Ugadi Horoscope 2025: ಧನು ರಾಶಿಯ ಯುಗಾದಿ ಜಾತಕ- ನಿಮ್ಮ ಪಾಲಿಗೆ ಭಾಗ್ಯದ ವರ್ಷ

ಮಾರ್ಚ್ 30ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತೀಯರ ಹೊಸ ವರ್ಷ ಯುಗಾದಿಯ ದಿನ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಅಂದಹಾಗೆ ಹೊಸ ವರ್ಷ ಆರ್ಥಿಕ, ಸಾಮಾಜಿಕ, ಶಿಕ್ಷಣ, ಆರೋಗ್ಯ, ಆಸ್ತಿ, ವೃತ್ತಿ ಜೀವನ ಹೇಗಿರಲಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಾದರೆ ಈಗ ಧನು ರಾಶಿ ಯುಗಾದಿ ಜಾತಕವನ್ನು ತಿಳಿಯೋಣ.

ಈಗಾಗಲೇ ಮೇಷದಿಂದ ವೃಶ್ಚಿಕ ರಾಶಿಯವರೆಗೆ ಯುಗಾದಿ ಭವಿಷ್ಯವನ್ನು ತಿಳಿದುಕೊಂಡಿದ್ದೇವೆ. ಇದೀಗ ಧನು ರಾಶಿಯವರ ಯುಗಾದಿ ಭವಿಷ್ಯವನ್ನು ತಿಳಿಯೋಣ. ಪ್ರತಿಯೊಂದು ರಾಶಿಯ ಜಾತಕ ತಿಳಿಯಲು ಗ್ರಹಗತಿಗಳ ಸ್ಥಾನ ತುಂಬಾ ಮುಖ್ಯ. ವಿಶೇಷವಾಗಿ ಶನಿ, ಗುರು, ರಾಹು, ಕೇತುಗಳ ಸ್ಥಾನ ತಿಳಿಯುವುದು ಮುಖ್ಯವಾಗಿದೆ.

Sagittarius ugadi horoscope 2025 dhanu rashi bhavishya astrology predictions kannada

ಗ್ರಹಗಳ ಸ್ಥಾನಪಲ್ಲಟ

ಶನಿ ಇದೇ ಮಾರ್ಚ್ 30ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದೆ. ಗುರು ವೃಷಭದಿಂದ ಮಿಥುನ ರಾಶಿಗೆ ಸಂಚಾರ ಮಾಡಲಿದೆ. ಜೊತೆಗೆ ರಾಹು ಕೇತುಗಳು ಮೇ ತಿಂಗಳಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಈ ಗ್ರಹಗಳ ಸ್ಥಾನ ಧನು ರಾಶಿಯವರಿಗೆ ಯಾವ ಫಲ ನೀಡಲಿವೆ ಎಂದು ಈಗ ತಿಳಿಯೋಣ.

2025ರ ಯುಗಾದಿ ವರ್ಷದಲ್ಲಿ ಗುರು ಗ್ರಹ ಧನು ರಾಶಿಯ ಐದನೇ ಮನೆಯಲ್ಲಿ ಸಂಚರಿಸುತ್ತಿದೆ. ಶನಿ ಮೂರನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ರಾಹುವಿನ ಸಂಚಾರ ಐದನೇ ಮನೆಯಲ್ಲಿದೆ. ಈ ಗ್ರಹಗಳ ಸಂಚಾರದಿಂದಾಗಿ, ಈ ವರ್ಷ ಧನು ರಾಶಿಯವರಿಗೆ ಎಲ್ಲಾ ರೀತಿಯಲ್ಲೂ ಅದ್ಭುತವಾಗಿದೆ. ಧನು ರಾಶಿಯ ಜನರು ಸ್ವಲ್ಪ ಸಮಯದವರೆಗೆ ಶನಿಯಿಂದ ಉಂಟಾಗುವ ಅನೇಕ ಸಮಸ್ಯೆಗಳಿಂದ ಮುಕ್ತರಾಗಿರುತ್ತಾರೆ. ಹಾಗಾದರೆ ಧನು ರಾಶಿಯವರಿಗೆ ವಿಶ್ವವಾಸ ಸಂವತ್ಸರ ಹೇಗಿದೆ ಎಂದು ಈಗ ತಿಳಿಯೋಣ.

Sagittarius ugadi horoscope 2025 dhanu rashi bhavishya astrology predictions kannada

ಧನು ರಾಶಿಯ ಯುಗಾದಿ ಆರ್ಥಿಕ ಭವಿಷ್ಯ

ಈ ವರ್ಷ ಗುರುವಿನ ಕೃಪೆಯಿಂದ ಧನು ರಾಶಿಯವರ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಯುಗಾದಿ ನಂತರ ಉತ್ತಮ ಧನ ಸಂಪಾದನೆ ಮಾಡುವಿರಿ. ಪುಣ್ಯ ಕ್ಷೇತ್ರಗಳ ಪೂಜಾ ಫಲ ಈಡೇರಲಿದೆ. ರಾಜಕೀಯ, ಸಂಘ-ಸಂಸ್ಥೆಯಲ್ಲಿ ಇರುವವರ ಕೀರ್ತಿ ಹೆಚ್ಚಾಗಲಿದೆ. ಸಂದರ್ಭಕ್ಕೆ ಅನುಸಾರವಾಗಿ ಹಣ ಸಂಪಾದನೆ ಮಾಡುವಿರಿ. ಆರ್ಥಿಕ ಜೀವನ ಈ ಯುಗಾದಿಯಲ್ಲಿ ಉತ್ತಮವಾಗಿರುತ್ತದೆ.

ಧನು ರಾಶಿಯ ಯುಗಾದಿ ಕೌಟುಂಬಿಕ ಜಾತಕ

ಧನು ರಾಶಿಯವರ ಕುಟುಂಬ ಜೀವನ ವಿಶ್ವವಾಸ ಸಂವತ್ಸರದಲ್ಲಿ ಉತ್ತಮವಾಗಿರುತ್ತದೆ. ಯುಗಾದಿ ಕಳೆದ ಬಳಿಕ ಸಂಬಂಧಗಳು ಬಲಗೊಳ್ಳುತ್ತವೆ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ. ಯಾವುದೇ ಮನಸ್ತಾಪಗಳು ದೂರವಾಗಲಿವೆ. ಮನೆಗೆ ಅಂಟಿದ ದಾರಿದ್ರ್ಯ ನಿವಾರಣೆಯಾಗುತ್ತದೆ. ಮನೆಯಲ್ಲಿ ಸಕರಾತ್ಮಕ ಶಕ್ತಿ ಎಲ್ಲೆಡೆ ಪಸರಿಸುತ್ತದೆ. ಹೀಗಾಗಿ ನೀವು ಬೇಡ ಅಂದರೆ ಮನೆಗೆ ಧನಲಕ್ಷ್ಮೀಯ ಆಗಮನವಾಗಲಿದೆ.

Sagittarius ugadi horoscope 2025 dhanu rashi bhavishya astrology predictions kannada

ಧನು ರಾಶಿಯ ಯುಗಾದಿ ಶೈಕ್ಷಣಿಕ ಜಾತಕ

ವಿಶ್ವವಾಸ ಸಂವತ್ಸರ ಧನು ರಾಶಿಯ ವಿದ್ಯಾರ್ಥಿಗಳಿಗೆ ಅತ್ಯಾದ್ಭುತವಾಗಿದೆ. ಯಾವುದೇ ಸಣ್ಣ ಪ್ರಯತ್ನಗಳು ದೊಡ್ಡ ಫಲಿತಾಂಶ ನೀಡಲಿವೆ. ನಿಮ್ಮ ಶಿಕ್ಷಣಿಕ ಜೀವನ ಸುಂದರವಾಗಿರುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಹುದು. ತರಬೇತಿ ಅಥವಾ ಕೋರ್ಸ್‌ಗಳಿಗೆ ಸೇರಿಕೊಳ್ಳುವುದು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಜೊತೆಗೆ ಮಕ್ಕಳ ಬುದ್ಧಿಶಕ್ತಿ ಕೂಡ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ.

ಧನು ರಾಶಿಯ ಯುಗಾದಿ ವೃತ್ತಿ ಭವಿಷ್ಯ

2025-26ರ ಧನು ರಾಶಿಯ ಯುಗಾದಿ ವೃತ್ತಿ ಭವಿಷ್ಯ ಚೆನ್ನಾಗಿದೆ. ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ. ರಾಹು ಐದನೇ ಮನೆಯಲ್ಲಿದ್ದರೆ ಮತ್ತು ಕೇತು ಶುಭ ಮನೆಯಲ್ಲಿದೆ. ಇದರಿಂದಾಗಿ ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುವಿರಿ. ಈ ವರ್ಷ ಧನು ರಾಶಿಯು ಉದ್ಯೋಗಿಗಳಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿರುತ್ತದೆ. ಧನು ರಾಶಿಯ ರೈತರಿಗೆ ಈ ವರ್ಷ ಅನುಕೂಲಕರವಾಗಿದೆ. ಧನು ರಾಶಿಯವರಿಗೆ ಸಿನಿಮಾ ಕ್ಷೇತ್ರದಲ್ಲಿ ಅನುಕೂಲಕರ ಫಲಿತಾಂಶಗಳಿವೆ.

ಧನು ರಾಶಿಯ ಯುಗಾದಿ ಆರೋಗ್ಯ ಭವಿಷ್ಯ

ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಇದ್ದರೆ ನಿವಾರಣೆಯಾಗಿ ಆರೋಗ್ಯ ವೃದ್ಧಿಯಾಗಲಿದೆ. ಯುಗಾದಿಯ ನಂತರ ನಿಮ್ಮ ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿಯ ಜೀವನ ನಡೆಸುವಿರಿ. ಆದರೂ ಸಣ್ಣಪುಟ್ಟ ಕಾಯಿಲೆಗಳು ನಿಮ್ಮನ್ನು ಬಾದಿಸಬಹುದು. ಈ ಬಗ್ಗೆ ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ.

Sagittarius ugadi horoscope 2025 dhanu rashi bhavishya astrology predictions kannada

ಧನು ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ

ಧನು ರಾಶಿಯವರಿಗೆ ಈ ಯುಗಾದಿ ಹೊಸ ವರ್ಷ ದಾಂಪತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿದೆ. ಸಂಗಾತಿಯೊಂದಿಗೆ ಬಹಳಷ್ಟು ಹೊಂದಾಣಿಕೆ ಇರುತ್ತದೆ. ಹೊಸದಾಗಿ ಮದುವೆಯಾದವರು ತುಂಬಾ ಚೆನ್ನಾಗಿರುತ್ತಾರೆ. ಬಂಧು ಬಾಂಧವರೊಂದಿಗೆ ಉತ್ತಮ ಸಂಬಂಧ ಹೊಂದಿರುವಿರಿ.

ಧನು ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ

ಧನು ರಾಶಿಯವರು ಯುಗಾದಿ ನಂತರ ಹೊಸ ವಾಹನ ಖರೀದಿ ಮಾಡುತ್ತಾರೆ. ವಸ್ತ್ರಾಭರಣ ಸಂಗ್ರಹ ಮಾಡುವಿರಿ. ಗುರುವಿನ ಅನುಗ್ರಹದಿಂದ ಸಜ್ಜನರ ಸಂಘ ಮಾಡುವಿರಿ. ಪರೋಪಕಾರ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವಿರಿ. ಸಾರ್ವಜನಿಕ ವಲಯದಲ್ಲಿ ಗುರಿಸಿಕೊಳ್ಳುವುದು ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+