Mercury Transits Twice in May 2024: ಬುಧನಿಂದ ಉಂಟಾದ ರಾಜಯೋಗ: ಈ 3 ರಾಶಿಯವರು ಜೀವನದಲ್ಲಿ ಹಣದ ಮಳೆ- ನಿಮ್ಮ ರಾಶಿ ಇದೇನಾ?
ಗ್ರಹಗಳ ಸಂಚಾರ ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳು ಸಂಚಾರದ ವೇಳೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಆಗ ಒಂದು ರಾಶಿಯಲ್ಲಿ ಹಲವು ಗ್ರಹಗಳು ಒಟ್ಟಿಗೆ ಸಂಚಾರ ಮಾಡಬಹುದು. ಇದರಿಂದ ಅನೇಕ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಇದರಿಂದ ಜನರ ಜೀವನದಲ್ಲಿ ಅನೇಕ ಏರಿಳಿತಗಳು ಕಂಡು ಬರುತ್ತವೆ.
ಅಂದಹಾಗೆ ಮೇ 2024 ರಲ್ಲಿ ಬುಧ ಗ್ರಹ ತನ್ನ ಸ್ಥಾನವನ್ನು ಎರಡು ಬಾರಿ ಬದಲಾಯಿಸುತ್ತದೆ. ಹೀಗಾಗಿ ಹನ್ನೆರೆಡು ರಾಶಿಚಕ್ರ ಚಿಹ್ನೆಯವರು ತಮ್ಮ ಜೀವನದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹಾಗಾದರೆ ಬುಧ ಗ್ರಹ ಯಾವ ದಿನಾಂಕದಂದು ಸಾಗುತ್ತದೆ? ಇದರ ಪರಿಣಾಮ ಏನು ಎಂದು ತಿಳಿಯೋಣ.
ಬುಧ ಸಂಚಾರದ ದಿನಾಂಕ
ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಬುದ್ಧಿವಂತಿಕೆ, ಕಲಿಕೆ ಸಾಮಾರ್ಥ್ಯಗಳಿಗೆ ಕಾರಣವಾದ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇದು ಮೇ 10, 2024 ರಂದು ಸಂಜೆ 06:39 ಕ್ಕೆ ಮೇಷ ರಾಶಿಯಲ್ಲಿ ಮೊದಲು ಸಾಗಿಸುತ್ತದೆ. ಅದರ ನಂತರ 31 ಮೇ 2024 ರಂದು ವೃಷಭ ರಾಶಿಗೆ ಚಲಿಸುತ್ತದೆ.
ಮೇ 2024ರಲ್ಲಿ ಬುಧವು ಎರಡು ವಿಭಿನ್ನ ಚಿಹ್ನೆಗಳಲ್ಲಿ ಚಲಿಸಲಿದೆ. ಈ ಕಾರಣದಿಂದಾಗಿ, ಕೆಲವು ರಾಶಿಗಳಿಗೆ ಅದೃಷ್ಟ ಮನೆ ಬಾಗಿಲಿಗೆ ಬರಲಿದೆ. ಕೆಲವರ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದಾರೆ. ಹಾಗಾದರೆ ಯಾವ ರಾಶಿಯವರು ಬುಧ ಸಂಕ್ರಮಣದಿಂದ ಅದೃಷ್ಟವನ್ನು ಪಡೆಯಲಿದ್ದಾರೆ ಎಂದು ತಿಳಿಯೋಣ.

ಮೇಷ ರಾಶಿ
ಮೇ 2024ರಲ್ಲಿ ಬುಧ ಸಂಚಾರ ಮೇಷ ರಾಶಿಯವರಿಗೆ ಅನುಕೂಲಕರವಾಗಿದೆ. ಮೇ 31ರಂದು ಬುಧ ಗ್ರಹ ಮೇಷ ರಾಶಿಯ ಹಣದ ಮನೆಗೆ ಪ್ರವೇಶಿಸುತ್ತದೆ. ಈ ಅವಧಿಯಲ್ಲಿ ಮೇಷ ರಾಶಿಯ ಸ್ಥಳೀಯರ ವ್ಯಕ್ತಿತ್ವ ಸುಧಾರಿಸುತ್ತದೆ. ತಮ್ಮ ವ್ಯವಹಾರಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವಿವಿಧ ಮೂಲಗಳಿಂದ ಹಠಾತ್ ಆರ್ಥಿಕ ಲಾಭ ಸಹ ಬರಲಿದೆ.
ವ್ಯಾಪಾರದಲ್ಲಿ ಮೇಷ ರಾಶಿಯವರು ನಿಪುಣರಾಗಿರುತ್ತಾರೆ. ಕಠಿಣ ಕೆಲಸವನ್ನು ಅವರು ನಿಭಾಯಿಸುತ್ತಾರೆ. ಇದರಿಂದ ಅವರ ಖ್ಯಾತಿ ಹೆಚ್ಚಾಗಲಿದೆ. ಹೊಸ ವ್ಯವಹಾರ ಆರಂಭಿಸುವಿರಿ. ಹೂಡಿಕೆ ಮಾಡಬಹುದು. ಅದರಿಂದ ಲಾಭದ ನಿರೀಕ್ಷೆ ಇದೆ. ಅಲ್ಲದೆ ಮೇಷ ರಾಶಿಯವರ ಮಾತು ತುಂಬಾ ಸಿಹಿಯಾಗಿರುತ್ತವೆ. ಇದರಿಂದಾಗಿ ನಿಮ್ಮ ಮಾತುಗಳಿಂದ ನೀವು ಪ್ರಭಾವ ಬೀರುವಿರಿ.

ಕರ್ಕಾಟಕ ರಾಶಿ
ಮೇ 2024ರಲ್ಲಿ ಬುಧ ಸಂಕ್ರಮಣ ಕರ್ಕಾಟಕ ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭ ತಂದುಕೊಡಲಿದೆ. ಕರ್ಕಾಟಕ ರಾಶಿಯವರ ಕರ್ಮ ಮತ್ತು ಆದಾಯದ ಮನೆಗಳಲ್ಲಿ ಬದಲಾವಣೆ ಕಂಡುಬರಲಿದೆ. ವ್ಯವಹಾರದಲ್ಲಿ ಲಾಭದ ಲಕ್ಷಣಗಳಿವೆ. ಶ್ರಮ ವಹಿಸಿ ಕೆಲಸ ಮಾಡಿದರೆ ಅದರ ಫಲಿ ನೀವು ಪಡೆಯುವಿರಿ.
ಹೆಚ್ಚಿನ ಹಣ ಹಾಗೂ ಲಾಭ ಗಳಿಸುವ ಅನೇಕ ಅವಕಾಶಗಳು ನಿಮಗೆ ಸಿಗಲಿವೆ. ಗ್ರಹಗಳ ಸಂಚಾರದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಜೊತೆಗೆ ಹೆಚ್ಚಿನ ವೇತನ ಕೂಡ ಸಿಗಲಿದೆ.

ಸಿಂಹ ರಾಶಿ
ಬುಧ ಸಂಕ್ರಮಾಣ ಮೇ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಈ ಬುಧ ಸಂಕ್ರಮಣ ಸಿಂಹರ ರಾಶಿಯವರ ಒಂಬತ್ತನೇ ಮನೆಯಲ್ಲಿ ನಡೆಯುತ್ತದೆ. ಇದರಿಂದಾಗಿ ಹಣವನ್ನು ಗಳಿಸುವ ಅದೃಷ್ಟವನ್ನು ಸಿಂಹ ರಾಶಿಯವರು ಪಡೆಯುತ್ತಾರೆ. ಈ ಅವಧಿಯಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ.
ನಿಮ್ಮ ಪ್ರಸ್ತುತ ಕೆಲಸದ ಸ್ಥಳದಲ್ಲಿ ನೀವು ಸೂಕ್ತವಾದ ವರ್ಗಾವಣೆಯನ್ನು ಹುಡುಕುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಆಸೆ ಈಡೇರುತ್ತದೆ. ವ್ಯಾಪಾರಸ್ಥರು ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. ಜೀವನದಲ್ಲಿ ಸಾಧನೆಗೆ ಅವಕಾಶಗಳು ಸಿಗಲಿವೆ. ಇತರರಿಗೆ ಸಾಲ ನೀಡುವ ಮಟ್ಟಕ್ಕೆ ನೀವು ಬೇಳೆಯುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications