ಮಂಗಳ ಗೋಚರದಿಂದ ರಾಜಯೋಗ:ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು

ಮೇ 2026 ಬಹಳ ವಿಶೇಷವಾಗಿದೆ. ಏಕೆಂದರೆ ಇದು ಅನೇಕ ಜನರ ಜೀವನದಲ್ಲಿನ ತೊಂದರೆಗಳನ್ನು ಕೊನೆಗೊಳಿಸಿ ಹೊಸ ಆರಂಭಕ್ಕೆ ಕಾರಣವಾಗಬಹುದು. ಮೇ 11 ರಂದು, ಮಂಗಳ ಗ್ರಹವು ಮೇಷ ರಾಶಿಗೆ ಸಂಚಾರ ಮಾಡುತ್ತದೆ.ಈ ಮೂಲಕ ರುಚಕ ರಾಜಯೋಗ ಸೃಷ್ಟಿಯಾಗುತ್ತದೆ. ಇದು ಜನರ ಆತ್ಮವಿಶ್ವಾಸ, ವೃತ್ತಿ ಮತ್ತು ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದಲ್ಲದೆ, ಮೇಷ ರಾಶಿಯಲ್ಲಿ ಸೂರ್ಯ ಮತ್ತು ಬುಧದ ಸಂಯೋಗವು ಬುಧಾದಿತ್ಯ ರಾಜಯೋಗವನ್ನು ಕೂಡಾ ನಿರ್ಮಾಣ ಮಾಡುತ್ತಿದೆ. ಇನ್ನು ಶುಕ್ರ ಸಂಕ್ರಮಣ ಕೂಡಾ ತನ್ನದೇ ಆದ ವೃಷಭ ರಾಶಿಯಲ್ಲಿ ಮಾಳವ್ಯ ರಾಜಯೋಗವನ್ನು ಸೃಷ್ಟಿ ಮಾಡುತ್ತದೆ.

ಯಾವ ರಾಶಿಯವರಿಗೆ ಆಗುವುದು ಲಾಭ:

ಮೇಷ ರಾಶಿ:

ಮೇಷ ರಾಶಿಯಲ್ಲಿ ರುಚಕ ರಾಜಯೋಗ ರೂಪುಗೊಳ್ಳುತ್ತಿದ್ದು, ಅದು ನಿಮ್ಮ ಶಕ್ತಿಯನ್ನು ವೃದ್ಧಿಸುತ್ತದೆ. ಆತ್ಮವಿಶ್ವಾಸ ಹೆಚ್ಚುವುದು. ಬಾಕಿ ಇರುವ ಕೆಲಸ ಪೂರ್ಣಗೊಳ್ಳುವುದು. ಹೊಸ ವೃತ್ತಿ ಅವಕಾಶಗಳು ತೆರೆದುಕೊಳ್ಳುತ್ತವೆ. ಈ ಸಮಯದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆದಾಯ ಹೆಚ್ಚಾಗುವುದು.

Mars Transit

ಸಿಂಹ ರಾಶಿ:

ಸಿಂಹ ರಾಶಿಯವರ ಅದೃಷ್ಟ ಹೊಳೆಯುತ್ತದೆ. ಎದುರಿಗಿರುವವರ ಮೇಲೆ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಮಾತುಗಳನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುತ್ತಾರೆ. ವೃತ್ತಿಜೀವನದಲ್ಲಿ ನಿಮಗೆ ಮನ್ನಣೆ ಮತ್ತು ಬಡ್ತಿ ಸಿಗುವುದು. ಆದರೆ ನೆನಪಿರಲಿ ಅತಿಯಾದ ಆತ್ಮವಿಶ್ವಾಸ ನಿಮಗೆ ಮುಳ್ಳಾಗಬಹುದು. ಅಂದುಕೊಂಡ ಕೆಲಸ ಆಗದೇ ಹೋಗಬಹುದು.

ಸೂರ್ಯ ಸಂಕ್ರಮಣದಿಂದ ಈ ರಾಶಿಯವರಿಗೆ ಅಶುಭ ಫಲ:ವೃತ್ತಿ ಜೀವನದಲ್ಲಿ ಎದುರಾಗುವುದು ತೊಂದರೆ
ಸೂರ್ಯ ಸಂಕ್ರಮಣದಿಂದ ಈ ರಾಶಿಯವರಿಗೆ ಅಶುಭ ಫಲ:ವೃತ್ತಿ ಜೀವನದಲ್ಲಿ ಎದುರಾಗುವುದು ತೊಂದರೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಮಂಗಳನ ಸಂಚಾರದಿಂದ ರೂಪುಗೊಂಡ ರುಚಕ ರಾಜಯೋಗವು ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರಬಹುದು. ನಿಮ್ಮ ಶಕ್ತಿ ಹೆಚ್ಚಾಗುತ್ತದೆ, ಕೆಲಸದ ಮೇಲೆ ನಿಮ್ಮ ಗಮನ ಹೆಚ್ಚಾಗುತ್ತದೆ ಮತ್ತು ಸವಾಲುಗಳನ್ನು ಎದುರಿಸಿ ಅದರಲ್ಲಿ ಜಯ ಗಳಿಸುವಿರಿ. ವೃತ್ತಿಜೀವನದಲ್ಲಿ ಬೆಳವಣಿಗೆ ಕಾಣುವಿರಿ. ಉದ್ಯೋಗದಲ್ಲಿ ಬಡ್ತಿಯಾಗುವುದು. ವ್ಯಾಪಾರ, ವ್ಯವಹಾರವನ್ನು ವಿಸ್ತರಿಸಲು ಇದು ಒಳ್ಳೆಯ ಸಮಯ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಗುರಿಗಳನ್ನು ಸಾಧಿಸುವತ್ತ ಗಮನ ಕೇಂದ್ರೀಕೃತವಾಗಿರಲಿ.

ಮಘಾ ನಕ್ಷತ್ರದ ಮೂರನೇ ಪಾದದಲ್ಲಿ ಕೇತು ಸಂಕ್ರಮಣ: 4 ರಾಶಿಯವರಿಗೆ ಶುಭ ಫಲ, ಅನಿರೀಕ್ಷಿತ ಧನ ಲಾಭ
ಮಘಾ ನಕ್ಷತ್ರದ ಮೂರನೇ ಪಾದದಲ್ಲಿ ಕೇತು ಸಂಕ್ರಮಣ: 4 ರಾಶಿಯವರಿಗೆ ಶುಭ ಫಲ, ಅನಿರೀಕ್ಷಿತ ಧನ ಲಾಭ

ಮಕರ ರಾಶಿ:

ರುಚಕ ರಾಜಯೋಗವು ಮಕರ ರಾಶಿಯವರಿಗೆ ಯಶಸ್ಸು ತಂದು ಕೊಡುವುದು. ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿ ಸಿಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯಾಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಆರ್ಥಿಕ ಲಾಭಗಳಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+