Dhanu Rashi Bhavishya 2025: ಧನು ರಾಶಿ ಹೊಸ ವರ್ಷ ಭವಿಷ್ಯ: ವಿದ್ಯೆಯಲ್ಲಿ ವೈಭೋಗ- ವ್ಯವಹಾರದಲ್ಲಿ ಧನಾಗಮನ
2025ರಲ್ಲಿ ಧನು ರಾಶಿಯವರ ಆರ್ಥಿಕ, ಪ್ರೇಮ, ವಿವಾಹ, ಹಣಕಾಸಿನ ಜೀವನ ಹೇಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿಯಬಹುದು. ಹಾಗಾದರೆ ಹೊಸ ವರ್ಷದಲ್ಲಿ ಧನು ರಾಶಿಯವರ ಜಾತಕ ಹೇಗಿದೆ? ಅವರ ವೃತ್ತಿ ರಂಗ, ಆರೋಗ್ಯ, ಶಿಕ್ಷಣ, ವ್ಯಾಪಾರ ವ್ಯವಹಾರ ಹೇಗಿರಲಿದೆ ಎಂದು ಈಗ ತಿಳಿಯೋಣ.
ಧನು ರಾಶಿಯವರ ಮೂರನೇ ಮನೆಯಲ್ಲಿ ಶನಿ ಹಾಗೂ ಆರನೇ ಮನೆಯಲ್ಲಿ ಗುರು ಇದೆ. 2025 ಮೇ ತಿಂಗಳವರೆಗೂ ಗುರುವಿನ ಸಂಚಾರ ಷಷ್ಟದಲ್ಲಿ ಇರುತ್ತದೆ. ರಾಶ್ಯಾಧಿಪತಿಯಾಗಿ ಆರನೇ ಮನೆಯ ರೋಗ ಸ್ಥಾನದಲ್ಲಿ ಇರುವುದು ಸ್ವಲ್ಪ ಪೀಡನೆ ಹೆಚ್ಚು ಎಂದು ಹೇಳಬಹುದು. ಆದರೆ ಶನಿಯಿಂದ ತೊಂದರೆ ಇಲ್ಲ.

ಧನು ರಾಶಿ 2025 ಶೈಕ್ಷಣಿಕ ಜೀವನ
2025ನೇ ವರ್ಷದಲ್ಲಿ ಧನು ರಾಶಿಯವರಿಗೆ ಶೈಕ್ಷಣಿಕವಾಗಿ ಶುಭ ಫಲ ಹೆಚ್ಚಾಗಲಿದೆ. 2025ರಲ್ಲಿ ಶನಿ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಈ ಮೂಲಕ ಧನು ರಾಶಿಯವರ ವಿದ್ಯಾಸ್ಥಾನದ ಅಧಿಪತಿ ಶನಿಯು ಉತ್ತಮ ಶಿಕ್ಷಣ ಸ್ಥಾನಕ್ಕೆ ಹೋಗುವುದರಿಂದ ವಿದ್ಯೆಯಲ್ಲಿ ವೈಭೋಗವನ್ನು ನೀವು ನೋಡಬಹುದು. ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಇದು ಬಹಳ ಸಕಾಲವಾಗಿರುತ್ತದೆ.
ನಾವು ಬಡವರು ವಿದೇಶಕ್ಕೆ ಹೋಗಿ ಅಭ್ಯಾಸ ಮಾಡಲು ಆಗಲ್ಲ ಅನ್ನೋರಿಗೂ ಕೂಡ ಶನಿ ದೇವ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅತ್ಯುತ್ತಮವಾದ ಸಮಯ ಕೂಡ ಇದಾಗಿರುತ್ತದೆ.
ಧನು ರಾಶಿ 2025 ವ್ಯಾಪಾರ ವ್ಯವಹಾರ
ಇನ್ನೂ ಧನು ರಾಶಿಯವರ ವ್ಯಾಪಾರ ವ್ಯವಹಾರ ಮುಂದಿನ ವರ್ಷ ಹೇಗಿರಲಿದೆ ಎಂದು ನೋಡುವುದಾದರೆ- ರಾಹು ನಿಮ್ಮ ಮೂರನೇ ಮನೆಗೆ ಬಂದು ತುಂಬಾ ಉತ್ತಮ ಫಲ ನೀಡಲಿದ್ದಾನೆ. ವ್ಯಾಪಾರ ವ್ಯವಹಾರ ಬಹಳ ಅನುಕೂಲವನ್ನು ತಂದುಕೊಡುತ್ತಾನೆ. ಭಾಂದವ್ಯ, ಸಂಪತ್ತು ಎಲ್ಲವೂ ಸಿಗುತ್ತದೆ. ಗುರುವಿನ ಪ್ರಭಾವ ನಿಮ್ಮ ಜನ್ಮ ರಾಶಿಯಲ್ಲಿ ಇರುವುದರಿಂದ ಸಾಕಷ್ಟು ಅನುಕೂಲ ತಂದು ಕೊಡುತ್ತದೆ.

ಹೀಗಾಗಿ ಶನಿಯ ದೃಷ್ಟಿ ವ್ಯಾಪಾರ, ಕರ್ಮ ಸ್ಥಾನದಲ್ಲಿ ಬೀಳುವುದರಿಂದ ಜಾಗರೂಕರಾಗಿರಿ. ಉದಾಸೀನ ಮಾಡಬೇಡಿ, ಬೇರೆಯವರ ವಿಚಾರಗಳಿಗೆ ಕೈ ಹಾಕಬೇಡಿ. ಎಲ್ಲಾ ವಿಚಾರದಲ್ಲಿ ಬೇರೆಯವರಿಗೆ ಅನುಕೂಲತೆ ಮಾಡುವುದು ಬೇಡ. ರಾಹು ನಿಮಗೆ ತುಂಬಾ ಅನುಕೂಲವಾದ ಪರಿಸ್ಥಿತಿಯನ್ನೇ ತಂದು ಕೊಡುತ್ತಾನೆ. ಹೊಸ ಕೆಲಸ ಶುರು ಮಾಡಲು ಹೊಸ ವರ್ಷ ತುಂಬಾ ಅನುಕೂಲವಾಗಿದೆ.
ಧನು ರಾಶಿ 2025 ಹಣಕಾಸಿನ ಜೀವನ
ಧನು ರಾಶಿಯವರ ಆರ್ಥಿಕ ಪರಿಸ್ಥಿತಿ ಮುಂದಿನ ವರ್ಷ ಸುಧಾರಿಸುತ್ತದೆ. ಶನಿ ಬಲ ಕಳೆದುಕೊಂಡರೂ ಸಹ ಹನಕಾಶಿನ ವಿಚಾರದಲ್ಲಿ ಗುರುವಿನ ಬಲ ನಿಮಗೆ ಸಂಪೂರ್ಣವಾಗಿ ಸಿಗಲಿದೆ. ದತ್ತಾತ್ರೇಯ ಸ್ವಾಮಿ ದರ್ಶನ ಮಾಡಿಕೊಂಡು ಬಂದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಶನಿ ದೇವಸ್ಥಾನಕ್ಕೆ ಹೋಗಿ ಭೇಟಿ ಮಾಡಿ ಬರುವುದರಿಂದ ನಿಮಗೆ ತುಂಬಾ ಅನುಕೂಲಕರ ಫಲಗಳು ಸಿಗಲಿವೆ.
ಧನು ರಾಶಿ 2025 ಪ್ರೇಮ ಜೀವನ
ಈ ವರ್ಷ ಮದುವೆಗಳಿಗೆ ಶುಭ ಕಾರ್ಯಗಳಿಗೆ ತುಂಬಾ ಒಳ್ಳೆಯ ಸಮಯವಿದೆ. ತುಂಬಾ ವರ್ಷಗಳಿಂದ ಮದುವೆ ಆಗುತ್ತಿಲ್ಲ ಎನ್ನುವ ಧನು ರಾಶಿಯವರಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬರಲಿದೆ. ವಿಶೇಷವಾಗಿ ಮದುವೆಗೆ ಸಂಬಂಧಿಸಿದ ಅಡೆತಡೆಗಳು ದೂರವಾಗುತ್ತವೆ. ಪ್ರೇಮ ವಿವಾಹಗಳಿಗೂ ಸಹ ಈ ವರ್ಷ ತುಂಬಾ ಶುಭಕರವಾಗಿದೆ. ಅಲ್ಲದೆ ಪ್ರೇಮಿಗಳು ಈ ವರ್ಷ ಮನೆಯವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ವೈವಾಹಿಕ ಜೀವನದ ಏಳುಬೀಳು ಸಹ ದೂರವಾಗಿ ಒಂದಾಗಿ ಸಂಸಾರ ಮಾಡುತ್ತಾರೆ.

ಧನು ರಾಶಿ 2025 ಆಸ್ತಿ ಖರೀದಿ
ಧನು ರಾಶಿಯವರಿಗೆ ಈ ವರ್ಷ ಆಸ್ತಿ ಕೊಂಡುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇದಕ್ಕೆ ಕಾರಣ ಅರ್ಧಾಷ್ಟಮ ಶನಿ ಇರುವುದರಿಂದ ಧನು ರಾಶಿಯವರಿಗೆ ಯಾವುದೇ ಆಸ್ತಿ ಖರೀದಿ ಸಾಧ್ಯವಾಗುವುದಿಲ್ಲ. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಸಾಕಷ್ಟು ತೊಂದರೆಗಳು ಆಗುತ್ತವೆ. ಈ ವೇಳೆ ಕಾನೂನಿನ ಸಲಹೆಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಭೂ ವ್ಯವಹಾರದಲ್ಲಿ ಜಾಗೃತವಾಗಿರಿ. ಯಾಕೆಂದರೆ ದಾರಿ ತಪ್ಪಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಧನು ರಾಶಿ 2025 ಆರೋಗ್ಯ ಭವಿಷ್ಯ
ಇನ್ನೂ ಮುಂದಿನ ವರ್ಷ ಧನು ರಾಶಿಯವರ ಆರೋಗ್ಯ ಕೆಲ ತಿಂಗಳಲ್ಲಿ ಸ್ವಲ್ಪ ಹದಗೆಡಬಹುದು. ಮಾರ್ಚ್‌ನಲ್ಲಿ ಶನಿ ನಿಮ್ಮ ನಾಲ್ಕನೇ ಮನೆಗೆ ಹೋಗಿ ಅರ್ಧಾಷ್ಟಮ ಶನಿಯಾಗುತ್ತದೆ. ಮಾರ್ಚ್, ಏಪ್ರಿಲ್, ಮೇ ಈ ಮೂರು ತಿಂಗಳು ಗುರು ಬದಲಾವಣೆಯಾಗುವವರೆಗೂ ಧನು ರಾಶಿಯವರಿಗೆ ವಿಪರೀತ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆರೋಗ್ಯದಲ್ಲಿ ಏರುಪೇರು ಆಗಲಿದೆ. ಕುಟುಂಬದಲ್ಲಿ ಕಿರಿಕಿರಿ ಅಧಿಕವಾಗುತ್ತದೆ. ಮಕ್ಕಳೊಂದಿಗೆ ಮನಸ್ತಾಪಗಳು ಅಧಿಕವಾಗುತ್ತವೆ. ಅಭಿವೃದ್ದಿ ಆಗುವುದಿಲ್ಲ. ಕೈಗೆ ಬಂದ ಹಣವನ್ನು ಅನುಭವಿಸಲು ಆಗೋದಿಲ್ಲ. ಮೂರು ತಿಂಗಳು ತುಂಬಾ ಎಚ್ಚರವಾಗಿರಬೇಕು. ಗುರು ಬದಲಾದ ಬಳಿಕ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.
ಪರಿಹಾರಗಳು:-
*'ಓಂ ಶ್ರೀಂ ವಾರಾಹಿ ದೇವೈ ನಮ:' ಈ ಮಂತ್ರವನ್ನು ಪ್ರತಿನಿತ್ಯ ಬೆಳಗಿನ ಜಾವ 108 ಬಾರಿ ಪಠಣ ಮಾಡಿ
*ಐದು ಮಾವಿನ ಗಿಡ ನೆಟ್ಟು ಪೋಷಣೆ ಮಾಡಿ
*ಬೆಳ್ಳಿಯ ಆಭರಣ ಧರಿಸಿ( ಉಂಗುರ, ಕಿವಿ ಓಲೆ ಅಥವಾ ಕೈ ಕಡಗ, ಸರ)
*ಗುರುವಾರದ ದಿನ ದತ್ತಾತ್ರೇಯ ಆಲಯಕ್ಕೆ ಹೋಗಿ ಬರುವುದು ಕೂಡ ಉತ್ತಮ ಫಲವನ್ನು ನೀಡುತ್ತದೆ












Click it and Unblock the Notifications