Numerology: ನಿಮ್ಮ ಹೆಸರಿನ ಪ್ರಕಾರ ಸ್ವಭಾವ, ಲಕ್ ಹೇಗಿರುತ್ತದೆ?
ನ್ಯೂಮರಾಲಜಿ ಎಂಬುದು ನಿಂತಿರುವುದು ಇಂಗ್ಲಿಷ್ ಅಕ್ಷರಗಳ ಮೇಲೆ. ಹಿಂದೂ ಪಂಚಾಂಗ ರೀತಿಯಾಗಿ ಹೆಸರು ಇಡುವ ಸಂಪ್ರದಾಯ ಕಡಿಮೆ ಆಗುತ್ತದೆ. ಇದು ಸರಿಯೋ ತಪ್ಪೋ ಎಂಬ ಚರ್ಚೆಯನ್ನು ಮಾಡುವುದು ಈ ಲೇಖನದ ಉದ್ದೇಶ ಖಂಡಿತಾ ಅಲ್ಲ. ಯಾವುದೇ ಶಾಸ್ತ್ರಕ್ಕೆ ಇರುವ ಆಧಾರದ ಬಗ್ಗೆ ಅಧ್ಯಯನ ಮಾಡಿ, ತಿಳಿದುಕೊಂಡು, ಒಮ್ಮೆ ಪರಾಮರ್ಶೆ ಮಾಡಿದ ನಂತರ ಒಂದು ಲೇಖನ ಬರೆಯುವುದು ನನ್ನ ಪರಿಪಾಠ.
ಈಗ ಕೂಡ ಅಷ್ಟೇ. ಇತ್ತೀಚೆಗೆ ಕೆಲ ಸಮಯ ಸಂಖ್ಯಾಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಅಧ್ಯಯನದ ನಂತರ ಹೆಸರಿನ ವಿಚಾರವಾಗಿ ಇಂಗ್ಲಿಷ್ ನಲ್ಲಿ ಇರುವಂಥ ನಂಬಿಕೆಯನ್ನು ನಿಮಗೆ ತಿಳಿಸಬೇಕು ಎಂದು ನೋಟ್ಸ್ ಮಾಡಿಟ್ಟುಕೊಂಡಿದ್ದೆ. ಈ ದಿನ ಆ ಬಗ್ಗೆ ಒಂದು ಲೇಖನ ಬರೆಯೋಣ ಎನಿಸಿತು.
ಒಂದು ವಿಷಯ ಅಂತೂ ಸ್ಪಷ್ಟ ಪಡಿಸುತ್ತಿದ್ದೇನೆ. ವೈದಿಕ ಜ್ಯೋತಿಷ್ಯ ಸರಿಯೇ ಅಥವಾ ಈ ನ್ಯೂಮರಾಲಜಿ ಸರಿಯೇ ಎಂದು ಚರ್ಚೆ ಮಾಡುವುದು ಈ ಲೇಖನದ ಉದ್ದೇಶ ಅಲ್ಲ. ನಿಮಗೆ ಬೇಕಿದ್ದರೆ ತೆಗೆದುಕೊಳ್ಳಬಹುದು, ಇಲ್ಲದಿದ್ದರೆ ಇಲ್ಲ. ಯಾವುದಕ್ಕೂ ಬಲವಂತ ಇಲ್ಲ. ಇದೇ ಸರಿ ಎಂಬ ಅಪ್ಪಣೆ ಇಲ್ಲ. ಇನ್ನುಳಿದಂತೆ ನೀವುಂಟು, ಲೇಖನ ಉಂಟು. ವಿನಮ್ರನಾಗಿ ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.

A, I, J, Q, Y
ಯಾವುದೇ ವ್ಯಕ್ತಿಯ ಹೆಸರು ಇಂಗ್ಲಿಷ್ ನಲ್ಲಿ ಬರೆದಾಗ ಅದರಲ್ಲಿ ಈ ಮೇಲ್ಕಂಡ ಇಂಗ್ಲಿಷ್ ಅಕ್ಷರಗಳು ಪುನರಾವರ್ತನೆಯಾದರೆ ಅಂಥವರು ಬಹಳ ಧೈರ್ಯವಂತರಾಗಿರುತ್ತಾರೆ. ಒರಿಜಿನಲ್ ಆಲೋಚನೆಗಳು ಇರುತ್ತವೆ. ಬೇರೆಯವರ ಮೇಲೆ ಹತೋಟಿ ಸಾಧಿಸುವಂಥ ಮನಸ್ಥಿತಿ ಇರುತ್ತದೆ. ಸ್ವತಂತ್ರವಾಗಿ ಇರುವ ಸಲುವಾಗಿ ಎಂಥ ಹೋರಾಟಕ್ಕಾದರೂ ಸಿದ್ಧವಾಗುತ್ತಾರೆ. ಸಮಾಜದಲ್ಲಿ ತಮ್ಮದೊಂದು ಗುರುತಿರಬೇಕು, ಮನ್ನಣೆ ಸಿಗಬೇಕು ಎಂದು ಪ್ರಯತ್ನಿಸುತ್ತಾರೆ. ಪ್ರತಿಷ್ಠಿತ ಹುದ್ದೆಗಳಲ್ಲಿ ಸ್ಥಾನ ಪಡೆಯುತ್ತಾರೆ. ಸಹಕಾರ ನೀಡುವ ಮನೋಭಾವ ಇರುತ್ತದೆ. ವ್ಯಾಪಾರದಲ್ಲಿ ಏಳ್ಗೆ ಆಗುತ್ತದೆ. ಹಣ ಮತ್ತು ಅಧಿಕಾರದ ಬಗ್ಗೆ ವ್ಯಾಮೋಹ ಇರುತ್ತದೆ.

B, K, R
ಯಾರ ಹೆಸರಲ್ಲಿ ಮೇಲ್ಕಂಡ ಇಂಗ್ಲಿಷ್ ಅಕ್ಷರಗಳು ಪುನರಾವರ್ತನೆ ಆಗಿರುತ್ತದೋ ಸ್ವಭಾವತಃ ಬಹಳ ಸೂಕ್ಷ್ಮವಾಗಿರುತ್ತಾರೆ. ಸ್ವಲ್ಪ ಹೆದರಿಕೆ ಸ್ವಭಾವದವರಾಗಿರುತ್ತಾರೆ. ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಸಂಗೀತ ಮತ್ತು ಕಲೆ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಇವರು ಮೂಲತಃ ಇನ್ನೊಬ್ಬರಿಗೆ ನೆರವು ನೀಡುವ ಮನಸ್ಥಿತಿಯವರಾಗಿರುತ್ತಾರೆ. ಯಾವ ಸಮಸ್ಯೆಯನ್ನೂ ತಂತ್ರಗಾರಿಕೆಯಿಂದ ಬಗೆಹರಿಸುವ ಆಲೋಚನೆ ಇವರದು. ಜತೆಗೆ ತಾಳ್ಮೆಯೂ ಹೆಚ್ಚಾಗಿರುತ್ತದೆ.

C, G, L, S
ಯಾರ ಹೆಸರಲ್ಲಿ ಈ ಮೇಲ್ಕಾಣಿಸಿದ ಅಕ್ಷರಗಳು ಪುನರಾವರ್ತನೆ ಆಗಿರುತ್ತದೋ ಅಂಥವರಿಗೆ ಊಹಾತ್ಮಕ ಶಕ್ತಿ ಹೆಚ್ಚು. ಕಲಾವಿದ ಮನಸ್ಸಿರುತ್ತದೆ ಹಾಗೂ ಪ್ರತಿಭಾವಂತರಾಗಿರುತ್ತಾರೆ. ಬರವಣಿಗೆ, ಭಾಷಣ ಕಲೆ, ಸಂಗೀತ ಮತ್ತು ವಿಭಿನ್ನ ಬಗೆಯ ಉದ್ಯಮಗಳನ್ನು ಆರಂಭಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೊರ ಹಾಕುತ್ತಾರೆ. ಆದರೆ ಇವರು ಸ್ವಲ್ಪ ಮಟ್ಟಿಗೆ ಸ್ವಾರ್ಥಿಗಳೂ ಆಗಿರುತ್ತಾರೆ. ಏಕಾಗ್ರತೆಯಲ್ಲಿ ಕೊರತೆ ಇರುತ್ತದೆ. ಅಶಿಸ್ತು ಮತ್ತು ಆಲಸ್ಯದ ಕಾರಣಕ್ಕೆ ಪ್ರತಿಭೆಯನ್ನು ಹಾಳು ಮಾಡಿಕೊಳ್ಳುತ್ತಾರೆ.

U, V, W
ಈ ಅಕ್ಷರಗಳ ಸಾಲಲ್ಲಿ ಬರುವವರು ಕಲಾ ಪೋಷಕರಾಗಿರುತ್ತಾರೆ. ಮಾನವತಾವಾದಿ ಆಗಿರುತ್ತಾರೆ. ತಾವಾಗಿಯೇ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಸಹಾಯ ಮಾಡುವ ಮನೋಭಾವ ಇರುತ್ತದೆ. ಕೌಟುಂಬಿಕ ಪ್ರೀತಿ ಹೆಚ್ಚಾಗಿರುತ್ತದೆ. ಜನಪ್ರಿಯರಾಗಿರುತ್ತಾರೆ. ಪ್ರವಾಸ, ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರುತ್ತದೆ.

D, M, T
ಈ ಅಕ್ಷರಗಳು ಪುನರಾವರ್ತನೆ ಆಗಿದ್ದಲ್ಲಿ ಅವರು ಪರಿಶ್ರಮಿಗಳಾಗಿರುತ್ತಾರೆ. ತಮ್ಮ ವ್ಯಾಪಾರ- ಉದ್ಯಮ ವಿಸ್ತರಣೆಗಾಗಿ ತಪಸ್ಸಿನಂತೆ ಬದುಕುತ್ತಾರೆ. ಆಸ್ತಿ- ಹಣಕಾಸು ನಿರ್ವಹಣೆಯನ್ನು ತುಂಬ ಚೆನ್ನಾಗಿ ಮಾಡುತ್ತಾರೆ. ಸಂಬಂಧಿಕರ ಜವಾಬ್ದಾರಿಗಳನ್ನು ತಾವು ತೆಗೆದುಕೊಳ್ಳುತ್ತಾರೆ. ಆದರೆ ಇವರ ಪ್ರಗತಿ ನಿಧಾನಗತಿಯಲ್ಲಿ ಆಗುತ್ತದೆ.

O, Z
ಸಂಶೋಧನೆ, ಶೈಕ್ಷಣಿಕ ರಂಗ, ಧ್ಯಾನ- ಯೋಗ ಇಂಥ ಕ್ಷೇತ್ರಗಳಲ್ಲಿ ಪ್ರಗತಿ ಇರುತ್ತದೆ. ಇವರು ಏಕಾಂತವಾಗಿ ಇರುವುದಕ್ಕೆ ಬಯಸುತ್ತಾರೆ. ಜನಜಂಗುಳಿ ಅಂದರೆ ಇವರಿಗೆ ಅಷ್ಟಕ್ಕಷ್ಟೇ. ಸಂಬಂಧಿಕರ ಜತೆಗೂ ಅಷ್ಟಾಗಿ ಬೆರೆಯುವುದಿಲ್ಲ. ಇದಕ್ಕೆಲ್ಲ ಕಾರಣ ಏನೆಂದರೆ, ಸಮಸ್ಯೆಯ ಮೂಲಗಳು ಇವು ಎಂಬುದು ಇವರ ನಂಬಿಕೆಯಾಗಿರುತ್ತದೆ.

P, F
ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದಂತೆ ಇವರು ಬಲು ಚುರುಕಾಗಿ ಇರುತ್ತಾರೆ. ಅಧಿಕಾರ ಮತ್ತು ಹುದ್ದೆ ಬಗ್ಗೆ ಸದಾ ಆಕರ್ಷಣೆ ಹೊಂದಿರುತ್ತಾರೆ. ಆದರೆ ಇವರಿಗೆ ಸಾಂಸಾರಿಕ ನೆಮ್ಮದಿ ಕಡಿಮೆ ಇರುತ್ತದೆ. ವ್ಯಾಪಾರ- ವ್ಯವಹಾರ, ಉದ್ಯಮದ ಸಲುವಾಗಿ ಸಿಕ್ಕಾಪಟ್ಟೆ ಪ್ರಯಾಣ ಮಾಡುತ್ತಾರೆ. ಆಸ್ತಿ ವ್ಯವಹಾರಗಳು ಜಾಸ್ತಿ ಇರುತ್ತದೆ ಮತ್ತು ಖರ್ಚು ವಿಪರೀತ ಮಾಡುತ್ತಾರೆ.

E, H, N, X
ಈ ಮೇಲ್ಕಂಡ ಅಕ್ಷರಗಳು ಹೆಸರಿನಲ್ಲಿ ಪುನರಾವರ್ತನೆ ಆಗಿದ್ದಲ್ಲಿ ಇವರು ಕಾನೂನು ಹಾಗೂ ಸಾರ್ವಜನಿಕ ವಿಚಾರಗಳಲ್ಲಿ ಯಶಸ್ವಿ ಆಗುತ್ತಾರೆ. ಜತೆಗೆ ಮಾರಾಟ ವಿಭಾಗದಲ್ಲಿ ದೊಡ್ಡ ಹೆಸರು ಮಾಡುತ್ತಾರೆ. ಈ ಪೈಕಿ ಕೆಲವರು ವಿಪರೀತ ಖರ್ಚು ಮಾಡುವವರು, ಕುಡಿತ ಮತ್ತು ಲೈಂಗಿಕ ಆಸಕ್ತಿ ಹೆಚ್ಚಿರುವವರು ಆಗುತ್ತಾರೆ. ಇದರಿಂದ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ಕುಟುಂಬದ ಬಗ್ಗೆ ಗಮನ ಇಲ್ಲದಂತೆ ಆಗುತ್ತಾರೆ. ಅನಿರೀಕ್ಷಿತ ಕಷ್ಟ, ಸಮಸ್ಯೆಗಳಿಗೆ ಪದೇ ಪದೇ ಸಿಲುಕುತ್ತಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications