Mercury Transit 2024: ತುಲಾ ರಾಶಿಯಲ್ಲಿ ಬುಧ ಸಂಕ್ರಮಣ: ಈ ರಾಶಿಗೆ ಇಂದೇ ಪ್ರಮೋಷನ್

ಗ್ರಹಗಳಲ್ಲಿ ಬುಧಕ್ಕೆ ಹೆಚ್ಚಿನ ಮಹತ್ವವಿದೆ. ಇದು ಕಲಿಕೆ ಮತ್ತು ಬುದ್ಧಿವಂತಿಕೆ ಹೆಚ್ಚಿಸುವ ಗ್ರಹವಾಗಿದೆ. ಬುಧದ ಆಶೀರ್ವಾದವಿಲ್ಲದೆ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಬುಧ ಗ್ರಹ ಕಲಿಕೆಯಲ್ಲಿ ಸಹಾಯ ಮಾಡುತ್ತದೆ. ವ್ಯಾಪಾರದಲ್ಲಿ ಯಶಸ್ಸನ್ನು ತೋರಿಸಲು ಬುಧ ಗ್ರಹದ ಆಶೀರ್ವಾದ ಇರಲೇ ಬೇಕು. ವ್ಯಾಪಾರದಲ್ಲಿ ತೊಡಗಿರುವವರ ಜಾತಕದಲ್ಲಿ ಬುಧದ ಸ್ಥಾನ ಬಲವಾಗಿದ್ದರೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ಒಂದು ರಾಶಿಯಲ್ಲಿ ಬುಧದ ಸ್ಥಾನವು ಮಾನಸಿಕ ಸ್ಪಷ್ಟತೆ, ಆರೋಗ್ಯ ಮತ್ತು ಸಂತೋಷವನ್ನು ಉತ್ತೇಜಿಸುತ್ತದೆ. ಇದು ನಿರ್ದಿಷ್ಟವಾಗಿ ವಾಣಿಜ್ಯ ಜಗತ್ತಿನಲ್ಲಿ ಆಳವಾದ ಸಂಶೋಧನೆ ಮತ್ತು ಸಂವೇದನಾಶೀಲ ನಿರ್ಧಾರಗಳನ್ನು ಪ್ರೋತ್ಸಾಹಿಸಬಹುದು. ಅಲ್ಲದೆ ಬುಧವು ವ್ಯಾಪಾರ ಮತ್ತು ಆಧ್ಯಾತ್ಮಿಕ ಪ್ರಯತ್ನಗಳನ್ನು ಸುಧಾರಿಸುತ್ತದೆ.

ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಸಮಯ

ಬುಧವು ಅಕ್ಟೋಬರ್ 10, 2024 ರಂದು 11:09 ಗಂಟೆಗೆ ತುಲಾ ರಾಶಿಗೆ ಸಾಗಲಿದೆ. ಪ್ರತಿಯೊಂದು ರಾಶಿಚಕ್ರದ ಮೇಲೆ ಅದರ ಪ್ರಭಾವ ಬೀಳಲಿದೆ. ಹಾಗಾದರೆ ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಯಾವ ರಾಶಿಯವರಿಗೆ ಶುಭ ಫಲ ನೀಡಲಿದೆ ಎಂಬುದನ್ನು ತಿಳಿಯೋಣ.

ತುಲಾ ರಾಶಿಯಲ್ಲಿ ಬುಧ ಸಂಕ್ರಮಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

Mercury Transit In Libra on 10th October 2024 Impact And Remedies On 12 Zodiac Signs In Kannada

ಮೇಷ ರಾಶಿ

ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಮೇಷ ರಾಶಿಯವರಿಗೆ ಶುಭ ಫಲ ನೀಡಲಿದೆ. ಮೇಷ ರಾಶಿಯ ಮೂರನೇ ಮತ್ತು ಆರನೇ ಮನೆಯ ಅಧಿಪತಿಯಾದ ಬುಧ, ಮೇಷ ರಾಶಿಯ ಏಳನೇ ಮನೆಯಲ್ಲಿ ಸಾಗುತ್ತಾನೆ. ತುಲಾ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ನೀವು ಸ್ನೇಹಿತರು ಮತ್ತು ಸಹವರ್ತಿಗಳೊಂದಿಗೆ ಹೆಚ್ಚಿನ ಪ್ರಯಾಣವನ್ನು ಮಾಡಬಹುದು.

ವೃತ್ತಿಜೀವನದಲ್ಲಿ ನೀವು ವಿದೇಶದಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಅದು ನಿಮಗೆ ಭರವಸೆ ಮತ್ತು ಪ್ರಗತಿಯನ್ನು ನೀಡುತ್ತದೆ. ವ್ಯಾಪಾರದಲ್ಲಿ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಬಹು ಹಂತದ ಮಾರ್ಕೆಟಿಂಗ್ ವ್ಯವಹಾರದಲ್ಲಿಯೂ ಸಹ ಯಶಸ್ವಿಯಾಗಬಹುದು. ಈ ಸಮಯದಲ್ಲಿ ನೀವು ಉತ್ತಮ ಹಣವನ್ನು ಗಳಿಸಬಹುದು. ವೈಯಕ್ತಿಕ ಜೀವನ ಸುಖಮಯವಾಗಿರುತ್ತದೆ. ಆದರೆ ಈ ಸಮಯದಲ್ಲಿ ಆರೋಗಯದ ಬಗ್ಗೆ ಕೊಂಚ ಜಾಗರೂಕರಾಗಿರಬೇಕು.

Mercury Transit In Libra on 10th October 2024 Impact And Remedies On 12 Zodiac Signs In Kannada

ವೃಷಭ ರಾಶಿ

ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ವೃಷಭ ರಾಶಿಯವರಿಗೆ ಮಿಶ್ರ ಫಲ ನೀಡಲಿದೆ. ವೃಷಭ ರಾಶಿಯವರ ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾದ ಬುಧ ಆರನೇ ಮನೆಯಲ್ಲಿ ಸಾಗುತ್ತಾನೆ. ತುಲಾ ರಾಶಿಯಲ್ಲಿ ಈ ಬುಧ ಸಂಕ್ರಮಣದ ಸಮಯದಲ್ಲಿ ವೃಷಭ ರಾಶಿಯವರು ಸಾಲ ಮಾಡುವ ಸ್ಥಿತಿ ಬರಬಹುದು. ವೃತ್ತಿಜೀವನದಲ್ಲಿ ವಿಧಾನವಾಗಿ ಯಶಸ್ವಿಯಾಗಬಹುದು.

ವ್ಯಾಪಾರದಲ್ಲಿ ಮಧ್ಯಮ ಲಾಭ ಇರುತ್ತದೆ. ನೀವು ಹೆಚ್ಚು ಹಣ ಸಂಗ್ರಹಿಸಲು ಸಾಧ್ಯವಾಗದಿರಬಹುದು. ಇತರ ಉದ್ಯೋಗ ಅವಕಾಶಗಳು ಸಿಗುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ಕೆಲಸವನ್ನು ಬದಲಾಯಿಸಬೇಡಿ. ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ಜಾಗರೂಕರಾಗಿರಬೇಕು. ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

Mercury Transit In Libra on 10th October 2024 Impact And Remedies On 12 Zodiac Signs In Kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಮಂಗಳಕರವಾಗಿದೆ. ಮಿಥುನ ರಾಶಿಯ ಮೊದಲ ಮತ್ತು ನಾಲ್ಕನೇ ಮನೆಯ ಅಧಿಪತಿ ಬುಧ ಮಿಥುನ ರಾಶಿಯ ಐದನೇ ಮನೆಯಲ್ಲಿ ಸಾಗುತ್ತಾನೆ. ಇದರಿಂದ ಹೆಚ್ಚಿನ ಲಾಭ ಸಿಗಲಿದೆ. ಉದ್ಯಮಗಳು ಧನಲಾಭ ಪಡೆಯಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಬಡ್ತಿ ಪಡೆಯುವಿರಿ.

ವ್ಯಾಪಾರದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗಲಿದೆ. ಲಕ್ಷ್ಮಿ ದೇವಿಯ ಕೃಪೆ ನಿಮ್ಮಮೇಲಿರಲಿದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ನೆಲೆಸಲಿದೆ. ಈ ಸಮಯದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಇರಬಹುದು ಜಾಗರೂಕರಾಗಿರಿ.

Mercury Transit In Libra on 10th October 2024 Impact And Remedies On 12 Zodiac Signs In Kannada

ಕರ್ಕಾಟಕ ರಾಶಿ

ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಕಟಕ ರಾಶಿಯವರಿಗೆ ಶುಭ ಫಲಿತಾಂಶವನ್ನು ನೀಡುವುದಿಲ್ಲ. ಕಟಕ ರಾಶಿಯ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾದ ಬುಧ, ಕಟಕ ರಾಶಿಯ ನಾಲ್ಕನೇ ಮನೆಯಲ್ಲಿ ಸಾಗುತ್ತಾನೆ. ಇದರಿಂದ ನಿಮ್ಮ ಕುಟುಂಬ ಮತ್ತು ಮನೆ ಸಂಬಂಧಿತ ಸಮಸ್ಯೆಗಳಲ್ಲಿ ನೀವು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ.

ವೃತ್ತಿಜೀವನದಲ್ಲಿ ಖ್ಯಾತಿಯನ್ನು ಕಳೆದುಕೊಳ್ಳಬಹುದು. ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಸಂಗಾತಿಯೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇದಕ್ಕೆ ಖರ್ಚುಗಳು ಹೆಚ್ಚಾಗಬಹುದು.

Mercury Transit In Libra on 10th October 2024 Impact And Remedies On 12 Zodiac Signs In Kannada

ಸಿಂಹ ರಾಶಿ

ಸಿಂಹ ರಾಶಿಯವರಿಗೆ ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಅದೃಷ್ಟವನ್ನು ಹೆಚ್ಚಿಸಲಿದೆ. ಸಿಂಹ ರಾಶಿಯ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾದ ಬುಧ, ಸಿಂಹ ರಾಶಿಯ ಮೂರನೇ ಮನೆಯಲ್ಲಿ ಸಾಗುತ್ತಾನೆ. ಈ ಸಮಯದಲ್ಲಿ ಅಭಿವೃದ್ಧಿಯೊಂದಿಗೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಹಣ ಸಂಪಾದನೆ ಮಾಡುವಿರಿ.

ವಿದೇಶದಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಪ್ರಯತ್ನಗಳಿಂದ ನೀವಂದುಕೊಂಡಿದ್ದನು ನೀವು ಸಾಧಿಸುವಿರಿ. ಲಾಭದ ಮಾರ್ಗಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಸಾಕಷ್ಟು ಹಣ ಗಳಿಸುವಿರಿ. ಸಂಗಾತಿಯೊಂದಿಗೆ ಹೊಂದಾಣಿಕೆ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

Mercury Transit In Libra on 10th October 2024 Impact And Remedies On 12 Zodiac Signs In Kannada

ಕನ್ಯಾ ರಾಶಿ

ಕನ್ಯಾ ರಾಶಿಯ ಮೊದಲ ಮತ್ತು ಹತ್ತನೇ ಮನೆಯ ಅಧಿಪತಿಯಾದ ಬುಧ ಎರಡನೇ ಮನೆಯಲ್ಲಿ ಸಾಗುತ್ತಾನೆ. ಕುಟುಂಬದಲ್ಲಿ ಹೆಚ್ಚು ಸಂತೋಷವಿರುತ್ತದೆ. ಕೆಲಸಕ್ಕಾಗಿ ನೀವು ದೀರ್ಘಕಾಲ ಪ್ರಯಾಣಿಸಬೇಕಾಗಬಹುದು. ಆದಾಯ ಹೆಚ್ಚಾಗಲಿದೆ. ತುಲಾದಲ್ಲಿ ಈ ಬುಧ ಸಂಕ್ರಮಣದ ಸಮಯದಲ್ಲಿ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು.

ವಿದೇಶದಲ್ಲಿ ಉಳಿಯುವ ಮೂಲಕ ಹೆಚ್ಚಿನ ಹಣವನ್ನು ಗಳಿಸುವ ಅವಕಾಶಗಳನ್ನು ಪಡೆಯುತ್ತೀರಿ. ಇದರ ಬಗ್ಗೆ ಹೆಚ್ಚು ಜಾಗೃತರಾಗಿರಬಹುದು. ವೈಯಕ್ತಿಕ ಜೀವನದಲ್ಲಿ ತುಂಬಾ ಸಂತೋಷವಾಗಿರುತ್ತೀರಿ. ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ಬೇಡ.

Mercury Transit In Libra on 10th October 2024 Impact And Remedies On 12 Zodiac Signs In Kannada

ತುಲಾ ರಾಶಿ

ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ತುಲಾ ರಾಶಿಯವರಿಗೆ ಅತ್ಯುತ್ತಮ ಅವಧಿಯಾಗಿದೆ. ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿ ಬುಧ, ತುಲಾ ರಾಶಿಯವರ ಮೊದಲ ಮನೆಯಲ್ಲಿ ಸಾಗುತ್ತಾನೆ. ನೀವು ಅದೃಷ್ಟದೊಂದಿಗೆ ಅನಿರೀಕ್ಷಿತ ಆದಾಯವನ್ನು ಪಡೆಯುವಿರಿ.

ತುಲಾ ರಾಶಿಯವರಿಗೆ ಪ್ರಯಾಣ ಹೆಚ್ಚಾಗುತ್ತದೆ. ವ್ಯವಹಾರದ ಕಡೆಗೆ ಹೆಚ್ಚಿನ ಗಮನ ಕೊಡುವಿರಿ. ಹಣವನ್ನು ಗಳಿಸುವಲ್ಲಿ ಅದೃಷ್ಟವಂತರಾಗಿರುವಿರಿ. ವ್ಯಾಪಾರದಲ್ಲಿ ಧನಲಾಭ, ಸಂಪತ್ತು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಗಳಿಸುವಿರಿ. ವೈವಾಹಿಕ ಜೀವನ ಅದ್ಭುತವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

Mercury Transit In Libra on 10th October 2024 Impact And Remedies On 12 Zodiac Signs In Kannada

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಅಶುಭವಾಗಿದೆ. ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾದ ಬುಧ ಹನ್ನೆರಡನೇ ಮನೆಯಲ್ಲಿ ಸಾಗುತ್ತಾನೆ. ಈ ಸಮಯದಲ್ಲಿ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ. ಲಾಭ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ಹೆಣಗಾಡಬಹುದು.

ಈ ಬುಧ ಸಂಕ್ರಮಣದ ಸಮಯದಲ್ಲಿ ನೀವು ಹೆಚ್ಚು ನಷ್ಟವನ್ನು ಎದುರಿಸಬಹುದು.ಹೊಂದಾಣಿಕೆ ಮತ್ತು ತಿಳುವಳಿಕೆಯ ಕೊರತೆಯಿಂದಾಗಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸಂತೋಷವಾಗಿರುವುದಿಲ್ಲ. ಆರೋಗ್ಯ ಹದಗೆಡುವ ಸಾಧ್ಯತೆಗಳು ಇವೆ. ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ.

Mercury Transit In Libra on 10th October 2024 Impact And Remedies On 12 Zodiac Signs In Kannada

ಧನು ರಾಶಿ

ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಧನು ರಾಶಿಯವರಿಗೆ ಅದ್ಭುತವಾಗಿದೆ. ಧನು ರಾಶಿಯವರ ಹತ್ತನೇ ಮತ್ತು ಏಳನೇ ಮನೆಯ ಅಧಿಪತಿಯಾದ ಬುಧ, ಧನು ರಾಶಿಯ ಹನ್ನೊಂದನೇ ಮನೆಯಲ್ಲಿ ಸಾಗುತ್ತಾನೆ. ನಿಮ್ಮ ಪ್ರಸ್ತುತ ಕೆಲಸದಲ್ಲಿ ನೀವು ಯಶಸ್ಸನ್ನು ಕಾಣಬಹುದು. ಇದು ಹೆಚ್ಚಿನ ಲಾಭವನ್ನು ಗಳಿಸುವಲ್ಲಿ ನಿಮಗೆ ಮಾರ್ಗದರ್ಶನ ನೀಡಬಹುದು. ಆರೋಗ್ಯ ಭಾಗ್ಯ ಸಿಗಲಿದೆ. ಅವಿವಾಹಿತರಿಗೆ ಅಂದುಕೊಂಡ ವರ ಸಿಗಬಹುದು.

Mercury Transit In Libra on 10th October 2024 Impact And Remedies On 12 Zodiac Signs In Kannada

ಮಕರ ರಾಶಿ

ಮಕರ ರಾಶಿಯ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾದ ಬುಧ, ತನ್ನ ಹತ್ತನೇ ಮನೆಯಲ್ಲಿ ಸಾಗುತ್ತಾನೆ. ನೀವು ತೆಗೆದುಕೊಳ್ಳುವ ಪ್ರಯತ್ನಗಳಲ್ಲಿ ನೀವು ಹೆಚ್ಚು ಅದೃಷ್ಟಶಾಲಿಯಾಗಬಹುದು. ವೃತ್ತಿಜೀವನದಲ್ಲಿ ವಿದೇಶಿ ಪ್ರವಾಸಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಮಕರ ರಾಶಿಯವರು ಅಪಾರ ಯಶಸ್ಸನ್ನು ಕಾಣುವಿರಿ.

ವ್ಯವಹಾರದಲ್ಲಿ ಅದೃಷ್ಟ ಹೆಚ್ಚಾಗಲಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಹೆಚ್ಚಿನ ಹಣವನ್ನು ಗಳಿಸಬಹುದು. ಜೀವನ ಪಾಲುದಾರರೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರೋಗ್ಯ ಅತ್ಯುತ್ತಮವಾಗಿರುತ್ತದೆ.

Mercury Transit In Libra on 10th October 2024 Impact And Remedies On 12 Zodiac Signs In Kannada

ಕುಂಭ ರಾಶಿ

ಕುಂಭ ರಾಶಿಯವರಿಗೆ ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಶುಭವಾಗಿದೆ. ಕುಮಭ ರಾಶಿಯವರ ಐದನೇ ಮತ್ತು ಎಂಟನೇ ಮನೆಯ ಅಧಿಪತಿಯಾದ ಬುಧ, ಕುಮಭ ರಾಶಿಯ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಇದರಿಂದಾಗಿ ನೀವು ಹೆಚ್ಚು ಆಧ್ಯಾತ್ಮಿಕವಾಗಬಹುದು. ಪ್ರಯಾಣ ಹೆಚ್ಚಾಗಬಹುದು. ನಿಮ್ಮ ವ್ಯವಹಾರದಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

ನಿಮ್ಮ ವೆಚ್ಚಗಳು ಮತ್ತು ಲಾಭಗಳು ಹೆಚ್ಚಾಗುತ್ತವೆ. ಈ ಕಾರಣದಿಂದಾಗಿ ನೀವು ಹೆಚ್ಚು ಉಳಿಸಲು ಸಾಧ್ಯವಾಗದಿರಬಹುದು. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ನೀವು ಉತ್ತಮವಾಗಿರುತ್ತೀರಿ. ಹೊರಗಿನ ಆಹಾರವನ್ನು ತ್ಯಜಿಸುವುದು ಒಳ್ಳೆಯದು.

Mercury Transit In Libra on 10th October 2024 Impact And Remedies On 12 Zodiac Signs In Kannada

ಮೀನ ರಾಶಿ

ಮೀನ ರಾಶಿಯವರಿಗೆ ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಕೆಟ್ಟದಾಗಿರುತ್ತದೆ. ಮೀನ ರಾಶಿಯ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿಯಾದ ಬುಧ, ಮೀನ ರಾಶಿಯ ಎಂಟನೇ ಮನೆಯಲ್ಲಿ ಸಾಗುತ್ತಾನೆ. ನೀವು ಸಾಮಾನ್ಯವಾಗಿ ನಿಮ್ಮ ಪ್ರಯತ್ನಗಳಲ್ಲಿ ವಿಫಲರಾಗಬಹುದು. ಆರೋಗ್ಯ ಸಮಸ್ಯೆಗಳಿರಬಹುದು.

ನೀವು ಕೆಲಸದ ಒತ್ತಡಕ್ಕೆ ಗುರಿಯಾಗಬಹುದು. ನೀವು ಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬಹುದು. ಖರ್ಚುಗಳು ಹೆಚ್ಚಾಗಬಹುದು. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಕಹಿ ಭಾವನೆಗಳನ್ನು ಹೊಂದುವಿರಿ. ಸಂಗಾತಿಯ ಆರೋಗ್ಯಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+