Raksha Bandhan 2023: ಈ 5 ರಾಶಿಯವರು ಅತ್ಯುತ್ತಮ ಸಹೋದರರು!
ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವ ಮಂಗಳಕರ ಹಬ್ಬವಾದ ರಕ್ಷಾ ಬಂಧನವನ್ನು ಇಂದು ಕೂಡ (ಆಗಸ್ಟ್ 31) ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ ಮತ್ತು ಅವರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಈ ವೇಳೆ ಸಹೋದರ ಸಹೋದರಿಯ ರಕ್ಷಣೆಯ ಭರವಸೆಯನ್ನು ನೀಡುತ್ತಾನೆ. ಸಹೋದರಿಗಾಗಿ ಉಡುಗೊರೆಯನ್ನು ನೀಡುತ್ತಾನೆ. ಜ್ಯೋತಿಷ್ಯಶಾಸ್ತ್ರದ ಮೂಲಕ ಯಾವ ರಾಶಿಯ ಸಹೋದರರು ಅತ್ಯುತ್ತಮ ಸಹೋದರರು ಆಗಿರುತ್ತಾರೆ ಎಂದು ತಿಳಿಯಬಹುದು.

ಮೇಷ ರಾಶಿ
ಮೇಷ ರಾಶಿಯ ಪುರುಷರು ಅತ್ಯುತ್ತಮ ಸಹೋದರರಾಗಿರುತ್ತಾರೆ. ಸಹೋದರಿಯ ಬಗ್ಗೆ ಯಾವಾಗಲು ಗೌರವ ಹೊಂದಿರುತ್ತಾರೆ. ಅವರ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಮೇಷರಾಶಿಯವರದ್ದು. ಹೆಚ್ಚಾಗಿ ಮೇಷ ರಾಶಿಯ ಪುರಷರು ತಮ್ಮ ಸಹೋದರಿಯನ್ನು ಸ್ನೇಹಿತೆಯಂತೆ ಕಾಣುತ್ತಾರೆ. ಮಗಳಂತೆ ಪ್ರೀತಿ ಮಾಡುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯಂತ ಸಹೋದರನನ್ನು ಪಡೆಯಲು ಮಹಿಳೆಯರು ಅದೃಷ್ಟಶಾಲಿಗಳು. ಯಾಕೆಂದರೆ ಸಿಂಹ ರಾಶಿಯ ಸಹೋದರರು ಸಹೋದರಿಯ ಪ್ರೀತಿಯನ್ನು ಯಾವಾಗಲೂ ನಿರೀಕ್ಷಿಸುತ್ತಾರೆ. ಅವರ ಪ್ರೀತಿಯಲ್ಲಿ ಕೊಂಚ ಏರುಪೇರಾದರು ಅವರು ಸಹಿಸುವುದಿಲ್ಲ. ಅವರಿಗೆ ಕನಸಲ್ಲು ತೊಂದರೆಯಾಗುವುದುನ್ನು ಸಿಂಹ ರಾಶಿಯ ಸಹೋದರರು ಸಹಿಸುವುದಿಲ್ಲ.
ತುಲಾ ರಾಶಿ
ತುಲಾ ರಾಶಿಯ ಸಹೋದರರು ಪ್ರೀತಿ ನೀಡುವುದರಲ್ಲಿ ಕೊರತೆ ಇಲ್ಲ. ಸಹೋದರಿಯನ್ನು ತಾಯಿಯಂತೆ ಕಾಣುತ್ತಾರೆ. ತಮ್ಮೆಲ್ಲಾ ಪ್ರೀತಿಯನ್ನು ಸಹೋದರಿಯ ಮೇಲೆ ಇಟ್ಟಿರುತ್ತಾರೆ. ಅವರು ಸ್ವಲ್ಪ ನಿರ್ದಾಕ್ಷಿಣ್ಯವಾಗಿರಬಹುದು ಮತ್ತು ಕೆಲವೊಮ್ಮೆ ಅವರು ಜಗಳವೂ ಆಡಬಹುದು. ಆದರೆ ಅವರನ್ನು ಒಳಮನಸ್ಸು ಸಹೋದರಿಯ ಸಂತೋಷವನ್ನೇ ಬಯಸುತ್ತದೆ.
ವೃಶ್ಚಿಕ ರಾಶಿ
ರಕ್ಷಾ ಬಂಧನ ಹಬ್ಬ ಸಹೋದರ ಸಹೋದರಿಯ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.ವೃಶ್ಚಿಕ ರಾಶಿಯ ಸಹೋದರರು ಸಹೋದರಿಯ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಾರೆ. ನಿಷ್ಠೆಯ ವಿಷಯದಲ್ಲಿ ಅವರು ಯಾರಿಗೂ ಕಡಿಮೆ ಇಲ್ಲ. ಏನೇ ಆಗಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಅವರ ಹೆಚ್ಚಿನ ಕಾಳಜಿ ಕಿರಿಕಿರಿ ಅನಿಸಿದರೂ ನಿಮ್ಮನ್ನು ಕಾಪಾಡಲು ಅವರು ಸದಾ ಸಿದ್ದರಾಗಿರುತ್ತಾರೆ.
ಕರ್ಕಾಟಕ ರಾಶಿ
ಕರ್ಟಾಕರ ರಾಶಿಯ ಸಹೋದರ ಸಹೋದರಿಯ ಒಳಿತನ್ನು ಬಯಸುತ್ತಾರೆ. ಯಾವುದೇ ಸಂದರ್ಭ ಬರಲಿ ಸಹೋದರಿಯ ಪರವಾಗಿ ನಿಲ್ಲುತ್ತಾರೆ. ಸಹೋದರಿಗೆ ಆಸರೆಯಾಗಿರುತ್ತಾರೆ. ಅವರ ವಿದ್ಯಾಭ್ಯಾಸದ ಸಂಪೂರ್ಣ ಜವಬ್ದಾರಿಯನ್ನು ಹೊಂದಿರುತ್ತಾರೆ. ತಮ್ಮ ಸಹೋದರಿ ಎಷ್ಟೇ ದೂರವಿರಲಿ, ಅವರ ಕಣ್ಣೆದುರಿ ಇಲ್ಲದೇ ಇರಲಿ ಆದರೆ ಕರ್ಕ ರಾಶಿಯ ಸಹೋದರರು ಸಹೋದರಿಯ ಮೇಲೆ ಬೆಟ್ಟದಷ್ಟು ಪ್ರೀತಿ ಹೊಂದಿರುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications