ಕುಂಭ ರಾಶಿಯಲ್ಲಿ ಶನಿ ಸಂಕ್ರಮಣ 2023: ಈ 4 ರಾಶಿಯವರ ಅದೃಷ್ಟ ಹೇಗಿರಲಿದೆ ಗೊತ್ತಾ...?
ಜ್ಯೋತಿಷ್ಯದ ಪ್ರಕಾರ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿ ಅಂದರೆ ಅನೇಕ ಜನರು ಭಯಪಡುತ್ತಾರೆ. ಏಕೆಂದರೆ ಶನಿಯ ಕೋಪ ಜೀವನವನ್ನು ಹದಗೆಡಿಸುತ್ತದೆ. ಸಾಮಾನ್ಯವಾಗಿ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಿದಾಗ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಇರುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ತುಂಬಾ ನಿಧಾನವಾಗಿರುವುದರಿಂದ ಅದು ಯಾವ ರಾಶಿಗೆ ಪ್ರವೇಶಿಸಿದರೂ ಅದು ಎರಡೂವರೆ ವರ್ಷಗಳವರೆಗೆ ಇರುತ್ತದೆ. ಈ ಎರಡೂವರೆ ವರ್ಷಗಳು 4 ರಾಶಿಯವರಿಗೆ ಅದೃಷ್ಟವನ್ನು ನೀಡಲಿವೆ.
ಶನಿಯು ಮಾರ್ಚ್ 29, 2025 ರವರೆಗೆ ಕುಂಭ ರಾಶಿಯಲ್ಲಿರುತ್ತದೆ. 2023ರ ಜನವರಿ 17 ಮಂಗಳವಾರದಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದೆ. ಪ್ರಸ್ತುತ ಅದು ಕುಂಭ ರಾಶಿಯಲ್ಲಿದೆ. ಅದರ ನಂತರ ಅವರು ಮೀನ ರಾಶಿಗೆ ಹೋಗುತ್ತದೆ. ಈ ಸಂಕ್ರಮಣದಿಂದ ಯಾವ ರಾಶಿಯವರು ಅದೃಷ್ಟವಂತರಾಗುತ್ತಾರೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಅವಧಿ ವರದಾನವಿದ್ದಂತೆ. ನೀವು ಸಾಕಷ್ಟು ಹಣದ ಹರಿವನ್ನು ಪಡೆಯುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ಹೆಚ್ಚಿನ ಗೌರವವನ್ನು ಪಡೆಯುತ್ತೀರಿ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯು ತ್ವರಿತವಾಗಿ ಸುಧಾರಿಸುತ್ತದೆ.

ವೃಷಭ ರಾಶಿ
ಈ ಅವಧಿಯಲ್ಲಿ ವೃಷಭ ರಾಶಿಯವರಿಗೆ ಅದೃಷ್ಟ ಅನುಕೂಲಕರವಾಗಿರುತ್ತದೆ. ಇದರರ್ಥ ಈ ಎರಡು ವರ್ಷಗಳಲ್ಲಿ ನೀವು ತುಂಬಾ ಹಣ ಸಂಪಾತಿಸಬಹುದು. ನಿಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ, ನೀವು ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತೀರಿ. ಅದರಲ್ಲೂ ವ್ಯಾಪಾರ ಮಾಡುತ್ತಿದ್ದರೆ ಅದರಿಂದ ಸಾಕಷ್ಟು ಲಾಭ ಸಿಗುತ್ತದೆ.

ಸಿಂಹ ರಾಶಿ
ಈ ಅವಧಿಯು ಸಿಂಹ ರಾಶಿಯವರಿಗೆ ತುಂಬಾ ಪ್ರಿಯವಾಗಿರುತ್ತದೆ ಮತ್ತು ನಿಮಗೆ ಅನುಕೂಲಕರ ಅದೃಷ್ಟವನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿಯೂ ಪ್ರಗತಿಯನ್ನು ಕಾಣುತ್ತೀರಿ.
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ನೀವು ಹೆಸರು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ಅದು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ. ಪ್ರಗತಿ ಮತ್ತು ಯಶಸ್ಸನ್ನು ಸಾಧಿಸಲು ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಸ್ನೇಹಿತರೊಂದಿಗೆ ಆತ್ಮೀಯತೆ ಹೆಚ್ಚುತ್ತದೆ ಮತ್ತು ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಡುತ್ತದೆ.

ತುಲಾ ರಾಶಿ
ನಿಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷ ನೆಲೆಸಲಿದೆ. ಕೆಲಸ ಅಥವಾ ವ್ಯಾಪಾರ ಎರಡರಲ್ಲೂ ನೀವು ಯಶಸ್ವಿಯಾಗುತ್ತೀರಿ. ಈ ಅವಧಿಯಲ್ಲಿ ನಿಮಗೆ ನಿಮ್ಮ ಪೂರ್ವಜರ ಆಸ್ತಿ ಸಿಗುವುದು. ನೀವು ಸಾಕಷ್ಟು ಸಂಪತ್ತನ್ನು ಕೂಡ ಸಂಗ್ರಹಿಸುತ್ತೀರಿ. ಒಟ್ಟಾರೆಯಾಗಿ ಶನಿಯು ನಿಮ್ಮನ್ನು ಆಶೀರ್ವದಿಸುತ್ತದೆ ಮತ್ತು ಸಂತೋಷವಾಗಿರಿಸುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications