Budha Gochara: ಆಗಸ್ಟ್‌ನಲ್ಲಿ ಈ 4 ರಾಶಿಯವರಿಗೆ ರಾಜಯೋಗ: ಒಲಿಯಲಿದೆ ಅಷ್ಟೈಶ್ವರ್ಯ!

ಜ್ಯೋತಿಷ್ಯದಲ್ಲಿ ನವಗ್ರಹಗಳಿಗೂ ತನ್ನದೇ ಆದ ವಿಶೇಷ ಸ್ಥಾನ ಪ್ರಾಮುಖ್ಯತೆ ಇದೆ. ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆದರೆ ಬುಧನಿಗೆ ರಾಜಕುಮಾರನ ಸ್ಥಾನ. ಬುಧನು ಬುದ್ಧಿವಂತಿಕೆ, ತಾರ್ಕಿಕ ಚಿಂತನೆ, ವ್ಯವಹಾರ, ಮಾತು, ಆರ್ಥಿಕ ಲಾಭ ಮುಂತಾದವುಗಳನ್ನು ಪ್ರತಿನಿಧಿಸುತ್ತಾನೆ. ಪಂಚಾಂಗದ ಪ್ರಕಾರ, ಆಗಸ್ಟ್ 8, 2026 ರ ಬೆಳಿಗ್ಗೆ, ಬುಧ ಗ್ರಹ ಪುನರ್ವಸು ನಕ್ಷತ್ರವನ್ನು ಬಿಟ್ಟು ಪುಷ್ಯ ನಕ್ಷತ್ರವನ್ನು ಪ್ರವೇಶಿಸುತ್ತದೆ. ಪುಷ್ಯ ನಕ್ಷತ್ರ ನಕ್ಷತ್ರಗಳ ರಾಜ. ಇದರ ಅಧಿಪತಿ ಶನಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧ ಮತ್ತು ಶನಿಯ ನಡುವೆ ಸ್ನೇಹವಿದೆ. ಆದ್ದರಿಂದ ಬುಧನು ಶನಿಯ ಅಧಿಪತ್ಯದ ನಕ್ಷತ್ರಕ್ಕೆ ಕಾಲಿಡುತ್ತಿರುವುದು ಒಳ್ಳೆಯ ಸೂಚಕವಾಗಿದೆ.

ಬುಧನ ನಕ್ಷತ್ರ ಬದಲಾವಣೆಯಿಂದ ನಾಲ್ಕು ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ. ಬುಧನ ಸಂಕ್ರಮಣದೊಂದಿಗೆ ಇವರ ಭಾಗ್ಯದ ಬಾಗಿಲು ಕೂಡಾ ತೆರೆದುಕೊಳ್ಳುವುದು. ಕಷ್ಟಗಳಿಗೆ ಒಂದಷ್ಟು ದಿನ ವಿರಾಮ ಸಿಗುವುದಂತೂ ಗ್ಯಾರಂಟಿ ಎನ್ನಲಾಗಿದೆ.

Mercury Star

ಮಿಥುನ ರಾಶಿ (Gemini)

ಮಿಥುನ ರಾಶಿಯ ಅಧಿಪತಿ ಗ್ರಹ ಬುಧನೇ. ಹಾಗಾಗಿ ಪುಷ್ಯ ನಕ್ಷತ್ರದಲ್ಲಿ ಬುಧನ ಸಂಚಾರವು ಮಿಥುನ ರಾಶಿಯವರಿಗೆ ಸುವರ್ಣ ಕಾಲ ಎಂದರೆ ತಪ್ಪಲ್ಲ. ಇದ್ದಕ್ಕಿದ್ದಂತೆ ಕೈಯ್ಯಲ್ಲಿ ಹಣ ಬರುವುದು. ಯಾವುದೇ ಕಾರಣಕ್ಕೂ ನಿಮ್ಮ ಜೇಬು ಖಾಲಿಯಾಗುವುದಿಲ್ಲ. ಸಾಲದ ಸಮಸ್ಯೆಗೆ ಪರಿಹಾರ ಸಿಗುವುದು. ಆದಾಯದ ಮೂಲಗಳು ಹೆಚ್ಚಾಗುವುದು. ಸಾಲ ಕೊಟ್ಟು ಹೊರಗೆ ಉಳಿದಿರುವ ಹಣ ಕೂಡಾ ವಾಪಸ್‌ ಬರುವುದು. ಅನಿರೀಕ್ಷಿತವಾಗಿ ಹಣದ ಲಾಭವಾಗುವುದು. ಮಾರ್ಕೆಟಿಂಗ್, ಮಾಧ್ಯಮ, ಐಟಿ ಮತ್ತು ಬರವಣಿಗೆ ಕ್ಷೇತ್ರಗಳಲ್ಲಿರುವವರಿಗೆ ವಿಶೇಷ ಮನ್ನಣೆ ಸಿಗುವುದು. ಉದ್ಯಮಿಗಳಿಗೂ ಇದು ಅದೃಷ್ಟದ ಸಮಯ. ಸರಿಯಾದ ನಿರ್ಧಾರ ತೆಗೆದುಕೊಂಡರೆ ನಿಮ್ಮನ್ನು ಹಿಡಿಯುವವರೇ ಇರುವುದಿಲ್ಲ.

ಕನ್ಯಾರಾಶಿ (Virgo)

ಕನ್ಯಾರಾಶಿಗೂ ಬುಧನೇ ಅಧಿಪತಿ. ಹೀಗಾಗಿ ಬುಧನ ನಕ್ಷತ್ರ ಬದಲಾವಣೆ ನಿಮಗೆ ಎರಡು ಪಟ್ಟು ಲಾಭವನ್ನು ನೀಡುವ ಸಾಧ್ಯತೆ ಹೆಚ್ಚು. ಇಲ್ಲಿವರೆಗೆ ದಡ ಸೇರದೆ ಇದ್ದ ಎಲ್ಲಾ ಕೆಲಸಗಳು ಒಂದೊಂದಾಗಿಯೇ ಕೈಗೂಡುವುದು. ಉದ್ಯೋಗ ಹುಡುಕುತ್ತಿರುವವರಿಗೂ ಈ ಸಮಯದಲ್ಲಿ ಸಿಹಿ ಸುದ್ದಿ ಸಿಗುವುದು.ಪಪ್ರಮೋಷನ್‌ಗಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚನೆ ಇದ್ದರೆ ಇದೇ ಸರಿಯಾದ ಸಮಯ. ಈಗ ಮಾಡುವ ಹೂಡಿಕೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಲಾಭ ತಂದು ಕೊಡುವುದು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು.

ತುಲಾ ರಾಶಿ (Libra)

ಪುಷ್ಯ ನಕ್ಷತ್ರಕ್ಕೆ ಬುಧನ ಪ್ರವೇಶ ತುಲಾ ರಾಶಿಯವರಿಗೆ ಅದೃಷ್ಟ ತರುವುದು. ಹೆಚ್ಚು ಪ್ರಯತ್ನ ಪಡದೇ ಹೋದರೂ ಯಶಸ್ಸು ಸಿಗುತ್ತದೆ. ವ್ಯವಹಾರದಲ್ಲಿ ಸಿಲುಕಿಕೊಂಡಿರುವ ಹಣ ವಾಪಸ್‌ ಸಿಗಲಿದೆ. ನಿಮ್ಮಿಂದ ಏನೂ ಆಗುವುದಿಲ್ಲ ಎಂದು ಅಸಡ್ಡೆ ತೋರಿಸುತ್ತಿದ್ದವರೇ ಈಗ ನಿಮ್ಮನ್ನು ಹೊಗಳುವರು. ಕೈ ತುಂಬಾ ಹಣ ಬರುವ ಕಾಲ. ಹೊಸ ಕೆಲಸ ಶುರು ಮಾಡುವುದಕ್ಕೂ ಸಮಯ ಅನುಕೂಲಕರವಾಗಿರಲಿದೆ. ದೇವರ ಮೇಲಿನ ಭಕ್ತಿ ಹೆಚ್ಚಾಗುವುದು. ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುವಿರಿ.

ಮಕರ ರಾಶಿ (Capricorn)

ಮಕರ ರಾಶಿಯ ಅಧಿಪತಿ ಶನಿ. ಶನಿಗೆ ಸೇರಿದ ಪುಷ್ಯ ನಕ್ಷತ್ರಕ್ಕೆ ಬುಧ ಪ್ರವೇಶವಾಗುತ್ತಿರುವುದು. ಇದು ಮಕರ ರಾಶಿಯವರ ಮೇಲೆ ಶುಭ ಪರಿಣಾಮ ಬೀರುತ್ತದೆ. ಕೆಲಸದಲ್ಲಿ ನಿಮ್ಮ ಶಿಸ್ತು ಮತ್ತು ಕೌಶಲ್ಯಗಳು ಹೆಚ್ಚಾಗುವುದು. ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವುದು. ವೃತ್ತಿಜೀವನದಲ್ಲಿಯೂ ಯಶಸ್ಸು ಸಿಗುವುದು. ಪಾಲುದಾರಿಕೆ ವ್ಯವಹಾರದಲ್ಲಿರುವವರಿಗೆ ಅನಿರೀಕ್ಷಿತವಾಗಿ ಆದಾಯ ಹೆಚ್ಚಾಗುವುದು. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವಾಗುವ ಕಾಲ. ವೈವಾಹಿಕ ಜೀವನವು ಶಾಂತಿಯುತವಾಗಿರುತ್ತದೆ.

ಜ್ಯೋತಿಷಿಗಳ ಪ್ರಕಾರ, ಬುಧ ಗ್ರಹದ ಸಂಚಾರದ ಸಮಯದಲ್ಲಿ ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಇನ್ನಷ್ಟು ಒಳ್ಳೆಯದಾಗುವುದು. ಈ ಅವಧಿಯಲ್ಲಿ ಅನುಕೂಲಕರ ಗ್ರಹ ಜೋಡಣೆಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವೈಯಕ್ತಿಕ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಅವಲಂಬಿಸಿ ಈ ಫಲಿತಾಂಶಗಳಲ್ಲಿ ಸ್ವಲ್ಪ ವ್ಯತ್ಯಾಸಗಳು ಆಗಲೂಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+