ಮುಂದಿನ ಮೂರು ತಿಂಗಳು ಈ ರಾಶಿಯವರಿಗೆ ಸುವರ್ಣ ಕಾಲ: ಮುಟ್ಟಿದ್ದೆಲ್ಲಾ ಚಿನ್ನ, ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು

Lucky Zodiac Sign: ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಸ್ಥಾನಗಳಲ್ಲಿನ ಬದಲಾವಣೆಗಳು ನಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎನ್ನುವುದನ್ನು ಜ್ಯೋತಿಷ್ಯ ಹೇಳುತ್ತದೆ. 2026ರ ಕೊನೆಯ ಮೂರು ತಿಂಗಳು ಅಂದರೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಕೆಲವು ರಾಶಿಯವರಿಗೆ ವಿಶೇಷವಾಗಿರುತ್ತವೆ. ಈ ಸಮಯದಲ್ಲಿ ರೂಪುಗೊಂಡ ಗ್ರಹಗಳ ಸಂಯೋಜನೆಯಿಂದಾಗಿ, ಕೆಲವು ರಾಶಿಯವರು ಉದ್ಯೋಗ, ವ್ಯವಹಾರ, ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬ ಜೀವನದಂತಹ ವಿಷಯಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.

ವೃಷಭ ರಾಶಿ

ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಸಮಯ ವೃಷಭ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಕೆಲಸದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳಕ್ಕಾಗಿ ಕಾಯುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗಬಹುದು. ವ್ಯಾಪಾರ ಮಾಡುತ್ತಿರುವವರಿಗೆ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಹಣಕಾಸಿನ ವಿಷಯಗಳಲ್ಲಿಯೂ ಪ್ರಗತಿಯಾಗುವುದು. ಆದರೆ ಹೂಡಿಕೆ ಮಾಡುವ ಮೊದಲು ಮಾತ್ರ ಸಂಪೂರ್ಣವಾಗಿ ಪರಿಶೀಲಿಸುವುದು ಬಹಳ ಮುಖ್ಯ. ಕುಟುಂಬದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿದೆ. ಶಾಂತಿಯುತ ವಾತಾವರಣ ಸೃಷ್ಟಿಯಾಗುವುದು. ಹೊಸ ವೃತ್ತಿ ಅವಕಾಶಗಳು ಒದಗಿ ಬರುವುದು. ಮನೆ ನಿರ್ಮಾಣ ಅಥವಾ ಖರೀದಿ ಬಗ್ಗೆ ಯೋಚಿಸುತ್ತಿರುವವರಿಗೆ ಸಕಾಲವಾಗಿರುವುದು.

Lucky Zodiac Sign Astrology Last 3 Months of 2026 Could Bring a Golden Period for These 3 Zodiac Signs

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ವರ್ಷದ ಕೊನೆಯ ಮೂರು ತಿಂಗಳುಗಳು ಬಹಳ ಮುಖ್ಯವಾಗಿರುವುದು. ತುಂಬಾ ಸಮಯದಿಂದ ಕೈಗೂಡದೆ ಇರುವ ಬಾಕಿ ಕೆಲಸಗಳು ಈ ಹೊತ್ತಿನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಿರುವವರಿಗೆ ಹೊಸ ಅವಕಾಶಗಳು ಸಿಗಬಹುದು.ಈಗಾಗಲೇ ಕೆಲಸದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ಸಿಗುವುದು. ಆದಾಯದಲ್ಲಿ ಹೆಚ್ಚಳವಾಗುವುದು. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಹಣಕಾಸಿನ ವಿಷಯಗಳಲ್ಲಿಯೂ ಸುಧಾರಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಆದರೆ ಖರ್ಚುಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ.

ವೃಶ್ಚಿಕ ರಾಶಿ

ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ವೃಶ್ಚಿಕ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಪ್ರಮುಖ ಸಮಯವಾಗಿರುವ ಸಾಧ್ಯತೆ ಇದೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವುದು. ನಾಯಕತ್ವದ ಅವಕಾಶಗಳು ಬರಬಹುದು. ಕೆಲಸಗಳಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗುವ ಸಾಧ್ಯತೆ ಇದೆ. ಆದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬದಲಾವಣೆಗಳಾಗಬಹುದು. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ನವೆಂಬರ್‌ನಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮಕ್ಕಳ ಸಾಧನೆ ಖುಷಿ ತರುವುದು. ವಾಹನ ಖರೀದಿ ಯೋಗವಿದೆ.

ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದರಿಂದ ಹೆಚ್ಚಿನ ಪ್ರಯೋಜನವಾಗುವುದು. ಮಾತ್ರವಲ್ಲ ಅಗತ್ಯವಿರುವವರಿಗೆ ನಿಮ್ಮ ಕೈಲಾಗುವ ವಸ್ತುಗಳನ್ನು ನೀಡಿ ಸಹಾಯ ಮಾಡುವುದರಿಂದ ಶುಭ ಫಲ ಸಿಗುವುದು. ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸುವುದು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿನ ಶಾಂತಿ ಹೆಚ್ಚಾಗುವುದು. ಮುಂದಿನ ಮೂರು ತಿಂಗಳುಗಳು ಈ ಮೂರು ರಾಶಿಯವರಿಗೆ ಅನುಕೂಲಕರವಾಗಿರಬಹುದು.

ಪ್ರತಿಯೊಬ್ಬ ವ್ಯಕ್ತಿಯ ಜಾತಕ ಫಲಗಳು ಅವರ ವೈಯಕ್ತಿಕ ಜಾತಕವನ್ನು ಅವಲಂಬಿಸಿ ಬದಲಾಗಬಹುದು. ವೈಯಕ್ತಿಕ ಜಾತಕ ಮತ್ತು ಗ್ರಹಗಳ ಸ್ಥಾನಗಳನ್ನು ಅವಲಂಬಿಸಿ ಸಿಗುವ ಶುಭ ಅಶುಭ ಫಲಗಳು ಬೇರೆ ಬೇರೆಯಾಗಿರುವುದು. ಹಾಗಾಗಿ ಪ್ರಮುಖ ನಿರ್ಧಾರಗಳನ್ನು, ವಿಶೇಷವಾಗಿ ಉದ್ಯೋಗ, ಹೂಡಿಕೆಗಳು, ಆಸ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೇವಲ ಜ್ಯೋತಿಷ್ಯ ಭವಿಷ್ಯವಾಣಿಗಳನ್ನು ಮಾತ್ರ ಆಧಾರವಾಗಿ ತೆಗೆದುಕೊಳ್ಳದೆ, ನೈಜ ಸಂದರ್ಭಗಳ ಆಧಾರದ ಮೇಲೆ ತೆಗೆದುಕೊಳ್ಳುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+