ಸ್ತನದ ಆಕಾರ, ಬಣ್ಣ, ರಚನೆ ಆಧಾರದಲ್ಲಿ ಹೆಣ್ಣಿನ ಗುಣ-ಸ್ವಭಾವ

By: ಅನುಜ್ ಶುಕ್ಲಾ
Subscribe to Oneindia Kannada
   ಸ್ತನದ ಆಕಾರ, ಬಣ್ಣ, ರಚನೆ ಆಧಾರದಲ್ಲಿ ಹೆಣ್ಣಿನ ಗುಣ-ಸ್ವಭಾವ | Oneindia Kannada

   ಈ ದಿನದ ಸಾಮುದ್ರಿಕಾ ಶಾಸ್ತ್ರದ ಲೇಖನ ಮಹಿಳೆಯರ ಸೌಂದರ್ಯ ಪ್ರತೀಕ ಸ್ತನದ ಆಕಾರದ ಆಧಾರದಲ್ಲಿ ಗುಣ-ಸ್ವಭಾವವನ್ನು ತಿಳಿಸಿಕೊಡುವಂಥದ್ದು. ಅಶ್ಲೀಲದ ಸೋಂಕಿಲ್ಲದೆ ಜ್ಯೋತಿಷ್ಯ ಶಾಸ್ತ್ರವನ್ನು ನಿಮ್ಮ ಗಮನಕ್ಕೆ ತರುವುದು ಈ ಲೇಖನದ ಉದ್ದೇಶ ಎಂಬುದನ್ನು ಆರಂಭದಲ್ಲೇ ಗಮನಕ್ಕೆ ತರುತ್ತಿದ್ದೇನೆ.

   ಸಾಮುದ್ರಿಕಾ ಶಾಸ್ತ್ರದಲ್ಲಿ ಹೆಣ್ಣಿನ ಭುಜ ತಿಳಿಸುವ ಗುಣ-ನಡತೆ-ಭವಿಷ್ಯ

   ವೈದ್ಯರೊಬ್ಬರು ತಮ್ಮ ರೋಗಿಗೆ ಚಿಕಿತ್ಸೆ ನೀಡುವ ವೇಳೆಯಲ್ಲಿ ಹೇಗೆ ತಾವು ಮಾಡುತ್ತಿರುವುದು ಸೇವೆ ಹಾಗೂ ಈ ವೃತ್ತಿಯ ಕರ್ತವ್ಯವನ್ನಷ್ಟೇ ಮಾಡುತ್ತಿರುವುದಾಗಿ ವರ್ತಿಸುತ್ತಾರೋ ಅದೇ ರೀತಿ ಈ ಲೇಖನದಲ್ಲಿ ಶಾಸ್ತ್ರ ಸಮ್ಮತವಾಗಿ ಯಾವ ಸಂಗತಿಯನ್ನು ತಿಳಿಸಲಾಗಿದೆಯೋ ಅದನ್ನೇ ನಿಮಗೆ ತಿಳಿಸುತ್ತಿದ್ದೇನೆ.

   ತುಟಿ ಬಿಟ್ಟುಕೊಡುವ ಗುಟ್ಟು, ಇದು ಹೆಣ್ಣುಮಕ್ಕಳ ಆಂತರ್ಯ

   ಸ್ತನದ ಗಾತ್ರ, ಅಳತೆ, ಆಕಾರ, ಬಣ್ಣ ಇತರ ಸಂಗತಿಗಳನ್ನು ಆಧಾರವಾಗಿರಿಸಿಕೊಂಡು ಮಹಿಳೆಯರ ಗುಣ-ಸ್ವಭಾವ-ಯಶಸ್ಸು ಸೇರಿದಂತೆ ಇತರ ವಿಚಾರಗಳನ್ನು ತಿಳಿಯಬಹುದು. ಆದರೆ ಇಂದಿನ ಲೇಖನದ ವಿಚಾರ ಸೂಕ್ಷ್ಮವಾಗಿರುವುದರಿಂದ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಸಾಮುದ್ರಿಕಾ ಶಾಸ್ತ್ರವಾಗಿಯಷ್ಟೇ ಪರಿಗಣಿಸಬೇಕು. ಯಾರನ್ನೂ ಅವಮಾನಿಸುವ ಅಥವಾ ಬೇಸರಪಡಿಸುವ ಉದ್ದೇಶ ನಮ್ಮದಲ್ಲ.

   ಮಹಿಳೆಯರ ತಲೆಕೂದಲು ನೋಡಿ, ಭವಿಷ್ಯ ತಿಳಿದುಕೊಳ್ಳಿ

   ಇನ್ನು ಮುಂದೆ ಸಾಮುದ್ರಿಕಾ ಶಾಸ್ತ್ರದ ಅನ್ವಯ ತಿಳಿಸುವ ಸಂಗತಿಗಳನ್ನು ಮುಂದೆ ಓದಿ.

   ಸ್ತನದ ಮೇಲ್ಭಾಗದಲ್ಲಿ ಕೂದಲಿದ್ದರೆ

   ಸ್ತನದ ಮೇಲ್ಭಾಗದಲ್ಲಿ ಕೂದಲಿದ್ದರೆ

   ಸ್ತನದ ಮೇಲ್ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕೂದಲಿದ್ದರೆ ಹಲವು ಪುರುಷರಿಂದ ಶೋಷಣೆಗೆ ಒಳಗಾಗುತ್ತಾರೆ. ತಮ್ಮ ಲಾಭದ ಸಲುವಾಗಿ ಕುಟುಂಬದವರಿಗೆ ಹಾಗೂ ಪತಿಗೆ ಸುಳ್ಳು ಹೇಳಲು ಹೇಸುವುದಿಲ್ಲ. ತೋರಿಕೆಯ ಮಾತು- ನಡವಳಿಕೆಯಲ್ಲಿ ನಂಬಿಕೆ ಹೆಚ್ಚಿರುವ ಇಂಥ ಸ್ತ್ರೀಯರು ತುಂಬ ಸುಳ್ಳು ಹೇಳುತ್ತಾರೆ.

   ಎತ್ತರದ ಸ್ತನವಿದ್ದರೆ

   ಎತ್ತರದ ಸ್ತನವಿದ್ದರೆ

   ಎತ್ತರ ಹಾಗೂ ಬಲವಾದ ಸ್ತನವಿದ್ದರೆ ಹಲವು ಅನುಕೂಲಗಳನ್ನು ಅನುಭವಿಸುತ್ತಾರೆ. ಅಗಾಧ ಹಣ ಹಾಗೂ ಸಂಪತ್ತು ಹೊಂದಿರುತ್ತಾರೆ. ಪತಿಯ ಸಂತೋಷಕ್ಕೆ ಕಾರಣರಾಗುವ ಈ ಸ್ತ್ರೀಯರು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.

   ಕೆಳ ಹಾಗೂ ಜೋತಾಡುವ ಸ್ತನವಿದ್ದರೆ

   ಕೆಳ ಹಾಗೂ ಜೋತಾಡುವ ಸ್ತನವಿದ್ದರೆ

   ಯಾವ ಮಹಿಳೆಗೆ ಜೋತಾಡುವ ಹಾಗೂ ಕೆಳಕ್ಕೆ ಬಾಗಿದಂತೆ ಸ್ತನವಿರುತ್ತದೋ ಅಂಥವರು ಶುಷ್ಕ ಮನೋಭಾವ ಹೊಂದಿರುತ್ತಾರೆ. ತಮ್ಮ ಪತಿಯೊಂದಿಗೆ ಸದಾ ಜಗಳವಾಡುತ್ತಾರೆ. ಈ ಮಹಿಳೆಯರಿಗೆ ಸ್ವತಂತ್ರ ಸಿದ್ಧಾಂತಗಳಿರುತ್ತವೆ.

   ಅಗಲವಾದ ಸ್ತನವಿದ್ದರೆ

   ಅಗಲವಾದ ಸ್ತನವಿದ್ದರೆ

   ಅಗಲವಾದ ಸ್ತನವಿರುವ ಮಹಿಳೆಯರು ಧೈರ್ಯಶಾಲಿಗಳಾಗಿರುತ್ತಾರೆ. ಜತೆಗೆ ಅಹಂಕಾರ ಮತ್ತು ಕೋಪದ ಸ್ವಭಾವವಿರುತ್ತದೆ. ಕುಟುಂಬದಲ್ಲಿ ತಮ್ಮ ಮಾತು ನಡೆಯುವಂತೆ ಹಾಗೂ ತಮ್ಮ ಕೆಲಸ ನಡೆಯುವಂತೆ ಪ್ರಯತ್ನಿಸುತ್ತಾರೆ.

   ಕೆಂಬಣ್ಣದ ಸ್ತನವಿದ್ದರೆ

   ಕೆಂಬಣ್ಣದ ಸ್ತನವಿದ್ದರೆ

   ಕೆಂಪು ಅಥವಾ ಕಪ್ಪು ಬಣ್ಣದಲ್ಲಿ ಸ್ತನವಿದ್ದರೆ ಸುಂದರ ಹಾಗೂ ಹೆಚ್ಚಿನ ಸಂಖ್ಯೆಯ ಗಂಡುಮಕ್ಕಳಿಗೆ ಜನ್ಮ ನೀಡುತ್ತಾರೆ. ಅವರ ನಡವಳಿಕೆ ಮೂಲಕ ಎಲ್ಲರನ್ನೂ ಸಂತೋಷಪಡಿಸುತ್ತಾರೆ.

   ಮುಂಭಾಗಕ್ಕೆ ಬಾಗಿದಂಥ ಸ್ತನವಿದರೆ

   ಮುಂಭಾಗಕ್ಕೆ ಬಾಗಿದಂಥ ಸ್ತನವಿದರೆ

   ಮುಂಭಾಗಕ್ಕೆ ಬಾಗಿದಂತಹ ಸ್ತನ ಇರುವವರಲ್ಲಿ ಸೋದರಿಗೆ ಇರುವಂಥ ಮನಸ್ಸಿರುತ್ತದೆ. ಈ ಮಹಿಳೆಯರು ತಮ್ಮ ಪತಿಗೆ ಬೆನ್ನೆಲುಬಾಗಿ ಇರುತ್ತಾರೆ.

   ಒಳಭಾಗಕ್ಕೆ ಅದುಮಿದಂಥ ಸ್ತನವಿದ್ದರೆ

   ಒಳಭಾಗಕ್ಕೆ ಅದುಮಿದಂಥ ಸ್ತನವಿದ್ದರೆ

   ಒಳಭಾಗಕ್ಕೆ ಅದುಮಿದಂಥ ಸ್ತನವಿದ್ದರೆ ಅಂತಹವರು ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೆಚ್ಚು ಮಾತನಾಡುವವರಲ್ಲ. ಹಣಕಾಸಿನ ವಿಚಾರದಲ್ಲಿ ಬಹಳ ಬುದ್ಧಿವಂತೆ ಆಗಿರುತ್ತಾರೆ. ತಮ್ಮ ವೃತ್ತಿ ಜೀವನದ ಬಗ್ಗೆ ಕೂಡ ಹೆಚ್ಚು ಎಚ್ಚರಿಕೆಯಿಂದ ಇರುತ್ತಾರೆ.

   ಎರಡು ಸ್ತನ ಸಮವಾಗಿದ್ದರೆ

   ಎರಡು ಸ್ತನ ಸಮವಾಗಿದ್ದರೆ

   ಎರಡು ಸ್ತನ ಸಮವಾಗಿರುವ ಸ್ತ್ರೀಯರು ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಇದರ ಜತೆಗೆ ತಮ್ಮ ಎಲ್ಲ ಕಾರ್ಯದಲ್ಲಿ ಸಕಾರಾತ್ಮಕ ಆಲೋಚನೆ ಹೊಂದಿರುತ್ತಾರೆ.

   ಒಂದು ಸ್ತನ ಚಿಕ್ಕದಾಗಿದ್ದರೆ

   ಒಂದು ಸ್ತನ ಚಿಕ್ಕದಾಗಿದ್ದರೆ

   ಒಂದು ಸ್ತನ ಚಿಕ್ಕದಿರುವ ಮಹಿಳೆಯರಿಗೆ ನಕಾರಾತ್ಮಕ ಧೋರಣೆ ಇರುತ್ತದೆ. ಬಾಲ್ಯದಲ್ಲಿ ಬಡತನ ಅನುಭವಿಸಬೇಕಾಗುತ್ತದೆ. ಈ ಮಹಿಳೆಯರಿಗೆ ಆಯುಧಗಳಿಂದ ಅಪಾಯವಾಗುತ್ತದೆ.

   ಬಿಗಿಯಾದ ಸ್ತನವಿದ್ದರೆ

   ಬಿಗಿಯಾದ ಸ್ತನವಿದ್ದರೆ

   ದೃಢ ಹಾಗೂ ಬಿಗಿಯಾದ ಸ್ತನವಿರುವ ಮಹಿಳೆಯರ ಆಲೋಚನೆ ಹಾಗೂ ಬುದ್ಧಿ ತುಂಬ ಚುರುಕಾಗಿರುತ್ತದೆ. ಈ ಮಹಿಳೆಯರು ಉತ್ತಮ ಪತ್ನಿ ಎನಿಸಿಕೊಳ್ಳುತ್ತಾರೆ. ತೀಕ್ಷ್ಣಮತಿಗಳಾಗಿರುತ್ತಾರೆ.

   ದುಂಡನೆಯ ಸ್ತನವಿದ್ದರೆ

   ದುಂಡನೆಯ ಸ್ತನವಿದ್ದರೆ

   ದುಂಡನೆಯ ಸ್ತನವೊರುವ ಮಹಿಳೆಯರು ಎಲ್ಲ ರೀತಿಯಿಂದಲೂ ಬುದ್ಧಿವಂತೆಯರಾಗಿರುತ್ಟಾರೆ. ತಾವು ಹೇಳಬೇಕಾದ ವಿಚಾರವನ್ನು ತುಂಬ ಸ್ಪಷ್ಟವಾಗಿ ಹೇಳಬಲ್ಲವರಾಗಿರುತ್ತಾರೆ. ತುಂಬ ಕ್ರಿಯಾತ್ಮಕವಾಗಿಯೂ ಇರುತ್ತಾರೆ.

   ತ್ರಿಕೋನಾಕಾರದ ಸ್ತನವಿದ್ದರೆ

   ತ್ರಿಕೋನಾಕಾರದ ಸ್ತನವಿದ್ದರೆ

   ತ್ರಿಕೋನಾಕಾರದ ಮೊಲೆ ಇರುವ ಸ್ತ್ರೀಯರು ಸಮಾಜದಲ್ಲಿ ಬಹಳ ಹೆಸರು ಮಾಡುತ್ತಾರೆ. ಸ್ವಚ್ಛಂದ ಮನೋಭಾವದವರಾಗಿರುತ್ತಾರೆ. ಒಬ್ಬರಿಗಿಂತ ಹೆಚ್ಚು ಗೆಳೆಯರಿರುತ್ತಾರೆ.

   ಮೇಲ್ಮುಖವಾದ- ಚೂಪಾದ ಸ್ತನವಿದ್ದರೆ

   ಮೇಲ್ಮುಖವಾದ- ಚೂಪಾದ ಸ್ತನವಿದ್ದರೆ

   ಮೇಲ್ಮುಖವಾದ- ಚೂಪಾದ ಸ್ತನವಿರುವ ಸ್ತ್ರೀಯರು ಪುರುಷರ ಮೇಲೆ ಆಧಿಪತ್ಯ ಸಾಧಿಸಲು ಯತ್ನಿಸುತ್ತಾರೆ. ಅವರ ಮಿದುಳು ತುಂಬಾ ಚುರುಕಾಗಿ ಕೆಲಸ ಮಾಡುತ್ತದೆ, ಹೆಚ್ಚಿನ ಸ್ನೇಹಿತರಿರುತ್ತಾರೆ.

   ದಪ್ಪ ತೊಟ್ಟಿನ ಸ್ತನವಿದ್ದರೆ

   ದಪ್ಪ ತೊಟ್ಟಿನ ಸ್ತನವಿದ್ದರೆ

   ಸ್ತನದ ತೊಟ್ಟು ದಪ್ಪವಿರುವ ಮಹಿಳೆಯರ ಹೃದಯ ಭಾವನೆಗಳು ಮೃದುವಾಗಿರುತ್ತವೆ. ಇವರು ಇತರ ಮಹಿಳೆಯರ ಮೇಲೆ ಪ್ರಾಬಲ್ಯ ಸ್ಥಾಪಿಸುತ್ತಾರೆ.

   ಸ್ತನದ ತೊಟ್ಟು ಸಣ್ಣದಿದ್ದರೆ

   ಸ್ತನದ ತೊಟ್ಟು ಸಣ್ಣದಿದ್ದರೆ

   ಸ್ತನದ ತೊಟ್ಟು ಸಣ್ಣದಿರುವ ಮಹಿಳೆಯರು ತಮ್ಮ ಕೆಲಸವನ್ನು ಚೆನ್ನಾಗಿ ಯೋಚಿಸಿ ಮಾಡುವವರಾಗಿರುತ್ತಾರೆ. ಮುಂದಿನ ಹಂತದಲ್ಲಿ ಏನಾಗಬಹುದು ಎಂಬುದನ್ನು ಊಹಿಸಬಲ್ಲವರಾಗಿರುತ್ತಾರೆ. ಯಾರ ವಿರುದ್ಧವಾದರೂ ತಂತ್ರ ರೂಪಿಸುವಲ್ಲಿ ನಿಷ್ಣಾತರಾಗಿರುತ್ತಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   In the Samudrika Shastra of Astrology, today we will discuss about breast of women. Read how breast define woman's personality.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ