Ugadi Horoscope 2025: ತುಲಾ ರಾಶಿಯ ಯುಗಾದಿ ಜಾತಕ- ಮಂಜಿನಂತೆ ಕರಗುತ್ತೆ ಕಷ್ಟಗಳು

2025 ಯುಗಾದಿಯಿಂದ 2026 ಯುಗಾದಿಯವರೆಗೆ ದ್ವಾದಶಿ ರಾಶಿಗಳ ವರ್ಷ ಭವಿಷ್ಯವನ್ನು ತಿಳಿಯುತ್ತಿದ್ದೇವೆ. ಈಗಾಗಲೇ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯ ಯುಗಾದಿ ಭವಿಷ್ಯವನ್ನು ತಿಳಿದುಕೊಂಡಿದ್ದೇವೆ. ಇದೀಗ ಯುಗಾದಿಯ ತುಲಾ ರಾಶಿಯ ವರ್ಷ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಗ್ರಹಗಳ ಸ್ಥಾನಪಲ್ಲಟ

2025 ಯುಗಾದಿಯಿಂದ ಕ್ರೋಧಿ ನಾಮ ಸಂವತ್ಸರ ಕಳೆದು ವಿಶ್ವಾವಸು ಸಂವತ್ಸರ ಶುರುವಾಗುತ್ತದೆ. ಗ್ರಹಗತಿಗಳ ಸ್ಥಾನದ ಬಗ್ಗೆ ತಿಳಿಯುವುದಾದರೆ- ಶನಿ ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯಿಂದ ಮೀನರಾಶಿಗೆ, ಗುರು ಮೇ ತಿಂಗಳಲ್ಲಿ ವೃಷಭ ರಾಶಿಯಿಂದ ಮಿಥುನ ರಾಶಿಗೆ ಹಾಗೂ ರಾಹು-ಕೇತು ಕೂಡ ಮೇ ತಿಂಗಳಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಈ ಗ್ರಹಗಳ ಫಲಾನುಫಲ ತುಲಾ ರಾಶಿಯವರಿಗೆ ಹೇಗಿದೆ ಎಂದು ಈಗ ತಿಳಿಯೋಣ.

Libra ugadi horoscope 2025 tula rashi bhavishya astrology predictions kannada

ತುಲಾ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ

ಯುಗಾದಿಯ ನಂತರ ತುಲಾ ರಾಶಿಯವರಿಗೆ ಮಿಶ್ರ ಆರ್ಥಿಕ ಫಲಿತಾಂಶಗಳು ಸಿಗಲಿವೆ. ಈ ಅವಧಿಯಲ್ಲಿ ನೀವು ಹಣಕ್ಕೆ ಸಂಬಂಧಿಸಿದ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಮೊದಲಾರ್ಧದಲ್ಲಿ ಸ್ವಲ್ಪ ಅಸ್ಥಿರತೆ ಇರುತ್ತದೆ. ಈ ಸಮಯದಲ್ಲಿ ನೀವು ಖರ್ಚುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು.

ನೀವು ಅನಿರೀಕ್ಷಿತ ವೆಚ್ಚಗಳು ಅಥವಾ ಸಾಲಗಳನ್ನು ಮಾಡಬೇಕಾಗಬಹುದು. ಆದರೆ ವರ್ಷದ ಮಧ್ಯಮಾರ್ಧದಲ್ಲಿ ಸ್ವಲ್ಪ ಪರಿಹಾರವಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬರಲಿದೆ. ಹೀಗಾಗಿ ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ. ಈ ಸಮಯದಲ್ಲಿ ಹಣ ಉಳಿತಾಯ ಮಾಡುವುದು ತುಂಬಾ ಮುಖ್ಯ.

Libra ugadi horoscope 2025 tula rashi bhavishya astrology predictions kannada

ತುಲಾ ರಾಶಿಯ ಯುಗಾದಿ ಕೌಟುಂಬಿಕ ಜಾತಕ

ಯುಗಾದಿಯ ನಂತರ ನಿಮ್ಮ ಕುಟುಂಬ ಸಂಬಂಧಗಳಲ್ಲಿ ಮಿಶ್ರ ಫಲ ಇರಲಿದೆ. ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. 2025ರ ಮೊದಲಾರ್ಧದಲ್ಲಿ ನೀವು ತಪ್ಪು ತಿಳುವಳಿಕೆಗಳು ಅಥವಾ ಕುಟುಂಬದಲ್ಲಿನ ಮನಸ್ತಾಪದಂತಹ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಂಘರ್ಷಗಳನ್ನು ಬಗೆಹರಿಸಿಕೊಳ್ಳುವುದು ಮುಖ್ಯ.

ತುಲಾ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ

ತುಲಾ ರಾಶಿಯ ವಿದ್ಯಾರ್ಥಿಗಳು ಯುಗಾದಿಯ ನಂತರ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ವಿದ್ಯಾಭ್ಯಾಸದಲ್ಲಿ ಗಮನಹರಿಸಲು ಕಷ್ಟವಾಗಬಹುದು. ಹೊಸ ವಿಷಯಗಳನ್ನು ಗ್ರಹಿಸಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಈ ಸವಾಲುಗಳನ್ನು ನಿವಾರಿಸಲು ಪ್ರಯತ್ನಿಸಿ. ಉನ್ನತ ಶಿಕ್ಷಣ ಅಥವಾ ಉನ್ನತ ಕೋರ್ಸ್‌ಗಳನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಐದಾರು ತಿಂಗಳ ಬಳಿಕ ಅವರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ.

Libra ugadi horoscope 2025 tula rashi bhavishya astrology predictions kannada

ತುಲಾ ರಾಶಿಯ ಯುಗಾದಿ ವೃತ್ತಿ ಭವಿಷ್ಯ

ಯುಗಾದಿ ಹಬ್ಬದ ನಂತರ ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೀವು ನೋಡಬಹುದು. ವರ್ಷದ ಆರಂಭದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಅತ್ಯುತ್ತಮ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಎಲ್ಲರ ಮೆಚ್ಚುಗೆಯನ್ನು ಪಡೆಯುವಿರಿ.

ಫ್ಯಾಷನ್ ವಿನ್ಯಾಸ, ಮಾರ್ಕೆಟಿಂಗ್, ಸಾರ್ವಜನಿಕ ಸಂಪರ್ಕ, ಮಾರಾಟ ಮತ್ತು ಕಲೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಅದ್ಭುತ ಸಮಯ ಇದಾಗಿದೆ. ಈ ವರ್ಷ ಹೆಚ್ಚಿನ ಲಾಭವನ್ನು ನೀವು ನೋಡುವಿರಿ. ಈಗಾಗಲೇ ಕೆಲಸ ಮಾಡುತ್ತಿರುವ ಜನರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವುದು. ನಿಮ್ಮ ಪ್ರಯತ್ನಗಳಲ್ಲಿ ಆತ್ಮವಿಶ್ವಾಸ ಮತ್ತು ನಿರಂತರತೆಯನ್ನು ಹೊಂದಿದ್ದರೆ ನಿಮಗೆ ಹೆಚ್ಚು ಅವಕಾಶಗಳು ಬರಲಿವೆ.

ತುಲಾ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ

ಈ ರಾಶಿಯ ಜನರು ಯುಗಾದಿಯ ನಂತರ ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ನಿಯಮಿತವಾಗಿ ವ್ಯಾಯಾಮ ಮಾಡಿ. ದೀರ್ಘಕಾಲದ ಕಾಯಿಲೆಗಳ ಇತಿಹಾಸ ಹೊಂದಿರುವ ಜನರು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ವೈದ್ಯರ ಸಲಹೆಯನ್ನು ಅನುಸರಿಸಿ. ಒತ್ತಡ ಮತ್ತು ಆತಂಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಒತ್ತಡವನ್ನು ತೆಗೆದುಹಾಕಲು ಧ್ಯಾನ ಅಥವಾ ಯೋಗವನ್ನು ಅಭ್ಯಾಸ ಮಾಡಬೇಕು.

Libra ugadi horoscope 2025 tula rashi bhavishya astrology predictions kannada

ತುಲಾ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ

ಈ ರಾಶಿಯ ಜನರು ವೈವಾಹಿಕ ಜೀವನ ಮತ್ತು ವೈವಾಹಿಕ ಸಂಬಂಧಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಅವಿವಾಹಿತರು ಈ ಅವಧಿಯಲ್ಲಿ ತಮ್ಮ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಆದರೆ ಈಗಾಗಲೇ ವಿವಾಹಿತರ ವೈವಾಹಿಕ ಜೀವನದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಮತ್ತೊಂದೆಡೆ ಆರ್ಥಿಕ ಒತ್ತಡ ಹೆಚ್ಚಾಗಲಿದೆ. ನೀವು ಒಟ್ಟಿಗೆ ಕೆಲಸ ಮಾಡಿದರೆ ಮಾತ್ರ ಎರಡೂ ಸವಾಲುಗಳನ್ನು ನಿವಾರಿಸುವಿರಿ.

ತುಲಾ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ

ಯುಗಾದಿ ನಂತರ ತುಲಾ ರಾಶಿಯವರಿಗೆ ಆರ್ಥಿಕವಾಗಿ ಅಷ್ಟೊಂದು ಶುಭ ಸಮಯವಲ್ಲ. ಸಾಲ ಮಾಡಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವುದನ್ನು ತಪ್ಪಿಸಿ. ಯಾವುದೇ ಆರ್ಥಿಕ ಸಮಸ್ಯೆಗೆ ಒಳಗಾಗದಂತೆ ಈ ವರ್ಷ ಕಳೆಯುವುದು ತುಂಬಾ ಮುಖ್ಯ. ಹೀಗಾಗಿ ಯಾವುದೇ ಕಾರ್ಯಕ್ರಮಗಳಿಗೆ ವ್ಯಯ ಮಾಡುವುದು, ಹೆಚ್ಚು ಹಣ ಖರ್ಚು ಮಾಡುವುದನ್ನು ತಪ್ಪಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+