ಫಾಲ್ಗುಣ-ಚೈತ್ರ ಮಾಸದ ವಾರದ ಪಂಚಾಂಗ: ಮಾ.15 ರಿಂದ 21

ಫಾಲ್ಗುಣ-ಚೈತ್ರ ಮಾಸದ ಮಾ.15ರಿಂದ 21ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ವಾರಭವಿಷ್ಯ, ಯುಗಾದಿ ಫಲಾಫಲ]

Phalguna-Chaitra masa - Mar 15 to 21 : Rahu Kala, Gulika Kala, Yamaganda Kala

ಮಾ.15. ರವಿವಾರ : ಪೂರ್ವಾಷಾಢ ನಕ್ಷತ್ರ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಮಾ.16. ಸೋಮವಾರ : ಉತ್ತರಾಷಾಢ. ಏಕಾದಶಿ. ಮಶೀನರಿ ವಸ್ತುಗಳನ್ನು ಖರೀದಿಸಲು ಉತ್ತಮ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಮಾ.17. ಮಂಗಳವಾರ : ಶ್ರವಣಾ. ಹೊಸ ಮನೆಯ ಕೆಲಸಗಳನ್ನು ಮಾಡಿಕೊಳ್ಳಲು. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಮಾ.18. ಬುಧವಾರ : ಧನಿಷ್ಠಾ. ಉಪನಯನಕ್ಕೆ. ದೂರ ಪ್ರಯಾಣದಿಂದ ಸಂತಸ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಮಾ.19. ಗುರುವಾರ : ಶತತಾರಾ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಮಾ.20. ಶುಕ್ರವಾರ : ಪೂರ್ವಾಭಾದ್ರಪದ. ಯುಗಾದಿ ಅಮವಾಸ್ಯೆ. (19ರ ಗುರುವಾರ ಸಂಜೆ 6-48ಕ್ಕೆ ಅಮವಾಸ್ಯೆ ಆರಂಭ. 20ರ ಶುಕ್ರವಾರ ಮಧ್ಯಾಹ್ನ 3-06ಕ್ಕೆ ಅಮವಾಸ್ಯೆ ಮುಕ್ತಾಯ). ದೂರ ಪ್ರಯಾಣದಿಂದ ತೊಂದರೆ. ಸೂರ್ಯಗ್ರಹಣವಿದ್ದರೂ ಭಾರತದಲ್ಲಿ ಇದು ಕಾಣಿಸುವುದಿಲ್ಲ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಮಾ.21. ಶನಿವಾರ : ಉತ್ತರಾಭಾದ್ರಪದ. ಯುಗಾದಿ ಪಾಡ್ಯ ಪೂಜೆ. ಚೈತ್ರ ಮಾಸ ಆರಂಭ. ಎಲ್ಲ ಕೆಲಸ-ಕಾರ್ಯಗಳಿಗೆ ಉತ್ತಮ ದಿನ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಸೋಮವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೇ ಮುಹೂರ್ತಗಳಿಲ್ಲ.

ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಅನಿವಾರ್ಯವಿದ್ದರೆ ಮಾತ್ರ ಮಾಡಿಕೊಳ್ಳಬಹುದು.

ಈ ವಾರದ ಗ್ರಹಗತಿ : ಮೇಷ: ಶುಕ್ರ. ಕರ್ಕ: ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಧನಸ್ಸು: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಕುಂಭ: ಬುಧ. ಮೀನ: ಕೇತು+ರವಿ+ಮಂಗಳ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+