New Year 2024: ನಿಮ್ಮ ಮನೆಯಲ್ಲಿ ಅದೃಷ್ಟ ಲಾಕ್ ಮಾಡಲು ಬಯಸುವಿರಾ? ಹಾಗಾದರೆ ಹೊಸ ವರ್ಷದ ಮೊದಲ ದಿನ ಹೀಗೆ ಮಾಡಿ...

ನಾವು 2024 ವರ್ಷವನ್ನು ಪ್ರವೇಶಿಸಿದ್ದೇವೆ. ನಮ್ಮಲ್ಲಿ ಅನೇಕರು ಈ ಹೊಸ ವರ್ಷದಲ್ಲಿ ಶ್ರೀಮಂತ ಮತ್ತು ಸಮೃದ್ಧವಾಗಿರಲು ಬಯಸುತ್ತಾರೆ. ಅನೇಕ ಜನರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹೊಸ ವರ್ಷವನ್ನು ಮಂಗಳಕರವಾಗಿ ಪ್ರಾರಂಭಿಸಲು ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟವು ಬೆಳಗಬೇಕೆಂದು ನೀವು ಬಯಸಿದರೆ, ಹೊಸ ವರ್ಷದ ಮೊದಲ ದಿನದಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಿ. ನಿಮ್ಮ ರಾಶಿಯ ಪ್ರಕಾರ ಈ ಕೆಲಸಗಳನ್ನು ಮಾಡಿ, ಅದರಿಂದ ನೀವು ವರ್ಷವಿಡೀ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

New year 2024 remedies as per your zodiac sign to unlock money luck and prosperity in kannada

ಮೇಷ ರಾಶಿ

ಮೇಷ ರಾಶಿ! ನೀವು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಹಾಗೆ ಇರಿಸಿದಾಗ ಇದು ಮೇಷ ರಾಶಿಯವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.

New year 2024 remedies as per your zodiac sign to unlock money luck and prosperity in kannada

ವೃಷಭ ರಾಶಿ

ವೃಷಭ ರಾಶಿಯವರು ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯಿಂದ ತುಂಬಿರಲು, ಅದೃಷ್ಟವು ಬೆಳಗಲು ಬಯಸಿದರೆ, ಶುಕ್ರವಾರದಂದು ನಿಮ್ಮ ಮನೆಯ ಪೂಜಾ ಕೋಣೆಯನ್ನು ಬಿಳಿ ಹೂವುಗಳಿಂದ ಅಲಂಕರಿಸಿ.

New year 2024 remedies as per your zodiac sign to unlock money luck and prosperity in kannada

ಮಿಥುನ ರಾಶಿ

ಮಿಥುನ ರಾಶಿಯವರು ಹಣವನ್ನು ಉಳಿಸಲು ಸಾಧ್ಯವಿಲ್ಲ ಎಂದು ಬೇಸರವಾಗಿದ್ದೀರಾ? ಕೈಗೆ ಹಣ ಬಂದರೂ ಬಂದಷ್ಟು ಬೇಗ ಖರ್ಚಾಗುತ್ತದೆಯೇ? ಹಾಗಾದರೆ ಈ ವರ್ಷ ನಿಮ್ಮ ಕೈಯಲ್ಲಿ ಹಣ ಇಡಲು ಹೊಸ ವರ್ಷದ ಮೊದಲ ದಿನ ಕಮಲದ ಹೂವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿನ ಹಣದ ಇಡುವ ಸ್ಥಳದಲ್ಲಿ ಇರಿಸಿ. ಈ ಹೂವನ್ನು ವಾರಕ್ಕೊಮ್ಮೆ ಬದಲಾಯಿಸಬೇಕು.

New year 2024 remedies as per your zodiac sign to unlock money luck and prosperity in kannada

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ನೀವು ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದೀರಾ? ಹಾಗಾದರೆ ಹೊಸ ವರ್ಷದ ದಿನದಂದು ಶಿವನನ್ನು ಆರಾಧಿಸಿ. ನೀವು ಅದೃಷ್ಟದ ಬೆಂಬಲವನ್ನು ಪಡೆಯಲು ಬಯಸಿದರೆ, ಓಂ ನಮಃಶಿವಾಯ ಮಂತ್ರವನ್ನು ಪಠಿಸಿ ಮತ್ತು ರುದ್ರಾಕ್ಷವನ್ನು ಧರಿಸಿ.

New year 2024 remedies as per your zodiac sign to unlock money luck and prosperity in kannada

ಸಿಂಹ ರಾಶಿ

ಸಿಂಹ ರಾಶಿಯವರು ಈ ಹೊಸ ವರ್ಷದಲ್ಲಿ ನಿಮ್ಮ ಆರ್ಥಿಕತೆಯು ಬಲವಾಗಿರಲು ಬಯಸಿದರೆ, ಪ್ರತಿ ರಾತ್ರಿ ನಿಮ್ಮ ಬಾಗಿಲಲ್ಲಿ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ಯಾವುದೇ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ನೆಲೆಸುತ್ತದೆ.

New year 2024 remedies as per your zodiac sign to unlock money luck and prosperity in kannada

ಕನ್ಯಾ ರಾಶಿ

ಹೊಸ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಸಮೃದ್ಧಿ ಬೇಕಾದರೆ, ದುರ್ಗಾ ದೇವಿಯನ್ನು ಪೂಜಿಸಿ. ಇದರಿಂದ ದುರ್ಗೆಯ ಕೃಪೆಗೆ ಪಾತ್ರರಾಗಿ ಉತ್ತಮ ಆರೋಗ್ಯದೊಂದಿಗೆ ಸಮೃದ್ಧ ಜೀವನ ನಡೆಸಬಹುದು.

New year 2024 remedies as per your zodiac sign to unlock money luck and prosperity in kannada

ತುಲಾ ರಾಶಿ

ನೀವು ಉತ್ತಮ ಹೊಸ ವರ್ಷವನ್ನು ಹೊಂದಲು ಬಯಸಿದರೆ, ದುರ್ಗಾ ದೇವಿಯನ್ನು ಪೂಜಿಸುವ ಮೂಲಕ ವರ್ಷವನ್ನು ಪ್ರಾರಂಭಿಸಿ. ಹೀಗಾಗಿ ದುರ್ಗೆಯ ಕೃಪೆಯಿಂದ ನಿಮಗೆ ವಿಜಯ ಪ್ರಾಪ್ತಿಯಾಗುತ್ತದೆ. ಶನಿ ದೋಷದಿಂದ ಮುಕ್ತಿ ಹೊಂದಲು ರುದ್ರ ಚಂಡಿಯನ್ನೂ ಪಠಿಸಿ.

New year 2024 remedies as per your zodiac sign to unlock money luck and prosperity in kannada

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಹನುಮಂತನನ್ನು ಪೂಜಿಸಬೇಕು. ನೀವು ಈ ವರ್ಷ ಹೊಸ ಮನೆಯನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ, ಕೆಂಪು ಬಟ್ಟೆಯಲ್ಲಿ 7 ಬಾದಾಮಿಗಳನ್ನು ಕಟ್ಟಿ ಹನುಮಂತನಿಗೆ ಪೂಜೆ ಮಾಡಿ.

New year 2024 remedies as per your zodiac sign to unlock money luck and prosperity in kannada

ಧನು ರಾಶಿ

ಈ ಹೊಸ ವರ್ಷ ನಿಮಗೆ ಯಾವಾಗಲೂ ಧನಾತ್ಮಕ ಶಕ್ತಿಯಿಂದ ತುಂಬಿರಲು, ದುರ್ಗಾದೇವಿಯನ್ನು ಅರಿಶಿನದ ಉಂಡೆಯಿಂದ ಪೂಜಿಸಿ. ಹೀಗೆ ದುರ್ಗಾ ದೇವಿಯು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಿ ವರ್ಷವಿಡೀ ನಿಮ್ಮನ್ನು ಸಂತೋಷವಾಗಿರಿಸುವಳು.

New year 2024 remedies as per your zodiac sign to unlock money luck and prosperity in kannada

ಮಕರ ರಾಶಿ

ಈ ಹೊಸ ವರ್ಷದಲ್ಲಿ ನೀವು ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದರೆ ಅಥವಾ ನಿಮ್ಮ ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ, ಪ್ರತಿ ಶನಿವಾರ ಹಸು ಅಥವಾ ಕಪ್ಪು ನಾಯಿಗೆ ಆಹಾರ ನೀಡಿ. ಇದರಿಂದ ಬಂಧು-ಬಳಗದ ಸಮಸ್ಯೆಗಳು ದೂರವಾಗಿ ಜೀವನ ಸುಖಮಯವಾಗಿರುತ್ತದೆ.

New year 2024 remedies as per your zodiac sign to unlock money luck and prosperity in kannada

ಕುಂಭ ರಾಶಿ

ನೀವು ಕಳೆದ ವರ್ಷ ಸಾಲ ಮಾಡಿದ್ದರೆ ಮತ್ತು ಆ ಸಾಲವನ್ನು ಸಂಪೂರ್ಣವಾಗಿ ತೀರಿಸಲು ಬಯಸಿದರೆ, ಗಣೇಶನನ್ನು ಪೂಜಿಸಿ. ಅದೂ ಕೂಡ ಗಣೇಶನಿಗೆ ಹಳದಿ ಮಾಲೆಯನ್ನು ಅರ್ಪಿಸಿ ಪೂಜಿಸಿ. ಇದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.

New year 2024 remedies as per your zodiac sign to unlock money luck and prosperity in kannada

ಮೀನ ರಾಶಿ

ನೀವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಮತ್ತು ಈ ವರ್ಷ ನಿಮ್ಮ ಆರೋಗ್ಯವು ಉತ್ತಮವಾಗಿರಲು ಬಯಸಿದರೆ, ಲಡ್ಡು ಖರೀದಿಸಿ ಮತ್ತು ಪ್ರತಿ ಗುರುವಾರ ಗಣಪತಿಯನ್ನು ಪೂಜಿಸಿ. ಹೀಗೆ ಗಣೇಶನ ಕೃಪೆಯಿಂದ ನೀವು ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+