಯ ಮಧ್ಯದ ಹಂತವು ಪ್ರಾರಂಭವಾಗುತ್ತದೆ. ಲಗ್ನದಲ್ಲಿ ಶನಿಯ ಸಂಚಾರ ನಿಮ್ಮ ಜೀವನದಲ್ಲಿ ಕೆಲವು ಸವಾಲುಗಳನ್ನು ತರಬಹುದು. ಈ ಸಮಯದಲ್ಲಿ ಪ್ರಯಾಣ ಮಾಡುವಾಗ ವಿಶೇಷ ಕಾಳಜಿ ವಹಿಸಿ. ಕೆಲಸದ ಸ್ಥಳದಲ್ಲಿ ನಿಮಗೆ ಅಡೆತಡೆಗಳು ಎದುರಾಗಬಹುದು. ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಮೊದಲು ಎಚ್ಚರಿಕೆಯಿಂದ ಯೋಚಿಸಿ ನಂತರ ಮುಂದುವರಿಯಿರಿ.












Click it and Unblock the Notifications