ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ, ಯಾವ ರಾಶಿಗೆ ಏನು ಫಲ?

{video1}

ಇದೇ ತಿಂಗಳು ಅಂದರೆ ಜನವರಿ 31ರ ಬುಧವಾರದಂದು ಖಂಡಗ್ರಾಸ ಚಂದ್ರಗ್ರಹಣ ಇದ್ದು, ಅಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರವಾಗುತ್ತದೆ. ಅಂದು ಸಂಜೆ 5.17ಕ್ಕೆ ಗ್ರಹಣದ ಸ್ಪರ್ಶ ಕಾಲ ಆಗಲಿದ್ದು, ರಾತ್ರಿ 7.19ಕ್ಕೆ ಗ್ರಹಣ ಮಧ್ಯಕಾಲವಾಗಲಿದ್ದು, ರಾತ್ರಿ 8.41ಕ್ಕೆ ಗ್ರಹಣ ಮೋಕ್ಷ ಆಗಲಿದೆ.

ಈ ಗ್ರಹಣದಿಂದ ಶುಭ, ಮಿಶ್ರ ಹಾಗೂ ಅಶುಭ ಫಲಗಳು ಯಾವ ರಾಶಿಗಳಿಗಿವೆ ಎಂಬುದರ ವಿವರ ಹೀಗಿದೆ.

ಶುಭ ಫಲ ಪಡೆಯುವ ರಾಶಿಗಳು: ವೃಷಭ, ತುಲಾ, ಕುಂಭ, ಕನ್ಯಾ

ಮಿಶ್ರ ಫಲ ಪಡೆಯುವ ರಾಶಿಗಳು: ಮೀನ, ಮಿಥುನ, ಮಕರ, ವೃಶ್ಚಿಕ

ಅಶುಭ ಫಲ: ಮೇಷ, ಸಿಂಹ, ಕರ್ಕಾಟಕ, ಧನು

ಗ್ರಹಣ ಕಾಲದ ವಿಶೇಷ ಸೂಚನೆಗಳು

* ಗ್ರಹಣದ ಆರಂಭ ಹಾಗೂ ಬಿಟ್ಟ ನಂತರ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು

* ಗ್ರಹಣ ದೋಷ ಇರುವವರು ಚಂದ್ರ ಬಿಂಬ ಹಾಗೂ ಅಕ್ಕಿಯನ್ನು ದಾನ ಮಾಡಬೇಕು

* ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನ ಲಕ್ಷ ಸ್ನಾನಗಳ ಫಲ ನೀಡುತ್ತದೆ. ಗ್ರಹಣ ಮೋಕ್ಷದ ನಂತರ ಮಾಡುವ ಸ್ನಾನವು ಅನಂತ ಸ್ನಾನದ ಫಲ ಕೊಡುತ್ತದೆ. ಗ್ರಹಣ ಮಧ್ಯದಲ್ಲಿ ಮಾಡುವ ಹೋಮವು ಕೋಟಿ ಹೋಮಗಳ ಫಲವನ್ನು ನೀಡುತ್ತದೆ.

ಇಲ್ಲಿನ ಶುಭಾಶುಭ ಫಲಗಳ ಫಲಿತಾಂಶ ಗ್ರಹಣದ ದಿನದಲ್ಲಿ ಹೆಚ್ಚಿರುತ್ತದೆ. ಆದರೆ ಪರಿಣಾಮ ಹದಿನೈದು- ಇಪ್ಪತ್ತು ದಿನಗಳ ಮೊದಲಿಂದಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮೇಷ

ಮೇಷ

ಮೇಷ ರಾಶಿಯವರಿಗೆ ಹಲವು ಬಗೆಯಲ್ಲಿ ಸಮಸ್ಯೆಗಳು ಕಾಣುತ್ತಿವೆ. ನೀವೇ ಹುಡುಕಿಕೊಂಡು ಹೋಗಿ, ಸಮಸ್ಯೆಗೆ ಸಿಲುಕುವ ಸಂಭವವೂ ಇದೆ. ಹೊಸ ಸಾಹಸಗಳಿಗೆ ಕೈ ಹಾಕಲೇ ಬೇಡಿ. ಎಲ್ಲವೂ ಸಮಸ್ಯೆ ಎಂಬುದನ್ನೇ ಸೂಚಿಸುತ್ತಿದೆ ಆದ್ದರಿಂದ ಈ ಲೇಖನದಲ್ಲಿ ತಿಳಿಸಿರುವಂತೆ ಪರಿಹಾರವನ್ನು ಕಡ್ಡಾಯವಾಗಿ ಅನುಸರಿಸಿ.

ವೃಷಭ

ವೃಷಭ

ಈ ಗ್ರಹಣದಿಂದ ವೃಷಭ ರಾಶಿಯವರಿಗೆ ಕೆಲ ಶುಭ ಫಲಗಳನ್ನು ಹೇಳಬಹುದಾಗಿದೆ. ಅದರಲ್ಲೂ ಹಣಕಾಸಿನ ಅನುಕೂಲಗಳು ಗೋಚರಿಸುತ್ತಿವೆ. ಅಚ್ಚರಿಯ ಧನಾಗಮಗಳಿಗೆ ಸಿದ್ಧವಾಗಿರಿ. ಅದು ಕೂಡ ನಿಮ್ಮ ಎಂದಿನ ಆದಾಯ ಮೂಲವಲ್ಲ. ಇದು ಹೊಸದಾದ ಆದಾಯ ಮೂಲದಿಂದ ಸಿಗುವ ಧನಲಾಭ.

ಮಿಥುನ

ಮಿಥುನ

ಈ ಬಾರಿಯ ಖಂಡಗ್ರಾಸ ಚಂದ್ರಗ್ರಹಣದ ಫಲಿತಾಂಶ ನಿಮಗೆ ಚೆನ್ನಾಗಿಲ್ಲ. ತುಂಬ ಸಾಮಾನ್ಯವಾಗಿ ಕಂಡುಬರುವುದು ಆರ್ಥಿಕ ನಷ್ಟ. ಯಾರಿಗಾದರೂ ಸಾಲ ಕೊಡಲಿಕ್ಕೆ ಹೋಗಬೇಡಿ. ರಿಸ್ಕ್ ಇರುವಂಥ ಹೂಡಿಕೆಯಂತೂ ಮಾಡಲೇಬೇಡಿ. ಒಟ್ಟಾರೆ ಹಣಕಾಸಿನ ವ್ಯವಹಾರದಲ್ಲಿ ಬಹಳ ಎಚ್ಚರವಾಗಿರಬೇಕು

ಕರ್ಕಾಟಕ

ಕರ್ಕಾಟಕ

ಏನಾಗುತ್ತಿದೆ ಅಂತಲೇ ಗೊತ್ತಾಗದಂಥ ಸನ್ನಿವೇಶ ನಿಮ್ಮದು. ಏಕೆ ತೊಂದರೆ ಆಗುತ್ತಿದೆ, ಇಂಥ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ ಎಂದು ಗೊತ್ತಾಗುವಷ್ಟರಲ್ಲಿ ತಲೆ ಹಾರಿ ಹೋಗಿರುತ್ತದೆ. ಬೇಡದ ರಾಜಕೀಯ, ಇನ್ನೊಬ್ಬರ ಉಸಾಬರಿಯ ಮಾತುಗಳನ್ನು ಆಡಬೇಡಿ. ಮೈ ಮೇಲೆ ಎಚ್ಚರವಿರಲಿ.

ಸಿಂಹ

ಸಿಂಹ

ಹಣಕಾಸಿನ ವಿಚಾರವಾಗಿ ಎಷ್ಟು ಹುಷಾರಾಗಿರುತ್ತೀರೋ ಅಷ್ಟು ಒಳ್ಳೆಯದು. ದಿಢೀರ್ ನಷ್ಟ ತಂದೊಡ್ಡುವ ಗ್ರಹಣ ಇದು. ಯಾವುದೇ ಕಾಗದ-ಪತ್ರ, ಅದೂ ಹಣ ಕಾಸಿನ ವಿಷಯಕ್ಕೆ ಸಂಬಂಧಿಸಿದ್ದು ಅನ್ನೋವಾಗ ಒಂದಕ್ಕೆ ಎರಡು ಸಲ ಪರಿಶೀಲಿಸಿ, ಸಹಿ ಮಾಡಿ. ಇನ್ನೊಬ್ಬರನ್ನು ಕುರುಡಾಗಿ ನಂಬಬೇಡಿ.

ಕನ್ಯಾ

ಕನ್ಯಾ

ಹಣ ತರುವ ಅವಕಾಶಗಳು ಬರುವಾಗ ನೀವಾಗಿಯೇ ಅದನ್ನು ನಿರಾಕರಿಸಬೇಡಿ. ಮುಖ್ಯವಾಗಿ ನಿಮ್ಮ ಪ್ರತಿಭೆ ಯಾವುದರಲ್ಲಿದೆ ಆ ವಿಚಾರವಾಗಿಯೇ ಕೆಲ ಅವಕಾಶಗಳು ಹುಡುಕಿಕೊಂಡು ಬಂದು ಬಾಗಿಲು ತಟ್ಟುತ್ತವೆ. ಈ ಗ್ರಹಣದಿಂದ ನಿಮಗೆ ಶುಭ ಫಲಗಳು ಇವೆ. ಅದರ ಸದುಪಯೋಗ ಮಾಡಿಕೊಳ್ಳಬೇಕಷ್ಟೇ.

ತುಲಾ

ತುಲಾ

ನಿಮ್ಮ ರಾಶಿಯವರಿಗೆ ಕೂಡ ಖಂಡಗ್ರಾಸ ಚಂದ್ರ ಗ್ರಹಣದ ಫಲಿತಾಂಶ ಚೆನ್ನಾಗಿರಲಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಬಂಧುಗಳು ನಿಮ್ಮ ಸಹಾಯಕ್ಕೆ ಬರುತ್ತಾರೆ. ಸಹಾಯ ಅನ್ನೋದರ ಜತೆಗೆ ನಿಮಗೆ ಬೇಕಾದ ಸಹಕಾರ ದೊರೆಯುತ್ತದೆ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ತಮ್ಮ ವರ್ಚಸ್ಸು ಹಾಗೂ ಸಮಾಜದಲ್ಲಿನ ಗೌರವದ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಈ ಗ್ರಹಣವು ನಷ್ಟ ಮತ್ತು ಅವಮಾನವನ್ನು ಸೂಚಿಸುತ್ತಿದೆ. ದುಷ್ಟ ಆಲೋಚನೆ ಇರುವ ಜನರಿಂದ ದೂರ ಇರಿ. ನಿಮ್ಮ ಹೆಸರು ಹಾಳು ಮಾಡಬಹುದಾದ ಚಟುವಟಿಕೆಯಿಂದ ದೂರ ಇರಿ.

ಧನುಸ್ಸು

ಧನುಸ್ಸು

ಈ ಗ್ರಹಣವು ಅತ್ಯಂತ ಕೆಡಕು ತರುವುದು ನಿಮ್ಮ ರಾಶಿಗೆ. ಆದ್ದರಿಂದ ಈ ತಿಂಗಳಿಡೀ ದೂರ ಪ್ರಯಾಣ ಮಾಡಲೇಬೇಡಿ. ಮನೆಯಲ್ಲಿ ಕೂಡ ವಿದ್ಯುತ್ ಉಪಕರಣ, ಗ್ಯಾಸ್ ಸ್ಟೌ ಇತ್ಯಾದಿಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಅಪಾಯಕ್ಕೆ ನೀವಾಗಿಯೇ ಕೈ ಹಾಕದಿರುವುದು ಉತ್ತಮ. ಎಚ್ಚರ ಎಚ್ಚರ!

ಮಕರ

ಮಕರ

ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಅಂದರೆ ಅದು ಕಳತ್ರ ಸ್ಥಾನ. ಆದ್ದರಿಂದ ಬಾಳ ಸಂಗಾತಿಯೊಂದಿಗೆ ಯಾವುದೇ ವಿಚಾರದಲ್ಲಿ ಜಗಳ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಆ ಮೂಲಕ ಯಾವುದೇ ಬಿಕ್ಕಟ್ಟು ಎದುರಾಗದಂತೆ ಎಚ್ಚರ ವಹಿಸಿ.

ಕುಂಭ

ಕುಂಭ

ನಿಮ್ಮ ರಾಶಿಗೆ ಸಂತೋಷದ ಫಲಿತಾಂಶ ಕೊಡುತ್ತದೆ ಚಂದ್ರ ಗ್ರಹಣ. ನಿಮ್ಮ ಸಂಬಂಧಗಳು ವೃದ್ಧಿಯಾಗುತ್ತವೆ. ಗೌರವ-ಮನ್ನಣೆಗಳು ಹೆಚ್ಚಾಗುತ್ತವೆ. ಸಾಮಾಜಿಕ ಬದುಕಿನಲ್ಲಿ ಮಿಂಚುತ್ತೀರಿ. ಇಷ್ಟು ಕಾಲ ನಿಮ್ಮಲ್ಲಿ ಸುಪ್ತವಾಗಿದ್ದ ಪ್ರತಿಭೆಗೆ ಇತರರು ಮನ್ನಣೆ ನೀಡುತ್ತಾರೆ. ಒಟ್ಟಿನಲ್ಲಿ ಶುಭ ಫಲಗಳೇ ಇವೆ.

ಮೀನ

ಮೀನ

ಮೀನ ರಾಶಿಯವರಿಗೆ ಈ ಬಾರಿಯ ಗ್ರಹಣ ಅಂಥ ಶುಭವಲ್ಲ. ಇದರಿಂದ ಆಗುವ ಮುಖ್ಯ ಸಮಸ್ಯೆ ಅಂದರೆ, ಮಾನಸಿಕ ಒತ್ತಡ. ಅದರಲ್ಲೂ ನಾನಾ ಬಗೆಯ ಸಮಸ್ಯೆ ಹಾಗೂ ಸವಾಲುಗಳು ಎದುರಾಗುತ್ತವೆ. ನಿಮ್ಮ ಮನಸ್ಸಿನಲ್ಲಿನ ದುಗುಡಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ಕೂಡ ತಿಳಿಯುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+