ಜನವರಿ 2022ರ ಮಾಸ ಭವಿಷ್ಯ, ಯಾವ ರಾಶಿಗೆ ಏನು ಫಲ?
ನಾವೆಲ್ಲರೂ ಶೀಘ್ರದಲ್ಲೇ ಹೊಸ ವರ್ಷ ಮತ್ತು ಹೊಸ ತಿಂಗಳಿಗೆ ಕಾಲಿಡುತ್ತೇವೆ. ಜನವರಿ 2022 ನಿಮಗೆ ಹೇಗಿರುತ್ತದೆ? ನಿಮ್ಮ ಉದ್ಯೋಗ, ಮದುವೆ, ವ್ಯಾಪಾರ, ಆರ್ಥಿಕ ಮಟ್ಟ ಹೇಗಿರಲಿದೆ? ಎನ್ನುವ ಬಗ್ಗೆ ನೀವು ಯೋಚಿಸುತ್ತಿದ್ದರೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವಿದೆ. ಮುಂಬರುವ ತಿಂಗಳ ಎಲ್ಲಾ 12 ರಾಶಿಚಕ್ರದ ಚಿಹ್ನೆಗಳಿಗೆ ವಿವರವಾದ ಭವಿಷ್ಯವನ್ನು ಹಂಚಿಕೊಳ್ಳಲಾಗಿದೆ. ಈ ಬಗ್ಗೆ ತಿಳಿಯಲು ಮುಂದೆ ಓದಿ.

ಮೇಷ ರಾಶಿ
ಮೇಷ ರಾಶಿಯವರು ತಿಂಗಳ ಆರಂಭದಲ್ಲಿ ಕೆಲವು ಸಮಸ್ಯೆಗಳಿಂದ ಬಳಲಬಹುದು. ಮೇಷ ರಾಶಿಯ ಅಧಿಪತಿ ಮಂಗಳನು ಜನವರಿ ತಿಂಗಳಲ್ಲಿ 8ನೇ ಮನೆಯಲ್ಲಿರುತ್ತಾನೆ. ಮಂಗಳವು 8 ನೇ ಮನೆಯಲ್ಲಿದ್ದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕುಂಡಲಿಯಲ್ಲಿ ಕೇತುವಿನೊಡನೆ ಮಂಗಳ ಗ್ರಹ ಇರುತ್ತಾನೆ. ಆದ್ದರಿಂದ, ನಿಮ್ಮ ಆರೋಗ್ಯವನ್ನು ಪರೀಕ್ಷಿಸಿ. ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ಕುಟುಂಬದಲ್ಲಿ ಕಲಹ ಉಂಟಾಗಬಹುದು. ಹೀಗಾಗಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಕುಟುಂಬದೊಂದಿಗೆ ನೀವು ಪ್ರಯಾಣಿಸುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ನಿಮ್ಮ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯಿಂದಲೂ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ವೃಷಭ ರಾಶಿ
ವರ್ಷದ ಮೊದಲ ತಿಂಗಳು ನಿಮಗೆ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ವೃಷಭ ರಾಶಿಯ ಅಧಿಪತಿ ಶುಕ್ರನು 8ನೇ ಮನೆಯಲ್ಲಿರುತ್ತಾನೆ. ನಿಮ್ಮ ಆರೋಗ್ಯವನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕು. ಆರ್ಥಿಕವಾಗಿ ವಿಷಯಗಳು ಉತ್ತಮವಾಗಿರುತ್ತವೆ. ನಿಮ್ಮ ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಈ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ನೀವು ಭಾರಿ ಲಾಭವನ್ನು ಗಳಿಸುತ್ತೀರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಜನವರಿ 14ರವರೆಗೆ ಯಾವುದೇ ಜಮೀನು, ಮನೆ ಖರೀದಿಸಬೇಡಿ. ವ್ಯವಹಾರದಲ್ಲಿ ನಿಮ್ಮ ಪಾಲುದಾರರೊಂದಿಗೆ ಕೆಲವು ವಿವಾದಗಳಿರಬಹುದು.

ಮಿಥುನ ರಾಶಿ
ಉತ್ತಮವೆಂದು ಪರಿಗಣಿಸಲಾದ 8 ನೇ ಮನೆಯಲ್ಲಿ ಮಿಥುನ ರಾಶಿಯ ಅಧಿಪತಿ ಬುಧ ಇರುತ್ತದೆ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದಲ್ಲಿನ ವಿಷಯಗಳು ಸಹ ಸುಗಮವಾಗಿರುತ್ತವೆ. ನಿಮ್ಮ ಕುಟುಂಬದಿಂದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ. ಶನಿ ಮತ್ತು ಸೂರ್ಯನು 8 ನೇ ಮನೆಯಲ್ಲಿ ಭೇಟಿಯಾಗುತ್ತಾರೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕೆಲಸದಲ್ಲಿ ಸ್ವಲ್ಪ ವಿಳಂಬವಾಗಬಹುದು. ನಿಮ್ಮ ಸಂಬಂಧಿಕರೊಂದಿಗೆ ಸಮಸ್ಯೆ ಎದರಾಗಬಹುದು. ನೀವು ವಿದೇಶ ಪ್ರವಾಸ ಮಾಡಬಹುದು. ಒಟ್ಟಾರೆಯಾಗಿ, ಇದು ಉತ್ತಮ ತಿಂಗಳು ಆಗಿರುತ್ತದೆ.

ಕರ್ಕಟಕ ರಾಶಿ
ಮಂಗಳ ಗ್ರಹದ ಸಂಚಾರ ನಿಮಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ನಿಮಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆಗಳಿವೆ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ಹುಡುಕಲು ಇದು ಉತ್ತಮ ಸಮಯವಾಗಿದೆ. ಮುಂಬರುವ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಸುಧಾರಣೆಗಳನ್ನು ಕಾಣುವಿರಿ. ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳಿವೆ. ಆದಾಗ್ಯೂ, ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಆರೋಗ್ಯದ ವಿಷಯದಲ್ಲಿಯೂ ಸಹ, ನೀವು ನಿಕಟವಾಗಿ ಪರಿಶೀಲಿಸಬೇಕು. ನೀವು ಹೊಟ್ಟೆಯ ಸಮಸ್ಯೆಗಳು, ರಕ್ತದೊತ್ತಡದಿಂದ ಬಳಲುತ್ತಬಹುದು. ನೀವು ಮಾರಾಟ, ವಿಮೆ ಅಥವಾ ಷೇರು ಮಾರುಕಟ್ಟೆಯಿಂದ ಕೆಲವು ಪ್ರಯೋಜನಗಳನ್ನು ಪಡೆಯಬಹುದು.

ಸಿಂಹ ರಾಶಿ
ಈ ರಾಶಿಚಕ್ರದ ಚಿಹ್ನೆಯು ಮುಂಬರುವ ತಿಂಗಳಲ್ಲಿ ಶಿಕ್ಷಣ, ವ್ಯಾಪಾರ ಮತ್ತು ಮಕ್ಕಳ ವಿಷಯದಲ್ಲಿ ಲಾಭವನ್ನು ಕಾಣಲಿದೆ. 6 ನೇ ಮನೆಯಲ್ಲಿ ಸೂರ್ಯನ ಸಂಚಾರವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ನೀವು ಯಾವುದೇ ಸಾಲವನ್ನು ತೆಗೆದುಕೊಂಡಿದ್ದರೆ, ಅದನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಈ ತಿಂಗಳು ನೀವು ವ್ಯಾಪಾರ ಕ್ಷೇತ್ರದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಕೆಲಸ ಮಾಡುವ ವೃತ್ತಿಪರರಾಗಿದ್ದರೆ, ಕೆಲಸದ ಹೊರೆ ಕಡಿಮೆಯಾಗುವುದನ್ನು ನೀವು ನೋಡುತ್ತೀರಿ. ಮುಂಬರುವ ತಿಂಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿಲ್ಲ. ಗ್ಯಾಸ್, ಮಲಬದ್ಧತೆ, ಅಜೀರ್ಣ, ಅತಿಸಾರದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಬಳಲಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದಾದರೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ.

ಕನ್ಯಾರಾಶಿ
ಜನವರಿ ತಿಂಗಳಲ್ಲಿ ಧನು ರಾಶಿಯಲ್ಲಿ ಮಂಗಳ ಸಂಚಾರವು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಆರ್ಥಿಕ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀವು ಆರ್ಥಿಕ ಸಮೃದ್ಧಿಯನ್ನು ನೋಡುತ್ತೀರಿ. ಜಾತಕದಲ್ಲಿ ರಾಜಯೋಗವಿದೆ. ಅದೃಷ್ಟ ನಿಮ್ಮ ಪರವಾಗಿರಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ನೀವು ಎಲ್ಲೋ ಹಣವನ್ನು ಹೂಡಿಕೆ ಮಾಡಿದ್ದರೆ, ನಿಮಗೆ ಬಹಳಷ್ಟು ಲಾಭವಾಗುತ್ತದೆ. ಕೆಲಸದ ಸ್ಥಳದಲ್ಲಿ ಸಹಕಾರ ಕಡಿಮೆಯಾಗುವುದು ವಿಳಂಬಕ್ಕೆ ಕಾರಣವಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದಾದರೆ ಗಮನ ಕೊಡಿ.

ತುಲಾ ರಾಶಿ
ಬುಧದ ಸ್ಥಾನದಿಂದಾಗಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಅನುಕೂಲಕರ ಪರಿಸ್ಥಿತಿಗಳನ್ನು ನೋಡುತ್ತೀರಿ. ನಿಮ್ಮ ವ್ಯವಹಾರದಲ್ಲಿ ನೀವು ಪ್ರಗತಿಯನ್ನು ಸಹ ನೋಡುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಸಾಧ್ಯತೆಯಿದೆ. ಈ ತಿಂಗಳು ನೀವು ಉತ್ತಮ ಮಾರ್ಗದರ್ಶನವನ್ನು ಪಡೆಯುತ್ತೀರಿ. ಅದು ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ನೀವು ವ್ಯಾಪಾರ ಅಥವಾ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ
ನಿಮ್ಮ ಕುಟುಂಬದಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಸ್ಥಳಕ್ಕೆ ಹೊಸ ಅತಿಥಿ ಬರುವ ಸಾಧ್ಯತೆಗಳಿವೆ. ಫಲಿತಾಂಶವನ್ನು ಪಡೆಯಲು ನೀವು ಸಾಕಷ್ಟು ಶ್ರಮವನ್ನು ಮಾಡಬೇಕಾಗುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದರೆ, ನೀವು ಯಶಸ್ಸನ್ನು ಪಡೆಯುತ್ತೀರಿ. ಒಟ್ಟಾರೆಯಾಗಿ ಕುಟುಂಬದಲ್ಲಿ ವಿಷಯಗಳು ಉತ್ತಮವಾಗಿದ್ದರೂ, ರಾಹು ಸ್ಥಾನದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಯಾವುದೇ ಕಾರಣವಿಲ್ಲದೆ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ.

ಧನು ರಾಶಿ
ನಿಮ್ಮ ಗುರಿಗಳನ್ನು ಸಾಧಿಸಲು ನೀವು ಸಾಕಷ್ಟು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ. ನೀವು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಮುಂಬರುವ ತಿಂಗಳಲ್ಲಿ ನಿಮ್ಮ ಸ್ನೇಹಿತರ ಬೆಂಬಲವನ್ನು ಸಹ ನೀವು ನೋಡುತ್ತೀರಿ. ಕುಟುಂಬ ಸಂಬಂಧಗಳು ಉತ್ತಮವಾಗಿರುತ್ತವೆ. ನಿಮಗೆ ಕೆಲಸದ ಹೊರೆ ಬೀಳುತ್ತದೆ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನೀವು ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ, ಇದು ಮಂಗಳಕರ ಸಮಯ. ನೀವು ವಿದೇಶ ಪ್ರವಾಸ ಮಾಡಲು ಬಯಸಿದರೆ ಇದು ಅನುಕೂಲಕರ ಸಮಯ.

ಮಕರ ರಾಶಿ
ತಿಂಗಳ ಆರಂಭದಲ್ಲಿ ಧಾರ್ಮಿಕ ಕೆಲಸದಲ್ಲಿ ಸಾಕಷ್ಟು ಸಮಯವನ್ನು ಹೂಡಿಕೆ ಮಾಡುತ್ತೀರಿ. ನೀವು ಬಹಳಷ್ಟು ಜನರಿಗೆ ಸಹಾಯ ಮಾಡುವಿರಿ. ಆದಾಗ್ಯೂ, ಈ ಸಮಯದಲ್ಲಿ ನೀವು ಯಾವ ಕೆಲಸವನ್ನು ಮಾಡುತ್ತೀರಿ ಎಂಬುದರ ಬಗ್ಗೆ ಗಮನ ಕೊಡಿ. ಪೂರ್ವಿಕರ ಆಸ್ತಿಯಿಂದ ಲಾಭವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ. ಈ ತಿಂಗಳಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ತಿಂಗಳ ಕೊನೆಯಲ್ಲಿ ನಿಮಗೆ ಕೆಲಸ ಸಿಗಬಹುದು. ವ್ಯಾಪಾರದಲ್ಲಿ ಹೆಚ್ಚು ಖರ್ಚು ಮಾಡಬೇಡಿ ಅಥವಾ ನೀವು ನಷ್ಟವನ್ನು ಅನುಭವಿಸಬಹುದು.

ಕುಂಭ ರಾಶಿ
ನೀವು ಮದುವೆಯ ಪ್ರಸ್ತಾಪವನ್ನು ಹುಡುಕುತ್ತಿದ್ದರೆ, ನಿಮಗೆ ಶುಭವಾಗಲಿದೆ. ಜನವರಿಯಲ್ಲಿ ನೀವು ಯಾರೊಂದಿಗಾದರೂ ಜಗಳವಾಡಬಹುದು. ನಿಮ್ಮ ಹಣವನ್ನು ಹೂಡಿಕೆ ಮಾಡಲು ನೀವು ಬಯಸಿದರೆ, ಬಹಳ ಜಾಗರೂಕರಾಗಿರಿ. ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ನಿಮ್ಮ ಶತ್ರುಗಳು ಹಾನಿ ಮಾಡಲು ಪ್ರಯತ್ನಿಸಬಹುದು. ನೀವು ಹೊಸದನ್ನು ಮಾಡಲು ಯೋಜಿಸಿದರೆ, ನಿಮ್ಮ ದಾರಿಯಲ್ಲಿ ಅಡೆತಡೆಗಳು ಬರುತ್ತವೆ. ಈ ಸಮಯದಲ್ಲಿ ನೀವು ಸಾಕಷ್ಟು ಪ್ರಯಾಣಿಸುತ್ತೀರಿ. ನಿಮ್ಮ ಪೋಷಕರಿಂದ ನೀವು ಉತ್ತಮ ಬೆಂಬಲವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಮೀನ ರಾಶಿ
ಮುಂಬರುವ ತಿಂಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ. ನಿಮ್ಮ ಒಡಹುಟ್ಟಿದವರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ತಿಂಗಳಿನಲ್ಲಿ ನಿಮ್ಮ ವೃತ್ತಿಜೀವನದ ಬಗ್ಗೆ ನೀವು ಸ್ವಲ್ಪ ಚಿಂತಿಸುತ್ತಿರಬಹುದು. ಕೆಲಸದ ಸ್ಥಳದಲ್ಲಿ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ನೀವು ವ್ಯಾಪಾರ ಮಾಡಿದರೆ, ನೀವು ಬಹಳಷ್ಟು ಲಾಭವನ್ನು ಪಡೆಯುತ್ತೀರಿ. ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು.
-
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ












Click it and Unblock the Notifications