Mercury Rise 2024: ತುಲಾ ರಾಶಿಯಲ್ಲಿ ಬುಧ ಉದಯ: ಈ ರಾಶಿಗೆ ಹಣದ ಖಜಾನೆ

ಗ್ರಹಗಳು ಕಾಲ ಕಾಲಕ್ಕೆ ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗೆ ರಾಶಿಯನ್ನು ಬದಲಾಯಿಸುವಾಗ ಗ್ರಹಗಳು ಶುಭ ಹಾಗೂ ಅಶುಭ ಫಲವನ್ನು ನೀಡುತ್ತವೆ. ಇದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಕಂಡು ಬರಲಿದೆ. ಅಂದಹಾಗೆ ಅಕ್ಟೋಬರ್ 22, 2024 ರಂದು ಬುಧ ಉದಯಿಸುತ್ತದೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದೂ ಕರೆಯಲಾಗುತ್ತದೆ. ಬುಧ ಗ್ರಹ ಆರೋಗ್ಯ, ನೆಮ್ಮದಿ ಮತ್ತು ಜ್ಞಾನದ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಬುಧದ ಉದಯವು ಕೆಲವು ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ತುಲಾರಾಶಿಯಲ್ಲಿ ಬುಧ ಉದಯವಾಗಲಿದೆ.

ತುಲಾ ರಾಶಿಯಲ್ಲಿ ಬುಧ ಉದಯ ಕೆಲ ರಾಶಿಯವರಿಗೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಕೆಲ ರಾಶಿಗಳಲ್ಲಿ ಬುಧ ಉದಯ ವೃತ್ತಿ, ವ್ಯಾಪಾರ, ಸಂಪತ್ತು ವೃದ್ದಿಯಾಗಲು ಸಹಕರಿಸುತ್ತದೆ. ಹಾಗಾದರೆ ಯಾವ ರಾಶಿಯವರಿಗೆ ಬುಧ ಉದಯ ಉತ್ತಮ ಫಲವನ್ನು ನೀಡಲಿದೆ ಎಂದು ತಿಳಿಯೋಣ.

Mercury Rise in Libra on 22 October 2024 Effects on These Zodiac Signs In Kannada

ಮಿಥುನ ರಾಶಿ

ತುಲಾ ರಾಶಿಯಲ್ಲಿ ಬುಧ ಉದಯ ಮಿಥುನ ರಾಶಿಯವರಿಗೆ ಮಂಗಳಕರ ಫಲವನ್ನು ನೀಡಲಿದೆ. ಕೆಲಸದಲ್ಲಿ ಬಡ್ತಿ, ಪ್ರಗತಿ ಮತ್ತು ಆರ್ಥಿಕ ಲಾಭ ಸಿಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಅವಕಾಶಗಳು ಸಿಗಲಿವೆ. ವ್ಯಾಪಾರದಲ್ಲಿ ಲಾಭ ನಿಮ್ಮನ್ನು ಹಿಂಬಾಲಿಸಲಿದೆ. ಹಣಕಾಸಿನ ವಿಷಯದಲ್ಲಿ ಉಳಿತಾಯ ಹೆಚ್ಚಾಗುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯನ್ನು ತರುತ್ತದೆ.

ಬುಧ ಉದಯದಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಜೀವನದಲ್ಲಿ ನೆಮ್ಮದಿ ಸಿಗಲಿದೆ. ಅಂದುಕೊಂಡ ಕಾರ್ಯಗಳು ಫಲ ನೀಡಲಿವೆ. ಎಲ್ಲಾ ಪ್ರಯತ್ನಗಳು ಅವರಿಗೆ ಯಶಸ್ಸನ್ನು ತರುತ್ತವೆ. ಮಿಥುನ ರಾಶಿಯವರಿಗೆ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

Mercury Rise in Libra on 22 October 2024 Effects on These Zodiac Signs In Kannada

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಬುಧ ಉದಯ ಸಾಕಷ್ಟು ಉತ್ತಮ ಕ್ಷಣವಾಗಿದೆ. ಈ ಅವಧಿಯಲ್ಲಿ ಕುಟುಂಬದ ಬೆಳವಣಿಗೆ ಹೊಂದುತ್ತದೆ. ಸಂತೋಷದಿಂದ ನಿಮ್ಮ ಜೀವನ ಕೂಡಿರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಆಸ್ತಿ ಖರೀದಿಸಲು ಈ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ವಾಹನ, ಮನೆ ಇನ್ನಿತರ ಬೆಲೆಬಾಳುವ ವಸ್ತುಗಳು ಖರೀದಿಸಬಹುದು.

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಲಿದೆ. ಕನ್ಯಾ ರಾಶಿಯವರು ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ಎಲ್ಲ ಅಗತ್ಯಗಳನ್ನು ಪೂರೈಸುವ ಯೋಗ ಇದೆ. ಕೆಲಸಕ್ಕಾಗಿ ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ಹೊಸ ಉದ್ಯಮ ಆರಂಭಿಸಿ ಲಾಭ ಪಡೆಯುವ ಸಾಧ್ಯತೆ ಇದೆ. ಮಾನಸಿಕ ಆರೋಗ್ಯವು ಸುಧಾರಿಸುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.

Mercury Rise in Libra on 22 October 2024 Effects on These Zodiac Signs In Kannada

ತುಲಾ ರಾಶಿ

ತುಲಾ ರಾಶಿಯಲ್ಲಿ ಬುಧ ಉದಯ ಅನೇಕ ಮಂಗಳಕರ ಲಾಭವನ್ನು ತರಲಿದೆ. ಈ ರಾಶಿಯವರು ಈ ಸಮಯದಲ್ಲಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಬಹುದು. ನೀವು ಅದೃಷ್ಟದಿಂದ ಸಂಪೂರ್ಣವಾಗಿ ಬೆಂಬಲ ಪಡೆಯುವಿರಿ. ಹೆಚ್ಚಿನ ಹಣವನ್ನು ಗಳಿಸಲು ಅವಕಾಶಗಳು ಸಿಗುತ್ತವೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಅನೇಕ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ.

ಸಾಲದ ಸುಳಿಯಲ್ಲಿ ಸಿಲುಕಿರುವವರು ಈ ಸಮಯದಲ್ಲಿ ಹೊರ ಬರುತ್ತಾರೆ. ತುಲಾ ರಾಶಿಯವರ ಜೀವನ ಬದಲಾಗಲಿದೆ. ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯ ಜೀವನ ನಡೆಸುವಿರಿ. ಅನಗತ್ಯ ಖರ್ಚು ದೂರವಾಗುತ್ತದೆ. ಹಬ್ಬದ ತಯಾರಿ ಸುಗಮಗೊಳ್ಳಲಿದೆ.

Mercury Rise in Libra on 22 October 2024 Effects on These Zodiac Signs In Kannada

ವೃಶ್ಚಿಕ ರಾಶಿ

ತುಲಾ ರಾಶಿಯಲ್ಲಿ ಬುಧ ಉದಯವಾಗುವುದರಿಂದ ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಲಾಭವಿದೆ. ವ್ಯವಹಾರದಲ್ಲಿ ಯಶಸ್ಸನ್ನು ಕಾಣುವಿರಿ. ವ್ಯವಹಾರದಲ್ಲಿನ ಲಾಭ ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿನ ಬದಲಾವಣೆ ಕಂಡು ಬರಲಿದೆ. ದುರ್ಗಾ ದೇವಿಯ ಆಶೀರ್ವಾದವನ್ನು ಈ ಸಮಯದಲ್ಲಿ ನೀವು ಪಡೆಯುವಿರಿ. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿಯವರು ತಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯುವ ಸಮಯವಿದು. ಅನಿರೀಕ್ಷಿತ ಲಾಭ ಪಡೆಯುವಿರಿ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಅಂದುಕೊಂಡ ಕಾರ್ಯಗಳು ಕೈಹಿಡಿಯಲ್ಲಿದೆ. ಸಂಪತ್ತು ವೃದ್ಧಿಯಾಗುವ ಲಕ್ಷಣಗಳಿಮದು ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ದುರ್ಗಾ ಮಾತೆಯ ಆಶೀರ್ವಾದವನ್ನು ನೀವು ಪಡೆಯುವಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+