Mars Transit 2024: ದೀಪಾವಳಿಯ ದಿನ ಮಹಾಲಕ್ಷ್ಮಿ ರಾಜಯೋಗ- ಈ ರಾಶಿಯವರ ಮನೆ ತುಂಬಲಿದೆ ಸಂಪತ್ತು
ನವಗ್ರಹಗಳಲ್ಲಿ ಚಂದ್ರ ಹಾಗೂ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಈ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಇದರ ಪರಿಣಾಮ ದ್ವಾದಶಿ ರಾಶಿಗಳ ಮೇಲಾಗಲಿದೆ. ಚಂದ್ರ ಮತ್ತು ಮಂಗಳ ಅತ್ಯಂತ ಪ್ರಮುಖ ಗ್ರಹಗಳಲ್ಲಿ ಒಂದಾಗಿದೆ. ಚಂದ್ರ ಮತ್ತು ಮಂಗಳನ ಪ್ರತಿಯೊಂದು ಬದಲಾವಣೆಯು ಪ್ರತಿಯೊಂದು ರಾಶಿಚಕ್ರದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ.
ಎರಡೂ ಗ್ರಹಗಳು ಒಟ್ಟಿಗೆ ಒಂದೇ ರಾಶಿಯಲ್ಲಿರುವುದರಿಂದ ದೀಪಾವಳಿಯ ದಿನದಂದು ಮಹಾಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತದೆ. ಮಹಾಲಕ್ಷ್ಮಿ ರಾಜಯೋಗದಿಂದಾಗಿ ಕೆಲ ರಾಶಿಯವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಅಮೂಲ್ಯವಾದ ವಸ್ತು ನಿಮ್ಮ ಕೈ ಸೇರಲಿವೆ. ಅಲ್ಲದೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಹಾಗಾದರೆ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಸಂಪತ್ತು ಹೆಚ್ಚಾಗಲಿದೆ. ಮಾಧ್ಯಮ, ಐಟಿ ಕ್ಷೇತ್ರದಲ್ಲಿರುವವರಿಗೆ ಇದು ಅದ್ಭುತ ಸಮಯವಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿರುತ್ತದೆ. ದಂಪತಿಗಳ ನಡುವೆ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಈ ಸಮಯದಲ್ಲಿ ಹೆಚ್ಚು ಪ್ರಯಾಣ ಮಾಡಬೇಕಾಗಬಹುದು.

ಮಿಥುನ ರಾಶಿ
ಮಹಾಲಕ್ಷ್ಮಿ ರಾಜಯೋಗದಿಂದ ಮಿಥುನ ರಾಶಿಯವರಿಗೆ ಹಣ ಗಳಿಸುವ ಯೋಗ ಪ್ರಾಪ್ತಿಯಾಗಲಿದೆ. ಹೊಸ ಮನೆ ಕಟ್ಟಲು ಬಯಸುವವರಿಗೆ ಇದು ಉತ್ತಮ ಸಮಯ. ವಾಹನ ಖರೀದಿಗೂ ಅವಕಾಶ ಸಿಗಲಿದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಿದೆ. ವ್ಯಾಪಾರಸ್ಥರು ಮುಂದಿನ ದಿನಗಳಲ್ಲಿ ಅಧಿಕ ಲಾಭ ಗಳಿಸುತ್ತಾರೆ. ಈ ರಾಶಿಯವರು ಹೊಸ ವ್ಯಾಪಾರವನ್ನು ಪ್ರಾರಂಭಿಸಿದರೂ ಎಲ್ಲದರಿಂದಲೂ ಆದಾಯ ಹೆಚ್ಚಾಗುತ್ತದೆ.

ತುಲಾ ರಾಶಿ
ಮಹಾಲಕ್ಷ್ಮಿ ಯೋಗ ತುಲಾ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸಲಿದೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರುತ್ತವೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಪ್ರಸ್ತುತ ಸಮಯ ಅನುಕೂಲಕರವಾಗಿದೆ. ಉದ್ಯೋಗಕ್ಕಾಗಿ ಹೆಚ್ಚು ಹುಡುಕುವ ಅಗತ್ಯವಿರುವುದಿಲ್ಲ. ಇಷ್ಟರಲ್ಲೇ ನೀವಂದುಕೊಂಡ ಉದ್ಯೋಗ ನಿಮಗೆ ಸಿಗಲಿದೆ.
ಈ ಸಮಯದಲ್ಲಿ ನಿಮ್ಮ ಸಂಬಳ ಹೆಚ್ಚಾಗಬಹುದು. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವವರಿಗೆ ಈಗ ಸರಿಯಾದ ಸಮಯ. ಯಾವುದೇ ಅಡೆತಡೆಗಳಿಲ್ಲದೆ ಎಲ್ಲವನ್ನೂ ತ್ವರಿತವಾಗಿ ಮಾಡಬಹುದು. ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ.

ಮಕರ ರಾಶಿ
ಮಕರ ರಾಶಿಯವರು ಕೂಡ ಮಹಾಲಕ್ಷ್ಮಿ ಯೋಗದ ಲಾಭವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ಸಮಯವಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಇದು ಅನುಕೂಲಕರ ಸಮಯ. ಪ್ರಸ್ತುತ ಉದ್ಯೋಗದಲ್ಲಿರುವವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ಕೆಲಸದಲ್ಲಿ ಪ್ರಾಮಾಣಿಕತೆ ಹೆಚ್ಚಲಿದೆ. ಇದು ಬಡ್ತಿ ಪಡೆಯಲು ಸಹಾಯ ಮಾಡುತ್ತದೆ. ವೇತನ ಹೆಚ್ಚಳವಾಗಲಿದೆ. ಅಲ್ಲದೆ, ನೀವು ಕೆಲಸದ ಸ್ಥಳದಿಂದ ವಿವಿಧ ಪ್ರಯೋಜನಗಳನ್ನು ಪಡೆಯುತ್ತೀರಿ.

ಮೀನು ರಾಶಿ
ಮೀನ ರಾಶಿಯವರಿಗೆ ಅನೇಕ ಅನುಕೂಲಗಳಿವೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಸಿಗಲಿದೆ. ಸಂಬಂಧಿಕರೊಂದಿಗೆ ಸಂಬಂಧಗಳು ಹೆಚ್ಚು ಬೆಳೆಯುತ್ತವೆ. ವಿದ್ಯಾರ್ಥಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯವಾಗಿರುತ್ತದೆ. ಆರೋಗ್ಯ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯಮಿಗಳು ಇಲ್ಲಿಯವರೆಗೆ ಗಳಿಸಿದ್ದಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು. ನಿಮ್ಮ ಮಕ್ಕಳಿಂದ ಆರ್ಥಿಕ ಸಹಾಯವನ್ನು ಪಡೆಯುತ್ತೀರಿ.
(ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ಅಂತರ್ಜಾಲದಿಂದ ಪಡೆದ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ಕಾರ್ಯಗತಗೊಳಿಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ)












Click it and Unblock the Notifications