Tula Rashi Bhavishya 2025: ತುಲಾ ರಾಶಿ 2025 ವರ್ಷ ಭವಿಷ್ಯ- ಹೊಸ ವರ್ಷದಲ್ಲಿ ನಿಮಗಿದೆ ಕೋಟ್ಯಾಧಿಪತಿಯಾಗುವ ಯೋಗ
ಹೊಸ ವರ್ಷ ತುಂಬಾ ಅದೃಷ್ಟವನ್ನು ಹೊಂದಿರುವ ರಾಶಿಗಳಲ್ಲಿ ವೃಷಭದ ನಂತರದ ರಾಶಿ ಅಂದರೆ ಅದು ತುಲಾ ರಾಶಿಯಾಗಿದೆ. 2025ನೇ ವರ್ಷ ತುಲಾ ರಾಶಿಯವರು ಕೋಟ್ಯಾಧಿಪತಿಯಾಗುವ ಯೋಗವನ್ನು ಹೊಂದಿದ್ದಾರೆ. ಯಾಕೆಂದರೆ ಹೊಸ ವರ್ಷದಲ್ಲಿ ತುಲಾ ರಾಶಿಯವರಿಗೆ ಗುರು, ಕೇತು ಹಾಗೂ ಶನಿ ಗ್ರಹದ ಬಲವಿದೆ. ಹೀಗಾಗಿ ಎಲ್ಲಾ ಯೋಗಗಳು 2025ನೇ ವರ್ಷದಲ್ಲಿ ತುಲಾರಾಶಿಯವರಿಗೆ ಸಿಗಲಿವೆ. ಇನ್ನೂ ಉಳಿದ ಗ್ರಹಗಳು ಆಯಾ ಕಾಲಕ್ಕೆ ಒಳ್ಳೆಯದು ಹಾಗೂ ಕೆಟ್ಟ ಫಲವನ್ನು ಕೊಡುತ್ತಾ ಹೋಗುತ್ತವೆ. ಆದರೆ ಇದರ ಪರಿಣಾಮ ಹೆಚ್ಚಾಗಿರುವುದಿಲ್ಲ.
ಅದೃಷ್ಟ, ಭಾಗ್ಯೋದಯ ಎಲ್ಲವೂ ತುಲಾ ರಾಶಿಯವರ ಬದುಕಿನಲ್ಲಿ ಬರುವ ಸುಸಂದರ್ಭ ಇದಾಗಿದೆ. ಹಣಕಾಸಿನ ಸ್ಥಿತಿ ಈ ಸಮಯದಲ್ಲಿ ತುಂಬಾ ಉತ್ತಮವಾಗಿರುತ್ತದೆ. ಆರ್ಥಿಕ ಜೀವನದ ಏಳು ಬೀಳು ತೊಡರುಗಳು ಎಲ್ಲವೂ ನಿವಾರಣೆ ಆಗುತ್ತವೆ. ಪಂಚಮ ಶನಿ ಕಾಟದಿಂದ ಮುಕ್ತಿಯನ್ನು ಪಡೆಯುವಿರಿ. ಈ ವರ್ಷ ನೀವು ಅನುಭವಿಸಿದ ಸಮಸ್ಯೆಗಳು ದೂರವಾಗುತ್ತವೆ.

ತುಲಾ ರಾಶಿ 2025 ಶುಭ ಯೋಗಗಳು
ತಲಾ ರಾಶಿಯವರಿಗೆ 2025 ಹಲವು ಮಂಗಳಕರ ಯೋಗಗಳನ್ನು ತರಲಿದೆ. 2025ರಲ್ಲಿ ತಲಾ ರಾಶಿಯವರಿಗೆ ಭಾಗ್ಯಯೋಗ, ಆನಂದಾದಿ ಯೋಗ, ಕೋಟ್ಯಾಧಿಪತಿ ಯೋಗವಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಚ್ಚು ಧನಲಾಭ ಉಂಟಾಗುತ್ತದೆ. ಹೊಸ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಬರಲಿದೆ. ಸರ್ಕಾರ ಉದ್ಯೋಗದಲ್ಲಿ ಇರುವವರಿಗೆ ಸ್ಥಾನಮಾನ ಕೀರ್ತಿ ಹೆಚ್ಚಾಗಲಿದೆ. ಅಲ್ಲದೆ ಸರ್ಕಾರಿ ಕೆಲಸವೂ ಸಿಗಲಿದೆ.
ತುಲಾ ರಾಶಿ 2025 ವೃತ್ತಿ ಜೀವನ
ಇನ್ನೂ ತುಲಾ ರಾಶಿಯವರು ವೃತ್ತಿ ಜೀವನ ಹೊಸ ವರ್ಷದಲ್ಲಿ ಅದ್ಭುತವಾಗಿದೆ. ಬಿಸಿನೆಸ್, ಬ್ಯಾಂಕ್ ಸಂಬಂಧಿಸಿದಂತೆ ಕೆಲಸ, ಬ್ಯಾಂಗಲ್ಸ್ ಸ್ಟೋರ್‌ಗಳನ್ನು ನಡೆಸುವಂತವರು, ಮೇಕಪ್ ಐಟಮ್‌ಗಳ ಮಾರಾಟ ಮಾಡುವವರಿಗೆ ಅತ್ಯುತ್ತಮ ಲಾಭಗಳಿವೆ. ಭೂಮಿ ಮಾರಾಟ, ರಿಯಲ್ ಎಸ್ಟೇಟ್ ಮಾಡುವಂತವರಿಗೆ, ರಿಯಲ್ ಎಸ್ಟೇಟ್ ಎಜೆಂಟ್‌ಗಳಿಗೆ, ಲ್ಯಾಂಡ್ ಡವಲೆಪರ್‌ಗಳಿಗೆ, ಬಿಲ್ಡಿಂಗ್ ಕಂಟ್ರಸ್ಟಿಂಗ್ ಮಾಡುವವರಿಗೆ ಸಾಕಷ್ಟು ಧನಲಾಭವಾಗಲಿದೆ.
ಈ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗುರು ಬಲದಿಂದ ಹಣ ಹೆಚ್ಚಾಗಲಿದೆ. ಅಲ್ಲದೆ ತುಲಾ ರಾಶಿಯವರಿಗೆ ಸಿನಿಮಾ ರಂಗದಲ್ಲಿ ಬೆಳವಣಿಗೆ ಕಂಡು ಬರಲಿದ್ದು ದ್ವಿಗುಣ ಲಾಭವನ್ನು ತಂದುಕೊಡಲಿದ್ದಾರೆ. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರಿಗೆ ಅನುಕೂಲ ಸಮಯ ಇದಾಗಿದೆ. ಅತ್ಯುತ್ತಮ ಯೋಗದ ಫಲವನ್ನು ನಿರೀಕ್ಷೆ ಮಾಡಬಹುದು.

ತುಲಾ ರಾಶಿ 2025 ಆರೋಗ್ಯ
ತುಲಾ ರಾಶಿಯವರು ಈವರೆಗೂ ಅನುಭವಿಸಿದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಬಾಯಿ ರುಚಿಗೆ ತಿನ್ನುವ ಆಹಾರದಿಂದ ದೂರವಿರಿ. ವ್ಯಾಯಾಮ ಮಾಡಿ, ಹೊರಗಿನ ಆಹಾರ ತ್ಯಜಿಸಿ. ಸಣ್ಣ ಪುಟ್ಟ ಕಾಯಿಲೆಗಳು ಬರುತ್ತವೆ. ಗಂಭೀರ ಆರೋಗ್ಯ ಸಮಸ್ಯೆಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ತುಲಾ ರಾಶಿ 2025 ಶೈಕ್ಷಣಿಕ ಜೀವನ
2025 ತುಲಾ ರಾಶಿಯವರಿಗೆ ಸಾಕಷ್ಟು ಶುಭ ಫಲವನ್ನು ನೀಡಲಿದೆ. ವಿಶೇಷವಾಗಿ ಈ ರಾಶಿಯ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಇದಾಗಿದೆ. ವಿದ್ಯಾಭ್ಯಾಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕವನ್ನು ಗಳಿಸುತ್ತಾರೆ. ಶಿಕ್ಷಕರಿಂದ ಪ್ರಶಂಸೆ ಹೆಚ್ಚಾಗುತ್ತದೆ. ವಿದೇಶದಲ್ಲಿ ಓದುವ ವಿದ್ಯಾರ್ಥಿಗಳ ಆಸೆ ಈಡೇರುತ್ತದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಏಳಿಗೆ ಇದೆ.
ತುಲಾ ರಾಶಿ 2025 ಕೌಟುಂಬಿಕ ಜೀವನ
ಮುಂಬರುವ ವರ್ಷ ತುಲಾ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಸಂಬಂಧ ಬಲಗೊಳ್ಳುತ್ತದೆ. ಯಾವುದೇ ಸಂದರ್ಭ ಬಂದರೂ ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟುಕೊಡುವುದಿಲ್ಲ. ನಿಮ್ಮ ಮೇಲಿನ ಪ್ರೀತಿ ಬಲಗೊಳ್ಳುತ್ತಾ ಹೋಗುತ್ತದೆ.
ತುಲಾ ರಾಶಿ 2025 ಪ್ರೇಮ ಜೀವನ
ಹೊಸ ವರ್ಷ ಪ್ರೇಮ ಜೀವನ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಒಳ್ಳೆಯ ರೀತಿಯಲ್ಲಿ ಜೀವನ ಮಾಡಲು ಸಾಧ್ಯವಾಗುತ್ತದೆ. 2025ರಲ್ಲಿ ಬಹಳ ಅದೃಷ್ಟವಂತರು ನೀವು. ಯಾಕೆಂದರೆ 2025ರಲ್ಲಿ ನೀವು ಬಯಸಿದ ಸಂಗಾತಿಯನ್ನು ನೀವು ಪಡೆಯುವಿರಿ. ಪ್ರೀತಿಸಿದವರೊಂದಿಗೆ ಮದುವೆ ಆಗುವಿರಿ. ಶನಿ ಪೀಡನೆ ಹಾಗೂ ಗುರು ಕಾಟ ಇರುವುದಿಲ್ಲ. ಮನೆಯವರ ಸಹಕಾರ ಇರುತ್ತದೆ.
ತುಲಾ ರಾಶಿ 2025 ಪರಿಹಾರಗಳು
*ಚಿತ್ತಾ ನಕ್ಷತ್ರದವರು ಪ್ರತಿ ನಿತ್ಯ ನಾಗದೇವರ ಆರಾಧನೆ ಮಾಡಿ. ನಾಗರ ಕಟ್ಟೆ ಸಿಕ್ಕರೆ ಅರಿಶಿಣ ನೀರು ಎರೆದು ಹನ್ನೊಂದು ಬಾರಿ ಪ್ರದರ್ಶನ ಮಾಡಿ.
* ಸ್ವಾತಿ ನಕ್ಷತ್ರದಲ್ಲಿ ಹುಟ್ಟಿದವರು ಸಂಜೆ ಸಿಂಹ ದೇವರ ಕರಾವಲಂಬನ ಸ್ತ್ರೋತ್ರವನ್ನು ಪಠಣ ಮಾಡಿ.
* ವಿಶಾಕ ನಕ್ಷತ್ರದಲ್ಲಿ ಹುಟ್ಟಿದವರು ದತ್ತಾತ್ರೇಯ ದೇವರ ಪೂಜೆ ಮಾಡಿ, ಪವಿತ್ರ ನದಿಯಲ್ಲಿ ಸ್ನಾನ ಮಾಡಿ. ಬನ್ನಿ ಗಿಡವನ್ನು ನೆಟ್ಟು ಪೋಷಣೆ ಮಾಡಿ.
* ಪ್ರಾಣಿ ಪಕ್ಷಿಗಳಿಗೆ ನೀರು ಇಡಿ. ಆ ದೇವರ ಆಶೀರ್ವಾದ ನಿಮಗೆ ಸಿಗಲಿದೆ.












Click it and Unblock the Notifications