ಯುವತಿಯರೇ ಎಚ್ಚರ..! ಈ 4 ಅಪಾಯಕಾರಿ ರಾಶಿಗಳ ಅಡಿಯಲ್ಲಿ ಜನಿಸಿದ ಪುರುಷರನ್ನು ಗೊತ್ತಿಲ್ಲದೆಯೂ ಪ್ರೀತಿಸಬೇಡಿ...!

ಪ್ರೀತಿಗೆ ಪುರುಷರೇ ಆಗಲಿ ಅಥವಾ ಮಹಿಳೆಯರೇ ಆಗಲಿ ಇಬ್ಬರೂ ಪರಸ್ಪರ ಮಣಿಯಲೇಬೇಕು. ಆದರೆ ನೀವು ಪ್ರೀತಿಸುವ ಪುರುಷರು ನಿಮಗೆ ಮೋಸ ಮಾಡುವ ಮನಸ್ಸನ್ನು ಹೊಂದಿದ್ದರೆ ಅವರು ನಿಮಗೆ ನಿಜಗಿಯೂ ಪ್ರೀತಿ ನೀಡಲು ಸಾಧ್ಯವಿಲ್ಲ. ಅದನ್ನು ಅರಿಯದೇ ನೀವು ನಿಷ್ಕಲ್ಮಷ ಪ್ರೀತಿ ತೋರಿಸಬಹುದು. ಆರಂಭದಲ್ಲಿ ನಿಮ್ಮೊಂದಿಗೆ ಉತ್ತಮವಾಗಿ ವರ್ತಿಸಿ ಕೊನೆಯಲ್ಲಿ ಅವರು ಬದಲಾಗುವ ಸಾಧ್ಯತೆ ಇದೆ.

ತಮ್ಮನ್ನು ತಾವು ಹೆಚ್ಚು ಒಳ್ಳೆಯವರು ಎಂದು ಬಿಂಬಿಸಬಹುದು. ನಿಮಗೆ ಒಳ್ಳೆಯ ಪ್ರೇಮಿಗಳಂತೆ ಕಾಣುವವರು ತುಂಬಾ ಅಪಾಯಕಾರಿ ಪ್ರೇಮಿಗಳಾಗಿರಬಹುದು. ಈ ರೀತಿಯ ಪುರುಷರೊಂದಿಗೆ ಪ್ರೀತಿಯಲ್ಲಿ ಬೀಳುವುದು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಇದಕ್ಕೆ ಪುರುಷರ ರಾಶಿಗಳಲ್ಲಿ ಗ್ರಹ ಗತಿಗಳು ಬದಲಾವಣೆ ಕಾರಣವಾಗಿರಬಹುದು. ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯವರೊಂದಿಗೆ ಪ್ರೀತಿಯಲ್ಲಿ ನೀವು ಬೀಳಬಾರದು ಎಂದು ತಿಳಿಯೋಣ.

dangerous zodiac signs

ಮಕರ ರಾಶಿ

ಶನಿಯ ಆಳ್ವಿಕೆಯಲ್ಲಿ ಇರುವ ಮಕರ ರಾಶಿಯ ಪುರುಷರನ್ನು ಪ್ರೀತಿ ಮಾಡುವುದು ತುಂಬಾನೇ ಅಪಾಯಕಾರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಏಕೆಂದರೆ ಶನಿಯ ಆಳ್ವಿಕೆಯಲ್ಲಿರುವ ಮಕರ ರಾಶಿಯ ಪುರುಷರಿಗೆ ಹೇಗೆ ನೋಯಿಸಬೇಕು ಜೊತೆದೆ ಹೇಗೆ ಮೋಸ ಮಾಡಬೇಕೆಂದು ಚೆನ್ನಾಗಿ ತಿಳಿದಿರುತ್ತದೆ. ತಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ನೋಯಿಸುವುದು ಅವರ ಉದ್ದೇಶವಾಗಿರಬಹುದು. ಹೀಗೆ ಮೋಸ ಮಾಡಲೆಂದೇ ಅವರು ಅಂದರೆ ಮಕರ ರಾಶಿಯವರು ತಮ್ಮನ್ನು ತಾವು ಬಹಳ ಮೌಲ್ಯಯುತ ಮತ್ತು ಅತಿರಂಜಿತವಾಗಿ ಕಾಣುವಂತೆ ಮಾಡುವಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ.

ಅವರ ಜೀವನಶೈಲಿ, ವೆಚ್ಚಗಳು, ಅಭ್ಯಾಸಗಳು ಮತ್ತು ವೃತ್ತಿಯೂ ಸಹ ಅವರನ್ನು ಶ್ರೀಮಂತ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಈ ರಾಶಿಚಕ್ರದ ಪುರುಷರು ತಮ್ಮ ಬುದ್ಧಿವಂತಿಕೆ, ಮೋಡಿ ಮತ್ತು ವ್ಯಕ್ತಿತ್ವದಿಂದ ನಿಮ್ಮನ್ನು ಮೋಡಿ ಮಾಡುತ್ತಾರೆ. ನೀವು ಅವರಿಗೆ ನಿಮ್ಮ ಭಾವನೆಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದರೆ ಅವರು ನಿಮಗೆ ನೋವುಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ. ಈ ಪುರುಷರು ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ಆನಂದಿಸುತ್ತಾರೆ ಮತ್ತು ಇತರರನ್ನು ಅಸಮಾಧಾನಗೊಳಿಸುವುದರಲ್ಲಿ ಸಂತೋಷ ಪಡುತ್ತಾರೆ. ಹೀಗಾಗಿ ಇವರೊಂದಿಗೆ ಜಾಗರೂಕರಾಗಿರಿ.

ಸಿಂಹ ರಾಶಿ

ಕೋಪ, ಉಗ್ರತೆ ಮತ್ತು ಬುಧದಿಂದ ಆಳಲ್ಪಡುವ ಸಿಂಹ ರಾಶಿಯವರು ಹಿರಿಯರನ್ನು ಮೆಚ್ಚಿಸಲು ಇಷ್ಟಪಡುತ್ತಾರೆ. ಇವರು ಇತರರಿಗೆ ಮೆಚ್ಚುಗೆಯಾಗಲು ಏನು ಬೇಕಾದರೂ ಮಾಡುತ್ತಾರೆ. ಇತರರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತ್ವರಿತವಾಗಿ ಗುರುತಿಸುತ್ತಾರೆ. ಈ ಜ್ಞಾನದಿಂದ ಸಿಂಹ ರಾಶಿಯವರು ಇತರರನ್ನು ನೋಯಿಸುವ ಗುಣವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಸಿಂಹ ರಾಶಿಯವರು ಇತರರನ್ನು ಆಳವಾಗಿ ನೋಯಿಸುತ್ತಾರೆ. ಇವರು ಕೊಡುವ ನೋವನ್ನು ಯಾರೂ ಕೂಡ ಸಹಿಸಲಾಗುವುದಿಲ್ಲ.

ಹೆಚ್ಚಿನ ಸಮಯದಲ್ಲಿ ಸಿಂಹ ರಾಶಿಯ ಪುರುಷರು ಸಂಗಾತಿಯನ್ನು ಪ್ರೀತಿಸುತ್ತಾರೆ ಮತ್ತು ಅವರ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಈ ಪುರುಷರು ನಿಷ್ಠರಾಗಿ ಇರುವಂತೆ ನಟಿಸುತ್ತಾರೆ. ತಮ್ಮ ಮಾತುಗಳು ಮತ್ತು ಉದ್ದೇಶಗಳಲ್ಲಿ ಕುತಂತ್ರವನ್ನು ಹೊಂದಿರುತ್ತಾರೆ. ಆದ್ದರಿಂದ ಅವರು ಏನು ಹೇಳುತ್ತಾರೆಂಬುದರ ಬಗ್ಗೆ ಜಾಗರೂಕರಾಗಿರಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಪುರುಷರು ಮಂಗಳದಿಂದ ಆಳಲ್ಪಡುತ್ತಾರೆ. ಅವರ ಜೀವನದಲ್ಲಿ ಎಲ್ಲರ ಬಗ್ಗೆ ಅಸೂಯೆಪಡುತ್ತಾರೆ. ಈ ಜನರು ಹೆಚ್ಚು ಮಹತ್ವಾಕಾಂಕ್ಷೆಯುಳ್ಳವರು. ಇತರರು ಇವರ ಗಮನವನ್ನು ಕದಿಯುವುದನ್ನು ಇಷ್ಟಪಡುವುದಿಲ್ಲ. ಈ ರಾಶಿಯವರು ಪ್ರೀತಿಗೆ ನಿಷ್ಠರಾಗಿರುವುದು ಕಡಿಮೆ. ಇವರು ತಮ್ಮವರಿಗಿಂತ ಇತರರು ಹೆಚ್ಚು ಮುಖ್ಯವೆಂದು ಭಾವಿಸುತ್ತಾರೆ. ಅವರು ಇತರರ ಬಗ್ಗೆ ಮತ್ತು ಅವರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಜೊತೆಗೆ ತಮ್ಮವರ ಮೇಲೆಯೇ ದ್ವೇಷಕಾರುವರು. ನೀವು ಸಣ್ಣದೊಂದು ತಪ್ಪು ಮಾಡಿದರೆ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವರು.

ಕುಂಭ ರಾಶಿ

ಮಂಗಳದ ಆಳ್ವಿಕೆಯಲ್ಲಿರುವ ಕುಂಭ ರಾಶಿಯವರು ಪ್ರೀತಿಯ ವಿಚಾಋದಲ್ಲಿ ಕೆಟ್ಟ ಪುರುಷರಲ್ಲಿ ಒಬ್ಬರು. ಕುಂಭ ರಾಶಿಯ ಪುರುಷರು ಅಪಾಯಕಾರಿ ಮಾತ್ರವಲ್ಲ, ಅವರೊಂದಿಗೆ ಇರಲು ತುಂಬಾ ಸವಾಲಿನ ಕೆಲಸವಾಗಿದೆ. ಈ ಚಿಹ್ನೆಯು ಪುರುಷರು ಪ್ರೀತಿ ಮಾಡಲು ಅರ್ಹರಲ್ಲ. ಯಾಕೆಂದರೆ ಕುಂಭ ರಾಶಿಯವರಿಗೆ ಶನಿ ಕಾಟ ಶುರುವಾದರೆ, ಇದರ ಪ್ರಭಾವ ಸಂಗಾತಿ ಮೇಲೂ ಬೀಳಬಹುದು. ಈ ಪುರುಷರು ತಮ್ಮ ಮಾತುಗಳನ್ನು ತಿರುಚುತ್ತಾರೆ. ನೀವು ತಪ್ಪು ಎಂದು ಭಾವಿಸಲು ಅವರ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ರಾಶಿಚಕ್ರದ ಪುರುಷರು ನಿಮ್ಮಲ್ಲಿರುವ ಎಲ್ಲವನ್ನೂ ಅರಿಯದೆಯೇ ಬಳಸಿಕೊಳ್ಳುತ್ತಾರೆ. ಅವರೊಂದಿಗಿನ ಸಂಬಂಧ ಕೊನೆಗೊಂಡಾಗ ನಿಮಗೆ ಏನೂ ಇರುವುದಿಲ್ಲ. ಆದ್ದರಿಂದ ಈ ಪುರುಷರಿಂದ ದೂರವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+