Ravi Yoga 2024: ಅಕ್ಟೋಬರ್ 21ರಂದು ರವಿ ಯೋಗ: ಈ ರಾಶಿಗೆ ಶತ್ರುಗಳು ಮಿತ್ರರಾಗುವ ಸಮಯ
ಕಾಲ ಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಅಕ್ಟೋಬರ್ 21ರಂದು ವೃಷಭ ರಾಶಿಯ ನಂತರ ಚಂದ್ರನು ಮಿಥುನ ರಾಶಿಗೆ ಸಾಗಲಿದೆ. ಈ ದಿನ ಮಂಗಳಕರವಾದ ಸರ್ವಾರ್ಥ ಸಿದ್ಧಿ ಹಾಗೂ ರವಿ ಯೋಗಗಳು ರೂಪಗೊಳ್ಳಲಿವೆ. ಈ ಶುಭ ಯೋಗಗಳ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಬೀಳಲಿದೆ.
ಇದರಿಂದ ಕೆಲ ರಾಶಿಯವರಿಗೆ ಮಾನಸಿಕ ನೆಮ್ಮದಿ, ಶಾಂತಿ, ತೃಪ್ತಿ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ. ಈ ದಿನ ಕೆಲ ರಾಶಿಯವರ ಜಾತಕದಲ್ಲಿ ಚಂದ್ರನ ಸ್ಥಾನ ಅನುಕೂಲಕರವಾಗಿರುತ್ತದೆ. ಶಿವನ ವಿಶೇಷ ಆಶೀರ್ವಾದವೂ ಸಿಗಲಿದೆ. ಹಾಗಾದರೆ ಸರ್ವಾರ್ಥ ಸಿದ್ಧಿ ಹಾಗೂ ರವಿ ಯೋಗದಿಂದ ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಸರ್ವಾರ್ಥ ಸಿದ್ಧಿ ಹಾಗೂ ರವಿ ಯೋಗ ಬಹಳ ವಿಶೇಷವಾಗಿರುತ್ತದೆ. ವ್ಯಾಪಾರಸ್ಥರು ಹಬ್ಬದ ಕಾರಣ ಅಧಿಕ ಲಾಭವನ್ನು ಗಳಿಸುತ್ತಾರೆ. ಈ ದಿನ ವ್ಯಾಪಾರ ಪ್ರವಾಸಕ್ಕೆ ಹೋಗಬಹುದು. ಸಂಸಾರದಲ್ಲಿ ಯಾವುದಾದರೂ ಕಲಹ ನಡೆಯುತ್ತಿದ್ದರೆ ಅದು ಕೊನೆಗೊಂಡು ಎಲ್ಲವೂ ಸರಿ ಹೋಗುತ್ತದೆ. ವೃಷಭ ರಾಶಿಯ ಜನರು ತಮ್ಮ ಬಗ್ಗೆ ಯಾವುದೇ ಕನಸುಗಳನ್ನು ಹೊಂದಿದ್ದರೂ ಅದು ಈಡೇರುವುದನ್ನು ನೀವು ನೋಡುತ್ತೀರಿ. ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗಲಿದೆ.
ಪ್ರೀತಿಯ ಜೀವನದಲ್ಲಿ ಇರುವವರು ತಮ್ಮ ಸಂಗಾತಿಯಿಂದ ಉಡುಗೊರೆಯನ್ನು ಪಡೆಯಬಹುದು. ಅದು ಅವರ ನಡುವಿನ ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಉದ್ಯೋಗದಲ್ಲಿರುವವರು ತಮ್ಮ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಮೇಲಾಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷವಾಗಿರುತ್ತಾರೆ ಮತ್ತು ನಿಮ್ಮನ್ನು ಪ್ರಶಂಸಿಸುತ್ತಾರೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಸರ್ವಾರ್ಥ ಸಿದ್ಧಿ ಹಾಗೂ ರವಿ ಯೋಗ ಮಂಗಳಕರವಾಗಿದೆ. ಕರ್ಕಾಟಕ ರಾಶಿಯ ಜನರು ಶಿವನ ಕೃಪೆಯಿಂದ ವ್ಯವಹಾರದಲ್ಲಿ ಲಾಭ ಗಳಿಸುತ್ತಾರೆ. ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದರಿಂದ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದರೆ ಉತ್ತಮ ಫಲಿತಾಂಶ ಪಡೆಯುವಿರಿ. ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ.

ತುಲಾ ರಾಶಿ
ತುಲಾ ರಾಶಿಯವರು ಸರ್ವಾರ್ಥ ಸಿದ್ಧಿ ಹಾಗೂ ರವಿ ಯೋಗದಿಂದ ಸಾಕಷ್ಟು ಲಾಭ ಪಡೆಯಲಿದ್ದಾರೆ. ಶಿವನ ಕೃಪೆಯಿಂದ ತುಲಾ ರಾಶಿಯ ಜನರು ತಾವು ಕನಸು ಕಂಡಿದ್ದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಧೈರ್ಯದಿಂದ ನೀವು ಎಲ್ಲಾ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.
ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಪ್ರಭಾವಿ ವ್ಯಕ್ತಿಗಳ ಬೆಂಬಲವನ್ನು ಪಡೆಯುತ್ತೀರಿ. ಇದು ವ್ಯವಹಾರದಲ್ಲಿ ಪ್ರಗತಿಗೆ ಕಾರಣವಾಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಹೊಂದಾಣಿಕೆಯು ಉತ್ತಮವಾಗಿರುತ್ತದೆ. ನೀವು ಕೆಲವು ಆಸ್ತಿಯಲ್ಲಿ ಒಟ್ಟಿಗೆ ಹೂಡಿಕೆ ಮಾಡಬಹುದು. ಈ ಸಮಯದಲ್ಲಿ ನೀವು ಯಾವುದೇ ಆರೋಗ್ಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ ಪರಿಹಾರವನ್ನು ಪಡೆಯುತ್ತೀರಿ. ಕೆಲವು ದಿನಗಳಿಂದ ಕುಟುಂಬದ ವಾತಾವರಣವು ಕೆಟ್ಟದಾಗಿದ್ದರೆ ಕುಟುಂಬ ಸದಸ್ಯರಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

ವೃಶ್ಚಿಕ ರಾಶಿ
ಅಕ್ಟೋಬರ್ 21 ವೃಶ್ಚಿಕ ರಾಶಿಯವರಿಗೆ ಖುಷಿಯ ದಿನವಾಗಿರುತ್ತದೆ. ವೃಶ್ಚಿಕ ರಾಶಿಯ ಜನರು ಯಾವುದೇ ಹಳೆಯ ಹೂಡಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ದೀಪಾವಳಿಯ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕೆಲಸವು ಪೂರ್ಣಗೊಳ್ಳುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಆರೋಗ್ಯವನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ತುಂಬಾ ಶಕ್ತಿಯುತವಾಗಿರುತ್ತೀರಿ.
ಲವ್ ಲೈಫ್‌ನಲ್ಲಿರುವವರು ತಮ್ಮ ಪ್ರೀತಿಯ ಸಂಗಾತಿಯ ಬಗ್ಗೆ ಇನ್ನೂ ತಮ್ಮ ಕುಟುಂಬಕ್ಕೆ ತಿಳಿಸದಿದ್ದರೆ, ಈ ಸಮಯದಲ್ಲಿ ನಿಮ್ಮ ಕುಟುಂಬಸ್ಥರಿಗೆ ನಿಮ್ಮ ಪ್ರೀತಿಯ ಬಗ್ಗೆ ತಿಳಿಸಬಹುದು. ಉದ್ಯೋಗ ಮತ್ತು ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ನಿಮ್ಮ ಕ್ಷೇತ್ರಗಳಲ್ಲಿ ಆರ್ಥಿಕ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

ಮೀನ ರಾಶಿ
ಮೀನ ರಾಶಿಯವರಿಗೆ ಹೊಸ ಭರವಸೆಯ ಕಿರಣವನ್ನು ತರಲಿದೆ ಸರ್ವಾರ್ಥ ಸಿದ್ಧಿ ಹಾಗೂ ರವಿ ಯೋಗ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯು ಸಹ ಬಲವಾಗಿರುತ್ತದೆ. ಹೂಡಿಕೆಗೆ ಉತ್ತಮ ದಿನವಾಗಿದೆ. ಭವಿಷ್ಯದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗವನ್ನು ಹುಡುಕುತ್ತಿರುವ ಯುವಕರು ಇಂದು ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ.
ಮೀನ ರಾಶಿಯ ಜನರಲ್ಲಿ ಹೊಸ ಶಕ್ತಿ ಹೆಚ್ಚಾಗಲಿದೆ. ಈ ಕಾರಣದಿಂದಾಗಿ ನೀವು ದೀರ್ಘಕಾಲ ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮ ಫಲ ಸಿಗಲಿದೆ. ಇದರಿಂದಾಗಿ ನೀವು ಸಂತೋಷವಾಗಿರುತ್ತೀರಿ. ಇದರಿಂದ ಭವಿಷ್ಯದಲ್ಲಿ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.












Click it and Unblock the Notifications