New Year 2024 Horoscope: 2024ರಲ್ಲಿ ಈ 5 ರಾಶಿಯವರಿಗೆ ಶನಿದೇವನ ಕೃಪೆ ಇರಲ್ಲ: ಹೀಗೆ ಮಾಡಿದರೆ ಒಳ್ಳೆಯದು..

ನೋಡ ನೋಡುತ್ತಿದ್ದಂತೆ ದೀಪಾವಳಿ ಹಬ್ಬ ಮುಗಿದೇ ಹೋಯ್ತು. ನಾವು 2023ನೇ ವರ್ಷದ ಅಂತ್ಯವನ್ನು ಸಮೀಪಿಸುತ್ತಿದ್ದೇವೆ. ಇನ್ನೂ ಒಂದುವರೆ ತಿಂಗಳಲ್ಲಿ ನಾವೆಲ್ಲಾ 2024ನೇ ವರ್ಷಕ್ಕೆ ಪ್ರವೇಶಿಸುತ್ತೇವೆ. ಹೊಸ ವರ್ಷ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.

ಆದರೆ ಯಾವುದೆ ಶುಭ ಹಾಗೂ ಅಶುಭ ಫಲಿತಾಂಶಗಳು ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ. ಅದರಲ್ಲೂ ಮುಖ್ಯವಾಗಿ ಒಬ್ಬರ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುವ ಗ್ರಹವಾದ ಶನಿಯು ಉತ್ತಮ ಸ್ಥಿತಿಯಲ್ಲಿದ್ದರೆ ಅದೃಷ್ಟವನ್ನು ತಪ್ಪಿಸಲು ಸಾಧ್ಯವೇ ಇಲ್ಲ.

ಶನಿಯ ಬಗ್ಗೆ ಎಲ್ಲರಿಗೂ ಭಯವಿದೆ. ಯಾಕೆಂದರೆ ಶನಿದೇವನು ನಿಷ್ಪಕ್ಷಪಾತವಾಗಿ ಮತ್ತು ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾನೆ. ಒಬ್ಬರ ಕಾರ್ಯಗಳು ಉತ್ತಮವಾಗಿದ್ದರೆ, ಶನಿ ದೇವರು ಅವನನ್ನು ಶ್ರೀಮಂತನನ್ನಾಗಿ ಮಾಡುತ್ತಾನೆ. ಅಂದರೆ ಶನಿದೇವನು ಕೆಟ್ಟ ಕೆಲಸ ಮಾಡುವವರಿಗೆ ಅನಿರೀಕ್ಷಿತ ಕಷ್ಟಗಳನ್ನು ಮತ್ತು ಸವಾಲುಗಳನ್ನು ನೀಡುತ್ತಾನೆ.

ಕುಂಭ ರಾಶಿಯಲ್ಲಿ ಸಂಚರಿಸುವ ಶನಿಯು ಈ 5 ರಾಶಿಯವರಿಗೆ ಕ್ಷಟಗಳನ್ನು ನೀಡುತ್ತಾನೆ. ಹಾಗಾದರೆ ಆ ರಾಶಿಯವರು ಯಾರೆಂದು ನೋಡೋಣ. ಜೊತೆಗೆ ಶನಿದೇವನ ಕೋಪ ಹೆಚ್ಚಾಗದಿರಲು ಯಾವ ರೀತಿಯ ಮುಜಾಗ್ರತೆ ಕ್ರಮಗಳನ್ನು ತಪ್ಪಿಸಬೇಕು ಎಂಬುದನ್ನು ಸಹ ನೋಡೋಣ.

New year 2024 horoscope shani dev will give trouble for these zodiac signs in kannada

ಕರ್ಕಾಟಕ ರಾಶಿ

ನವೆಂಬರ್ 04ರಂದು ವಕ್ರ ನಿವೃತಿಯನ್ನು ತಲುಪಿದ ಶನಿಯು 2024ರಲ್ಲಿ ಕುಂಭ ರಾಶಿಯಲ್ಲಿ ಸಾಗುವುದರಿಂದ, ಕರ್ಕಾಟಕ ರಾಶಿಯವರಿಗೆ ಶನಿಯ ಪ್ರಭಾವವು ಸ್ವಲ್ಪ ಹೆಚ್ಚು ಇರುತ್ತದೆ. ಆದ್ದರಿಂದ ಕರ್ಕಾಟಕ ರಾಶಿಯವರು 2024 ರಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶನಿ ಕೋಪವನ್ನು ತಪ್ಪಿಸಲಿ ಶನಿವಾರದಂದು ಶನಿದೇವರ ಪೂಜೆ ಅಥವಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ.

New year 2024 horoscope shani dev will give trouble for these zodiac signs in kannada

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ಮೇಲೆ 2024ರಲ್ಲಿ ಶನಿದೇವನ ಪ್ರಭಾವ ಹೆಚ್ಚಾಗಿ ಇರುತ್ತದೆ. ವರ್ಷವಿಡೀ ಶನಿಯ ಪ್ರಭಾವ ಇರುವುದರಿಂದ ಈ ರಾಶಿಯವರು ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ಸಾಧ್ಯವಾದರೆ ಚಾಲನೆಯನ್ನು ತಪ್ಪಿಸುವುದು ಉತ್ತಮ. ಇಲ್ಲದಿದ್ದರೆ ನೀವು ಅಪಘಾತಗಳನ್ನು ಎದುರಿಸಬಹುದು. ನಿಮ್ಮ ಮೇಲೆ ಶನಿ ದೇವನ ಕೃಪೆ ಇರಲು ಶನಿ ಮಂತ್ರವನ್ನು ಪಠಿಸಿ ಹಾಗೂ ಶನಿ ದೇವನಿಗೆ ಪೂಜೆ ಸಲ್ಲಿಸಿ.

New year 2024 horoscope shani dev will give trouble for these zodiac signs in kannada

ಮಕರ ರಾಶಿ

ಮಕರ ರಾಶಿಯವರಿಗೆ 2024ರಲ್ಲಿ ಶನಿದೇವನ ಪ್ರಭಾವ ಹೆಚ್ಚಾಗಿ ಇರುತ್ತದೆ. ಹೀಗಾಗಿ ಈ ರಾಶಿಯವರು ಈ ವರ್ಷ ತಮ್ಮ ನಡವಳಿಕೆಯಲ್ಲಿ ಜಾಗರೂಕರಾಗಿರಬೇಕು. ನೀವು ಈವರೆಗೂ ಸಹಾಯ ಮಾಡದಿದ್ದರೂ ಪರವಾಗಿಲ್ಲ ಆದರೆ ಈ ಹೊಸ ವರ್ಷದಲ್ಲಿ ಯಾರಾದರೂ ಸಹಾಯ ಕೇಳಲು ಬಂದರೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ನಿಮಗೆ ಸಾಧ್ಯವಾಗುತ್ತಿದ್ದರೆ ಅವರಿಗೆ ಸಹಾಯ ಮಾಡಲು ಹಿಂಜರಿಯಬೇಡಿ. ಬಹಳಷ್ಟು ದಾನ ಮಾಡುವುದರಿಂದ ನಿಮ್ಮ ಪುಣ್ಯವು ಹೆಚ್ಚುತ್ತದೆ. ಜೊತೆಗೆ ಶನಿದೇವನ ಮೆಚ್ಚುಗೆಗೆ ಪಾತ್ರರಾಗುತ್ತೀರಿ.

New year 2024 horoscope shani dev will give trouble for these zodiac signs in kannada

ಕುಂಭ ರಾಶಿ

ಶನಿಯು ಕುಂಭ ರಾಶಿಯ ಅಧಿಪತಿಯಾಗಿದ್ದರೂ 2024ರಲ್ಲಿ ಶನಿದೇವನ ಪ್ರಭಾವ ಹೆಚ್ಚಾಗಿ ಇರುತ್ತದೆ. ನೀವು ಶನಿಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಲು ಬಯಸಿದರೆ, ಯಾವಾಗಲೂ ಶನಿ ದೇವರಿಗೆ ಸೂಕ್ತವಾದ ಸ್ತೋತ್ರವನ್ನು ಪಠಿಸಿ ಮತ್ತು ಯಾರೊಂದಿಗೂ ಜಗಳವಾಡಬೇಡಿ. ಇಲ್ಲದಿದ್ದರೆ ದ್ವೇಷವು ಹೆಚ್ಚು ಗಂಭೀರವಾಗುತ್ತದೆ. ಮುಂದಿನ ವರ್ಷ ನಿಮಗೆ ಶುಭವಾಗಿರಲು ಶನಿ ದೇವನ ಪೂಜೆ ಮಾಡಿ.

New year 2024 horoscope shani dev will give trouble for these zodiac signs in kannada

ಮೀನ ರಾಶಿ

ಶನಿಯು ಮೀನ ರಾಶಿಯವರಿಗೆ 2024ರಲ್ಲಿ ಹೆಚ್ಚಾಗಿ ಪ್ರಭಾವ ಬೀರಬಹುದು. ಈ ಕಾರಣದಿಂದಾಗಿ 2024ರ ವರ್ಷವು ಮೀನ ರಾಶಿಯವರಿಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ವರ್ಷ ಅವರು ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು. ತಾಳ್ಮೆ ಅಧಿಕವಾಗಿರಬೇಕು. ನಿಮ್ಮ ಮಾತೇ ನಿಮಗೆ ಮುಳ್ಳಾಗಬಹುದು. ಇಲ್ಲವಾದರೆ ಮಾತಿನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+