Panch Divya Yoga 2024: 500 ವರ್ಷಗಳ ನಂತರ ಪಂಚ ದಿವ್ಯ ಯೋಗ: ಈ 3 ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದಿಂದ ಹಣವೋ ಹಣ
ಕಾಲ ಕಾಲಕ್ಕೆ ಗ್ರಹಗಳು ಸ್ಥಾನದಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತವೆ. ಗ್ರಹಗಳ ಸಂಚಾರದ ವೇಳೆ ರಾಶಿಯವನ್ನು ಬದಲಾಯಿಸುತ್ತವೆ. ಈ ವೇಳೆ ಒಂದು ರಾಶಿಯಲ್ಲಿ ಅನೇಕ ಗ್ರಹಗಳ ಸಂಯೋಗವಾದರೆ ಶುಭ ಅಥವಾ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಹೀಗೆ 500 ವರ್ಷಗಳ ನಂತರ ಪಂಚ ದಿವ್ಯ ಯೋಗ ರೂಪಗೊಂಡಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಪಂಚ ದಿವ್ಯ ರಾಜಯೋಗ ಫೆಬ್ರವರಿ 13 ರಂದು ರೂಪಗೊಂಡಿದೆ. ಸುಮಾರು 500 ವರ್ಷಗಳ ನಂತರ ಈ ರಾಜಯೋಗ ಅಭಿವೃದ್ಧಿಗೊಂಡಿದೆ. ಈ ಯೋಗದ ಸಮಯದಲ್ಲಿ ಶನಿಯ ರಾಶಿಯಾದ ಮಕರ ರಾಶಿಯಲ್ಲಿ ಆದಿತ್ಯ ಮಂಗಳ ಯೋಗ, ಬುದಾಧಿತ್ಯ ಯೋಗ, ಚತುರ್ಗ್ರಹ ಯೋಗ, ಮಹಾಲಕ್ಷ್ಮಿ ಯೋಗ ಮತ್ತು ಸರ್ವಾರ್ಥ ಸಿದ್ಧ ಯೋಗಗಳು ಏಕಕಾಲದಲ್ಲಿ ರೂಪುಗೊಳ್ಳುತ್ತವೆ. ಇದು ಇನ್ನಷ್ಟು ವಿಶೇಷವಾಗಿದೆ.
ಈ ಮಂಗಳಕರ ಯೋಗದ ಪ್ರಭಾವವು ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಕೆಲವು ರಾಶಿಯವರಿಗೆ ಈ ಯೋಗದಿಂದ ಅದೃಷ್ಟದ ಸುರಿಮಳೆ ಹಾಗೂ ಆರ್ಥಿಕ ಪ್ರಗತಿ ಆಗಲಿದೆ. ಈಗ 500 ವರ್ಷಗಳ ನಂತರ ಪಂಚ ದಿವ್ಯ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಸಿಗಲಿದೆ ಎಂದು ನೋಡೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಪಂಚ ದಿವ್ಯ ರಾಜಯೋಗ ಮಂಗಳಕರವಾಗಿದೆ. ಇದು ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಉತ್ತಮ ಪ್ರಗತಿಗೆ ಅವಕಾಶಗಳನ್ನು ನೀಡುತ್ತದೆ. ಇದರ ಸದುಪಯೋಗ ಪಡೆದುಕೊಂಡರೆ ಜೀವನದಲ್ಲಿ ಅನಿರೀಕ್ಷಿತ ಸುಧಾರಣೆ ಕಾಣುವಿರಿ. ಇದಲ್ಲದೆ ಕುಟುಂಬ ಜೀವನ ಸುಧಾರಿಸಲಿದೆ. ಈ ಯೋಗದಿಂದ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಕೂಡ ಇದೆ. ಮೇಷ ರಾಶಿಯ ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ಜೊತೆಗೆ ಅವರ ವ್ಯವಹಾರವೂ ವಿಸ್ತರಿಸುತ್ತದೆ.

ವೃಷಭ ರಾಶಿ
ಪಂಚ ದಿವ್ಯ ರಾಜಯೋಗ ವೃಷಭ ರಾಶಿಯವರಿಗೆ ಮಂಗಳಕರವಾಗಿದೆ. ವೃಷಭ ರಾಶಿಯವರ 9ನೇ ಮನೆಯಲ್ಲಿ ಪಂಚ ದಿವ್ಯ ರಾಜಯೋಗ ಉಂಟಾಗುತ್ತದೆ. ಹೀಗಾಗಿ ಈ ರಾಶಿಚಕ್ರದ ಚಿಹ್ನೆಗಳು ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳನ್ನು ಪಡೆಯುತ್ತವೆ. ಅಲ್ಲದೆ ಪಿತ್ರಾರ್ಜಿತ ಆಸ್ತಿಯಿಂದ ಅಧಿಕ ಲಾಭ ಸಿಗಲಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಶುಭ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಇದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುವಿರಿ.

ಕರ್ಕಾಟಕ ರಾಶಿ
ಪಂಚ ದಿವ್ಯ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಶುಭ ತರಲಿದೆ. ಇದು ಕರ್ಕಾಟಕ ರಾಶಿಯವರ 7ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದ ಈ ರಾಶಿಗೆ ಸೇರಿದ ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ. ವ್ಯಾಪಾರವನ್ನು ವಿಸ್ತರಿಸಲು ಅನೇಕ ಅವಕಾಶಗಳು ಸಿಗಲಿವೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ಅಂದುಕೊಂಡ ಬಾಳ ಸಂಗಾತಿ ಸಿಗಲಿದ್ದು ಕಂಕಣ ಭಾಗ್ಯ ಕೂಡಿ ಬರಲಿದೆ. ಬಹುಕಾಲದ ಆಸೆಗಳು ಈಡೇರುತ್ತವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ಯಶಸ್ಸು ಮತ್ತು ಪ್ರಗತಿಯನ್ನು ಕಾಣುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications