Mercury Transit in Taurus 2024: ವೃಷಭದಲ್ಲಿ ಬುಧ ಸಂಕ್ರಮಣದಿಂದಾಗಿ ಈ 3 ರಾಶಿಯವರ ವ್ಯಾಪಾರದಲ್ಲಿ ಹಣದ ಸುರಿಮಳೆ

ಗ್ರಹಗಳು ಸೌರವ್ಯೂಹದಲ್ಲಿ ಸದಾ ಸಂಚರಿಸುತ್ತಿರುತ್ತವೆ. ಈ ವೇಳೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗ್ರಹಗಳು ಸಂಚಾರ ಮಾಡುತ್ತವೆ. ಇದರ ಪರಿಣಾಮ ಎಲ್ಲಾ ದ್ವಾದಶಿ ರಾಶಿಗಳ ಮೇಲೆ ಬೀಳಲಿದೆ.

ವೈದಿಕ ಜ್ಯೋತಿಷ್ಯದಲ್ಲಿ ಬುಧನನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧವನ್ನು ಮಾತು, ಬುದ್ಧಿವಂತಿಕೆ, ಅಧ್ಯಯನ, ಷೇರು ಮಾರುಕಟ್ಟೆ, ಆರ್ಥಿಕತೆ, ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತಿ ಬಾರಿ ಬುಧವು ಒಂದು ರಾಶಿಯಲ್ಲಿ ಸಾಗಿಸಿದಾಗ, ಅದರ ಪ್ರಭಾವ ಜೀವನದ ಈ ಎಲ್ಲಾ ಅಂಶಗಳಲ್ಲಿ ಗೋಚರಿಸುತ್ತದೆ.

ಪ್ರಸ್ತುತ ಬುಧನು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮೇ 10 ರಂದು ಬುಧ ಗ್ರಹ ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ನಂತರ ಈ ತಿಂಗಳ ಕೊನೆಯಲ್ಲಿ ಮೇ 31ರಂದು ಶುಕ್ರನ ಚಿಹ್ನೆಯಾದ ವೃಷಭ ರಾಶಿಯನ್ನು ಬುಧ ಗ್ರಹ ಪ್ರವೇಶಿಸುತ್ತದೆ. ಈ ಸಂಕ್ರಮಣದ ಪರಿಣಾಮ ಎಲ್ಲಾ ರಾಶಿಗಳಲ್ಲಿ ನೋಡುಬರಲಿದೆ. ಈ ಸಂಕ್ರಮಣ ಕೆಲವು ರಾಶಿಯ ಜನರಿಗೆ ಅದೃಷ್ಟವನ್ನು ನೀಡುತ್ತದೆ.

ವಿಶೇಷವಾಗಿ ಉದ್ಯಮ ಮತ್ತು ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಕೆಲಸದಲ್ಲಿ ಹಣದ ಹರಿವು ಹೆಚ್ಚಾಗಲಿದೆ. ಈಗ ವೃಷಭ ರಾಶಿಯಲ್ಲಿ ಬುಧನೊಂದಿಗೆ ಯಾರಿಗೆ ಅದೃಷ್ಟ ಹೊಳೆಯಲಿದೆ ಎಂದು ನೋಡೋಣ.

Mercury transit in taurus on 31 may 2024 these zodiac signs will be lucky in kannada

ವೃಷಭ ರಾಶಿ

ಬುಧ ಗ್ರಹ ವೃಷಭ ರಾಶಿಯ ಮೊದಲ ಮನೆಗೆ ಸಾಗುತ್ತದೆ. ಇದು ಈ ವೃಷಭ ರಾಶಿಯವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ವೃಷಭ ರಾಶಿಯಲ್ಲಿ ಬುಧ ಸಾಗುವುದರಿಂದ ಇದು ಉತ್ತಮ ಫಲ ನೀಡುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಇತರ ಸೌಲಭ್ಯಗಳು ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಅದೃಷ್ಟದ ಬೆಂಬಲ ಸಂಪೂರ್ಣವಾಗಿ ಲಭ್ಯವಿದೆ. ಜಂಟಿ ಉದ್ಯಮಿಗಳು ಈ ಬದಲಾವಣೆಯಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ.

Mercury transit in taurus on 31 may 2024 these zodiac signs will be lucky in kannada

ಮಿಥುನ ರಾಶಿ

ಬುಧ ಗ್ರಹ ಮಿಥುನ ರಾಶಿಯ 12ನೇ ಮನೆಗೆ ಹೋಗುತ್ತದೆ. ಹೀಗಾಗಿ ಈ ರಾಶಿಚಕ್ರದವರು ಸಾಕಷ್ಟು ಹಣವನ್ನು ಉಳಿಸುತ್ತಾರೆ. ಅದೃಷ್ಟದ ಬೆಂಬಲ ಸಂಪೂರ್ಣವಾಗಿ ಲಭ್ಯವಿರುತ್ತದೆ. ಇದು ಎಲ್ಲಾ ಕೆಲಸಗಳಲ್ಲಿ ಉತ್ತಮ ಯಶಸ್ಸನ್ನು ತರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ವ್ಯಾಪಾರಸ್ಥರ ಕೈಗೆ ಸಾಕಷ್ಟು ಹಣ ಹರಿದು ಬರಲಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ಬಹಳಷ್ಟು ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಇದು ಮಿಥುನ ರಾಶಿಯವರಿಗೆ ಲಾಭ ತಂದು ಕೊಡಲಿದೆ.

Mercury transit in taurus on 31 may 2024 these zodiac signs will be lucky in kannada

ಕರ್ಕಾಟಕ ರಾಶಿ

ಬುಧ ಗ್ರಹ ಕರ್ಕಾಟಕ ರಾಶಿಯ 11ನೇ ಮನೆಗೆ ಸಾಗುತ್ತದೆ. ಇದರಿಂದ ಈ ಕರ್ಕಾಟಕ ರಾಶಿಯವರ ಆದಾಯ ಹೆಚ್ಚುತ್ತದೆ. ಆರ್ಥಿಕವಾಗಿ ಈ ಸಮಯ ತುಂಬಾ ಚೆನ್ನಾಗಿರಲಿದೆ. ಹಣ ಗಳಿಸಲು ಹೆಚ್ಚಿನ ಅವಕಾಶಗಳು ದೊರೆಯಲಿವೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ನೀವು ಅವರಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ಮಸಯದಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚುತ್ತದೆ. ಮಾತಿನ ಮೂಲಕ ನೀವು ಅನೇಕ ಕೆಲಸಗಳನ್ನು ಉತ್ತಮವಾಗಿ ಮಾಡುವಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+